ಭಾರತೀಯ ಮಧ್ಯಮ ವರ್ಗದ ಹೆಣ್ಣು ಮಗಳಾಗಿ ಹುಟ್ಟಿ, ಸಂಶೋಧನಾ ವಿದ್ಯಾರ್ಥಿನಿಯಾಗಿ, ವಿದ್ಯಾರ್ಥಿವೇತನವಿಲ್ಲದೆ ಹಾಗು ಯಾವುದೇ ಕೆಲಸಕ್ಕೂ ಹೋಗದೆ, ಇನ್ನೇನು ಈ ವರ್ಷದಿಂದ ಪ್ರೌಢಪ್ರಬಂಧ ಬರೆಯಬೇಕೆಂದಿರುವಾಗ, ಮದುವೆ ಮಾಡಿಕೊಂಡು, ಅತ್ತ ಹೊಸಜೀವನದ ಸಿಹಿ ಅನುಭವಿಸುವ ಪುಣ್ಯವು ಇಲ್ಲದೆ, ಬೇಗ ಬೇಗ ಸಂಶೋಧನಾ ಕೆಲಸವನ್ನು ಮುಗಿಸಲಾರದೆ, ಸಂಶೋಧನಾ ಕೆಲಸದ ಒತ್ತಡದ ನಡುವೆ ಸಂಸಾರದ ಹೊಣೆ, ಜವಾಬ್ಧಾರಿ ಹೊರೆ ಹೊತ್ತು, ಜೀವನದ ಜಂಜಾಟದಲ್ಲಿ ಸಿಕ್ಕಿ ವಿಲವಿಲನೆ ಒದ್ದಾಡಿ ಬೇಸತ್ತು, ದಿನದ ಅಂತಿಮ ಸಮಯವನ್ನಾದರೂ ನೆಮ್ಮದಿಯಿಂದ ಕಳೆಯೋಣವೆಂದರೆ, ಈಗಷ್ಟೇ ಹೊಸ ನೌಕರಿಗೆ ಸೇರಿರುವ ನನ್ನ ಗಂಡ ಟೆಕ್ಕಿ, ತನ್ನ ಕೆಲಸದಲ್ಲಿ ಎಷ್ಟು ವ್ಯಸ್ಥನೆಂದರೆ ಅಯ್ಯೋ ರಾಮಾ!!! ಒಂದು ಕ್ಷಣಕ್ಕೆ ಅನ್ನಿಸುತ್ತದೆ ಯಾರಿಗೆ ಬೇಕಿತ್ತು ಇಷ್ಟೆಲ್ಲಾ ಒದ್ದಾಟ. ಇತ್ತೀಚೆಗೆ ಎಷ್ಟು ಪ್ರಕ್ಷುಬ್ಧಳಾಗಿದ್ದೇನೆಂದರೆ ನನ್ನವನು ಮಾಡುವ ತುಂಟ ತರಲೆಗಳು ನನಗೆ ಅವನು ನನ್ನ ಅಣುಕಿಸುತ್ತಿದ್ದನೋನೆಂದನಿಸಿಬಿಡುತ್ತದೆ. ಪ್ರೀತಿ, ಮಮತೆಯ ಅಭಾವ, ಕೆಲಸದ ಕಿರಿಕಿರಿ, ಇವೆಲ್ಲವೂ ಒಬ್ಬ ಸಂಶೋಧನಾ ವಿದ್ಯಾರ್ಥಿಯನ್ನು ಎಷ್ಟರಮಟ್ಟಿಗೆ ಪಾತಾಳಕ್ಕೆ ತಳ್ಳುತ್ತದೆಂದರೆ ಅಲ್ಲಿಂದ ಹೊರಬರಲು ದಾರಿಯೇ ಕಾಣದಂತಾಗುತ್ತೆ. ಇದರಿಂದ ಎಷ್ಟು ಬೇಗ ಹೊರ ನಡೆಯುವೆವೋ ಎಂದನಿಸಿ ಬಿಡುತ್ತದೆ. ಕ್ಷಣ ತಪ್ಪಿಗೆ ಯುಗ ಸಂಕಟ ಎಂಬಂತೆ, ಇಷ್ಟಪಟ್ಟು ಸೇರಿದ ಕೆಲಸ ಹುರುಳಾಗಿ ಕಷ್ಟ ಕೊಡುತ್ತಿದೆ. ಇದೆಲ್ಲಾ ಸಮಸ್ಯೆಗಳಿಗೂ ಸಮಾಧಾನ ತಿಳಿದ್ದಿದರು ಅಳವಡಿಸಿಕೊಳ್ಳೋ ಬಹಳಾನೇ ಹಿಂಸೆಯಾಗುತ್ತಿದೆ. ನಮ್ಮಿ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಒಂದು ಸಾಮಾನ್ಯ ವ್ಯಕ್ತಿಗೆ ಅಷ್ಟು ಸುಲಭದ ಮಾತ್ತಲ್ಲ.
Why? Why we do something, sometimes which doesn't make sense to others? We do something sometimes without any reasons. This something has a magical touch in it, which helps us heal. which makes our ears sharper to hear our own voice. Bas yunhi, bas yunhi we do something sometimes for ourselves.
Tuesday, 19 November 2019
Sunday, 10 November 2019
ಮುಂದಿನ ಭಾನುವಾರ
ದಿನಗಳನ್ನು ಎಣಿಸುವ ಚಟವೇನು ನನಗಿಲ್ಲ. ಅದ್ಯಾಕೋ ಇಂದು ಸುಮ್ಮನೆ ಕುಳಿತಿರುವಾಗ, ನನ್ನ ಕೃಷ್ಣನ ಜೊತೆಯಲ್ಲಿ ಶುರುವಾದ ಈ ನನ್ನ ಪಯಣವ ಹಿಂತುರುಗಿ ನೋಡಿದೇ.. ಅರೇ ಮುಂದಿನ ಭಾನುವಾರಕ್ಕೆ ೨೦೦ ದಿನಗಳು ಕೆಳದವು ನಮ್ಮಿ ಪಯಣಕೆ!!!!! ಅದುಯೆಲ್ಲಿ, ಹೇಗೆ ಕಳೆದು ಹೋಯಿತೋ ಈ ೨೦೦ ದಿನಗಳು??? ಹುಡುಕಿತರುವುದಾದರೂ ಯೆಲ್ಲಿಂದ? ನೆನಪಿನ ಬುಟ್ಟಿಯೆಲ್ಲ ಬರಿ ಕಾಲಿ ಕಾಲಿ!! ನಿನ್ನೆಯಷ್ಟೇ ಹಸೆಮಣೆ ಏರಿದ ಹಾಗನಿಸುತ್ತದೆ. ನನ್ನ ಕೃಷ್ಣನನನ್ನು ನೋಡಿದಾಗ ಇಂದಿಗೂ, ಈ ಕ್ಷಣವೂ ಆಶರ್ಯವೆನಿಸುತ್ತದೆ, ಅದು ಹೇಗೆ ಈ ನನ್ನ ಮುದ್ದು ನನ್ನವನಾದನೆಂದು?? ಸಮಯ ಕಳೆದಂತೆ ಪರಿಪಕ್ವವಾಗುತ್ತಿರುವ ಈ ಸಂಭಂದ, ನಶ್ವರದ ಬದುಕಿನ ಶಾಶ್ವತ ಬೆಸುಗೆ. ಕಳೆದ ದಿನಗಳ್ಳಲ್ಲಿ ಇದ್ದ ಎಷ್ಟೋ ಯೋಚನೆಗಳು ಬದಲಾಗಿವೆ. ಇನ್ನೊಂದಷ್ಟು ಯೋಚನೆಗಳು ಸರಿಯಾದ ಪತ ತುಳಿದಿವೆ. ನೆನ್ನೆ ನೆನ್ನೆ ವರೆಗೂ ಅದು ಹೇಗೋ ಅನಿಸುತ್ತಿದೆ ಕೃಷ್ಣನಿಂದು ಬೇರೆಯೇ ರೀತಿ ಕಾಣಿಸುತ್ತಿದಾನೆ. ನನ್ನವ್ವನಿವನೆಂಬ ಗರ್ವ ದಿನೇ ದಿನೇ ಹೆಚ್ಚುತ್ತಲೇ ಇದೆ.
Void
ಅನಿಸಿದ್ದನ್ನೆಲ್ಲಾ ಒಮ್ಮೆ ಗೀಚಿ ಹಗುರಾಗಬೇಕೆನಿಸಿತು.
ಅನಿಸಿದ್ದನ್ನೆಲ್ಲಾ ಚೀರಿ ಬಂದ ಮುಕ್ತಳಾಗಬೇಕೆನಿಸಿತು.
ಆದರೆ ನನಗೆ ಅನಿಸುತ್ತಿರುವುದಾದರೂ ಏನು?
ದೊಡ್ಡದೊಂದು ಕಂದಕ.
ಎಂದಿಗೂ ತುಂಬಲಾರದ ದೊಡ್ಡದೊಂದು ಕಂದಕ.
ಭಾವನೆಯೇ ಇಲ್ಲದ ಭಾವನೆಯ
ಗೀಚುವುದಾದರೂ ಹೇಗೆ ?
ಚೀರುವುದಾದರೂ ಹೇಗೆ ?
ಅನಿಸಿದ್ದನ್ನೆಲ್ಲಾ ಚೀರಿ ಬಂದ ಮುಕ್ತಳಾಗಬೇಕೆನಿಸಿತು.
ಆದರೆ ನನಗೆ ಅನಿಸುತ್ತಿರುವುದಾದರೂ ಏನು?
ದೊಡ್ಡದೊಂದು ಕಂದಕ.
ಎಂದಿಗೂ ತುಂಬಲಾರದ ದೊಡ್ಡದೊಂದು ಕಂದಕ.
ಭಾವನೆಯೇ ಇಲ್ಲದ ಭಾವನೆಯ
ಗೀಚುವುದಾದರೂ ಹೇಗೆ ?
ಚೀರುವುದಾದರೂ ಹೇಗೆ ?
Wednesday, 7 August 2019
Babies
Trust me,
all the men are babies.
I saw my dad,
my brother,
my husband...
none of them can live without women in their lives.
all the men are babies.
I saw my dad,
my brother,
my husband...
none of them can live without women in their lives.
Yes, I did, I do.
Have you ever loved someone so very much?
If yes, good, you lived the real emotions.
If no, go, give yourself a try.
If yes, good, you lived the real emotions.
If no, go, give yourself a try.
ಕೈಲಾಗದವನು ಮೈ ಪರಚಿಕೊಂಡನಂತೆ.
ನೂರಾರು ತಲೆ ಬಿಸಿ ಇರುವಾಗ, ತನ್ನವರ ಮೇಲೆ ಅದರ ಕೋಪ ತೀರಿಸಿಕೊಳ್ಳುವುದು ಮನುಷ್ಯನ ಸರ್ವೇ ಸಾಮಾನ್ಯ ಗುಣ.
ತಲೆ ಬಿಸಿ ಇಬ್ಬರಿಗೂ ಇದ್ದರೆ?
ಸಣ್ಣ ಮುನಿಸುಗಳು ದೊಡ್ಡ ಅಂತರವನ್ನೇ ಸೃಷ್ಟಿಸಿ ಬಿಡಬಹುದು.
ಸಮಯವೆಂಬುದು ಕೆಟ್ಟ ಹುಳು.
ಆದಷ್ಟು ಪ್ರೀತಿ ಸಹನೆಯನ್ನು ಉಳಿಸಿಕೊಳ್ಳಿ.
ಮಾನವರಾಗಿ.
ಅತ್ತೆ, ಸೊಸೆ
ಅತ್ತೆ, ಸೊಸೆ ಯೆಂದಿಗೂ ತಾಯಿ, ಮಗಳಾಗಲಾರರು.
ಕಾರಣ ಸುಲಭ, ಅವರನ್ನು ಬೆಸೆಯ ಬೇಕಾದ ಸೂಕ್ಷ್ಮ ಕೊಂಡ್ಡಿಯಾದ ಗಂಡುಮಕ್ಕಳ್ಳು ಹೆಚ್ಚೇ ವಡ್ಡರಾಗಿ ಬೆಳೆದಿರುತ್ತಾರೆ. ಹಾಗು ಈ ಚಿಕ್ಕ ಚಿಕ್ಕ ವಿಷಯಗಳನ್ನು ನಿರ್ಲಕ್ಷಿಸುವ ಎಲ್ಲಾ ಗುಣಗಳ ಅಧಿಪತಿಯಾಗಿರುತ್ತಾರೆ. ಹೊಸದಾಗಿ ಬಂದ ಹೆಣ್ಣುಮಗಳನ್ನು ,ಅವಳ ಗುಣವನ್ನು, ತನ್ನ ತಾಯಿಗೆ ಪರಿಚಯಿಸಿ, ಅವಳ ಪರ ನಿಲ್ಲುವ ವ್ಯವಧಾನವಾಗಲಿ ಅಥವಾ ಹುಟ್ಟಿದಾಗಿನಿಂದ ಜೊತೆಯಲ್ಲಿದ್ದ ತಾಯಿಯ ಬಗ್ಗೆ ತನ್ನ ಹೆಂಡತಿಯ ಬಳಿ ವಿಷಯವನ್ನು ತಿಳಿಹೇಳುವ ಸಹನೆಯಾಗಲಿ ಅವರಲ್ಲಿ ಕಾಣಸಿಗುವುದು ಬಹಳಾನೇ ವಿರಳ. ಒಂದುವೇಳೆ ಇವೆಲ್ಲವೂ ಸರಿಹೋಯಿತೆಂದರೆ ಒಬ್ಬರನೊಬ್ಬರು ಇರುವಂತೆಯೇ ಒಪ್ಪಿಕೊಳ್ಳುವ ಮನೋಭಾವನೆ ಅತ್ತೆ, ಸೊಸೆಯಾರಲ್ಲಿ ಮೂಡಬೇಕಲ್ಲ!!

