Saturday, 17 July 2021

ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ

ಹಣವ ಕಂಡರೆ ಹೆಣವು ಬಾಯಿಬಿಡುವ ಕಾಲವಿದು. ಹೌದು ಸರಿ, ದುಡ್ಡು ಯಾರಿಗೆ ಬೇಡ ಹೇಳಿ? ನಿಮಗೆ ಬೇಕೋ ಬೇಡವೋ, ನನಗಂತೂ ಬೇಕು. ಮನುಷ್ಯ ಹಣ, ಚಿನ್ನಾಭರಣ ಏತ್ತಕಾದರು ಆವಿಷ್ಕರಿಸಿದನೋ ಎಂದು ಎಷ್ಟೋ ಬರಿ ಅನಿಸಿದುಂಟು. ಇದು ನನಗೆ ನಾನು ದುಡಿಯುವ ಹಣ ಸಾಲದೆಯೇ ಅಥವಾ ಬೇಕೆಂಬ ವಸ್ತುಗಳು ದುಭಾರಿ ಇರುವ ಕಾರಣದಿಂದ ಖರೀದಿ ಮಾಡಲಾಗುತ್ತಿಲ್ಲವೆಂಬ ಅಸಮಾನದಿಂದಲೋ ಅಥವಾ ಇನ್ನೊಬರಿಗೆ ಹೋಲಿಸಿದರೆ ನಾವು ಬಡವರು ಎಂಬ ಭಾವನೆ ಇಂದಲೋ ಹೇಳುತ್ತಿರುವುದಲ್ಲ. ನನಗೆ ಇದೆಲ್ಲದರಲ್ಲೂ ನನ್ನ ಜೀವನದ ಬಗ್ಗೆ ತೃಪ್ತಿ ಇದೆ. ನನ್ನ ಸಮಸ್ಯೆಯೇ ಬೇರೆ. ಜನಗಳು, ನಾವೇನಾದರೂ ಹಣದ ಬಗ್ಗೆ ಮಾತನಾಡಿದರೆ, ನಮ್ಮ ಗುಣವನ್ನು ಅದರಲ್ಲಿ ಅಳೆಯುತ್ತಾರೆ.! ಹಣಕ್ಕೆ ಹಣಕ್ಕೆ ಸಿಕ್ಕಬೇಕಾದ ಬೆಲೆ ಗಿಂತ ಯಾಕೋ ಹೆಚ್ಚೇ ಪ್ರಾಧ್ಯಾನತೆ ಸಿಕ್ಕಿದಂತಾಗಲಿಲ್ಲವೇ ಇದರಿಂದ? ಮನುಜನ ಮೌಲ್ಯಕ್ಕಿಂತ ಅವನ ದುಡಿಯುವ ಹಣಕ್ಕೆ ಬೆಲೆ ಹೆಚ್ಚು! ಹೆಣ್ಣು, ಹೊನ್ನು, ಮಣ್ಣಿಗಾಗಿ, ಶತ ಶತಮಾನದಿಂದಲೂ ಯುದ್ಧಗಳು ನಡೆಯುತ್ತಲೇ ಬಂದಿದೆ. ಯಾರು ಹೆಚ್ಚು ಶಕ್ತಿಯುತರು, ಬಲಶಾಲಿಗಳು ಎಂಬುದನ್ನು ಹಣವೇ ನಿರ್ಧರಿಸುತ್ತದೆ. ಹಣಕ್ಕಿಲ್ಲಿ ಸರ್ವಾಧಿಕಾರಿ ಪಟ್ಟ. ತಂದೆ ಮಕ್ಕಳ್ಳಲ್ಲಿ ಕಲಹ, ಅಣ್ಣ ತಮ್ಮಂದಿರಲ್ಲಿ ಜಗಳ, ಸ್ನೇಹಿತರ ನಡುವೆ ಕಲಹ, ದೇಶ ದೇಶಗಳ ಜೊತೆ ಜಿದ್ದಾ ಜಿದ್ದಿ ಅಯ್ಯೋ ಒಂದೇ ಎರೆಡೇ, ಹಣದಿಂದಾದ ಅನರ್ಥ? ನಮ್ಮವರೇ ಇಲ್ಲವೆಂದರೆ ಹಣ ಇದ್ದೂ ಏನು ಸುಖ? ಎಷ್ಟೇ ದುಡಿದರು, ಎಷ್ಟೇ ಶ್ರೀಮಂತನಾದರೂ ನೆಮ್ಮದಿಯ ನಿದ್ದೆಗಳಿರದ ರಾತ್ರಿ ಬಡತನವೇ ಸರಿ. 

