Friday, 8 January 2021

ಮೂಗು ಬೊಟ್ಟು

ಆರ್ಥಿಕತೆ ಸ್ವಾತಂತ್ರ್ಯ (Financial independence) ಎಂಬುದು ಪ್ರತಿಯೊಂದು ಮನುಷ್ಯನಿಗೆ ಎಷ್ಟು ಅಗತ್ಯ? ನಿಮಗೆ ಕೆಲವು ಸಣ್ಣ ಸಣ್ಣ ಉಧಾರಣೆಗಳನ್ನು ಕೊಡುತ್ತೇನೆ. 

ನಾನೊಂದು ಮೂಗು ಬೊಟ್ಟು ತೆಗೆದುಕೊಳ್ಳಬೇಕೆಂದು ಕಳೆದ ೮ ವರ್ಷಗಳಿಂದ ಬಯಸಿದ್ದೇನೆ. ಆದರೆ ಈ ವರೆಗೂ ತೆಗುದುಕೊಳ್ಳಲಾಗಿಲ್ಲ. ೮ ವರ್ಷಗಳ ಹಿಂದೆ ೧೦೦೦ ರು. ಗೆ ಸಿಯುತ್ತಿತ್ತೇನೋ. ಈಗ ೧೦೦೦೦ ರು. ಆದರೂ ಬೇಕು. ನೋಡುವವರಿಗೆ ನಾನು ಬಡವಳಲ್ಲ. ತಕ್ಕಮಟ್ಟಿಗೆ ಹಣವುಳ್ಳವಳೇ. ೨೦೧೫-೧೮ ವರೆಗೆ ಸಣ್ಣ ಸಣ್ಣ ಉದ್ಯೋಗಳನ್ನುಮಾಡಿದ್ದೇನೆ. ಮನೆಗೆಂದು ಒಂದಷ್ಟು ಹಣವನ್ನು ಕೊಟ್ಟಿದ್ದೇನೆ. ಆದರೆ ನನಗೆ ಸಾಕಾಗುವಷ್ಟು ಅಂದರೆ ಮೂಲಭೂತವಾದ/ ದಿನ ನಿತ್ಯದ ಖರ್ಚು ವೆಚ್ಚಗಳ ಹೊರತಾಗಿ ಬೇರೇನೂ ನಿಭಾಯಿಸಲು ಸಾಧ್ಯವಾಗಿಲ್ಲ. ನನ್ನ ಮದುವೆ ಸಮಯದಲೊಂದಷ್ಟು ಕೂಡಿಟ್ಟ ಹಣವನ್ನು ಆಡಂಬರಕ್ಕಾಗಿ ಖರ್ಚು ಮಾಡಿದ್ದೂ ಹೊರತಾಗಿ ಬೇರೆ ಏನು ಮಾಡಿಲ್ಲ. ೮ ವರ್ಷಗ ಹಿಂದೆ ಒಮ್ಮೆ ಅಮ್ಮನ ಬಳಿ ನನಗೆ ಮೂಗು ಬೊಟ್ಟು ಬೇಕೆಂದಿದ್ದೆ. ನನ್ನ ಬಳಿ ಇರುವ ಎಲ್ಲಾ ಒಡವೆಯನ್ನು ಅಮ್ಮನೇ ಕೊಡಿಸಿದ್ದಾದರೂ ಯಾಕೋ ಇಷ್ಟು ಚಿಕ್ಕ ಮೂಗುಬೊಟ್ಟು ಕೊಡಿಸಲು ಅಂದು ಅವಳು ಮನಸು ಮಾಡಿರಲಿಲ್ಲ. ಅದಾದ ನಂತರ ಯಾವತ್ತೂ ಅದರ ಬಗ್ಗೆ ಅವಳಲ್ಲಿ ಪ್ರಸ್ತಾಪಿಸಲಿಲ್ಲ. ಮದುವೆ ಆದ ಮೇಲೆ ನನ್ನ ಗಂಡನ ಬಳಿ ಒಂದು ೪-೫ ಸಲ ಹೇಳಿದ್ದೆ ಏನು ಬೇಕು ಅಂತ ಕೇಳಿದಾಗಲೆಲ್ಲ!!! ಅವರು ಯಾಕೋ ಇನ್ನು ಮನಸೇ ಮಾಡಿಲ್ಲ ಕೊಡಿಸೋದಕ್ಕೆ!!! ಪಿಹೆಚ್.ಡಿ . ಡಿಫೆನ್ಸ್ ಆದನಂತರ ನನ್ನ ಸ್ನೇಹಿತರಿಗೆ ಹಾಗು ಡೆಪಾರ್ಮೆಂಟ್ ಮಂದಿಗೆ ಊಟ ಕೊಡಿಸಬೇಕೆಂದು, ಥೀಸಿಸ್ ಪ್ರಿಂಟ್ ಮಾಡಿಸಲೆಂದು ಹಾಗು ಒಂದು ಕ್ಯಾಮೆರಾ ತೆಗುದು ಕೊಳ್ಳಬೇಕೆಂದು  ಒಂದಷ್ಟು ಸಣ್ಣ ಮಟ್ಟಿನ ಹಣ ಕೂಡಿಟ್ಟಿದು ಹಾಗೆ ಇದೆ. ಆದರೂ ಅದನ್ನು ಮೂಗು ಬೊಟ್ಟು ತೆಗೆದು ಕೊಳ್ಳಲು ಬಳಸಿಲ್ಲ!! ಹೇಳಿಕೊಳ್ಳಲು ನಮ್ಮ ಮೂವರಿಗೂ  ಮೂಗು ಬೊಟ್ಟಿಗೆ ತೆಗೆದು ಕೊಳ್ಳುವುದು ಒಂದು ದೊಡ್ಡ ವಿಷಯವೇ ಅಲ್ಲ. ಆದರೂ ತೆಗೆದು ಕೊಳ್ಳಲಾಗುತ್ತಿಲ್ಲ. ಹಣಕಾಸಿನ ವ್ಯವಹಾರ ಗೌಪ್ಯವಾಗಿರಬೇಕು ಹೌದು ಆದರೆ ನಾನಿಲ್ಲಿ ಇಷ್ಟು ವಿವರಣೆ ಕೊಟ್ಟಿದ್ದು ಕೇವಲ ಫೈನಾನ್ಸಿಯಲ್ ಇಂಡಿಪೆಂಡೆನ್ಸ್ ಎಷ್ಟು ಮುಖ್ಯ ಎಂದು ಹೇಳಲು. 

ನಾ ಹೇಳುವುದಿಷ್ಟೇ, ಕಳೆದುಹೋದ ಸಮಯ ಕಳೆದು ಹೋಯಿತು. ಎಷ್ಟೇ ಹುಡುಕಿದರು ಮತ್ತೆ ಸಿಗದು. ಅವರವರ ಬಾಯಿಗೆ ಅವರವರ ಕೈ. ಆದಷ್ಟು ದುಡಿಯೋಣ. ನಾವು ಬೆಳೆಯೋಣ, ನಮ್ಮವರನ್ನು ಬೆಳೆಸೋಣ.  ಕೆಲಸಗಳಲ್ಲಿ ಸಣ್ಣದು ದೊಡ್ಡದು ಎಂಬ ಭೇದ ಬೇಡ. ಏನು ಇಲ್ಲ ಎಂಬುದಕ್ಕಿಂತ ಏನೋ ಸ್ವಲ್ಪವಾದರೂ ಇದೆ ಎಂಬುದು ನೆಮ್ಮದಿ ತರುತ್ತದೆ.!


No comments:

Post a Comment