Wednesday, 3 February 2021

Fear of Success.

ಹೀಗೂ ಒಂದು ಇದೆಯೇ ಯೆಂದು ಭಾವಿಸಬೇಡಿ. ಇದು ಸತ್ಯ! ನನ್ನ ಕಥೆ ವಿಚಿತ್ರವೆನಿಸಬಹುದೇ ನಿಮಗೆ ಅಥವಾ ನಿಮ್ಮ ಕಥೆಯು ನನ್ನನ್ನ ಕಥೆಯೇ ಇರಬುದು! ಈ ಲೇಖನ ಯಾರನ್ನು ದೂಷಿಸುವುದಕ್ಕಲ್ಲ. ಇಲ್ಲಿ ಯಾವುದು ತಪ್ಪು ಯಾವುದು ಸರಿಯಂಬುದರ ಚರ್ಚೆಯ ಅಗತ್ಯವೂ ಇಲ್ಲ. ಅತಿರೇಖ ಅನ್ನಿಸಿದಲ್ಲಿ ಆಶ್ಚರ್ಯವಿಲ್ಲ. 

ನನ್ನನಣ್ಣ ಓದುವುದಲ್ಲಿ ಹುಷಾರಿ. ೫ನೇ ತರಗತಿಯಲ್ಲಿಯೇ ನವೋದಯ ಪರೀಕ್ಷೆ ಪಾಸ್ ಮಾಡಿದ. ಬೋರ್ಡಿಂಗ್ ಶಾಲೆ ಸೇರಿದ. ಅಮ್ಮನಿಗೆ ನಾನು ಹುಷಾರಿಯಾಗಬೇಕೆಂಬ ಹಂಬಲ. ಶಾಲೆಗೆ ದೂರ ಕಲಿಸುವ ಮನಸಿತ್ತೋ ಬಿಟ್ಟಿತೋ ಗೊತ್ತಿಲ್ಲ, ಆದರೆ ನಾನು ಪರೀಕ್ಷೆ ತೆಗೆದುಕೊಳ್ಳ ಬೇಕೆಂಬ ಆಸೆ. ನಾನು ತೆಗೆದು ಕೊಂಡೆ. ಅನುತೀರ್ಣಳಾದೆ. ಅಲ್ಲಿಂದ ಎಲ್ಲವೂ ಬದಲಾಯಿತು. ನನಗೆ ನನ್ನ ಮೇಲೆ ಖಿನ್ನತೆಯ ಭಾವ. ಅಥವಾ ನನಗೆ ಕಷ್ಟವಿರುವ ಯಾವುದೇ ಪರೀಕ್ಷೆ ಎದರಿಸುವುದೇ ಭಯ! ಎಲ್ಲಿ ಉತ್ತೀರ್ಣಳಾಗಿಬಿಡುವೆನೋ ಎಂಬ ಭಯ!! ಹೌದು. ನೀವು ಓದಿದ್ದು ಸರಿಯೇ ಇದೆ. ಉತ್ತೀರ್ಣಳಾಗಿಬಿಟ್ಟರೆ ಮುಂದೆ ಏನೋ, ದಾರಿ ಕಷ್ಟ ವಿರಬಹುದು. ನನ್ನಿಂದ ಜನ ಹೆಚ್ಚೇ ಅಪೇಕ್ಷಿಸಬಹುದೇನೋ. ಒಂದು ಸಲ ಉತ್ತೀರ್ಣಳಾದರೆ ಪ್ರತಿಭಾರಿಯೂ ಉತ್ತೀರ್ಣಳಾಗಲೇ ಬೇಕೆಂಬ ಅಪೇಕ್ಷೆ ಮೂಡಬಹುದೇನೋ. ಅಥವಾ ನನ್ನ ನನ್ನ ಗೆಲುವು ಆಕಸ್ಮಿಕ ಅನಿಸಬಹುದೇ ಹೀಗೆ ಬೇಡದ ಇಲ್ಲದ ಸಲ್ಲದ ಮಳ್ಳು ಯೋಚನೆಗಳು! ಆದಷ್ಟು ಲೊ ಪ್ರೊಫೈಲ್ ಮೈನ್ಟೈನ್ ಮಾಡಿಕೊಂಡೆ ಬಂದಿದ್ದೆ. ಇಂಜಿನಿಯರಿಂಗ್ ಸೆರೆಂದು ಸ್ನೇಹಿತರು ಎಷ್ಟೇ ಒತ್ತಾಯಮಾಡಿದರು