Tuesday, 6 August 2019
How much
ನನಗನಿಸ್ಸಿದ್ದು.
ಕೆಲವು ಸಮೀಕ್ಷೆಗಳ ಪ್ರಕಾರ ೧೦೦ ರಲ್ಲಿ ೪೦ ರಷ್ಟು ಸಂಶೋಧನಾ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ. ಅದಕ್ಕೆ ಕಾರಣಗಳು ಹಲವು. ಹಣಕಾಸಿನೇ ಬೆಂಬಲ ಇರದೇ ಇರುವುದು, ಪ್ರಯೋಗಗಳ ವಿಫಲತೆ, ಉತ್ತಮ ಫಲಿತಾಂಶ ಬರುವರೆಗೂ ಎಡಬಿಡದೆ, ದಿನ ರಾತ್ರಿ ಲೆಕ್ಕಿಸದೆ ಮುಗಿಸಲೇ ಬೇಕಾದ ಪ್ರಯೋಗಳು, ಪೂರ್ಣವಾಗದ ವೈಜ್ಞಾನಿಕ ಹಸ್ತ ಪ್ರತಿಗಳು, ಮಾರ್ಗದರ್ಶಕರ ಒತ್ತಡ, ದಿನನಿತ್ಯ ಕೇಳುವ ಅವರ ಬೈಗುಳಗಳು, ಊಟ ತಿಂಡಿಗೆ ಸರಿಯಾದ ನಿರ್ದಿಷ್ಟ ಸಮಯವಿಲ್ಲದು, ಪಿ.ಹೆಚ್.ಡಿ. ಬೇಗ ಮುಗಿಸುವ ಸಲುವಾಗಿ ಮನೆಯವರ ಒತ್ತಡ, ಸಮಾಜದ ಒತ್ತಡ, ಅನಿಶ್ಚಿತಿತ ವೃತಿಜೀವನ, ಸ್ನೇಹಿತರ ಕೊರತೆ, ಹೀಗೆ ಹತ್ತು ಹಲವು. ಇಷ್ಟೆಲ್ಲಾ ಸಾಲದು ಎಂದು ಮದುವೆ ಆಗದವರಿಗೆ ಮನೆಯವರು ಮದುವೆಯ ಒತ್ತಡ ಮಾಡುವರು, ಸರಿ ಅವರಿಚ್ಛೆಯಂತೆ ನಡೆಯೋಣವೆಂದರೆ ಸಮಯದ ಅಭಾವ, ಜೊತೆಯಲ್ಲಿ ಸಂಶೋಧನಾ ವಿದ್ಯಾರ್ತಿಗಳನ್ನು ಅಷ್ಟು ಸುಲಭವಾಗಿ ಮದುವೆಯಾಗಲು ಯಾರು ಒಪ್ಪುವುದಿಲ್ಲ. ಅದರಲ್ಲಿಯು ನಿಮಗೆ ದೇಹ ಸೌಂದರ್ಯದ ಕೊರತೆ ಇದ್ದರೆ ಕೇಳಲೇ ಬೇಡಿ. ಇವರದ್ದು ಒಂದು ರೀತಿಯಾದರೆ ಮದುವೆ ಆದವರದ್ದು ಇನ್ನೊಂದು ರೀತಿಯ ಗೋಳು. ಸಹಪಾಠಿಯೊಂದಿಗೆ ಸಮಯ ಕಲೆಯಾಗದು, ಅವರಿಚ್ಛೆಯಂತೆ ನಡೆಯಲಾಗದು, ಪರಿವಾರದವರನ್ನು ನೋಡಿಕೊಳ್ಳಲಾಗದು, ಎಷ್ಟೇ ಕಷ್ಟ ಪಟ್ಟು ಎಲ್ಲವನ್ನು ನಿಭಾಯಿಸಲು ಪ್ರಯತ್ನಿಸಿದರು ಕುಂದು ಕೊರತೆಯನ್ನೇ ಗಮನಿಸುವ ಸಮಾಜ ಹಾಗು ಪರಿವಾರದ ಸಧಸ್ಯರು. ಸಂತಾನಾಭಿವೃದ್ದಿ, ಆರೋಗ್ಯದ ಕಡೆ ನೀಡಲಾಗದ ಗಮನ. ನಿಮಗೆ ಸಿಕ್ಕ ಸಹಪಾಠಿ ಸೂಕ್ಷ್ಮ ಗಳನ್ನೂ ಅರಿತಿತು ನಿಮಗ ಬೆಂಬಲಿಸದಿದ್ದಲ್ಲಿ ಸತ್ತೇ ಬಿಡುವ, ಜೀವನವೇ ಬೇಡ ಎನಿಸುವಷ್ಟು ಹಿಂಸೆ, ನೋವು.
ಸಂಶೋಧನಾ ವಿದ್ಯಾರ್ತಿಗಳ ಪರಿಸ್ಥಿತಿ ದೇವರಿಗೆ ಪ್ರಿಯ. ಅವರನ್ನು ಪ್ರೀತಿಸಿ ಹಾಗು ಅರ್ಥಮಾಡಿಕೊಳ್ಳುವ ಸಹನೆ ಎಲ್ಲರಲ್ಲೂ ಬೆಳೆಯಬೇಕು. ಕಡೇಪಕ್ಷ ಅವರ ಕುಟುಂಬಸ್ಥರಾದರು ಬೆಂಬಲಿಸಬೇಕು. ಇಲ್ಲದಿದ್ದಲ್ಲಿ ಅವರನ್ನು ಕಳೆದು ಕೊಳ್ಳಬೇಕಾಗುತ್ತದೆ.

Speak
Communication is a very important thing in any relationship.
Speak, even if you don't want to.
Speak, even if it hurts.
Speak, even its a silly matter.
Speak, even if it's unimportant, who knows it may be an important matter for one who listens.
Speak, speak and just speak out.
Speak, but just try to be well-spoken.
People say, sometimes silence is the best way to avoid complications in the relationship.
It maybe true when all the possibilities fail.

Life is simple, yet complex
You are not the worst human but you are trying to be one, in all the possible ways. - He said.
and you proved me wrong in many things. You got only two things on which I'm still hanging on to you and I have to live the whole life with those. -He continued.
She smiled with a broken heart.
She had nothing to talk about.
She is tired of everything.
All she understood is, the one whom she wanted to be understood by, is the one who never understood her.

