Tuesday, 25 June 2019

ಅನುಬಂಧ

ಎಲ್ಲಿಂದ ಗಂಟು ಬಿದ್ದನಪ್ಪ ಈ ಭೂಪ.
ಕೆಲವೊಮ್ಮೆ ಹೇಳಿದ ಮಾತು ಕೇಳದೆ ಕೋಪಬರಿಸುವ,
ಮತ್ತೊಮ್ಮೆ ಹೇಳಿದ್ದನ್ನೆಲ್ಲಾ ಮಾಡಿ ಮನ ಒಲಿಸುವ,
ಗಂಡನಂತೆ ದಬ್ಬಾಳಿಸಿ ಅಳಿಸುವ,
ಅಪ್ಪನಂತೆ ಸಂತೈಸಿ ಓಲೈಸುವ,
ಅಣ್ಣನಂತೆ ಕಾಡಿಸಿ ಕಾಟ ಕೊಡುವ,
ಅಮ್ಮನಂತೆ ಪ್ರೀತಿ ತೋರುವ,
ಕೆಲವೊಮ್ಮೆ ಉದಾಸೀನ ಮಾಡಿ ಬಿಟ್ಟು ಹೋಗುವ,
ಮಗುವಿನಂತೆ ಮೊಂಡಾಟ ಮಾಡಿ ತಲೆ ಕೆಡಿಸುವ,
ಗೆಳೆಯನಂತೆ ತರಲೆ ಮಾಡಿ ನಕ್ಕು ನಗಿಸುವ,
ಮುದ್ದು ಮುದ್ದಾಗಿ ಮಾತನಾಡುವುದನ ಅದೆಲ್ಲಿಂದ ಕಲಿತನೋ?
ಮುದ್ದು ಮುದ್ದು ಮುಖ ಮಾಡುತ ಮನಒಲಿಸುವ ಕಲೆ ಅವನಿಗೆ ಹೇಗೆ ಬಂದಿತೋ?
ಮಾಟಗಾರ, ಮಾಯಗಾರ, ಮೋಜುಗರ,
ಕೃಷ್ಣನಿಗೆ ಇದೆಲ್ಲ ರಕ್ತಾಗತ.
ಅವನಲ್ಲಿ ನನ್ನ ಹೇಗೆ ಬಂಧಿಸಿರುವನೆಂದರೆ,
ನನಗೆ ಈ ಬಂಧನದಿಂದ ಹೊರಬರುವ ಮನ್ನೆಸ್ಸೆ ಇಲ್ಲ.
ಬಂಧನವಲ್ಲದ ಬಂಧನ,
ಬಂಧಮುಕ್ತ ಬಂಧನ.



No comments:

Post a Comment