Wednesday 7 August 2019

ಅತ್ತೆ, ಸೊಸೆ

ಅತ್ತೆ, ಸೊಸೆ ಯೆಂದಿಗೂ ತಾಯಿ, ಮಗಳಾಗಲಾರರು.
ಕಾರಣ ಸುಲಭ, ಅವರನ್ನು ಬೆಸೆಯ ಬೇಕಾದ ಸೂಕ್ಷ್ಮ ಕೊಂಡ್ಡಿಯಾದ ಗಂಡುಮಕ್ಕಳ್ಳು ಹೆಚ್ಚೇ ವಡ್ಡರಾಗಿ ಬೆಳೆದಿರುತ್ತಾರೆ. ಹಾಗು ಈ ಚಿಕ್ಕ ಚಿಕ್ಕ ವಿಷಯಗಳನ್ನು ನಿರ್ಲಕ್ಷಿಸುವ ಎಲ್ಲಾ ಗುಣಗಳ ಅಧಿಪತಿಯಾಗಿರುತ್ತಾರೆ. ಹೊಸದಾಗಿ ಬಂದ ಹೆಣ್ಣುಮಗಳನ್ನು ,ಅವಳ ಗುಣವನ್ನು, ತನ್ನ ತಾಯಿಗೆ ಪರಿಚಯಿಸಿ, ಅವಳ ಪರ ನಿಲ್ಲುವ ವ್ಯವಧಾನವಾಗಲಿ ಅಥವಾ ಹುಟ್ಟಿದಾಗಿನಿಂದ ಜೊತೆಯಲ್ಲಿದ್ದ ತಾಯಿಯ ಬಗ್ಗೆ ತನ್ನ ಹೆಂಡತಿಯ ಬಳಿ ವಿಷಯವನ್ನು ತಿಳಿಹೇಳುವ ಸಹನೆಯಾಗಲಿ ಅವರಲ್ಲಿ ಕಾಣಸಿಗುವುದು ಬಹಳಾನೇ ವಿರಳ. ಒಂದುವೇಳೆ ಇವೆಲ್ಲವೂ ಸರಿಹೋಯಿತೆಂದರೆ ಒಬ್ಬರನೊಬ್ಬರು ಇರುವಂತೆಯೇ ಒಪ್ಪಿಕೊಳ್ಳುವ ಮನೋಭಾವನೆ ಅತ್ತೆ, ಸೊಸೆಯಾರಲ್ಲಿ ಮೂಡಬೇಕಲ್ಲ!!


No comments:

Post a Comment