Sunday, 14 July 2019
Wednesday, 10 July 2019
Celebration of love.
ಎಂದಿನಂತೆ ಇಂದು.
ಅದುವೇ ಮನೆ,
ಅದುವೇ ಕೆಲಸ.
ಎಂದಿನಂತೆಯೇ ಇಂದು.
ದಿನ ಒಂದೇ ಪ್ರಶ್ನೆ,
ನನಗೆ ಎಲ್ಲಿಂದ ಇಷ್ಟು ಮುದ್ದಾದ ಮುದ್ದು ಸಿಕ್ಕಿದ?
ಉತ್ತರ ಸಿಗದ ಪ್ರಶ್ನೆ,
ಎಂದಿಗೂ ಹಳಸದ ಪ್ರಶ್ನೆ.
ಬೋರ್ ಆಗದ ಪ್ರಶ್ನೆ.
ಎಂದಿನಂತೆ ಇಂದು.
ಮತ್ತದೇ ದಿನ.
ಅದೇ ಮನೆ.
ಅದೇ ಮನ.
ಎಂದಿನಂತೆ ಇಂದು.
ಮತ್ತೆ ಮತ್ತೆ ಅವರ ಅದೇ ನಗು,
ಅವರ ದೇಹದ ಅದೇ ಪರಿಮಳ.
ಮತ್ತೆ ಮತ್ತೆ ಅವರ ಮೇಲೆ ತೀರದಷ್ಟು ಹುಚ್ಚು ಪ್ರೀತಿ.
ಖುಷಿಗೆ ಅಳುವೊಂದು ಮೂಡುವುದು,
ಜೊತೆಯಲ್ಲಿಯೇ ಅರಳುವ ತುಟಿಗಳು.
ಎಂದಿನಂತೆ ಇಂದು.
ಆಶ್ಚರ್ಯಾದಿ ಹುಬ್ಬು ಏರಿಸಿ ಅವರನ್ನೇ ದಿಟ್ಟಿಸಿ, ಯೋಚಿಸಿದಾಗ,
ಮತ್ತೆ ಕಾಡುವು ಅದೇ ಹಳೆಯದಾಗದ ಹಳೆಯ ಪ್ರಶ್ನೆ

Monday, 8 July 2019
ಹಳೆಯ ನೆನಪುಗಳು.
ಹೀಗೊಂದು ರಾತ್ರಿ,
ನನ್ನಿನಿಯ ಹಾಗು ನಾನು,
ನಮ್ಮಿಬ್ಬರ ಜವ್ವನಿಗ (ಹೈ ಸ್ಕೂಲ್ ಹಾಗು ಕಾಲೇಜುದಿನಗಳು / ಟೀನ್ ಏಜ್) ಕಾಲದ ಹಳೆಯ ನೆನಪುಗಳ ಕಪಾಟು ಬಿಡಿಸಿ,
ಧೂಳಿಡಿದಿದ್ದ ಪಾತ್ರಗಳ ಒಂದೊಂದೇ ಆಚೆ ತೆಗೆದು,
ಒಬ್ಬರಿಗೊಬ್ಬರು ಕತೆಯ ಹೇಳುತ್ತಾ ಕುಳಿತ್ತಿದೆವು.
ಒಂದಷ್ಟು ನಗೆ, ಒಂದಷ್ಟು ತರಲೆ, ಒಂದಷ್ಟು ಹುಸಿಮುನಿಸು,
ಗಡಿಯಾರವು ಇಂದದೇಕೋ ಶಾಂತವಾಗಿತ್ತು, ನಮಗೆ ತೊಂದರೆ ಕೊಡಬಾರದೆಂದು ಸುಮ್ಮನಾಗಿತ್ತು.
ಸಮಯದ ಅರಿವೇ ಇಲ್ಲದೆ ನಾವಿಬ್ಬರು ನಮ್ಮಿಬರ ಕಳೆದ ಜೀವನವ ಒಬ್ಬರಾಮುಂದೊಬ್ಬರು ಬಿಚ್ಚಿಡುತ್ತಾ ಹೋದೆವು.
ಮತ್ತಷ್ಟು ಒಬ್ಬರಿಗೊಬ್ಬರ ಪರಿಚಯ ಆಳವಾಗುತ್ತ ಹೋಯಿತು. ಪ್ರೀತಿಯಾಭಿಮಾನಗಳು ಕೂಡ.
ನನ್ನಾತ ತುಂಟನೆಂದು ತಿಳಿದಿತ್ತು, ತರಲೆಯೂ ಹೌದು. ಪಾಪಣ್ಣನೆಂದು ಗೊತ್ತಿದಿತ್ತು. ಒಂದಷ್ಟು ಗುಟ್ಟುಗಳಿರಬಹುದೆಂಬ ಅರಿವು ಇದ್ದಿತ್ತು.
ಅವರಿಗೂ ನನ್ನ ಬಗ್ಗೆ ಹೀಗೆಯೇ ಅನಿಸಿರಬಹುದೇನೋ.
ಗಟ್ಟಿಯಾಗಿ ಬಂದಾಗಿದ್ದ ನನ್ನ ಕಪಾಟಿನ ಕೆಲವು ವಿಭಾಗಗಳು ತೆರೆಯದೆ ಹಾಗೆಯೇ ಉಳಿದು ಹೋಯಿತು.
ಹೇಳಬೇಕನಿಸಿದ ಮಾತ್ತೊಂದು ಮನದಲ್ಲಿಯೇ ಉಳಿದು ಹೋಯಿತು.
ಅವರಲ್ಲಿಯೂ ನನಗೆ ಹೇಳಲಾಗದ ಮಾತ್ತೊಂದು ಇರಬಹುದು.
ಇರಲಿ, ಜೀವನ ಪೂರ್ತಿ ಜೊತೆಯಲ್ಲಿಯೇ ಇರುವೆವು.
ಮುಂದೊಂದುದಿನ ಆ ವಿಭಾಗಗಳು ತೆರೆದು ಕೊಳ್ಳ ಬಹುದು.
ಹಳತುಗಳು ಹಳೆಯದಾದವು.
ಏನಿದ್ದರೂ ಅವುಗಳ ಕೇಳಿ ನಗಬೇಕಷ್ಟೆ.
ನಕ್ಕು ಮತ್ತೆ ಕಪಾಟಿನಲ್ಲಿ ಬಂದು ಮಾಡಿಡಬೇಕಷ್ಟೆ.
ಮಾಡಲು ಕೆಲಸವಿಲ್ಲದಾಗ ಜೊತೆಯಲ್ಲಿ ಕೂತು ಧೂಳು ಹೊಡೆಯಲು, ಒಂದಷ್ಟು ನಗಲು, ಒಂದಷ್ಟು ತರಲೆಮಾಡಲು , ಒಂದಷ್ಟು ಹುಸಿಮುನಿಸಿಗೆ ಅವಕಾಶ ಕೊಡುತ್ತಾ, ಗಡಿಯಾರಕ್ಕೆ ಮತ್ತೆ ಹಾದಿತಪ್ಪಿಸುತ್ತಾ ಹರಡಲು (ಹರಟೆ ಹೊಡೆಯಲು) ಇವುಗಳೇ ನಮ್ಮಿಬರ ಆಸ್ತಿ.

Tuesday, 25 June 2019
ಅನುಬಂಧ
ಎಲ್ಲಿಂದ ಗಂಟು ಬಿದ್ದನಪ್ಪ ಈ ಭೂಪ.
ಕೆಲವೊಮ್ಮೆ ಹೇಳಿದ ಮಾತು ಕೇಳದೆ ಕೋಪಬರಿಸುವ,
ಮತ್ತೊಮ್ಮೆ ಹೇಳಿದ್ದನ್ನೆಲ್ಲಾ ಮಾಡಿ ಮನ ಒಲಿಸುವ,
ಗಂಡನಂತೆ ದಬ್ಬಾಳಿಸಿ ಅಳಿಸುವ,
ಅಪ್ಪನಂತೆ ಸಂತೈಸಿ ಓಲೈಸುವ,
ಅಣ್ಣನಂತೆ ಕಾಡಿಸಿ ಕಾಟ ಕೊಡುವ,
ಅಮ್ಮನಂತೆ ಪ್ರೀತಿ ತೋರುವ,
ಕೆಲವೊಮ್ಮೆ ಉದಾಸೀನ ಮಾಡಿ ಬಿಟ್ಟು ಹೋಗುವ,
ಮಗುವಿನಂತೆ ಮೊಂಡಾಟ ಮಾಡಿ ತಲೆ ಕೆಡಿಸುವ,
ಗೆಳೆಯನಂತೆ ತರಲೆ ಮಾಡಿ ನಕ್ಕು ನಗಿಸುವ,
ಮುದ್ದು ಮುದ್ದಾಗಿ ಮಾತನಾಡುವುದನ ಅದೆಲ್ಲಿಂದ ಕಲಿತನೋ?
ಮುದ್ದು ಮುದ್ದು ಮುಖ ಮಾಡುತ ಮನಒಲಿಸುವ ಕಲೆ ಅವನಿಗೆ ಹೇಗೆ ಬಂದಿತೋ?
ಮಾಟಗಾರ, ಮಾಯಗಾರ, ಮೋಜುಗರ,
ಕೃಷ್ಣನಿಗೆ ಇದೆಲ್ಲ ರಕ್ತಾಗತ.
ಅವನಲ್ಲಿ ನನ್ನ ಹೇಗೆ ಬಂಧಿಸಿರುವನೆಂದರೆ,
ನನಗೆ ಈ ಬಂಧನದಿಂದ ಹೊರಬರುವ ಮನ್ನೆಸ್ಸೆ ಇಲ್ಲ.
ಬಂಧನವಲ್ಲದ ಬಂಧನ,
ಬಂಧಮುಕ್ತ ಬಂಧನ.

