Sunday, 28 January 2018

ಸ್ವಲ್ಪ ದೊಡ್ಡ ಥ್ಯಾಂಕ್ಯು

ಮನುಷ್ಯನ ಬುದ್ಧಿಯೇ ಹಾಗೆ. ಎಷ್ಟೇ ತಿಳುವಳಿಕೆಯಿದ್ದರೂ, ತೋರಿಕೆಯ, ಹೊಗಳಿಕೆಯ ಗೊಡವೆಯಿಲ್ಲದಿದ್ದರು ಕೆಲವೊಮ್ಮೆ ಒಂದು ಸಣ್ಣ ಆಸೆ. (ನೋಟ್: ಇಲ್ಲಿ "ಎಷ್ಟೇ" ಎಂಬ ಪದವು ವೇರಿಯೇಬಲ್, ಹಾಗಾಗಿ ನಾನಿಲ್ಲಿ ನನ್ನ ತಿಳುವಳಿಕೆಯ ಬಗ್ಗೆ ಮಾತನಾಡುತ್ತಿಲ್ಲ) ತನ್ನ ಆಲೋಚನೆಯನ್ನು ಇನ್ನೊಬರಿಗೆ ತಿಳಿಸುವುದು, ತಿಳಿಸಿದನಂತರ ಚೆನ್ನಾಗಿದೆಯೆಂದು ಅವರಬಾಯಲ್ಲಿ ಕೇಳುವ ಬಯಕೆ. ಇದು ಕೇವಲ ಆಲೋಚನೆಗಳಿಗೆ ಸೀಮಿತವಲ್ಲ. ಖರೀದಿಸಿದ ಬಟ್ಟೆಯಾಗಲಿ, ಒಡವೆಯಾಗಲಿ, ನೋಡಿದ ಧಾರಾವಾಹಿಯಾಗಲಿ, ಹೀಗೆ ಹತ್ತು ಹಲವು ವಿಷಯಗಳಿಗನ್ವಯವಾಗುತ್ತದೆ.

ಹಾಗೆಯೆ ಮೊನ್ನೆಯೊಂದು ದಿನ ನನ್ನ ಬರವಣಿಗೆಯ ಬಗ್ಗೆ ವಯಸ್ಸಿನಲ್ಲಿ ಸ್ವಲ್ಪ ಹಿರಿಯರಾದ ನನ್ನ ಸ್ನೇಹಿತೆಯ ಬಳಿ ಮಾತನಾಡಿದ್ದೆ. ಅದನ್ನು ಮೆಚ್ಚಿ, ಚೆನ್ನಾಗಿದೆಯೆಂದು ಹೇಳಿ, ಸ್ವಲ್ಪ ದೊಡ್ಡ ಥ್ಯಾಂಕ್ಯೂ ಯೆಂದು ಹೇಳಿದರು. ಈ ಹೊಗಳಿಕೆಗೆ ನಾನು ಅರ್ಹಳೆ ಅಲ್ಲವೇ ಎಂದೆಲ್ಲಾ ಓವರ್ ಡವ್ ಮಾಡುವ ಮನಸಿಲ್ಲನನಗೆ, ಅವರ ಪ್ರತಿಕ್ರಿಯೆಯಿಂದ  ನನಗೆ ಸ್ವಲ್ಪ ಹೆಚ್ಚೇ ಖುಷಿಯಾಯ್ತು. ಹಾಗಾಗಿ ನನ್ನ ಕಡೆಯಿಂದಲೂ ಅವರಿಗೆ ಸ್ವಲ್ಪ ಹೆಚ್ಚೇ ದೊಡ್ಡ ಥ್ಯಾಂಕ್ಯು.

ನೀವು ನೀಡಿದ ಖುಷಿಗಾಗಿ. ಈ ಲೇಖನ ನಿಮಗಾಗಿ.

ಮಧು'ವ್ಯಾ'

ಮನೆಕಟ್ಟಿ ನೋಡು, ಒಂದು ಮದುವೆ ಮಾಡಿ ನೋಡು.
ಈ ಗಾಧೆಯ ಅರ್ಥ ಇತ್ತೀಚೆ ಅರ್ಥವಾಗಲು ಶುರುವಾಗಿದೆ. 
ನನಗೆ ಕನ್ವೆಂಷನಲಿ/ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಬೇಕೇ ಎಂಬ ಪ್ರಶ್ನೆ? 

