Tuesday, 6 August 2019

How much

ನನಗನಿಸ್ಸಿದ್ದು.
ಕೆಲವು ಸಮೀಕ್ಷೆಗಳ ಪ್ರಕಾರ ೧೦೦ ರಲ್ಲಿ ೪೦ ರಷ್ಟು ಸಂಶೋಧನಾ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ. ಅದಕ್ಕೆ ಕಾರಣಗಳು ಹಲವು. ಹಣಕಾಸಿನೇ ಬೆಂಬಲ ಇರದೇ ಇರುವುದು, ಪ್ರಯೋಗಗಳ ವಿಫಲತೆ, ಉತ್ತಮ ಫಲಿತಾಂಶ ಬರುವರೆಗೂ ಎಡಬಿಡದೆ, ದಿನ ರಾತ್ರಿ ಲೆಕ್ಕಿಸದೆ ಮುಗಿಸಲೇ ಬೇಕಾದ ಪ್ರಯೋಗಳು, ಪೂರ್ಣವಾಗದ ವೈಜ್ಞಾನಿಕ ಹಸ್ತ ಪ್ರತಿಗಳು, ಮಾರ್ಗದರ್ಶಕರ ಒತ್ತಡ, ದಿನನಿತ್ಯ ಕೇಳುವ ಅವರ ಬೈಗುಳಗಳು, ಊಟ ತಿಂಡಿಗೆ ಸರಿಯಾದ ನಿರ್ದಿಷ್ಟ ಸಮಯವಿಲ್ಲದು, ಪಿ.ಹೆಚ್.ಡಿ. ಬೇಗ ಮುಗಿಸುವ ಸಲುವಾಗಿ ಮನೆಯವರ ಒತ್ತಡ, ಸಮಾಜದ ಒತ್ತಡ, ಅನಿಶ್ಚಿತಿತ ವೃತಿಜೀವನ, ಸ್ನೇಹಿತರ ಕೊರತೆ, ಹೀಗೆ ಹತ್ತು ಹಲವು. ಇಷ್ಟೆಲ್ಲಾ ಸಾಲದು ಎಂದು ಮದುವೆ ಆಗದವರಿಗೆ ಮನೆಯವರು  ಮದುವೆಯ ಒತ್ತಡ ಮಾಡುವರು, ಸರಿ ಅವರಿಚ್ಛೆಯಂತೆ ನಡೆಯೋಣವೆಂದರೆ ಸಮಯದ ಅಭಾವ, ಜೊತೆಯಲ್ಲಿ ಸಂಶೋಧನಾ ವಿದ್ಯಾರ್ತಿಗಳನ್ನು ಅಷ್ಟು ಸುಲಭವಾಗಿ ಮದುವೆಯಾಗಲು ಯಾರು ಒಪ್ಪುವುದಿಲ್ಲ. ಅದರಲ್ಲಿಯು ನಿಮಗೆ ದೇಹ ಸೌಂದರ್ಯದ ಕೊರತೆ ಇದ್ದರೆ ಕೇಳಲೇ ಬೇಡಿ. ಇವರದ್ದು ಒಂದು ರೀತಿಯಾದರೆ ಮದುವೆ ಆದವರದ್ದು ಇನ್ನೊಂದು ರೀತಿಯ ಗೋಳು. ಸಹಪಾಠಿಯೊಂದಿಗೆ ಸಮಯ ಕಲೆಯಾಗದು, ಅವರಿಚ್ಛೆಯಂತೆ ನಡೆಯಲಾಗದು, ಪರಿವಾರದವರನ್ನು ನೋಡಿಕೊಳ್ಳಲಾಗದು, ಎಷ್ಟೇ ಕಷ್ಟ ಪಟ್ಟು ಎಲ್ಲವನ್ನು ನಿಭಾಯಿಸಲು ಪ್ರಯತ್ನಿಸಿದರು ಕುಂದು ಕೊರತೆಯನ್ನೇ ಗಮನಿಸುವ ಸಮಾಜ ಹಾಗು ಪರಿವಾರದ ಸಧಸ್ಯರು.  ಸಂತಾನಾಭಿವೃದ್ದಿ, ಆರೋಗ್ಯದ ಕಡೆ ನೀಡಲಾಗದ ಗಮನ. ನಿಮಗೆ ಸಿಕ್ಕ ಸಹಪಾಠಿ ಸೂಕ್ಷ್ಮ ಗಳನ್ನೂ ಅರಿತಿತು ನಿಮಗ ಬೆಂಬಲಿಸದಿದ್ದಲ್ಲಿ ಸತ್ತೇ ಬಿಡುವ, ಜೀವನವೇ ಬೇಡ ಎನಿಸುವಷ್ಟು ಹಿಂಸೆ, ನೋವು.
ಸಂಶೋಧನಾ ವಿದ್ಯಾರ್ತಿಗಳ ಪರಿಸ್ಥಿತಿ ದೇವರಿಗೆ ಪ್ರಿಯ. ಅವರನ್ನು ಪ್ರೀತಿಸಿ ಹಾಗು ಅರ್ಥಮಾಡಿಕೊಳ್ಳುವ ಸಹನೆ ಎಲ್ಲರಲ್ಲೂ ಬೆಳೆಯಬೇಕು. ಕಡೇಪಕ್ಷ ಅವರ ಕುಟುಂಬಸ್ಥರಾದರು ಬೆಂಬಲಿಸಬೇಕು. ಇಲ್ಲದಿದ್ದಲ್ಲಿ ಅವರನ್ನು ಕಳೆದು ಕೊಳ್ಳಬೇಕಾಗುತ್ತದೆ.





No comments:

Post a Comment