ಭಾರತೀಯ ಮಧ್ಯಮ ವರ್ಗದ ಹೆಣ್ಣು ಮಗಳಾಗಿ ಹುಟ್ಟಿ, ಸಂಶೋಧನಾ ವಿದ್ಯಾರ್ಥಿನಿಯಾಗಿ, ವಿದ್ಯಾರ್ಥಿವೇತನವಿಲ್ಲದೆ ಹಾಗು ಯಾವುದೇ ಕೆಲಸಕ್ಕೂ ಹೋಗದೆ, ಇನ್ನೇನು ಈ ವರ್ಷದಿಂದ ಪ್ರೌಢಪ್ರಬಂಧ ಬರೆಯಬೇಕೆಂದಿರುವಾಗ, ಮದುವೆ ಮಾಡಿಕೊಂಡು, ಅತ್ತ ಹೊಸಜೀವನದ ಸಿಹಿ ಅನುಭವಿಸುವ ಪುಣ್ಯವು ಇಲ್ಲದೆ, ಬೇಗ ಬೇಗ ಸಂಶೋಧನಾ ಕೆಲಸವನ್ನು ಮುಗಿಸಲಾರದೆ, ಸಂಶೋಧನಾ ಕೆಲಸದ ಒತ್ತಡದ ನಡುವೆ ಸಂಸಾರದ ಹೊಣೆ, ಜವಾಬ್ಧಾರಿ ಹೊರೆ ಹೊತ್ತು, ಜೀವನದ ಜಂಜಾಟದಲ್ಲಿ ಸಿಕ್ಕಿ ವಿಲವಿಲನೆ ಒದ್ದಾಡಿ ಬೇಸತ್ತು, ದಿನದ ಅಂತಿಮ ಸಮಯವನ್ನಾದರೂ ನೆಮ್ಮದಿಯಿಂದ ಕಳೆಯೋಣವೆಂದರೆ, ಈಗಷ್ಟೇ ಹೊಸ ನೌಕರಿಗೆ ಸೇರಿರುವ ನನ್ನ ಗಂಡ ಟೆಕ್ಕಿ, ತನ್ನ ಕೆಲಸದಲ್ಲಿ ಎಷ್ಟು ವ್ಯಸ್ಥನೆಂದರೆ ಅಯ್ಯೋ ರಾಮಾ!!! ಒಂದು ಕ್ಷಣಕ್ಕೆ ಅನ್ನಿಸುತ್ತದೆ ಯಾರಿಗೆ ಬೇಕಿತ್ತು ಇಷ್ಟೆಲ್ಲಾ ಒದ್ದಾಟ. ಇತ್ತೀಚೆಗೆ ಎಷ್ಟು ಪ್ರಕ್ಷುಬ್ಧಳಾಗಿದ್ದೇನೆಂದರೆ ನನ್ನವನು ಮಾಡುವ ತುಂಟ ತರಲೆಗಳು ನನಗೆ ಅವನು ನನ್ನ ಅಣುಕಿಸುತ್ತಿದ್ದನೋನೆಂದನಿಸಿಬಿಡುತ್ತದೆ. ಪ್ರೀತಿ, ಮಮತೆಯ ಅಭಾವ, ಕೆಲಸದ ಕಿರಿಕಿರಿ, ಇವೆಲ್ಲವೂ ಒಬ್ಬ ಸಂಶೋಧನಾ ವಿದ್ಯಾರ್ಥಿಯನ್ನು ಎಷ್ಟರಮಟ್ಟಿಗೆ ಪಾತಾಳಕ್ಕೆ ತಳ್ಳುತ್ತದೆಂದರೆ ಅಲ್ಲಿಂದ ಹೊರಬರಲು ದಾರಿಯೇ ಕಾಣದಂತಾಗುತ್ತೆ. ಇದರಿಂದ ಎಷ್ಟು ಬೇಗ ಹೊರ ನಡೆಯುವೆವೋ ಎಂದನಿಸಿ ಬಿಡುತ್ತದೆ. ಕ್ಷಣ ತಪ್ಪಿಗೆ ಯುಗ ಸಂಕಟ ಎಂಬಂತೆ, ಇಷ್ಟಪಟ್ಟು ಸೇರಿದ ಕೆಲಸ ಹುರುಳಾಗಿ ಕಷ್ಟ ಕೊಡುತ್ತಿದೆ. ಇದೆಲ್ಲಾ ಸಮಸ್ಯೆಗಳಿಗೂ ಸಮಾಧಾನ ತಿಳಿದ್ದಿದರು ಅಳವಡಿಸಿಕೊಳ್ಳೋ ಬಹಳಾನೇ ಹಿಂಸೆಯಾಗುತ್ತಿದೆ. ನಮ್ಮಿ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಒಂದು ಸಾಮಾನ್ಯ ವ್ಯಕ್ತಿಗೆ ಅಷ್ಟು ಸುಲಭದ ಮಾತ್ತಲ್ಲ.
No comments:
Post a Comment