ದಿನ ಬೆಳೆಗಾದರೆ ಒಂದೇ ಮಾತು, ಹುಡುಗರ ಫೋಟೋ ತೋರಿಸುವ ಅಣ್ಣ ಅತ್ತಿಗೆ, ಮಗಳೇ ಇವನು ಇಷ್ಟ ಅದನೆ ಎಂದು ಕೇಳುವ ಅಪ್ಪ ಅಮ್ಮ. ಹೂ ಅಪ್ಪ ಇಷ್ಟ ಅಂತ ಅಥವಾ ಇಲ್ಲ ಅಪ್ಪ ಇಷ್ಟವಾಗಲಿಲ್ಲ ಎಂದು ಹೇಳುವುದಾದರೂ ಹೇಗೆ. ನೋಡದೆ ಮಾತಾಡದೆ, ತಿಳಿಯದೆ ಕೇವಲ ರೂಪ, ಕೆಲಸ ಹಾಗು ಮನೆತನ ನೋಡಿ ಏನಾದರು ಹೇಳಲು ಸಾಧ್ಯವೇ? ಎಂದು ನಾನು ಕೇಳಿದಾಗಲೆಲ್ಲ, ಅವರದ್ದು ಒಂದೇ ಪ್ರಶ್ನೆ, ಫೋಟೋ ನೋಡಿ ಮುಂದುವರಿಸಬಹುದೇ ಇಲ್ಲವೇ ಎಂದು ನೀನು ಹೇಳಿದರೆ ಸಾಕು ಅಂತ. ಅವರು ಸಾಮಾನ್ಯವಾಗಿ ತೋರಿಸುವ ಯಾರನ್ನು ಬೇಡ ಅನ್ನುವ ಹಾಗಂತೂ ಇರುವುದಿಲ್ಲ, ಆದರೂ ನನಗೆ ಉತ್ತರಿಸಲು ಹಿಂಸೆಯಾಗುವಂತಹ ಪ್ರಶ್ನೆಗಲ್ಲನು ಏಕೆ ಕೇಳುತ್ತಾರೆಂದು ಅರ್ಥವಾಗುವುದಿಲ್ಲ. ಅವರು ಮಾಡುತ್ತಿರುವುದು ತಪ್ಪೆಂದಲ್ಲ, ಆದರೆ ಅದು ನನಗೆ ಸರಿಬರುತ್ತಿಲ್ಲ.
ಹೂ ಸರಿ ಚೆನ್ನಾಗಿರುವ. ಮಾತು ಮುಂದುವರಿಸಬಹುದು ಎಂದು ಹೇಳಲು ಬಹಳ ಹಿಂಸೆ. ಅಳುವೇ ಬರುತ್ತದೆ. ಇಷ್ಟು ಸರಳ ವಾಕ್ಯವೇಳಲು ಯಾಕಿಷ್ಟು ಕಷ್ಟವೆಂದು ನನಗರಿಯದು. ನನ್ನಿಂದ ಮನೆಯವರಿಗೆಲ್ಲ ಕಷ್ಟವೆಂಬ ಅಪರಾಧಿ ಭಾವ ಬೇರೆ. ಇದೆಲ್ಲ ಒಂದು ಕಡೆಯಾದರೆ, ಮತ್ತೊಂದೆಡೆ ಯಾರನ್ನು ಭೇಟಿ ಮಾಡಿದರು, ಸೇಮ್ ರೊಟೀನ್ ಪ್ರಶ್ನೆಗಳು. ನಿಮಗೆ ಏನು ಇಷ್ಟ, ಯಾವ ಬಣ್ಣವಿಷ್ಟ, ನಿಮ್ಮ ಹುಡುಗನಲ್ಲಿ ಏನನ್ನು ಬಯಸುತ್ತೀರಿ, ಮದುವೆಗೆ ಸಿದ್ಧವಿರುವಿರಾ ಅಥವಾ ಮನೆಯವರ ಒತ್ತಡವೇ? ಪಿಹೆಚ್ಡಿ ಯಾವಾಗ ಮುಗಿಯುವುದು? ಮುಂದಿನ ಪ್ಲಾನ್ಸ್ ಏನು? ಅದೇ ರಾಗ, ಅದೇ ತಾಳ.