ಸೇರಲಿಲ್ಲ. ಮುಂದೆ ಬಿ. ಯಸ್ ಸಿ. ಆದಮೇಲೆ ಯಾವುದೇ ಕೆಲ್ಸಕ್ಕೆ ಪರೀಕ್ಷೆ ತೆದುಕೊಳ್ಳಲಿಲ್ಲ. ಆಗಸ್ಟ್ ಅಣ್ಣ ಇಂಜಿನಿಯರಿಂಗ್ ಮುಗಿಸಿ ಗೇಟ್ ಪರೀಕ್ಷೆ ಉತ್ತೀರ್ಣವಾಗಿ ಭಾರತದ ಪ್ರತಿಷ್ಠಿತ ಇನ್ಸ್ಟಿಟ್ಯೂಟ್ ಐ ಐ ಯಸ್ ಸಿ ಯಲ್ಲಿ ಎಂ ಟೆಕ್ ಸೇರಿದ್ದ. ಆ ಸಮಯದಲ್ಲಿ ನಾನು ಕೆಲವು ಪರೀಕ್ಷೆ ಯನ್ನು ತೆಗೆದುಕೊಂಡಿದ್ದೆ. ಮತ್ತೆ ಉತ್ತೀರ್ಣವಾಗಲಿಲ್ಲ. ಇನ್ನಷ್ಟು ಕುಗ್ಗಿ ಹೋದೆ. ೨೨ ವರ್ಷ ಅಪ್ಪ ಅಮ್ಮನ ಜೊತೆಯಲ್ಲಿ ಇದ್ದ ನಾನು ಎಂ ಯಸ್ ಸಿ ಗಾಗಿ ಮೈಸೂರ್ ಸೇರಬೇಕಾಯಿತು. ಮನೆಯ ಸೆಳೆತ. ಪ್ರತಿ ವಾರವೂ ಮನೆಗೆ ಬರುತ್ತಿದ್ದೆ. ಓದಿನಲ್ಲಿ ಹಿಂದೇಟಾಯ್ತು ಮೊದಲನೇ ವರ್ಷ. ಎರಡನೇ ವರ್ಷ ಚೇತರಿಸಿಕೊಂಡೆ. ಆಗೆಲ್ಲ ಹುಡುಗಾಟದ ಜೀವನವಾಗಿತ್ತು. ಕೆಲಸಕ್ಕೆ ಸೇರುವುದೆಂದರೆ ಅಷ್ಟೆಲ್ಲ ಕಷ್ಟ ವೆಂಬ ಅರಿವಿರಲಿಲ್ಲ. ಯಾವುದೇ ಕಷ್ಟ ಪಡಲು ಹೆದರಿಕೆ. ಸೋತರೆ ಎಂಬ ಭಯ. ಈಗ ಗೆದ್ದರೆ ಎಂಬ ಭಯ ಮರೆಯಾಗಿತ್ತು. ಸೋತರೆ ಅಪಮಾನ ವೆಂಬ ಯೋಚನೆ ಷುರುವಾಗಿತ್ತು. ಹಾಗಾಗಿ ಯಾವುದಕ್ಕೂ ಪ್ರಯತ್ನಿಸಲಿಲ್ಲ. ಉಂಡಾಡಿ ಗುಂಡನಾದೆನೇನೋ ! ಈಗ ಅದರ ಬೆಲೆ ತೆರುತ್ತಿದೇನೆ. ಎಷ್ಟು ಕ್ಷಮತೆ ಇದ್ದರೇನು? ಎಷ್ಟು ಒಳ್ಳೆಯ ಅಂಕವಿದ್ದರೇನು? ಅಷ್ಟೇ ಒಳ್ಳೆಯ ಸ್ಥಾನಮಾನ ವಿರಬೇಕಲ್ಲವೇ ಎಂಬ ಅರಿವು ನನ್ನ ಗಂಡನಿಂದ ಮೂಡಿದೆ ಅಥವಾ ಇನ್ನಷ್ಟು ಜವಾಬ್ದಾರಿಗಳಿಂದ ಓಡಿ ಹೋಗುವು ಅವಕಾಶ ಮುಗಿದೋಗಿದೆ. ಈಗ ಡಾಕ್ಟಾರೇಟ್ ಕೂಡ ಮುಗಿಯಿತು. ಜೀವನದಲ್ಲಿ ಒಂದು ಐಡೆಂಟಿಟಿ ಎಷ್ಟು ಮುಖ್ಯವೆಂಬುದರ ಅರಿಮು ಸಹ ಮೂಡಿತು. ಅದಕ್ಕಾಗಿ ಶ್ರಮಿಸುತ್ತಿದೇನೆ ಕೂಡ. 

