Saturday, 2 February 2019

Middle-class princess.

ಎಷ್ಟೋ ಜನರಿಗೆ ಹೀಗನಿಸಿರಬಹುದು. ಅವರ ತಂದೆ ತಾಯಿ ಪ್ರಪಂಚದ ಅತ್ಯುತ್ತಮ ಪೋಷಕರೆಂದು. ಅವರವರ ಪಾಲಿನ ಸತ್ಯವದು. ಈ ಅನಿಸಿಕೆಯಿಂದ ನಾನೇನು ಹೊರತಲ್ಲ. ನನ್ನ ತಂದೆ ತಾಯಿ ಪ್ರಪಂಚದ ಅತ್ಯುತ್ತಮ ಪೋಷಕರು. ಮಧ್ಯಮ ವರ್ಗದ್ದಲ್ಲಿ ಜನಿಸಿದರು ರಾಜಕುಮಾರಿಯಂತೆ ಬೆಳಸಿದ್ದಾರೆ. ಕಾಲ್ಪನಿಕ ಕಥೆಯ ರಾಜಕುಮಾರಿಗು ಹಾಗು ನನಗು ಇರುವ ಒಂದೇ ಒಂದು ವ್ಯತ್ಯಾಸವೇನಪ್ಪ ಅಂದರೆ, ನನ್ನಪ್ಪ ಅಮ್ಮ ನೀಡಿರುವ, ನೀಡುತ್ತಿರುವ ತಿಳುವಳಿಕೆಗಳು. ಹೌದು, ನನಗೇನು ಬೇಕು, ನನಗೆ ಯಾವುದು ಸರಿ, ನನಗೆ ಯಾವುದು ಸರಿಬಾರದುಯೆಂಬ ಸ್ವಂತ ಅರಿವು ಮೂಡಲು ಎಷ್ಟು ಜ್ಞಾನದ ಅಗತ್ಯವಿದೆಯೋ ಅದನ್ನು ನೀಡಿದ್ದಾರೆ.  ಇರುವ ಸತ್ಯವನ್ನು ಇರುವಹಾಗೆ ಧೈರ್ಯದಿಂದ ಒಪ್ಪಿಕೊಳ್ಳಲ್ಲು ಬೇಕಾಗುವಷ್ಟು ಚೈತನ್ಯವನ್ನು ನನ್ನಲ್ಲಿ ತುಂಬಿದರೆ. ಯಾರಮೇಲೂ ಅವಲಂಭಿಸದೇ ನನ್ನ ಜೀವನವನ್ನು ಕಟ್ಟಿಕೊಳ್ಳುವಷ್ಟು ಸಮರ್ಥಳನ್ನಾಗಿ ಮಾಡಿದ್ದಾರೆ. ಹಾಗಂತ ಎಲ್ಲರಿಂದ ದೂರಾಗಲು ಬಿಡದಂತೆ ಮೋಹಪಾಶವನ್ನು ಜೊತೆಯಲ್ಲಿ ಹೆಣದಿದ್ದರೆ. ಜೀವನ ಎಷ್ಟು ಸರಳ ಸುಂದರವೆಂದು ತೋರಿಸಿಕೊಟ್ಟಿದೆ. ರಾಜಕುಮಾರಿಯಿಂದ ಸಮರ್ಥ ರಾಣಿಯಾಗುವ ಯೋಗ್ಯತೆ ನೀಡಿದ್ದಾರೆ. 

No comments:

Post a Comment