ಎಷ್ಟು ವಿಚಿತ್ರ ಮನುಷ್ಯನ ಜೀವನ! ಎರೆಡು ವರ್ಷಗಳ ಹಿಂದೆಯಷ್ಟೆ ಒಬ್ಬಳೇ ಊರೂರು ಸುತ್ತಿದ್ದೆ. ಎರೆಡು ವರ್ಷಗಳ ನಂತರ ಮೊದಲ ಬಾರಿ ಇಂದು ಒಬ್ಬಳೇ ಇದ್ದೇನೆ. ಒಂದು ರೀತಿ ನಡುಕ. ಏನೋ! ಅರ್ಥವಾಗದ, ವಿಚಿತ್ರವಾದ ಹೆದರಿಕೆ. ಎಂತಾ ಬದಲಾವಣೆ ಕೇವಲ ಈ ಎರೆಡು ವರ್ಷಗಳಲ್ಲಿ.!ನಮ್ಮಮ್ಮ ಹೇಳುತ್ತಿರುತ್ತಾರೆ "ಮನುಷ್ಯರು ಇಂದು ಇದ್ದ ಹಾಗೆ ನಾಳೆ ಇರರು" ಅವರು ಹೇಳಿದ್ದು ಮನುಷ್ಯನ ವ್ಯವಹಾರದಬಗ್ಗೆ, ಆದರೆ ನನಗನಿಸುತ್ತದೆ, ನನ್ನಲ್ಲಿ ಕಾಣಸಿಗುವ ಬದಲಾವಣೆ ಹಾಗು ಅಮ್ಮ ಸಾಮಾಜಿಕವಾಗಿ ಹೇಳುವ ಆ ಬದಲಾವಣೆಗೂ ಮೂಲ ಒಂದೇ ಆಗಿರಬಹುದೇನೋ? ಯಂದು. ಮನುಷ್ಯನ ಮೆದುಳು ಯಾವರೀತಿ ಕೆಲಸಮಾಡುತ್ತದೆ ಹಾಗು ಭಾವನೆಗಳ ಹತೋಟಿ ಎಷ್ಟರಮಟ್ಟಿಗೆ ಇರುತ್ತದೆ ಎಂದು ಯಾರಿಗೂ ಅರಿವಿರುವುದಿಲ್ಲ.
No comments:
Post a Comment