Sunday, 16 June 2019
ಅಳಿಸಿ ಹೋಯಿತೇ?
ನನಗೀಗ ಮದುವೆಯಾಗಿದೆ...
ಜೀವನದಲ್ಲಿ ಏನಾಗುತಿದೆಯೆಂದು ಇನ್ನು ಅರಿವಿಗೆ ಬರುತ್ತಿಲ್ಲ.
ಮೊನ್ನೆ ಮೊನ್ನೆವರೆಗೂ ಎಲ್ಲವೂ ಹೊಸತೆಂದು ಅನ್ನಿಸಿದ್ದು ಇಂದೀಗ ಹಳೆಯದಾಗಿದೆ.
ಏನನ್ನೋ ಎಲ್ಲಿಯೋ ಮರೆತಂತೆ ಭಾಸವಾಗುತ್ತಿದೆ.
ಎಷ್ಟೋ ಆಸೆಗಳು, ಕನಸುಗಲ್ಲೆಲ್ಲ ಮೆದುಳಿನಿಂದ ಅಳಿಸಿಹೋದಂತಿದೆ.
ಹೊಸ ಕನಸುಗಳು ಯಾವುದು ಮೂಡುತ್ತಿಲ್ಲ.
ತಟಸ್ಥ ಭಾವ.
ಶಾಂತವಾಗಿರು ಸಮುದ್ರದ ಅಲೆಗಳು.
ಹಿಂದೆಂದೋ ಮೂಡಿಸಿದ ಹೆಜ್ಜೆಗುರುತಗಳು ಕಾಣದಾಗಿವೆ ಈಗ.
ಮುಂದೆ ಎಲ್ಲಿಯೂ ಸಾಗದೆ ನಿಂತಲ್ಲಿಯೇ ನಿಂತು ಏನನ್ನು ದಿಟ್ಟಿಸಿ ನೋಡುತ್ತಿರುವೆ.
ಅದು ಏನು, ಏಕೆ, ಹೇಗೆ ಒಂದು ತಿಳುತಿಲ್ಲ.
ಸಂಪೂರ್ಣ ಶಾಂತಿಯೇ ಇದು? ಅಥವಾ ಅಲ್ಪವಿರಾಮ?
ಅಥವಾ ನನ್ನವನಿಂದ ಮೂಡಿರುವ ಭರವಸೆಯೇ?
ಹಳೆಯದ್ದೆಲ್ಲವೂ ಅಳಿಸಿ ಹೋಗುತಿದೆ.
ಎಲ್ಲವೂ.
ಎಲ್ಲವೂ.
ಈಗ ಇವನೊಬ್ಬನೇ ಎಲ್ಲವೂ.!!!!!!!

Wednesday, 3 April 2019
ಅಮ್ಮ
ಅಪ್ಪನ ಬುದ್ಧಿ ಮಾತುಗಳ ಬಗ್ಗೆ ಬಹಳ ಸಾರಿ ಹೇಳಿದ್ದೇನೆ.
ಅಪ್ಪನ ಬಗ್ಗೆ ಹೆಚ್ಚಾಗಿ ಮಾತನಾಡುತ್ತಲ್ಲೇ ಇರುತ್ತೇನೆ.
ಎಲ್ಲರೂ ನನ್ನನ್ನು ಅಪ್ಪನ ಮಗಳು ಎಂದೇ ಕರೆಯುತ್ತಾರೆ.
ಮನೆಯಲ್ಲಿಯೂ ಯಾವದಾದರೂ ವಿಷಯಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುವಾಗ ಅಪ್ಪನ ಪರವಹಿಸುವುದೇ ಹೆಚ್ಚು ನಾನು. ಅಮ್ಮ ಯಾವಾಗಲು ಹೇಳುವುದುಂಟು, "ನೀನು ಅಪ್ಪನ್ನನುಯೆಲ್ಲಿ ಬಿಟ್ಟುಕೊಡುವೆ. ಅಪ್ಪನ ಮಗಳಲ್ಲವೇ. ಅಮ್ಮನನ್ನು ಪಾಪ ಯೆಂದು ಎಂದಿಗೂ ನಿನ್ನ ಬಾಯಲ್ಲಿ ಬರುವುದಿಲ್ಲ."
ಅದು ನಿಜವಾಗಿವು ದಿನನಿತ್ಯದ ಸತ್ಯದ ಮಾತೆ. ನಾನು ಮಾಡುವುದನ್ನೇ ಅಮ್ಮ ಹೇಳುವುದು.
ಆದರೆ ಅಪ್ಪನ ಮೇಲೆ ಅಷ್ಟು ಪ್ರೀತಿ, ಗೌರವ, ವಿಶ್ವಾಸ ಬರಲು ಕಾರಣವೇ ನನ್ನಮ್ಮ. ಆಕೆಯ ಗುಣ. ಏನೆ ಆದರೂ ಎಷ್ಟೇ ಕಷ್ಟವಾದರೂ, ಎಷ್ಟೇ ತೊಂದರೆಯಲ್ಲಿದ್ದರು, ನೋವಾದರೂ, ಅಪ್ಪನನ್ನು ಅಮ್ಮ ಯೆಂದಿಗೂ ಬಿಟ್ಟು ಕೊಟ್ಟಿಲ್ಲ. ಹೊರ ಜನರು ಹೋಗಲಿ, ಮನೆಯವರಾದ ನಮ್ಮ ಮುಂದೆಯೂ ಅಪ್ಪನ ಗೌರವವಯೆತ್ತಿ ಹಿಡಿಯುವುದು ನನ್ನಮ್ಮ, ಆಕೆ ನನ್ನ ನಿಜವಾದ ಹೆಮ್ಮೆ.
***************************
ಅಮ್ಮ ಒಂದು ಮಾತು ಯಾವಾಗಲು ಹೇಳುವುದುಂಟು, "ಅವರವರಿಗೆ ಬಂದಾಗಲೇ ಕಷ್ಟಗಳ ತೀವ್ರತೆ ಅರ್ಥವಾಗುವುದು, ಸುಮ್ಮನೆ ನಾವು ಹೇಳಬಹುದಷ್ಟೆ, ಆದರೆ ಅನುಭವಿಸುವವರಿಗೆ ಮಾತ್ರ ಅದು ತಿಳಿಯುವುದು".
ಹೌದು. ನನಗು ಇದು ನಿಜವೆನಿಸುತ್ತದೆ.
ನಾನು ಈಗ (ಪ್ರಸ್ತುತ ಪರಿಸ್ಥಿತಿ) ಅನುಭವಿಸುತ್ತಿರು ಯಾತನೆಗಳಾಗಲಿ, ಅಥವಾ ನನ್ನ ತಳಮಳಗಳಾಗಲಿ ಯಾರಬಳಿಯು ನನಗೆ ಹೇಳಲು ಅಸಾಧ್ಯ, ಅಕಸ್ಮಾತ್ ನಾನಿದನು ಯಾರಬಲಿಯಾದರು ಹಂಚಿ ಕೊಂಡರು ಇದರ ತೀವ್ರತೆಯ ಅರಿವು ಅವರಿಗೆ ಅರಿವಾಗದು. ಅರಿವಾದರೂ ಬುದ್ಧಿವಾದ ಹೇಳುವವರೇ ಎಲ್ಲರೂ. ಸಾವುಧಾನದಿಂದ ಕೇಳಿ ಸಾಂತ್ವನ ಹೇಳುವುದಕ್ಕಿಂತ, ಅಥವಾ ಒಂದೊಳ್ಳೆ ಮೌನದಿ ಸುಮ್ಮನ್ನೆ ನಮ್ಮ ಜೊತೆ ನೀಡುವುದಕ್ಕಿಂತ, ತಮ್ಮ ಜಾಣ್ಮೆಯ ತೋರಿಕೆಯೇ ಹೆಚ್ಚಾಗಿರುತ್ತದೆ.
****************************
"ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧುವಿಲ್ಲ".
ನಮ್ಮ ಎಲ್ಲಾ ಸತ್ಯವನ್ನು ತಾಯಿಯ ಬಲಿಯಾಗಲಿ, ಅಥವಾ ಮತ್ತೊಬರ ಬಲಿಯಾಗಲಿ ಹೇಳುವುದು ಅಸಾಧ್ಯವೇ ಹೌದು. ನಮ್ಮೆಲ್ಲರಲ್ಲಿ ಒಬ್ಬ ಕಳ್ಳನಿದ್ದಾನೆ. ಎಲ್ಲರೂ ಮುಖವಾಡ ಧರಿಸಿರುವವರೇ. ಅದು ತಪ್ಪು ಅಲ್ಲ. ಸ್ವಂತಿಕೆ ಬಹಳ ಮುಖ್ಯ. ಆದರೆ ೧೦೦ ರಲ್ಲಿ ೬೦ ರಿಂದ ೭೦ ರಷ್ಟು ನಾನೇನೇದು ಅಮ್ಮನಿಗೆ ತಿಳಿದಿದೆ, ಅರ್ಥವಾಗುತ್ತದೆ. ನನ್ನನು ಒಂದಷ್ಟರಮಟ್ಟಿಗೆ ಸರಿಯಾಗಿ ಅರ್ಥ ಮಾಡಿಕೊಳ್ಳುವುದು ನನ್ನಮ್ಮನೇ.
*****************************
ಹೇಗೆ ಕೃತಜ್ಞತೇ ಹೇಳುವುದು ತಿಳಿಯುತ್ತಿಲ್ಲ.
ಅದು ಅಲ್ಲದೆ, ಎಂದಿಗೂ ಏನಕ್ಕೂ ಕೃತಜ್ಞತೇಯಾಗಲಿ ಪ್ರಶಂಶೆಯಾಗಲಿ ಬಯಸದೆ ಇರುವು ತಾಯಿ ಒಬ್ಬಳೇ.
*****************************
ನನ್ನಪ್ಪ ಪುಣ್ಯವಂತರು.
ನಾನು ಪುಣ್ಯವಂತೆ.
*****************************
ಐ ಲವ್ ಯು ಅಮ್ಮ.

