Friday, 2 July 2021

ಪರಿವಾರ


ತುಂಬು ಪರಿವಾರವೆಂದರೆ ಮೊದಲಿನಿಂದ ತುಂಬಾ ಕುತೂಹಲ ಹಾಗು, ನಾನು ತುಂಬು ಕುಟಂಬದಲ್ಲಿ ಇರಬೇಕೆಂಬ ಆಸೆ ಇದ್ದ ಕಾಲ ಒಂದಿತ್ತು. ಈಗ ನನ್ನನ್ನು ಪರಿವಾರದ ಜನರು ಕೆಣಕದೆ ಸುಮ್ಮನೆ ಬಿಟ್ಟರೆ ಸಾಕಪ್ಪ ಅನ್ನುವಷ್ಟು ನನ್ನ ಆಸೆಗಳು ಬದಲಾಗಿದೆ. ಜಾಗತೀಕರಣವಾದ ನಂತರ ಜಗತ್ತೆಲ್ಲ ಒಂದು ಪುಟ್ಟ ಊರಾಗಿದೆ. ಜನರೆಲ್ಲಾ ವಿದ್ಯಾವಂತರಾಗಿದ್ದರೆ. ಸರಿ ತಪ್ಪುಗಳ ಅರಿವಿದೆಯೋ ಇಲ್ಲವೋ ಅದು ಅವರವರ ಯೋಚನೆಗೆ ಬಿಟ್ಟುದ್ದು, ಆದರೆ ತಮ್ಮ ಜೀವನ ಹೇಗಿರಬೇಕು ಎಂಬ ಅರಿವಂತು ಇದ್ದೆ ಇರುತ್ತದೆ. ಒಂಟಿಯಾಗಿ ಜೀವಿಸುವುದು ಈಗಿನವರಿಗೆ ಕಷ್ಟವಲ್ಲ, ಬದಲಿಗೆ ಇಷ್ಟ. ಯಾರ ಉಪದ್ರವೂ ಇರುವುದಿಲ್ಲ. ಯಾರ ಆಸೆಗಳ ಒತ್ತೆಯಾಳಾಗಿ ಬದುಕಬೇಕಾದ ಅನಿವಾರ್ಯವಿರುವುದಿಲ್ಲ. ಇಷ್ಟವಿಲ್ಲದ್ದ ಆಚರಣೆಗಳನ್ನು ಪಾಲಿಸುವ ಹಿಂಸೆ ಇರುವುದಿಲ್ಲ. ಎಲ್ಲಾದಕ್ಕಿಂತ ಹೆಚ್ಚು ನಮ್ಮ ನಮ್ಮ ಪ್ರೀತಿ ಪಾತ್ರರಿಗೆ ಎಲ್ಲಿ ನೋವು ಕೊಟ್ಟುಬಿಡುತ್ತೇವೋ, ಅವರಿಗಿಷ್ಟ ವಿಲ್ಲದ ಕೆಲಸ ಮಾಡಿ ಅವರ ಮನ ನೋಯಿಸುವೆವೋ ಎಂಬ ಗೊಂದವಿಲ್ಲ. ನೀನಾಯಿತು ನಿನ್ನ ಕೆಲಸವಾಯಿತು ಅಷ್ಟೇ ಜೀವನ. 


ಎಲ್ಲರಲ್ಲೂ ಒಂದಲ್ಲ ಒಂದು ಸಾರಿ ಹೀಗೆ ಯೋಚನೆ ಮೂಡಿರುತ್ತದೆ. ಏನು ಮಾಡುವುದು, ಮನುಷ್ಯ ಸಂಘಜೀವಿ ಮಾತ್ರವಲ್ಲ, ಪರಿವಾರ, ವಂಶವಾಯಿ, ಪರಂಪರೆಯ ಕಟ್ಟುಪಾಡಿ. ಬಿಟ್ಟುಬರುವೆನೆಂದರು ಬಿಟ್ಟುಹೋಗದ ಪಾಶ. ಬಂಧಮುಕ್ತವಾಗುವುದು ಕಠಿಣ ಸಾಧನೆ ಸರಿ. 

1 comment: