Wednesday 3 February 2021

Tension

ಎಷ್ಟು ಕಷ್ಟ ಈ ಟೆನ್ಷನ್ ಇಂದ ಹೊರ ಬರುವುದು. ಅಬ್ಬಬ್ಬಾ ಕರೆಯದ ಬರುವ ಈ ಅತಿಥಿ, ಹೋಗು ಎಂದರು ಹೋಗದ ಪರಿಸ್ಥಿತಿ. ಬುದ್ದಿಗೆ ಗೊತ್ತಿದೆ ಚಿಂತೆ ಚಿತೆ ಯೆಂದು, ಆದರೂ ಏಕಿಷ್ಟು ಹಟ ಈ ಬುದ್ದಿಗೆ? ಬುದ್ಧಿಯೇ ಬುದ್ದಿಯ ಮಾತು ಕೇಳುತ್ತಿಲ್ಲ. ಬೇಡ ಬೇಡ ಅಂದರು ಒತ್ತಡದ ಭಾವನೆ ಒತ್ತೊತ್ತಾಗಿ ಬರುತ್ತಲೇ ಇದೆ. ಸುತ್ತಮುತ್ತ ನಡೆಯುತ್ತಿರುವ ಘಟನೆಗಳು ಏಕಿಷ್ಟು ಪ್ರಭಾವ ಬೀರುತ್ತಿದೆ? ನನ್ನ ಜೀವನದಲ್ಲಿ ಎಲ್ಲವೂ ಕುಶಲ ಆದರೂ ಕ್ಷೇಮವಾಗಿಲ್ಲವೇಕೆ ನಾನು? ಯೋಗ ಪ್ರಾಣಾಯಾಮದ ಮೊರೆ ಹೋಗಾಯ್ತು, ಗೂಗಲ್ ಮಾಡಿ ಕಾಮ್ ಆಗುವುದು ಹೇಗೆ ಎಂದು ಸುಂದರವಾದ ಕೋಟ್ಸ್ ಓದಿಯಾಯಿತು. ಯುಟ್ಯೂಬ್ ನಲ್ಲಿ ರಿಲಾಕ್ಸಿಂಗ್ ಮ್ಯೂಸಿಕ್ ಕೇಳಿಯಾಯಿತು. ಆದರೂ ಹುಂ ಹುಂ. ಕೆತ್ತಬಾಜಿ ಈ ಟೆನ್ಷನ್. ಅಂಟಿ ಹಿಡಿದ ಎಣ್ಣೆ ಜಿಡ್ಡಿನ ಹಾಗೆ. ಹೋಗುವ ಲಕ್ಷಣವೇ ತೋರುತ್ತಿಲ್ಲ. ಹಾಗೆ ನೋಡಿದರೆ ನಾನು ಬಹಳಾನೇ ಆರಾಮವಾಗಿರಬೇಕಿರು ಸಮಯವಿದು. ಈಗಷ್ಟೇ ಪಿ ಹೆಚ್. ಡಿ. ಮುಗಿಯಿತು. ಸ್ವಲ್ಪ ವಿಶ್ರಮಿಸಿ ಕೆಲ್ಸಕ್ಕೆ ಹೋದರಾಯ್ತು. ಹಾಗು ಹೇಳಬೇಕೆಂದರೆ ಎಲ್ಲವೂ ಹಂತೋಪ ಹಂತವಾಗಿ ನಮ್ಮ ಜೀವನದಲ್ಲಿ ಅಭಿವೃದ್ಧಿಯೇ ಯಾಗುತ್ತಿದೆ. ನಾನು ಸಹ ನನ್ನ ಸ್ವ-ಅಭಿವೃದ್ಧಿಗೆ ಶ್ರಮಿಸುತ್ತಿದೇನೆ, ಎಲ್ಲವೂ ಒಳ್ಳೆಯದೇ ಆಗುತ್ತಿದೆ, ಆದರೂ ಯಾವುದೊ ಕಾಣದ, ತಿಳಿಯದ ಒತ್ತಡ. ಯಾರಿಗೂ ಹೇಳುವಂತಿಲ್ಲ. ಹೇಳಿದರೆ ಅರ್ಥವು ಆಗುವುದಿಲ್ಲ. ಅರ್ಥವಾದರೂ ಇದರಿಂದ ಹೊರಬರಲು ಯಾರು ಸಹಾಯ ಮಾಡುವುದಿಲ್ಲ. ಸಹಾಯ ಮಾಡುವ ನೆಪದಲ್ಲಿ ಬುದ್ದಿ ಮಾತು ಹೇಳಹೊರಡುವರು. "ಸ್ವಾಮಿ, ನನಗೆ ಬುದ್ದಿಮಾತು ಬೇಡ ಈಗ, ನನ್ನ ಮಾತು ಸ್ವಲ್ಪ ಕೇಳಿ ಸಾಕು. ಸುಮ್ಮನೆ ನನ್ನೊಂದಿಗೆ ಸ್ವಲ್ಪ ಕಾಲ ಕುಳಿತುಕೊಳ್ಳಿ ಸಾಕು, ಸ್ವಲ್ಪ ಒಳ್ಳೆಯ ಮಾತನಾಡಿ ಸಾಕು, ಸ್ವಲ್ಪ ನಕ್ಕು ನಲಿಯಿರಿ ಸಾಕು. " ಅಂತ ಹೇಗೆ ತಾನೇ ಹೇಳಲಿ ನಾನು? ನಿಮಿಷ ನಿಮಿಷಕ್ಕೂ, ಎಲ್ಲಾ ಮಾತಿಗೂ ಕೋಪ ತಾಪ. ಯಾಕೀಗೆ? "ನನ್ನನ್ನು ನನ್ನ ಪಾಡಿಗೆ ಬಿಟ್ಟರೆ ನಾನು ನನಗೆ ತಿಳಿದ ಮಟ್ಟಿಗೆ ಸರಿಯಾದ ಹಾದಿಯಲ್ಲೇ ಹೋಗುವೆ ಎಂಬ ನಂಬಿಕೆ. ಯಾರಿಗಿಷ್ಟವಿಲ್ಲ ಹೇಳಿ ಯಶಸ್ವಿಯಾಗುವುದು?   ಯಾಕೆ ನಾನು ಇಷ್ಟೆಲ್ಲ ವರಿ ಮಾಡುವಂತೆ ಪರಿಸ್ಥಿತಿಗಳ ನಿರ್ಮಾಣ ಮಾಡುತ್ತಿರುವರು??" ಅಂತೆಲ್ಲ ಅನಿಸುತ್ತದೆ. ಈ ಬರವಣಿಗೆ ಯಾದರು ಸ್ವಲ್ಪ ಮಟ್ಟಿಗೆ ನೆಮ್ಮದಿ ತರಬಹುದೇನೋ ಯೆಂಬ ನಂಬಿಕೆ, ಸ್ವಲ್ಪಮಟ್ಟಿಗಾದರೂ ಒಳ್ಳೆಯ ನಿದ್ರೆ ಬರಬಹುದೇನೋ ಯಂಬ ಆಸೆ. 

No comments:

Post a Comment