ತಳಮಳ
ಬೇರೆಯವರ ಬಳಿ ಏನೆಂದು ನಾ ಹೇಳಲಿ ನನ್ನವನ ವಿಷಯವ. ನನ್ನ ವಿಷಯವ.
ಕೇಳುವವರಿಗೂ ಅದು ಅರ್ಥವಾಗದು, ಹೇಳುವ ನನಗು ಅದೇನೆಂದು ಸರಿಯಾಗಿ ಅರ್ಥವಾಗಿಲ್ಲದ್ದು.
ಬಹಳಾನೇ ತಳಮಳಗೊಂಡಿರುವ ಈ ನನ್ನ ಮನಕೆ ಶಾಂತಿ ನಾನೇ ನೀಡಬೇಕಿದೆ. ಒಮ್ಮೆ ಸುಮ್ಮನೆ ನಕ್ಕು ಎಲ್ಲವ ಮರೆತು ಬಿಡಬೇಕಿದೆ.
ಕೇಳುವವರಿಗೂ ಅದು ಅರ್ಥವಾಗದು, ಹೇಳುವ ನನಗು ಅದೇನೆಂದು ಸರಿಯಾಗಿ ಅರ್ಥವಾಗಿಲ್ಲದ್ದು.
ಬಹಳಾನೇ ತಳಮಳಗೊಂಡಿರುವ ಈ ನನ್ನ ಮನಕೆ ಶಾಂತಿ ನಾನೇ ನೀಡಬೇಕಿದೆ. ಒಮ್ಮೆ ಸುಮ್ಮನೆ ನಕ್ಕು ಎಲ್ಲವ ಮರೆತು ಬಿಡಬೇಕಿದೆ.
Tuesday, 5 March 2019
ನನಗೇನೋ ಆಗಿದೆ.
ಅಂದೊಮ್ಮೆ ಹೇಳಿದ್ದೆ,
ನಾ ಕಳೆದು ಹೋದರೆ ನನ್ನ ಹುಡುಕಿ ತರುವವನ ನೀರೀಕ್ಷೆ ನನಗಿಲ್ಲ.
ಬದಲಿಗೆ ನನ್ನೊಡನೆ ಕಳೆದು ಹೋಗುವವ ಬೇಕೆಂದು.
ಇತ್ತೀಚೆಗೆ,
ಏನಾಗುತ್ತಿದೆ ನನಗೆಂದು ತಿಳಿಯುತ್ತಿಲ್ಲ.
ನಾನಂತೂ ತಿಳಿಯದ ಹಾದಿಯಲ್ಲಿ ಚಲಿಸುತ್ತ ಅದೆಲ್ಲಿಯೋ ಕಳೆದು ಹೋಗುತ್ತಿದ್ದೇನೆ.
ಆದರೂ ಸ್ವಲ್ಪವೂ ಭಯವಿಲ್ಲ, ನಡುಕವಿಲ್ಲ.
ನನ್ನ ಹೆಗಲ ಮೇಲೊಂದು ಕೈ ಸದಾಕಾಲ ನನ್ನೊಂದಿಗಿದೆ.
ನನ್ನ ಹೆಜ್ಜೆ ಜೊತೆ ಅವನಹೆಜ್ಜೆ ಗುರುತು ಮೂಡಿಸುತ್ತಿದ್ದೆ.
ಹಾದಿಯ ಅರಿವಂತೂ ಮೊದಲೇ ಇರಲ್ಲಿಲ್ಲ. ಈಗೀಗ ಸಮಯದ ಪರಿವು ಇಲ್ಲದಾಗಿದೆ.
ಎಷ್ಟು ದೂರ ಜೊತೆಯಾಗಿ ಬಂದೆವೆಂಬ ಕುತೂಹಲ. ಆ ನಮ್ಮ ಹೆಜ್ಜೆಗುರುತುಗಳ ತಿರುಗಿ ನೋಡೋಣವೆನಿಸಿತು.
ಅರೆ! ಅವುಗಳ್ಳನ್ನು ಯಾರೋ ಅಳಿಸಿರುವರಲ್ಲ!!!!!
ಅನಿಸಿತು ನನ್ನೊಳಗಿನ ಮರೆವೆಂಬ ಸಮುದ್ರದಾ ಅಲೆಯ ಕೆಲಸವಿದಿರಬಹುದೆಂದು.
ನಂತರ ಅರಿವಾಯಿತು, ನಮ್ಮನ್ನು ಯಾರು ಹಿಂಬಾಲಿಸದಿರಲೆಂದು ಅವನು ಮಾಡಿದ ಕೆಲಸವಿದು.
ನನ್ನೊಂದಿಗೆ ಕಳೆದುಹೋಗಲು ಅವನ ಉಪಾಯವಿದು.

