Sunday 14 February 2021

Beauty lies in the eyes of the beholder

"Beauty lies in the eyes of the beholder'' ಅನ್ನೋ ಮಾತು ನೀವೆಲ್ಲರೂ ಕೇಳಿಯೇ ಇರುತ್ತೀರಿ. ಹಾಗೆ ಈ ಮಾತನ್ನು ಒಪ್ಪಿಯೂ ಇರಬಹುದು ಅಥವಾ ಒಪ್ಪದೆಯೂ ಇರಬಹುದು. 

ನಾನು ಅಷ್ಟೆಲ್ಲ ಇದರ ಬಗ್ಗೆ ಯೋಚಿಸಲು ಹೋಗಿಲ್ಲ. ಎಷ್ಟೋ ಮಂದಿ ಹಾಗೇ ಸುಮ್ಮನೆ ತುಂಬಾ ಚೆನ್ನಾಗಿ ಇದ್ದರೆಂದು ಅನಿಸಿದ್ದಿದೆ (symmetry ಕರಣ ವಿರಬಹುದು).  ಆದರೆ ನನ್ನ ಗಮನ ಸೆಳೆದ ವಿಷಯ ಏನಪ್ಪಾ ಎಂದರೆ ಸಾಮಾನ್ಯವಾಗಿ ಯಾವಾಗಲು ನನಗೆ ನನ್ನ ಅಣ್ಣ, ನನ್ನ ಅತ್ತಿಗೆ, ನನ್ನ ಅಪ್ಪ, ನನ್ನ ಗಂಡ, ನನ್ನ ಅತ್ತೆ, ನನ್ನ ಸ್ನೇಹಿತರು ಹೀಗೆ ನನ್ನ ಎಂಬ ಪದ ಎಲ್ಲಿಯೆಲ್ಲ ಇದೆಯೋ ಅವರುಗಳು ಬೇರೆಯವರಿಗಿಂತ ಚೆಂದ ಇದ್ದಾರೆ ಅಂತ ಅನಿಸುತ್ತದೆ. ನಾನು ಅಮ್ಮ ಯಾವುದಾದರು ಮದುವೆ ಮುಂಜಿ ಕಾರ್ಯಕ್ರಮಕ್ಕೆ ಹೋದರೆ ಎಷ್ಟೋ ಭಾರಿ ಅಮ್ಮನಿಗೆ ಹೇಳಿದುಂಟು "ಇಲ್ಲಿ ಇರುವ ಎಲ್ಲಾ ಹೆಂಗಸರಿಗಿಂತ ನೀವೇ ಬ್ಯೂಟಿಫುಲ್ ಅಮ್ಮ". ಅದು ಸುಳ್ಳು ಸುಳ್ಳು ಹೊಗಳಿಕೆಯಲ್ಲ, ನಿಜಕ್ಕೂ ಅವರು ನನ್ನ ಕಣ್ಣಿಗೆ ಯೆಲ್ಲರಿಗಿಂತ ಸುಂದರವಾಗಿ ಕಾಣಿಸುತ್ತಾರೆ. ಹಾಗೆಯೇ ನನ್ನ ಗಂಡನು ಕೂಡ. ಅವರ ಎಷ್ಟೋ ಸ್ನೇಹಿತರನ್ನು ಭೇಟಿ ಅದಾಗಲೆಲ್ಲ ಹಾಗೆ ಅನಿಸುತ್ತದೆ. ಇವರೇ ಚೆಂದವೆಂದು.!! ಯಾವುದೇ ವಿಷಯದಲ್ಲಾದರೂ (ರಿಲೇಟಿವ್) ಏನನ್ನು ಇನ್ನೊಂದಕ್ಕೆ ಹೋಲಿಸಿ ನಾನು ಹೇಳದಿದ್ದರೂ, ಈ ವಿಷಯ ಯಾಕೋ ಹೀಗಿದೆ!! ಚೆಂದ ಎಂಬ ವಿಷಯವು ಕೇವಲ ಆಪ್ಟಿಕಲ್ ನರ್ವ್ಸ್ ಮೆದುಳಿಗೆ ಕಳಿಸು ವಿದ್ಯುತ್ ಸಂಕೇತದ ಮೇಲಷ್ಟೇ ಅಲ್ಲ ನಿಮಗೆ ಆ ವಸ್ತು/ವ್ಯಕ್ತಿಯ ಮೇಲಿರುವ ಭಾವನೆಯು ಪ್ರಭಾವ ಬೀರುತದ್ದೇ.  

ಇದಕ್ಕೆ ಇನ್ನೊಂದು ಉದಾಹರಣೆ ಯೆಂದರೆ ಅಡಿಗೆಗಳು. ಕೆಲವರಿಗೆ ಕೆಲವು ಅಡಿಗೆ ಸೇರುವುದೇ ಇಲ್ಲ ಅಥವಾ ಕೆಲವು ಅಡಿಗೆಗಳು ಕೆಲವರಿಗೆ ಬಹಳಾನೇ ಇಷ್ಟ.! ಇದಕ್ಕೆ ಕರಣ ಕೇವಲ ಅಡಿಗೆಯ ರುಚಿ ಮಾತ್ರವಲ್ಲ. ಅದರ ಬಣ್ಣ, ಅದರ ವಿನ್ಯಾಸ/ಟೆಕ್ಸ್ಚರ್, ಪರಿಮಳ, ಅಥವಾ ಅದು ಯಾವುದಾದರು ಇಷ್ಟವಿರುವ/ವಿಲ್ಲದ ವಸ್ತುವಿನ ಹೋಲಿಕೆ, ಅಥವಾ ಅಡಿಗೆ ಮಾಡಿದವರ ಮೇಲಿನ ಭಾವನೆ ಹೀಗಿ ಹತ್ತು ಹಲವು ಕಾರಣಗಳ ಮಿಶ್ರಿತ ಫಲಿತಾಂಶವಾಗಿರುತ್ತದೆ. 

ಪಂಚೇಂದ್ರಿಯ ಪ್ರಚೋಧನೆ ಯೆನ್ನ ಬಹುದೇನೋ! ಗೊತ್ತಿಲ್ಲ. ಅಥವಾ ಅನುವಂಶಿಕ ಹಾಗು ನಮ್ಮ ಸುತ್ತಮುತ್ತಲಿನ ವಾತಾವರಣ/ಪರಿಸರವು ಪ್ರಭಾವಬೀರಬಹುದು. ಎಷ್ಟು ಸಂಕೀರ್ಣವಾದ ವಿಷಯವಿದು. ಯೋಚಿಸಿದಷ್ಟೂ ಗಾಢವಾಗುತ್ತ ಹೋಗುತ್ತದೆ. ಕೆಲವೊಮ್ಮೆ ಏನನ್ನು ಯೋಚಿಸುತ್ತಿದ್ದೇವೆ ಎಂಬುದೇ ಮರೆತು ಹೋಗುತ್ತದೆ. 

No comments:

Post a Comment