ಗೂಗಲ್ ಪ್ರಕಾರ ಜೂಲೈ ೧೧ ರಿಂದ ಆಷಾಢ ಮಾಸ. ಮದುವೆ ಮಾಡಿ ಕಳುಹಿಸಿದ ಹೆಣ್ಣು ಮಗಳನ್ನು ಆಷಾಢ ಮಾಸದಲ್ಲಿ ತವರಿಗೆ ತಾಯಿ/ಅಣ್ಣ ಕರಿಸಿಕೊಳ್ಳುವ ಆಚರಣೆ ಘಟ್ಟದ ಮೇಲಣ ಎಷ್ಟೋ ಊರುಗಳ್ಳಿ ಒಂದು ಪದ್ಧತಿ ಇದೆ. (ಇದಕ್ಕೆ ಸೈಂಟಿಫಿಕ್ ಕಾರಣಗಳಿವೆ ಈಗ ಅದು ಬೇಡ). ಸಣ್ಣ ವಯಸ್ಸಿನಲ್ಲಿ (ಆರನೇ ತರಗತಿ ಅಂದರೆ ೧೨ ವರ್ಷ ವಯಸ್ಸು) ನನ್ನ ಒಬ್ಬನೇ ಅಣ್ಣ ಬೋರ್ಡಿಂಗ್ ಶಾಲೆಗೆ ಸೇರಿದ. ಅದಾದ ನಂತರ ಅವನು ನಮ್ಮೊಂದಿಗೆ ಉಳಿಯಲು ಶುರು ಮಾಡಿದ್ದೂ ಎಂಟೆಕ್ ಮುಗಿಸಿ ಕೆಲಸಕ್ಕೆ ಸೇರಿದ ಬಳಿಕವೇ. ಯಾವಾಗಲು ಒಬ್ಬನ್ನೇ ಇದ್ದು ಎಷ್ಟು ರೂಢಿಯಾಗಿದೆ ಯೆಂದರೆ ಸಂಸಾರ ಕೆಲವು ಪಾಶಗಳು ಅಷ್ಟೆಲ್ಲಾ ರಷನಲ್ ಅನ್ನಿಸುವುದಿಲ್ಲವೋ ಅಥವಾ ಅದರ ಬಗ್ಗೆ ಅನುಭವದ ಕೊರತೆಯೋ, ಸಮಯದ ಅಭಾವವೋ, ನನಗೆ ಗೊತ್ತಿಲ್ಲ. ಮನಸ್ಸಿನ್ನಲ್ಲಿ ತುಂಭಾ ಪ್ರೀತಿ ಇದ್ದರು ತಂಗಿ ಎಂದು ಎಷ್ಟೇ ಕೇರ್ ಇದ್ದರು, ಭಾಂದವ್ಯ ಎಷ್ಟೇ ಗಟ್ಟಿ ಇದ್ದರು, ನನ್ನ ಮದುವೆಯ ಬಳಿಕ ಒಡನಾಟ ನನ್ನೊಂದಿಗೆ ಸ್ವಲ್ಪ ಕಮ್ಮಿ.
ನಾನು ೯ನೇ ತರಗತಿಯಲ್ಲಿ ಇದ್ದಾಗ ಕರ್ನಾಟಕ ಸರ್ಕಾರ ವರ್ಷಕೊಮ್ಮೆ ನಡೆಸುವ ಪ್ರತಿಭಾ ಕಾರಂಜಿಯಲ್ಲಿ ಜಾನಪದ ಹಾಡುಗಳ ಸ್ಪರ್ಧೆಯಲ್ಲಿ ನಾನು ಒಂದು ಹಾಡು ಹೇಳಿ ಮೊದಲನೇ ಬಹುಮಾನ ಗೆದ್ದಿದ್ದೆ. " ಆಷಾಢ ಮಾಸ ಬಂದಿತವ್ವ, ಅಣ್ಣ ಬರಲಿಲ್ಲ ಕರೆಯಾಕ". ಒಂದು ಹೆಣ್ಣು ಮಗಳು ತನ್ನ ತವರಿನ ಕರೆಗಾಗಿ ಕಾಯುವ ಸನ್ನಿವೇಶದಲ್ಲಿ ಹೇಳುವ ಹಾಡಿದು.
ನಮ್ಮಲ್ಲಿ ಈ ಆಷಾಢದ ಪದ್ದತ್ತಿ ಈಗ ರೂಢಿಯಲ್ಲಿ ಇಲ್ಲ. ಮೊದಲಿಂದವು ಇಲ್ಲವಾ? ನನಗೆ ಗೊತ್ತಿಲ್ಲ. ನಾನಂತೂ ನಮ್ಮನ ಮನೆಗೆ ಯಾವಾಗ ಬೇಕವಾಗ ಹೋಗುತ್ತಲ್ಲೇ ಇರುತ್ತೇನೆ. ಆದರೆ ಆಷಾಢ ಮಾಸ ಬಂತು ಅಂತ ಯಾರಾದರೂ ಮಾತನಾಡುವುದ್ದನ್ನು ಕೇಳಿದಾಗ ಈ ಹಾಡು ನೆನಪಿಗೆ ಬಂದು ನನ್ನನ್ನು ಬಹಳವಾಗಿಯೇ ಕಾಡುತ್ತದ್ದೆ. ನನಗು ನನ್ನ ಅಣ್ಣ ನನ್ನ ಮನೆ ಗೆ ಬಂದು ನನ್ನನ್ನು ತನ್ನೊಂದಿಗೆ ನನ್ನ ತವರಿಗೆ ಕರೆದೊಯ್ಯಬಾರದೇ ಎಂಬ ಆಸೆ ಆಗುತ್ತದೆ. ಕಣ್ಣಚಿನಲ್ಲಿ ಸಣ್ಣದೊಂದು ಹನಿ ನನ್ನ ಹೀಯಾಳಿಸಿ ನಕ್ಕು ಮರೆಯಾಗುತ್ತದೆ. ಒಡಹುಟ್ಟಿದವರು ಎಂದರೆ ಅದೆಂಥಾ ಮೋಹ. ಅದೆಂತಾ ಪ್ರೀತಿ. ಅಬ್ಬಾ.. ಬೇಗ ಹೋಗಿ ಅಣ್ಣನ್ನನ್ನು ಒಮ್ಮೆ ತಬ್ಬಿ ಖುಷಿಯಿಂದ ಅಳುವಾಸೆ.
No comments:
Post a Comment