ದೇವರೇ, ಸಾಕಾಗಿದೆ ಬಹಳ ಸಾಕಾಗಿದೆ, ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಕೊಟ್ಟು, ಆ ಉತ್ತರದ ಮೇಲೆ ನನಗೆ ಸಂಶಯ ಶುರುವಾಗಿದೆ. ಹೌದೇ? ನನಗೆ ಹಸಿರು ಬಣ್ಣವಿಷ್ಟವೇ? ಹೌದ ನನಗದು ಬೇಕಾ, ಇದು ಬಯಸಿರುವೆನೇ? ಹೌದ ಅದು ಸರಿಯೇ, ಇದು ತಪ್ಪೇ? ಒಂದು ಅರಿವಿಗೆ ಸಿಗುತ್ತಿಲ್ಲ. ಈ ಪ್ರಶ್ನೆಗಲ್ಲನೆಲ್ಲ ಕೇಳದೆಯೇ, ಹಾಗೆಯೇ ನನ್ನನು ಅರ್ಥ ಮಾಡಿಕೊಳ್ಳುವವರು ಯಾರು ಇಲ್ಲವೇ? ಅಥವಾ ಅದು ಸಾಧ್ಯವೇ? ನನಗರಿಯದು. ಒಬ್ಬ ವ್ಯಕ್ತಿ ಏನೆಂದು ಸಂಪೂರ್ಣವಾಗಿ ಯಾರಿಗೂ ಅರಿಯಲು ಸಾಧ್ಯವಿಲ್ಲ. ನಾನೇನೆಂಬ ಸಂಪೂರ್ಣ ಅರಿವು ನನಗಿಲ್ಲದೆಯೆ, ಬೇರೆಯವರಿಗದು ಹೇಗೆತಾನೆ ಅರಿವಿಗೆ ಬರಲು ಸಾಧ್ಯ? ಹೀಗಿರುವಾಗ ಒಮ್ಮೆ ಭೇಟಿಯಾದ ವ್ಯಕ್ತಿಯನ್ನು ಮದುವೆಯಾಗಲು ಓಕೆ ಮಾಡುವುದಾದರೂ ಹೇಗೆ? ಹಾಗಂತ ಪದೇ ಪದೇ ಅವರನ್ನು ಭೇಟಿಯಾದರು ಅದರ ಔಟ್ಪುಟ್ ಏನು ಬದಲಾಗದು ಎಂಬುವುದು ಒಂದು ವಾದ. ಆದರೆ, ಪದೇ ಪದೇ ಭೇಟಿಯಾದರೆ, ಅವರ ಮೇಲೆ ಭಾವನೆಗಳು ಮೂಡಭಹುದಲ್ಲವೇ? ಅವರ ಯಾವುದೊ ಸಣ್ಣ ಸಣ್ಣ ವಿಷಯದ ಮೇಲೆ ನಮಗೆ ಪ್ರೀತಿ ಮೂಡಭಹುದಲ್ಲವೇ? ಅಥವಾ ಅಸಮಾಧಾನ, ಕೋಪ? ಆದರೆ ಇದ್ಯಾವುದಕ್ಕ್ಕೂ ನಮ್ಮ ಸಮಾಜ ಅವಕಾಶ ಮಾಡಿಕೊಡುವುದಿಲ್ಲ.
೨೦೦ ರೂಪಾಯಿ ಬೆಲೆ ಬಾಳುವ ಹರಿದು ಹೋಗುವ ಅಂಗಿಯನ್ನು ಖರೀದಿಸುವಾಗ ೨ ಬಾರಿ ಯೋಚಿಸುವ ಜನಗಳು, ಜೀವನ ಪೂರ್ತಿ ಜೊತೆಗಿರಬೇಕಾದ ವ್ಯಕ್ತಿಯ ಆಯ್ಕೆ ಅಷ್ಟು ಕಮ್ಮಿ ಸಮಯದಲ್ಲಿ ಹೇಗೆ ತಾನೇ ಮಾಡಿಯಾರು? ಗಟ್ಸ್ ಫೆಲ್ಲಿಂಗ್ಸ್ ಮುಖಾಂತರ ಹೋಗುವಂತಹ ವಿಷಯವೇ ಇದು? ಲಾಜಿಕಲ್ ರಷನಲೆ ಎಂಬುದು ಸ್ವಲ್ಪವಾದರೂ ಇರಬೇಕಲ್ಲವೇ?