Tuesday, 12 February 2019
ಲಲನೆ
ದೇಹಾತ್ಮಗಳಲ್ಲಿ ತುಂಬಿದ್ದ ರಕ್ತ, ಮಾಂಸ, ಒಂದಷ್ಟು ಕನಸು, ಭಾವನೆಗಳನ್ನೆಲ್ಲ ಸಂಪೂರ್ಣವಾಗಿ ಹೀರಿ ಹೊರ ತೆಗೆದು ನನ್ನನ್ನು ಆವರಿಸಿರುವ ನನ್ನ ಲಲನ, ತೀರದಷ್ಟು ವಿರಹ ಮೌನಕೆ ನನ್ನ ದೂಡಿ ಏನು ಅರಿಯದಂತೆ ಬೇರೆ ಅದೆಲ್ಲೋ ಗೋವುಗಳ ನಡುವೆ ಹಾಯಾಗಿ ಮಲಗಿಹನು.
ಅರೇ!!!! ನನ್ನೀ ಮೌನವ ಕಲಕುತಿಹ ಕೊಳಲಿನ ಮೆಲುದನಿ ಯಾವುದಿದು? ಎತ್ತಲ್ಲಿಂದ ಬರುತ್ತಿದೆ?
ನನ್ನ ಅಗಲಿರಲಾರದೆ ಅವನೇ ಬರುತಿಹನೆ?
ಅಥವಾ ನನ್ನೊಳಗೆ ಬೆರೆತು ನಾನೇ ಯಾಗಿರುವ ಅವನು ನನ್ನೊಳಗೆ ಕೊಳಲ ನುಡಿಸುತ್ತಿಹನೇ?
ಅರೇ!!!! ನನ್ನೀ ಮೌನವ ಕಲಕುತಿಹ ಕೊಳಲಿನ ಮೆಲುದನಿ ಯಾವುದಿದು? ಎತ್ತಲ್ಲಿಂದ ಬರುತ್ತಿದೆ?
ನನ್ನ ಅಗಲಿರಲಾರದೆ ಅವನೇ ಬರುತಿಹನೆ?
ಅಥವಾ ನನ್ನೊಳಗೆ ಬೆರೆತು ನಾನೇ ಯಾಗಿರುವ ಅವನು ನನ್ನೊಳಗೆ ಕೊಳಲ ನುಡಿಸುತ್ತಿಹನೇ?
Sunday, 10 February 2019
ಮತ್ತೆ ಮಳೆಯಾಗಿದೆ.
ಅವನ ಭೇಟಿಯಾದಾಗಲೆಲ್ಲ,
ಮೋಡಗಳು ಒಂದನ್ನೊಂದು ತಬ್ಬುತ್ತವೆ.
ಗುಡುಗುತ್ತವೆ.
ಮಿಂಚು ಒಂದು ಸಂಚರಿಸುತ್ತದೆ.
ಮತ್ತೆ ಮತ್ತೆ ಮಳೆಯಾಗುತ್ತದೆ.
ಮೋಡಗಳು ಒಂದನ್ನೊಂದು ತಬ್ಬುತ್ತವೆ.
ಗುಡುಗುತ್ತವೆ.
ಮಿಂಚು ಒಂದು ಸಂಚರಿಸುತ್ತದೆ.
ಮತ್ತೆ ಮತ್ತೆ ಮಳೆಯಾಗುತ್ತದೆ.
Saturday, 2 February 2019
Middle-class princess.
ಎಷ್ಟೋ ಜನರಿಗೆ ಹೀಗನಿಸಿರಬಹುದು. ಅವರ ತಂದೆ ತಾಯಿ ಪ್ರಪಂಚದ ಅತ್ಯುತ್ತಮ ಪೋಷಕರೆಂದು. ಅವರವರ ಪಾಲಿನ ಸತ್ಯವದು. ಈ ಅನಿಸಿಕೆಯಿಂದ ನಾನೇನು ಹೊರತಲ್ಲ. ನನ್ನ ತಂದೆ ತಾಯಿ ಪ್ರಪಂಚದ ಅತ್ಯುತ್ತಮ ಪೋಷಕರು. ಮಧ್ಯಮ ವರ್ಗದ್ದಲ್ಲಿ ಜನಿಸಿದರು ರಾಜಕುಮಾರಿಯಂತೆ ಬೆಳಸಿದ್ದಾರೆ. ಕಾಲ್ಪನಿಕ ಕಥೆಯ ರಾಜಕುಮಾರಿಗು ಹಾಗು ನನಗು ಇರುವ ಒಂದೇ ಒಂದು ವ್ಯತ್ಯಾಸವೇನಪ್ಪ ಅಂದರೆ, ನನ್ನಪ್ಪ ಅಮ್ಮ ನೀಡಿರುವ, ನೀಡುತ್ತಿರುವ ತಿಳುವಳಿಕೆಗಳು. ಹೌದು, ನನಗೇನು ಬೇಕು, ನನಗೆ ಯಾವುದು ಸರಿ, ನನಗೆ ಯಾವುದು ಸರಿಬಾರದುಯೆಂಬ ಸ್ವಂತ ಅರಿವು ಮೂಡಲು ಎಷ್ಟು ಜ್ಞಾನದ ಅಗತ್ಯವಿದೆಯೋ ಅದನ್ನು ನೀಡಿದ್ದಾರೆ. ಇರುವ ಸತ್ಯವನ್ನು ಇರುವಹಾಗೆ ಧೈರ್ಯದಿಂದ ಒಪ್ಪಿಕೊಳ್ಳಲ್ಲು ಬೇಕಾಗುವಷ್ಟು ಚೈತನ್ಯವನ್ನು ನನ್ನಲ್ಲಿ ತುಂಬಿದರೆ. ಯಾರಮೇಲೂ ಅವಲಂಭಿಸದೇ ನನ್ನ ಜೀವನವನ್ನು ಕಟ್ಟಿಕೊಳ್ಳುವಷ್ಟು ಸಮರ್ಥಳನ್ನಾಗಿ ಮಾಡಿದ್ದಾರೆ. ಹಾಗಂತ ಎಲ್ಲರಿಂದ ದೂರಾಗಲು ಬಿಡದಂತೆ ಮೋಹಪಾಶವನ್ನು ಜೊತೆಯಲ್ಲಿ ಹೆಣದಿದ್ದರೆ. ಜೀವನ ಎಷ್ಟು ಸರಳ ಸುಂದರವೆಂದು ತೋರಿಸಿಕೊಟ್ಟಿದೆ. ರಾಜಕುಮಾರಿಯಿಂದ ಸಮರ್ಥ ರಾಣಿಯಾಗುವ ಯೋಗ್ಯತೆ ನೀಡಿದ್ದಾರೆ.
ಭೀಕರವಾದ ಕೊಲೆಯೊಂದು ನಡೆದು ಹೋಗಿತ್ತು.
ಸುಮ್ಮನೆ ಹೀಗೊಂದು ಕಥೆ.
ಇಲ್ಲಿ ತಪ್ಪು ಯಾರದ್ದು ಯೆಂದು ಹೇಳಲಾಗುವುದಿಲ್ಲ. ಯಾವುದೋ ಚಿಂತೆಯಲ್ಲಿದ ಅವನಿಗೆ ಅವಳ ಭಾವನೆಗಳು ಅರ್ಥವಾಗದೇ ಉಳಿದವು. ಅವನು ಸ್ವಲ್ಪೇಸ್ವಲ್ಪ ತಾಳ್ಮೆ ಕಾದಿರಿಸಿದ್ದರೆ, ಸ್ವಲ್ಪೇಸ್ವಲ್ಪ ಅವಳಿಗಾಗಿ ಸಮಯ ಕೊಟ್ಟಿದಾರೆ ಆಕೆ ಎಷ್ಟೊಂದು ಸಂತೋಷದಿಂದಿರುತ್ತಿದ್ದಳು.
ಈ ರೀತಿಯ ಎಷ್ಟೋ ಘಟನೆಗಳನ್ನು ನಾನು ನನ್ನ ಆತ್ಮೀಯರ ನಡುವೆ ನಡಿಯುತ್ತಿರುವುದನ್ನು ಗಮನಿಸಿದ್ದೇನೆ. ಉದಾಹರಣೆಗೆ ನನ್ನ ಪ್ರಾಣ ಸ್ನೇಹಿತೆ ಯಾವಾಗಲು ಅವಳ ಹುಡುಗನೊಂದಿಗೆ ಮುನಿಸಿಕೊಳ್ಳಲ್ಲು ಕಾರಣವೇ ಸಣ್ಣ ಸಣ್ಣ ವಿಷಯಗಳಾಗಿರುತ್ತವೆ. ಅವಳು ಖುಷಿಯಿಂದ ಅಥವಾ ದುಃಖ್ಖದಿಂದ ಏನ್ನನ್ನೋ ಹೇಳ ಹೋದಾಗಲೇ ಅದನ್ನು ಕೇಳಲು ಸಮಯವಾಗಲಿ, ಸಂಯಮವಾಗಲಿ ಅವನಿಗಿರುವುದಿಲ್ಲ. ಕೆಲಸದ ಜಂಜಾಟದಲ್ಲಿ ಸಿಲುಕಿ ಸುಸ್ತಾಗಿ ಅವನು ಮನೆಗೆ ಬಂದಿರಬಹುದು. ಅವನಿಗಿರುವ ಎಲ್ಲಾ ಕಷ್ಟ, ತಲೆ ಬಿಸಿಗಳ ಪರಿಚಯ ಅವಳಿಗೂ ಇರಬಹುದು. ಆದರೆ ದಿನಪೂರ್ತಿ ಅವನಿಗಾಗಿ ಎದುರುನೋಡುವ ಅವಳ ಕಷ್ಟದ ಅನುಭವ ಅವನಿಗೆ ಆಗಲೇ ಇಲ್ಲ. ಅವನಿಗಾಗಿ ಸಾವಿರ ಸಲ ಖುಷಿಯಿಂದ ಸೋಲುವ ಅವಳಿಗಾಗಿ ಆಗೊಮ್ಮೆ ಈಗೊಮ್ಮೆಯಾದರು ಒಮ್ಮೆ ಅವನು ಸೋಲಬಾರದೇ? ಆ ಸೋಲು ಯೆಂದಿಗೂ ಸೋಲಲ್ಲ. ಅದು ಅವರ ಸಂಬಂಧದ ಗೆಲುವು. ಇದು ಕೇವಲ ಹುಡಿಗೀಯರ ಸಮಸ್ಯೆ ಅಲ್ಲ. ಕೆಲವೊಮ್ಮೆ ಇಂತ ತಪ್ಪು ಸೂಕ್ಷ್ಮ ಜೀವಿಗಳಾದ ಹೆಣ್ಣು ಮಕ್ಕಳ ಕಡೆಯಿಂದಲೂ ನಡೆದು ಹೋಗುತ್ತದೆ. ಆದರ್ಶ ದಂಪತಿಗಳಂತಿರು ನನ್ನ ಅಪ್ಪ ಅಮ್ಮ ಕೆಲವೊಮ್ಮೆ ತಮಗೆ ತಾವೇ ನೋವು ಕೊಟ್ಟು ಕೊಳ್ಳುವುದುಂಟು. ಅಪ್ಪ ಯಾವುದೇ ಭಾವನೆಗಳನ್ನು ಅಷ್ಟು ಸುಲಭವಾಗಿ ಬಾಯಿ ಬಿಟ್ಟು ಹೇಳುವುದಿಲ್ಲ. ಅವರ ಪ್ರತಿಯೊಂದು ನಡುವಳಿಕೆಯಲ್ಲಿ ಯಾವುದಾದರು ಒಂದು ಒಳ್ಳೆಯ ಉದ್ದೇಶವೇ ಇರುತ್ತದೆ. ನನ್ನ ಅಮ್ಮನು ಹಾಗೆಯೇ. ಆದರೆ ಕೆಲವೊಮ್ಮೆ ಅವರಿಬ್ಬ ಮೌನ ಒಬ್ಬರಿಗೊಬ್ಬರಿಗೆ ಸರಿಯಾಗಿ ಅರ್ಥವೇ ಆಗಿರುವುದಿಲ್ಲ. ಇಲ್ಲಿ ತಪ್ಪು ಯಾರದ್ದು?????
ಮೊದಲ ಬಾರಿ ನಾನಿಂದು ನನ್ನವರಿಗೆ ನೋವು ನೀಡಿದೆ. ಬೇಕಂತಲೇ ನೀಡಿದೆ ಅಂದೆನಿಸುತ್ತಿದೆ . ಗೊತ್ತಿದ್ದೂ ಗೊತ್ತಿದ್ದೂ. ಕೆಲವೊಮ್ಮೆ ಬಹಳಾನೇ ಮೊಂಡು ನಾನು. ಸೂಕ್ಷ್ಮಗಳು ಅರ್ಥವಾದರೂ, ಅರ್ಥಮಾಡಿಕ್ಕೊಳ್ಳಲು ಅದನ್ನು ಒಪ್ಪಿಕೊಳ್ಳಲ್ಲು ತಯಾರಿರುವುದಿಲ್ಲ. ಬೇಕಂತಲೇ ಹಠ ಮಾಡಿಬಿಡುತ್ತೇನೆ. (ಇದು ಎಷ್ಟರಮಟ್ಟಿ ಸರಿ ಎಂಬುದರ ಬಗ್ಗೆ ನನಗೆ ಚಿಂತೆಯಿಲ್ಲ. ಏಕೆಂದರೆ ಸರಿ ತಪ್ಪುಗಳೆಂದು ಯಾವುದು ಇರುವುದಿಲ್ಲ. ಅದು ನಮ್ಮ ನಮ್ಮ ಯೋಚನೆಗಳಲ್ಲಿರುತ್ತದೆಯೆಂದು ಅಪ್ಪ ಯಾವಾಗಲು ಹೇಳುವುದುಂಟು. ಅದನ್ನು ನಾನು ಒಪ್ಪಿದ್ದು ಉಂಟು. ) ಈರೀತಿ ಈ ಮೊದಲು ಎಷ್ಟೋ ಸರಿ ಅಮ್ಮನೊಂದಿಗೆ, ಶ್ರುತಿಯೊಂದಿಗೆ, ಹರ್ಷಾಳೊಂದಿಗೆ ನಡೆದು ಕೊಂಡಿದ್ದೇನೆ. ಬೇಕಂತಲೇ ಅವರಿಗೆ ನೋವು ಮಾಡಿದ್ದೇನೆ. ಇದಕ್ಕೆ ಕಾರಣ ಅವರ ಮೇಲಿರುವ ಅಪಾರವಾದ ಪ್ರೀತಿ. ಹೇಳಲಸಾಧ್ಯವಾದ ನಂಬಿಕೆ, ಮಮತೆ. ಅರಿಯದ ಭಾವನೆಗಳು.
ನನ್ನವನು ಕೇವಲ ನನ್ನವನಲ್ಲ. ಅವನೇ ನಾನಗಿರುವೆ. ಇಂತಹದರಲ್ಲಿ ಅವರಿಗೆ ನಾಕೊಟ್ಟ ಕಾಟ ಅವರಿಗಿಂತ ಹೆಚ್ಚು ಬೇನೆ ನನಗೆ ನೀಡಿದೆ. ಆದರೂ ನನಗೆ ಮೊಂಡುತನವಿನ್ನೂ ಕಮ್ಮಿಯಾಗುತ್ತಿಲ್ಲ. ಅವರೇ ಬಂದು ಮಾತನಾಡಲಿಯೆಂಬ ಹುಚ್ಚು ಹಟ ಮೂಡುತಿದೆ. ಹೃದಯವು ಎಷ್ಟರಮಟ್ಟಿಗೆ ನೋವನನುಭವಿಸುತಿದ್ದೆಯೆಂದರೆ ಚೀರಿ ಚೀರಿ ಜೋರಾಗಿಯೊಮ್ಮೆ ಅತ್ತುಬಿಡಬೇಕೆನಿಸುತ್ತಿದ್ದೆ.
Thursday, 31 January 2019
A question, Just one.
Can I ask you a question? just one. - He said.
Ask as many as you wish too! But don't expect answers to all your questions. -without knowing the seriousness of the situation she said and laughed.
Why he? - his face looked pale and hushed voice.
You meet many people before him and said no. why you said yes to him. -He continued.
She could only gaze at him.
He wasn't the only one who asked this question in the last few days. -She pondered.
She will never have a particular answer to this question. She just knew he is the one.
How and why?! She will never have a particular answer to this question.
There was a deep silence.