ಪತಿಯೇ ಎಲ್ಲಾ, ನಾನೇ ಅವನು ಅವನೇ ನಾನು ಎಂಬ ಭಾವನೆಯಲ್ಲಿ ಸುಂದರವಾದ ಸಾಮಾನ್ಯ ಜೀವನ ನಡೆಸು ನನ್ನ ಹಾಗು ನನ್ನ ಗಂಡನಡುವೆಯೇ ಎಷ್ಟೋ ಸಲ ಈ ಕುರುಡು ಕಾಂಚಾಣ ತನ್ನ ಕೈಚಳಕ ತೋರಿಸಿದೆ. ಎಷ್ಟೋಸಲ ಅದರ ಕಾಲ್ತುಳಿತದಿಂದ ಭಾದೆ ಪಟ್ಟಿದ್ದೇವೆ. 

ಈಗ ಇಷ್ಟೆಲ್ಲ ಕಥೆ ಹೇಳುವುದು ಬೇಡ, ಕೆಲವು ಸಣ್ಣ ಸಣ್ಣ ಉದಾಹರಣೆಗಳನ್ನು ಹೇಳುತ್ತೇನೆ ಕೇಳಿ. 
೧. ಪ್ಲಾಸ್ಟಿಕ್ ಖುರ್ಚಿಯ ಮೇಲೆ ಹತ್ತಿ ಏನೋ ಸಾಹಸ ಮಾಡುವ ಮಗನ ನೋಡಿ ತಾಯಿ ಕುರ್ಚಿ ಮುರಿಯುತ್ತದೆ ಮಗ ಅನ್ನುವುದನ್ನು ನಾನು ಹೆಚ್ಚು ಕೇಳಿರುವೆ ಹೊರೆತು ಖುರ್ಚಿ ಮುರಿದರೆ ನೀನು ಬಿದ್ದು ನಿನಗೆ ನೋವಾಗುತ್ತೆದೆ ಎಂಬ ಮಾತು ಕೈಬೆರಳೆಣಿಕೆಸ್ಟೆ. 
೨. ಸ್ನೇಹಿತ ಹೋಟೆಲ್ ಬಿಲ್ ಭರಿಸುವ ಎಂದು ಮೂಗಿನ ಮಟ್ಟ ತಿನ್ನುವ ಗೆಳೆಯರು. 
೩. ಟಪ್ಪರ್ ವೆರ್ ಬಾಕ್ಸ್ ಅಲ್ಲಿ ಏಕೆ ಸ್ನೇಹಿತೆಗೆ ತಿಂಡಿ ಕೊಟ್ಟೆ ಎಂದು ಕೇಳುವ ಅಮ್ಮ. 
೪. ನೀರಿನ ಬಾಟಲಿಯನ್ನು ಜೋಪಾನವಾಗಿ ನೋಡಿಕೊಳ್ಳುವುದಲ್ಲವೇ ಎಂದು ಪತ್ನಿ ಪತಿಯನ್ನು ಕೇಳಿದರೆ, ಪತ್ನಿಗೆ ವಸ್ತುವಿನ ಮೇಲೆ ಹೆಚ್ಚು ಪ್ರೀತಿ ಎಂಬಂತೆ ಎಲ್ಲಾರ ಮುಂದೆ ಕೇವಲವಾಗಿ ಮಾತನಾಡುವ ಪತಿ. ಹೀಗೆ ಹತ್ತು ಹಲವು ಸಣ್ಣ ಸಣ್ಣ ಘಟನೆಗಳು ದಿನನಿತ್ಯ ನಡೆಯುತ್ತಲ್ಲೇ ಇರುತ್ತದೆ. ಎಷ್ಟೋ ಬರಿ ನಮ್ಮರಿವಿಗೆ ಬರದೇ ನಾವು ಸ್ವಾರ್ಥಿಗಳುತ್ತೇವೆ. ಕೇವಲರಾಗುತ್ತೇವೆ. 

ಇದಕ್ಕೆ ಕಾರಣ ನಾವು ಹಣಕ್ಕೆ, ಹಣಕ್ಕೆ ಇರುವ ಬೆಲೆಗಿಂತ ಹೆಚ್ಚು ಕೊಟ್ಟಿರುವ  ಬೆಲೆ. ಹಣವನ್ನು ಗಳಿಸಲು ನಾವು ಪಡುವ ಶ್ರಮ. ನಾನು ದುಡ್ಡಿದ್ದದ್ದು ಎಂಬ ಅಭಿಮಾನ. ಆದರೆ ಈ ಹಣದಿಂದಾಗಿ  ಅಣುಕಿಸಿ ಕೊಂಡರೆ ಆಗುವಷ್ಟು ಕೀಳರಿಮೆ ಬೇರೆ ಯಾವುದರಿಂದಲೂ ಆಗದೇನೋ? ಹೀಗೆ (ಅಂದುಕೊಳ್ಳುವುದು ಹಣಕ್ಕೆ ಸಲ್ಲುವವು ಮತ್ತೊಂದು ಬೆಲೆಯೇ ?.!!) ಜನಜೀವನ ಮಾಯಾಜಾಲ. 

ನಮ್ಮಪ್ಪ ಹೇಳುತ್ತಾರೆ 
"Money makes many things, man makes nothing. "

No comments:

Post a Comment