ನನಗಿನ್ನೂ ನೆನಪಿದೆ ೨೦೧೩-೧೪ ರಲ್ಲಿ IISc ಗೆ ಹೋದಾಗ ಅಣ್ಣನ ಡಿಪಾರ್ಟ್ಮೆಂಟ್ ಗೆ ಭೇಟಿಕೊಟ್ಟಿದ್ದೆ ಅಲ್ಲಿ ಅವನ ಸ್ನೇಹಿತರೊಬ್ಬರಿದ್ದರು ಅವರು ಹೀಗೆ ಹೇಳಿದರು " ಫಾಲೋವಿಂಗ್ ಯುವರ್ ಬ್ರದರ್ಸ್ ಫುಟ್ ಸ್ಟೆಪ್ಸ್ ?" ನಾನು ನಕ್ಕಿ ಹೂ ಅಂದ್ದಿದೆ. ಈಗ ಅನಿಸುತ್ತಿದೆ ಹಾಗೆ ಮಾಡಬೇಕಿತ್ತು ಯೆಂದು!!!!   ಮಿಂಚಿ ಹೋದ ಸಮಯಕ್ಕೆ ಚಿಂತಿಸಿ ಫಲವಿಲ್ಲ. ನಮ್ಮಮ್ಮ ಯಾವಾಗಲು ಹೇಳುತ್ತಾರೆ "ಧೈರ್ಯಮ್ ಸರ್ವಸ್ತ್ರ ಸಾಧನಂ" ಎಷ್ಟು ಸತ್ಯವಲ್ಲವೇ ಇದು. 


ನ ಮಕ್ಕಳಿಗೆ ಹೇಳುವುದಿಷ್ಟೇ "ನನ್ನಂತೆ ಆಗಬೇಡಿ". ಪೋಷಕರಿಗೆ ಹೇಳುವುದಿಷ್ಟೇ "ಮಕ್ಕಳ  ಮೇಲೆ ಹೆಚ್ಚು ನಿರೀಕ್ಷೆ ಇಡಬೇಡಿ. ಇಟ್ಟರೂ ಅದನ್ನು ಅವರ ಅರಿವಿಗೆ ಬರಲು ಬಿಡಬೇಡಿ. ಹೊರ ಜಗತ್ತಿನ ಅರಿವು ಆದಷ್ಟು ಮೂಡಿಸುವ ಪ್ರಯತ್ನದ ಜೊತೆಗೆ ಜೀವನವಿರುವುದು ಜೀವಿಸಲು ಎಂಬ ಪಾಠವನ್ನು ಹೇಳಿ "

No comments:

Post a Comment