Tuesday, 29 January 2019
ಗೆಜ್ಜೆಯಾ ನಾದವಲ್ಲವಿದು ಮಿಡಿವ ಹೃದಯದ ನಿನಾದ
ನಿನ್ನೆಡೆಗೆ ಬರುವಾಗ ಶೃಂಗಾರದ ಹೊರೆ ಏಕೆ? ಯೆಂದು ರಾಷ್ಟ್ರಕವಿ ಕುವೆಂಪಜ್ಜ ಹೇಳಿರುವ ಮಾತು ಈಗಲೂ ಕಿವಿಯಲ್ಲಿ ಗುನುಗುಟ್ಟಿದಂತನ್ನಿಸುತ್ತದೆ. ಎಷ್ಟು ಸತ್ಯದ ಮಾತಲ್ಲವೇ ಇದು. ಹೃದಯದ್ದಲ್ಲಿ ಪ್ರೀತಿಯ ಅಲಂಕಾರವಿರಲು ಮುಂದೊಂದು ದಿನ ಮಾಸಿಹೋಗುವ ಮುಖಕ್ಕೇಕೆ ಅಲಂಕಾರ. ಅಲ್ಲವೇ?
ಫೇಸ್ಬುಕ್ಕಿನಲ್ಲಿ, ಅಲ್ಲಿ ಇಲ್ಲಿ ಆಗೊಮ್ಮೆ ಈಗೊಮ್ಮೆ ಓದ ಸಿಗುವ ಬಹಳಾನೇ ಪ್ರಸಿದ್ದವಾಗಿರುವ ಮೀಮ್ ಒಂದು ಹೀಗಿದೆ, "ನಿನಗಾಗಿ ನೀನು ಶೃಂಗಾರ ಮಾಡಿಕೋ, ಬೇರೆಯವರು ಏನಂದಾರು ಎಂಬುದ ಬಿಡು". ಇದು ಒಂದು ರೀತಿಯಲ್ಲಿ ಒಪ್ಪಬೇಕಾದ ವಿಷಯವೇ. ಆದರೆ ನಮಗೆ ನಾವು ಹೇಗಿದ್ದರೂ ಇಷ್ಟವೇ. ನಮ್ಮವರಿಗೂ ಹಾಗೆಯೇ, ನಾವು ಹೇಗೆ ಕಂಡರೂ ಪ್ರೀತಿಯೇ.
ಆದರೆ ನನಗನಿಸುವಂತೆ ಆಗೊಮ್ಮೆ ಈಗೊಮ್ಮೆ ಅವರಿಗಾಗಿ, ನಮ್ಮವರಿಗಾಗಿ ಶೃಂಗರಿಸಿಕೊಳ್ಳುವ ಮಜವೇ ಬೇರೆ.
ಹುಬ್ಬುಗಳ ನಡುವೆ ಗುಂಡನೆಯೇ ಕೆಂಪು ಬೊಟ್ಟು ಇಟ್ಟಾಗ ಅವರ ನೆನೆದು ಕೆನ್ನೆಗಳಲ್ಲಿ ಗುಳಿ ಬೀಳುವುದೇ ಒಂದು ಚೆಂದ.

ಕಿವಿಯಲ್ಲಿ ನೇಲುವ ಮುತ್ತಿನ ಜುಮ್ಕಿ ಆಟಗಳು ಅವರ ತುಂಟತನವ ಬಿಂಬಿಸಿ ಕೆನ್ನೆಯನ್ನು ಕೆಂಪಾಗಿಸಿ ಕಣ್ಣಲ್ಲಿ ಮಿಂಚಾಗಿ ಹರಿದು ಹೋಗುವುದೆ ಒಂದು ಸೊಗಸು. ಮೂಗಿನಲ್ಲಿ ಇರುವ ಬೊಟ್ಟು, ಕೊರಳಿನ ಮಾಲೆ, ಕಾಲಿನಾ ಬೆಳ್ಳಿ ಗೆಜ್ಜೆ, ಕಣ್ಣಲ್ಲಿ ಹಚ್ಚಿದ ಕಪ್ಪು ಕಾಡಿಗೆ, ತುಟಿಯಲ್ಲಿನ ನಗು, ಅಬ್ಬಾ ಹೀಗೆ ಹತ್ತು ಹಲವು ಅಲಂಕಾರಗಳು ಅವರನ್ನೇ ನೆನಪಿಸಿ ಕಾಡುತದ್ದೆ. ಹೃದಯಾಲಂಕಾರದೊಡನೆ ದೇಹಾಲಂಕಾರ ಬೆರೆತು ಶೃಂಗಾರಕಾವ್ಯ ಮಿಡಿದಾಗ, ಅವರಿಗೆ ನಾನು ಚೆಂದ ಕಾಣಿಸಿಯಾನೆಯೆಂಬ ಪ್ರಶ್ನೆ ಹಣೆಯ ಮೇಲೆ ಸಣ್ಣದೊಂದು ನೆರಿಗೆ ಮೂಡಿಸುತ್ತದೆ.
Sunday, 27 January 2019
ಸಣ್ಣದೊಂದು ಮಾತು ಕಥೆ
ಎಂದಿಲ್ಲದ್ದ ಸಣ್ಣದಾದ ದೊಡ್ಡದೊಂದು ಮಾತು ಕಥೆ ಇಂದು.
ಸಾಹೇಬರಿಗೆ ಸಮಯಾವಕಾಶ ಬಹಳಾನೇ ಸಿಕ್ಕಿರುವಂತಿದೆ.
ಒಂಟಿಯಾಗಿ ಕುಳಿತ ನನ್ನನ್ನು ನೋಡಿ, ಜಂಟಿಯಾಗಿ ಹಾರುವ ಜೋಡಿ ಹಕ್ಕಿಗಳ ನಿನ್ನವನ್ನೆಲ್ಲೆಯೆಂದು ಹೀಯಾಳಿಸುತ್ತಿರಲು,
ಆಗ ಬಂದಿತ್ತು ಅವರ ಸಂದೇಶಗಳು.
ನನಗೆ ಇಂದು ಎಲ್ಲಿಲ್ಲದ ಸಂಭ್ರಮ. ಗರ್ವದಿ ಆ ಜೋಡಿ ಹಕ್ಕಿಗಳೆಡೆಗೆ ಮುಖ ಮಾಡಿ ಮೂತಿ ಮುರಿದೆ.
ಕ್ಷಣಕೊಮ್ಮೆ ಕನಸಿನಾ ಲೋಕಕ್ಕೆ ಜಾರಿ, ಮೈಯೆಲ್ಲಾ ಪುಳಕಿತಗೊಂಡು ಮತ್ತೆ ವಾಸ್ತವತೆಗೆ ಬಂದಂತೆ. ಈಗ ಇಲ್ಲಿರುವೆ, ಕ್ಷಣ ಕಾಲದಲ್ಲಿ ಮತ್ತೆಲ್ಲೋ. ಅವನ ಉಸಿರೊಂದು ಎಲ್ಲಿಂದಲೋ ತೇಲಿಬಂದು ನನ್ನ ಬಲಗಿವಿಯ ನೇವರಿಸಿ ಮಾಯವಾದಂತೆ. ಹೀಗೆ ಎಂದಿಲ್ಲದ್ದ ಸಣ್ಣದಾದ ದೊಡ್ಡದೊಂದು ಮಾತು ಕಥೆ ಇಂದು ನಡೆದಿತ್ತು. ನನ್ನನ್ನು ಪ್ರೀತಿಸಿತ್ತು, ಕಾಡಿಸಿತ್ತು, ನಗಿಸಿತ್ತು, ಪೀಡಿಸಿತ್ತು. ಜೊತೆಯಲ್ಲಿ ಮೋಡಗಳ ಅಂಚಿಂದ ಮಿಂಚುತ್ತಾ, ನನ್ನ ಮೈಯನ್ನೆಲ್ಲ ಹೊನ್ನು ಮಾಡಿ ಸೂರ್ಯ ಅಸ್ತಮವಾಗಿತ್ತು.

Thursday, 24 January 2019
Thursday, 17 January 2019
Ha Ha Ha
ಇತ್ತೀಚೆಗೆ ಹಗಲುಗನಿಸಿನ ಕಾಟ ಹೆಚ್ಚುತ್ತಿದೆ.
ಎಲ್ಲಂದರಲ್ಲಿ, ಯಾವಾಗಂದರವಾಗ ಹೇಳದೆ ಕೇಳದೆ ಅನುಮತಿ ಪಡೆಯದೇ ಬಂದು ಬಿಡುತ್ತದ್ದೆ.
ಮೊದಮೊದಲು ಅವನ ಪ್ರೀತಿಯ ಸ್ಪರ್ಶ ನೆನೆ ನೆನೆದು ಮುಗುಳ್ನಗುತ್ತಿದ್ದೆ.
ಈಗಿಗೀಗ ಅವನ ತುಂಟತನವ ನೆನೆದು ಜೋರು ಜೋರಾಗಿ ನಗುತ್ತಿರುತ್ತೇನೆ.

