ಮನಸ್ಸು ಮಹಾ ಮರ್ಕಟ. ಈಗ ಇದ್ದ ಹಾಗೆ ಮುಂದೆ ಇರದು. ಘಳಿಗೆಗೊಮ್ಮೆ ಬದಲಾಗುತ್ತಲೇ ಇರುವುದು. ಇಂದಿನ ಸತ್ಯ ನಾಳೆಗೆ ಸುಳ್ಳು. ಬದಲಾವಣೆ ಜಗದ ನಿಯಮ ಎಂದು ಎಲ್ಲರೂ ಹೇಳುತ್ತಾರೆ, ಆದರೂ ತಾವು ಬದಲಾಗೆವುಯೆಂಬ ಬಂಡ ನಂಬಿಕೆಯೋ ಅಥವಾ ಆ ತಕ್ಷಣಕ್ಕೆ ಹಾಗನಿಸುವುದೋ ಗೊತ್ತಿಲ್ಲ, ಜೀವನ ಪರಿಯ ಭಾಷೆ ಕೊಟ್ಟು ಬಿಡುತ್ತಾರೆ. ಜೀವನವನವನ್ನು ಒಮ್ಮೆ ಹಿಂತಿರುಗಿ ನೋಡಿದರೆ ತಿಳಿಯುತ್ತದೆ ಎಷ್ಟೋ ಸುಳ್ಳುಗಳ ಕಂತೆಯ ದಾರಿಯಲ್ಲಿ ನಾವು ನಡೆದು ಬಂದಿರುವೆವೆಯೆಂದು!! ಅಕ್ಕ ಪಕ್ಕದ ಮನೆಯವರಿಗೆ, ಜೊತೆಯಲ್ಲಿ ಓದಿದ ಗೆಳತಿಗೆ, ತುಂಬಾ ಇಷ್ಟಪಟ್ಟ ಶಿಕ್ಷಕಿಗೆ, ಯಾವಾಗಲು ಹೋಗುತ್ತಿದ್ದ ದೇವಸ್ಥಾನದ ಅರ್ಚಕರಿಗೆ, ಮೊದಲ ಪ್ರೀತಿಗೆ, ದೂರ ಅದೆಲ್ಲೋ ವಾಸಿಸುವ ಸ್ನೇಹಿತರಿಗೆ, ಎಲ್ಲರಿಗೂ ಒಂದು ಸುಳ್ಳು ಆಶ್ವಾಸನೆ. ಹುಟ್ಟಿದ ಊರೊಂದು, ಬೆಳೆದ ಊರೊಂದು, ಕಲಿತವೂರೊಂದು, ಕೆಲಸಮತ್ತೊಂದೂರು, ಮದುವೆಯಾದದ್ದು ಇನ್ನೊಂದೂರು, ಈ ನಡುವೆ ಹೇಳಿದ ಸುಳ್ಳುಗಳು ಬೆಟ್ಟದಷ್ಟು. ನಮಗೆ ನಾವು ಎಷ್ಟು ಸುಳ್ಳುಗಳನ್ನು ಹೇಳಿಕೊಂಡಿರುವೆವೋ. ಅದರ ಲೆಕ್ಕ ಆಕಾಶದಷ್ಟು. ಇವೆಲ್ಲವನ್ನು ಸುಳ್ಳು ಅನ್ನುವುದಕ್ಕಿಂತ ವಿಕಾಸನವೆನ್ನಬಹುದೇನೋ ಎಂಬ ಮತ್ತೊಂದು ಸುಳ್ಳು ಮನಸ್ಸಿನ ನೆಮ್ಮದಿಗಾಗಿ. ಅಥವಾ ಆ ಕ್ಷಣದ ಸತ್ಯವನ್ನು ಜೀವನದ ಸತ್ಯವೆಂದು ನಮಗೆ ನಾವು ಸಪ್ಸ್ಟಿಪಾಡಿಕೊಂಡ ಮತ್ತೊಬರಿಗೆ ಸುಳ್ಳನು ಹೇಳಲು ಪ್ರೇರೇಪಿಸಿದ ಸುಳ್ಳೊಏನೋ . ಸತ್ಯ ಸುಳ್ಳು ನೋವು ನಲಿವು ದುಃಖ್ಖ ದುಮ್ಮಾನ ನಗು ಅಳುಗಳೆಂಬ ನಾನಾ ಭಾವನೆಗಳಲ್ಲಿ ಸಿಲುಕಿ ಸರಿ ತಪ್ಪುಗಳೆಂಬ ಕಡಿವಾಣಗಲಾಕಿಕೊಂಡು, ಚಿಂತೆ ಎಂಬ ಚಿತೆ ಏರಿ, ಜೀವನ ಲೈಟ್ ಆಗಿ ತಗೋಬೇಕು ಸ್ವಾಮಿ ಅಂತ ನಗುನಗುತ್ತಾ ಮತ್ತೊಬ್ಬರಿಗೆ ಸುಳ್ಳು ಬುದ್ದಿವಾದ ಹೇಳಿ, ಇರುವಷ್ಟು ದಿನ ಬದುಕಿ ಚಟ್ಟ ಕಟ್ಟಿಸಿಕೊಂಡು ಪ್ರತಿಯೊಬ್ಬ ಮನುಷ್ಯನು ಹೋಗಲೇ ಬೇಕು.
"ಲೈಫು ಇಷ್ಟೇನೆ, ಫುಲ್ ಆಫ್ ಲೈಸ್"
ಪ್ರೇಮಿಗಳ ದಿನ ಹತ್ತಿರದಲ್ಲೇ ಬರುತ್ತಿದೆ. ನನ್ನ ಜೀವನದ ಏಕೈಕ ಸತ್ಯ ನನ್ನ ಕೃಷ್ಣನಿಗೆ ಸತ್ಯವೆಂಬ ಸುಳ್ಳು ಅಥವಾ ಸುಳ್ಳೆoಬ ಸತ್ಯವೋ, (ಯಾವುದೊ ಒಂದು) ಹೇಳಿ ಮುದ್ದುಮಾಡಬೇಕು, ಸಧ್ಯಕ್ಕೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳದೆ ಒಮ್ಮೆ ನಕ್ಕು ಬಿಡಿ. ಜೀವನ ಲೈಟ್ ಆಗಿ ತಗೋಬೇಕು ಸ್ವಾಮಿ. ಟಾಟಾ
No comments:
Post a Comment