 ಜೀವನದ ಎಲ್ಲವಿಷಯವನ್ನು ವಿಜ್ಞಾನದ/ ತರ್ಕಬದ್ಧವಾಗಿ ಮಾಡುವೆ ಎಂಬುದು ಸುಳ್ಳು. ನಮ್ಮಿಂದ ವಿಜ್ಞಾನವೇ ಹೊರತು ವಿಜ್ಞಾನದಿಂದ ನಾವಲ್ಲ.  ಫಾರ್ ದಿ ಮೊಮೆಂಟ್ ಲೆಟ್ಸ್ ಫರ್ಗೆಟ್ ಅಬೌಟ್ ಸೈನ್ಸ್ ಆಫ್ ಲವ್, ಲಸ್ಟ್, ಸೈಕಾಲಜಿ ಆಪ್ ಲವ್ ಅಂಡ್ ಅಟ್ರಾಕ್ಶ್ನ್ / ಸಧ್ಯದ ಮಟ್ಟಿಗೆ ಪ್ರೀತಿ, ಪ್ರೇಮ, ಮೋಹ, ಆಕರ್ಷಣೆ, ಕಾಮಗಳ ಹಿಂದಿರುವ ವಿಜ್ಞಾನವನ್ನು ಮರೆಯೋಣ/ಪರಿಗಣಿಸುವುದು ಬೇಡ. ನಮ್ಮ ಕವಿಮಹಾಶಯರ ಪ್ರಕಾರವೇ ಹೋಗೋಣ. ಪ್ರೀತಿ ಮೂಡಲು ಕೆಲವೇ ಕ್ಷಣ ಸಾಕು, ನಿನ್ನ ಕಣ್ನೋಟವೆ ಸಾಕು, ಮುದ್ದಾದ ಆ ನಗುವು ನನಗೆ ಬೇಕು ಎನ್ನುವುದು ನಿಜವೇ ಇರಬಹುದು, ಆದರೆ ಈ ಪ್ರೀತಿಯನ್ನು ಉಳಿಸಿ, ಬೆಳೆಸಿ, ನಿಭಾಯಿಸುವ ಬಗ್ಗೆ ಕ್ಷಣಾದ್ರದಲ್ಲಿ ನಿರ್ಧರಿಸುವುದಾದರೂ ಹೇಗೆ? ನಾನೇನೋ ಎಲ್ಲದಕ್ಕೂ ಹೊಂದಿಕೊಂಡು ಹೋಗುವೆ ಎಂಬ ಭರವಸೆ ನಿಮಗೆ ನಿಮ್ಮಮೇಲೆ ಇರಬಹುದು. ಆದರೆ ಅವರು ಹಾಗೆಯೆ ಇರಬೇಕಿಂದಲ್ಲ. ಅದು ಅವರವರಿಷ್ಟ. ಬೆಳೆದುಬಂದ ರೀತಿ ನೀತಿ.
ಮದುವೆ ಎಂಬ ಮೂರಕ್ಷರದ ಪದ ಅಷ್ಟು ಸುಲಭವಲ್ಲ. ಇಬ್ಬರು ಒಬ್ಬರಾಗಿರಬೇಕು. ಎತ್ತು ಏರಿಗೆಳಿಯಿತು, ಕೋಣ ನೀರಿಗೆಳೆಯಿತು ಯೆಂದಾಗಬಾರದಲ್ಲವೇ. ನಿನ್ನ ನಿರ್ಧಾರಗಳು ಕೇವಲ ನಿನ್ನದಾಗಿರದು, ಅದು ನಿಮ್ಮದಾಗಿರಬೇಕು. ಕೆಲಸದಿಂದ ದಣಿದು ಮನೆಗೆ ಬಂದಾಗ ಅವರ ಮುದ್ದಾದ ಮೊಗದಲೊಂದು ದಣಿವಾರಿಸುವ ನಗೆಯೊಂದು ಇರಬೇಕು. ಅದು ಬಿಟ್ಟು ಅವನ ಮುಖ ಒಂದು ಕಡೆ, ಇವಳ ಮುಖ ಇನ್ನೊಂದು ಕಡೆ ಎಂಬಂತಿದ್ದರೆ ದಣಿವು ಕೋಪವಾಗಿ ಬದಲಲು ಹೆಚ್ಚು ಸಮಯ ಬೇಡ. ಕೋಪ ನೋವಾಗಲು. ನೋವು ದ್ವೇಷವಾಗಲು. ಜೀವನದಮೇಲೆ ಜಿಗುಪ್ಸೆ ಮೂಡಲು.
ಜೀವನದ ಕಟ್ಟಕಡೆಯ ಉದ್ದೇಶ ನೆಮ್ಮದಿ, ಪ್ರೀತಿ. ಕೋಟಿ ಸಂಪಾದಿಸಿದರೇನು ನೆಮ್ಮದಿಯಿಲ್ಲದ ಜೀವನ, ಜೀವನವೇಯಲ್ಲ. (ನೆಮ್ಮದಿಯ ಜೊತೆ ಕೋಟಿಯಿದ್ದರೆ "ಸೋನೇ ಫೆ ಸುಹಾಗ" ಅದು ಬೇರೆಯ ವಿಷಯ. ಸದ್ಯಕ್ಕೆ ಬೇಡ.) ಹಾಗಾಗಿ ಕೇವಲ ಮುಖ ನೋಡಿ, ಹಣ ನೋಡಿ, ಗುಣವ ಅರಿಯುವುದು ಸ್ವಲ್ಪ ಹೆಚ್ಚೇ ಕಷ್ಟ.

