ಹಾಗಾದರೆ ಸ್ವಾರ್ಥಕ್ಕಾಗಿ ಸ್ನೇಹಿತೆಯೇ? ಯೆಂದು ನಿಮಗನಿಸಿದರು ಚಿಂತೆಯಿಲ್ಲ .
ನೆನ್ನೆ ಏಕೋ ಕಸಿಮಿಸಿ, ಕಳೆದ ೬ ವರ್ಷಗಳ ಜೀವನದ ಸಾರ್ತಕಥೆಯ ಪ್ರಶ್ನೆ. ಏನೇನೋ ಬೇಡದ ಯೋಚನೆಗಳ ಗೂಡಾದ ಮನಸ್ಸು. ಸ್ನೇಹಿತೆಗೆ ಮೆಸೇಜ್ ಮಾಡಿ ಬೇಜಾರು ನನಗೆ ಹೀಗೆಲ್ಲ ಅನ್ನಿಸುತ್ತಿದೆ ಎಂದು ಮಾನಸಿ ಅನ್ನಿಸಿದ್ದನು ಆದಷ್ಟು ಒಳ್ಳೆಯ ರೂಪಾಂತರಿಸಿ ಎಷ್ಟು ಬೇಕೋ ಅಷ್ಟೇ ಅವಳಿಗೆ ಹೇಳಿದೆ. ಆಗ ಅವಳು ಹೇಳಿದ ಒಂದು ಮಾತು ಎಷ್ಟು ಸಮನಾದ ಕೊಟ್ಟಿತೆಂದರೆ ಬಾಯಾರಿದವನಿಗೆ ನೀರು ಸಿಕ್ಕಷ್ಟು. ಆಕೆ ಹೇಳಿದ್ದು ಇಷ್ಟೇ,
"ಮಧು, ಪರಿಸ್ಥಿತಿಗಳು ನಿಜವಾಗಿಯೂ ನೀನು ಹೇಳುವ ರೀತಿಯೇ ಇದಿಯೇ ಅಥವ ಕೇವಲ ನಿನಗೆ ಹಾಗನಿಸಿತ್ತುರುವುದೇಯೆಂದು ಸಮಾಧಾನದಿಂದ ಆಲೋಚಿಸು. ನಿನ್ನ ಮೇಲೆ ಮಾತ್ರ ನಿನ್ನ ಗಮನವಿರಲಿ, ಎಲ್ಲವೂ ತನ್ನಿಂದ ತಾನೇ ಸರಿಹೋಗುತ್ತದೆ. ನಾನು ಈ ಸವಾಲುಗಳ್ಳನ್ನು ಎದರಿಸಿ ಬಂದಿದ್ದೇನೆ"
ಅನುಭವಗಳು ಕಲಿಸುವ ಪಾಠಕ್ಕೆ ಬೇರೆ ಸಾಟಿ ಇಲ್ಲ ಅನ್ನುವುದು ಇದಕ್ಕೆ ಇರಬೇಕು.
No comments:
Post a Comment