ಯಾರ ಜೊತೆ ಮಾತನಾಡಲಿ ನಾನು ಯಾರ ಜೊತೆ? ಮಾತನಾಡಲು ಇರುವರು ಹಲವಾರು. ಅವರೊಂದಿಗೆ ಮಾತನಾಡಲು ಮಾತಿಲ್ಲ ನನ್ನ ಬಳಿ. ಹೇಳಬೇಕಿರುವುದೆಲ್ಲ ನಿನಗೆ. ಮಾತನಾಡಲು ಬೇಕಿರುವವನು ನೀನೊಬ್ಬನೇ. ಕೀಳಿಸಿಕೊಳ್ಳ ಬೇಕಿರುವುದು ನೀ ತಾನೇ? ಏತಕ್ಕಾಗಿ ಕಾಡಿಸುವೆ, ಕಾಯಿಸುವೆ, ನೋಯಿಸುವೆ? ಅಂದು ನೀ ಕೇಳಿದ್ದೆ "ಏನು ಉಡುಗರೇ ಬೇಕೆಂದು", ನ ಹೇಳಿದ್ದೆ "ಕೊಡು ನಿನ್ನ ಸ್ವಲ್ಪ ಸಮಯವ ನನಗೆಂದು", ''ನನ್ನ ಎಲ್ಲ ಸಮಯವೂ ನಿನಗೆಯಲ್ಲವೇ"ಅಂದ್ದಿದ್ದೆ ನೀನು. ಈಗ ೧ ನಿಮಿಷವೂ ನನ್ನ ಮಾತ ಕೇಳಲು ಸಮಯವಿಲ್ಲ ನಿನಗೆ. ಅಥವಾ ಮನಸೇ ಇಲ್ಲವೇ? ದಿನಕ್ಕೆ ಆಗುವುದೇ ೪ ಭೇಟಿ. ತಿಂಡಿ, ಊಟ, ಕಾಫಿ, ನಿದ್ದೆ.! ತಿನ್ನುವಾಗಲು ಮೊಬೈಲ್ ಫೋನ್ ಬೇಕು. ಕಾಫಿ ಸಮಯದಿ ಅಮ್ಮ ಅಜ್ಜಿ ಸೊಸೆ ಸಾಕು. ಮಲುಗುವಾಗ ಒಂದು ಚೆಸ್ ಆಟ. ಜೊತೆಯಲ್ಲಿ ಸುಮ್ಮನೆ ಕುಳಿತಿರಬೇಕು ನಾನು. ಕೂದಲಿಗೆ ಎಣ್ಣೆ ಹಾಕುವುದೊಂದೇ ನೆನಪು, ಮರುಗಳಿಗೆಯಲ್ಲಿ ನಿನ್ನ ಗೊರಕೆಯ ಇಂಪು.
No comments:
Post a Comment