ದೇಹಾತ್ಮಗಳಲ್ಲಿ ತುಂಬಿದ್ದ ರಕ್ತ, ಮಾಂಸ, ಒಂದಷ್ಟು ಕನಸು, ಭಾವನೆಗಳನ್ನೆಲ್ಲ ಸಂಪೂರ್ಣವಾಗಿ ಹೀರಿ ಹೊರ ತೆಗೆದು ನನ್ನನ್ನು ಆವರಿಸಿರುವ ನನ್ನ ಲಲನ, ತೀರದಷ್ಟು ವಿರಹ ಮೌನಕೆ ನನ್ನ ದೂಡಿ ಏನು ಅರಿಯದಂತೆ ಬೇರೆ ಅದೆಲ್ಲೋ ಗೋವುಗಳ ನಡುವೆ ಹಾಯಾಗಿ ಮಲಗಿಹನು.
ಅರೇ!!!! ನನ್ನೀ ಮೌನವ ಕಲಕುತಿಹ ಕೊಳಲಿನ ಮೆಲುದನಿ ಯಾವುದಿದು? ಎತ್ತಲ್ಲಿಂದ ಬರುತ್ತಿದೆ?
ನನ್ನ ಅಗಲಿರಲಾರದೆ ಅವನೇ ಬರುತಿಹನೆ?
ಅಥವಾ ನನ್ನೊಳಗೆ ಬೆರೆತು ನಾನೇ ಯಾಗಿರುವ ಅವನು ನನ್ನೊಳಗೆ ಕೊಳಲ ನುಡಿಸುತ್ತಿಹನೇ?
ಅರೇ!!!! ನನ್ನೀ ಮೌನವ ಕಲಕುತಿಹ ಕೊಳಲಿನ ಮೆಲುದನಿ ಯಾವುದಿದು? ಎತ್ತಲ್ಲಿಂದ ಬರುತ್ತಿದೆ?
ನನ್ನ ಅಗಲಿರಲಾರದೆ ಅವನೇ ಬರುತಿಹನೆ?
ಅಥವಾ ನನ್ನೊಳಗೆ ಬೆರೆತು ನಾನೇ ಯಾಗಿರುವ ಅವನು ನನ್ನೊಳಗೆ ಕೊಳಲ ನುಡಿಸುತ್ತಿಹನೇ?
No comments:
Post a Comment