Wednesday, 16 January 2019
ಪದೇ ಪದೇ
ಪದೇ ಪದೇ ಓದಿದೆ.
ಒಂದು ಬಾರಿ, ಎರೆಡು ಬಾರಿ, ಮೂರು ಬಾರಿ,
ಮತ್ತೆ ಮತ್ತೆ.
ಓದಬೇಕೆನಿಸಿದಾಗೆಲ್ಲಾ ಓದಿದೆ.
ಇನ್ನೊಮ್ಮೆ ಓದಲ್ಲಿದ್ದೇನೆ.
ನನ್ನಿನಿಯನ ಆ ಸಂದೇಶವ.
ಅವ ಕಳಿಹಿಸುವ ಆ ಪದ ಪುಂಜವ.
ಅವನ ಮುಖ, ಅವನ ದನಿ, ಅವನ ನಗು,
ಅವನ ಭಾವನೆಗಳಡಗಿರುವ ಆ ಸಾಲುಗಳ.
ಪದೇ ಪದೇ ಓದಿದೆ.
ಪದೇ ಪದೇ ಓದಲಿದ್ದೇನೆ.
ಒಂದು ಬಾರಿ, ಎರೆಡು ಬಾರಿ, ಮೂರು ಬಾರಿ,
ಮತ್ತೆ ಮತ್ತೆ.
ಓದಬೇಕೆನಿಸಿದಾಗೆಲ್ಲಾ ಓದಿದೆ.
ಇನ್ನೊಮ್ಮೆ ಓದಲ್ಲಿದ್ದೇನೆ.
ನನ್ನಿನಿಯನ ಆ ಸಂದೇಶವ.
ಅವ ಕಳಿಹಿಸುವ ಆ ಪದ ಪುಂಜವ.
ಅವನ ಮುಖ, ಅವನ ದನಿ, ಅವನ ನಗು,
ಅವನ ಭಾವನೆಗಳಡಗಿರುವ ಆ ಸಾಲುಗಳ.
ಪದೇ ಪದೇ ಓದಿದೆ.
ಪದೇ ಪದೇ ಓದಲಿದ್ದೇನೆ.
Monday, 14 January 2019
ಅತಿ ಸರ್ವತ್ರ ವರ್ಜಯೇತ್
ಅತಿ ಸರ್ವತ್ರ ವರ್ಜಯೇತ್
ನೆನ್ನೆಯಿಂದ ಅಪ್ಪನ ಸಲಹೆಗಳು ಯಾಕೋ ಹೆಚ್ಚಿದೆ, ಮನಸ್ಸಿಗೆ ಒಂದು ರೀತಿಯ ಸಂಕಟ ನೀಡುತ್ತಿದ್ದೆ. ನನ್ನಿಂದ ದೂರವಾಗುವೆ ಇನ್ನು ನೀನು ಅಂತೆಲ್ಲಾ ಹೇಳುತ್ತಿದ್ದಾರೆ. ಅದು ಹೇಗೆ ತಾನೇ ಸಾಧ್ಯ? ನನ್ನ ಅಸ್ಥಿತ್ವ ಅವರಿಂದ. ಅವರಿಲ್ಲದಿರೋ ಜೀವನದ ಕಲ್ಪನೆಯು ಅಸಾಧ್ಯ. "ಅತಿ ಸರ್ವತ್ರ ವರ್ಜಯೇತ್" ಯೆಂದು ತಿಳಿ ಹೇಳುವ ಅಪ್ಪನಿಗೆ, ನಾಲ್ಕು ಹುಸಿ ಪೆಟ್ಟುಕೊಟ್ಟು "ಅತಿ ಸರ್ವತ್ರ ವರ್ಜಯೇತ್" ಯೆಂದು ನಾನು ತಿಳಿ ಹೇಳಬೇಕೆನಿಸಿದೆ. ಹಾಗೆ ಹೇಳ ಹೋದರೆ ಮತ್ತೆ ವೇಂದಾಂತಿಯಾಗುವ ನನ್ನಪ್ಪ "ನೋಡು, ಈಗ ನೀನು ಎಷ್ಟು ಬೆಳೆದಿದ್ದೀಯ, ಅದು ಯಾವಾಗ ನನ್ನ ಪುಟ್ಟ ಕೂಸಕ್ಕ ದೊಡ್ಡವಳಾದಳೆಂದು ತಿಳಿಯಲೇ ಇಲ್ಲಾ. ನಿನ್ನ ಜೀವನವನ್ನು ನೀನೀಗ ಕಟ್ಟಿಕೊಳ್ಳುವಷ್ಟು ಸಾಮರ್ಥ್ಯ ಬಂದಿದೆ, ರೆಕ್ಕೆ ಬಲಿತ ಹಕ್ಕಿ ಗೂಡ ತೊರೆಯಲೇ ಬೇಕು. ಮುದ್ದಾಗಿ ಸಾಕಿದ ಮಗಳ ಒಂದಲ್ಲ ಒಂದು ದಿನ ಮನೆಯಿಂದ ಕಲಿಸಲೇ ಬೇಕು."
ಇದೊಂತರ ಬಿಡಿಸಲಾಗದ ಕಗ್ಗಂಟು. ಸಮಯಕ್ಕೆ ತಕ್ಕಂತೆ ಮಾತಿನ ಅರ್ಥಗಳು ಬದಲಾಗುತ್ತ ಹೋಗುತ್ತದ್ದೆ. Some statement contradicts itself. Its a paradox. ನೀವು ಓದಿದಷ್ಟು ಸುಲಭದ ಮಾತಲ್ಲವಿದು. ಇದರ ಘಾಡತೆ ತಿಳಿಯಲು ನೀವು ಇದನ್ನು ಜೀವಿಸಿರಬೇಕು.

Wednesday, 9 January 2019
All I wanted
All I wanted is, I have to be;
A reason for his grin
A reason for a sparkle in his eyes
That's it.
A reason for his grin
A reason for a sparkle in his eyes
That's it.
Tuesday, 8 January 2019
Girl with a golden heart
She is a girl with a golden heart.
People extracted the gold for once own benefit.
She is a girl with a mother heart.
Which suffered, yet forgiven the sins of the human race.
People extracted the gold for once own benefit.
She is a girl with a mother heart.
Which suffered, yet forgiven the sins of the human race.
Saturday, 5 January 2019
ಅಳುವು-೨
Have you ever missed someone very much, that you find it very difficult to breath also?
if you never experienced it, you missed the beautiful part of the true emotions.
Run run run,
Go now itself and love someone unconditionally.
doesn't matter whoever they may be.
Your mom, dad, brother, sister in law, best friend or your fiance.
Love someone/something for yourself by being selfless, experience the beauty of life.
it's pristine, it's divine.
Soulful.
Surrendered
ಕುರುಡಿಯೇ ನಾನು?
ಗೊತ್ತಿಲ್ಲ.!
ದಡ್ಡಿಯೇ ನಾನು?
ತಿಳಿದಿಲ್ಲ.!
ಮೊದಲ ನಗುವಿಗೆ ಸೋತು ಮರುಳಾದೆ.
ಮೊದಲ ನಗುವಿಗೆ ಅವನನ್ನು ಒಪ್ಪಿ ಶರಣಾದೆ.
ಗೊತ್ತಿಲ್ಲ.!
ದಡ್ಡಿಯೇ ನಾನು?
ತಿಳಿದಿಲ್ಲ.!
ಮೊದಲ ನಗುವಿಗೆ ಸೋತು ಮರುಳಾದೆ.
ಮೊದಲ ನಗುವಿಗೆ ಅವನನ್ನು ಒಪ್ಪಿ ಶರಣಾದೆ.
Balancing art
ಅತಿವೃಷ್ಟಿಯು ಕಷ್ಟ, ಅನಾವೃಷ್ಟಿಯೂ ಕಷ್ಟ.
ಜೀವನವನ್ನು ಸಮತೋಲನವಾಗಿ ಸಾಗಿಸುವುದು ಒಂದು ಕಲೆಯೇ ಸರಿ.
ಇಷ್ಟಲ್ಲದೆಯೇ ಹಿರಿಯರು ಹೇಳಿಯರೇ "ಅತಿಯಾದರೆ ಅಮೃತವು ವಿಷವೆಂದು".
ಹೌದು ಯಾವುದೆ ಆಗಲಿ ಅತಿಯಾದರೆ ಅದು ತನ್ನ ಮಹತ್ವವನ್ನು ಕಳೆದು ಕೊಳ್ಳುತ್ತದೆ.
ಹಾಗಂತ ತೀರಾ ಕಮ್ಮಿಯಾದರೂ ಅದು ಯಾರ ಗಮನಕ್ಕೂ ಬಾರದೆ ತನ್ನಲ್ಲಿಯೇ ಕಳೆದು ಹೋಗುತ್ತದೆ.
ನಿಮ್ಮ ಜೀವನವನ್ನು ಎಷ್ಟು ಸರಳ ಹಾಗು ಸುಂದರ ಗೊಳಿಸುವೆ ಎಂಬುದು ನಿಮ್ಮ ಕೈಯಲ್ಲಿದೆ.
ನೀನೊಬ್ಬ ಕಲಾವಿದ.
ನೀನೊಂದು ಸುಂದರ ಕಲಾಕುಸುರಿ.
ಅಡಿಗೆ ರುಚಿಸ ಬೇಕಾದರೆ ಉಪ್ಪಿನ ಪ್ರಮಾಣ ಬಹಳಾನೇ ಮುಖ್ಯ.
ಮರೆಯದಿರಿ.
Friday, 4 January 2019
ಯಾರಿಗಿಷ್ಟವಿಲ್ಲ.
ಯಾರಿಗಿಷ್ಟವಿಲ್ಲ
ನಕ್ಕು ನಗಿಸುವಾತ.
ಯಾರಿಗಿಷ್ಟವಿಲ್ಲ
ಪೆದ್ದು ಪೆದ್ದಾಗಿ ಮುದ್ದು ಮಾತನಾಡುವಾತ.
ಯಾರಿಗಿಷ್ಟವಿಲ್ಲ
ಮರೆಯಲ್ಲಿ ಅವಿತಿರುವ ಅವನ ಬುದ್ದಿವಂತಿಗೆ.
ಅರವತ್ತರ ಮುದುಕನು ಅವನೇ,
ಆರುವರ್ಷದ ಮಗುವು.
ಹದಿನಾರರ ತುಂಟ ಹುಡುಗ,
ಇಪ್ಪತ್ತಾರರ ಪ್ರಭುದ್ದ ವ್ಯಕ್ತಿ.
ನನ್ನವನಿಗೆ ನನ್ನವನೇ ಸಾಟಿ.
ಸಣ್ಣದೊಂದು ಕಪ್ಪು ಬೊಟ್ಟು ಅವನ ಕಿವಿಯ ಹಿಂದೆ ಹಚ್ಚ ಬೇಕಿದೆ.
ನನ್ನೀ ಹುಚ್ಚು ಪ್ರೀತಿಗೆ ದೃಷ್ಟಿ ತಾಕುವಂತಿದೆ.

Subscribe to:
Posts (Atom)