ದಿಕ್ಕೇ ತೋಚದಿರುವಾಗ ಅಪ್ಪನ ಮಾತುಗಳ ಆಶ್ರಯಬೇಕು ನನಗೆ. ಆದರೆ ಇದರಬಗ್ಗೆಯೆಲ್ಲ ಚರ್ಚಿಸಲು ಮನೆಯೇ ವಾತಾವರಣ ಸರಿ ಮೂಡದು. ಒಬ್ಬರು ಕೋಪ ಮಾಡಿಕೊಂಡರೆ, ಮತ್ತೊಬರು ನೋವು ಮಾಡಿಕೊಂಡು ಮೌನದಿ ಕಣ್ಣೀರು ಸುರಿಸುವರು. ಮನೆಯವರಿಗೆಲ್ಲ ಇದರ ಬಗ್ಗೆ ಕೂತು ಮಾತನಾಡುವ, ಒಂದು ಆರೋಗ್ಯಕರವಾದ ಚರ್ಚೆ ಮಾಡುವ ವ್ಯವಧಾನ, ಸಮಾಧಾನವಾಗಲಿ ಇಲ್ಲಾ. ನನಗೆ ತಿಳಿಯದ ವಿಷಯದಬಗ್ಗೆ ತಿಳಿಹೇಳುವ ಮನಸ್ಸಿಲ್ಲ. ಇದೆಲ್ಲದರ ನಡುವೆ ಸಿಲುಕಿ ತಲೆ ಕೆಡುವ ಮುನ್ನ ನನಗೆ ನಾ ಸಾಂತ್ವನವೇಲಿದೆ. ಎಲ್ಲಾರ ಮನೆ ದೋಸೆ ತೂತು. ನಮ್ಮಮನೆಯ ದೋಸೆ ಇದರಿಂದ ಹೊರತೇನಲ್ಲ. ಎಲ್ಲಾರ ಜೀವನದಲ್ಲೂ ಈ ಸಮಯ ಬಂದಿರುತ್ತದೆ. ಎಲ್ಲರಿಗೂ ಒಂದು ಸಣ್ಣ ನಡುಕ ಬಂದಿರುತ್ತದೆಯೆಂದು.

ಅಪ್ಪ ಯಾವಾಗಲು ಹೇಳುತ್ತಾರೆ. ಖುಷಿಯಾಗಿರು. ನಿನ್ನ ಖುಷಿ ನನಗೆ ಬಹಳ ಮುಖ್ಯವೆಂದು.
ಜೀವನದ ಎಲ್ಲಾ ನೋವಿನ ಘಟ್ಟದಲ್ಲೂ, ಹಿಂಸೆಯ ಸಮಯದಲ್ಲೂ, ಉಸಿರುಗಟ್ಟಿಸುವ ವಾತಾವರಣದಲ್ಲೂ ತಮಾಷೆ ಮಾಡಿ ನಗಿಸುವ ನಮ್ಮಪ್ಪ ನನ್ನ ನಿಜ ಸ್ನೇಹಿತ.
ಅವರು ಮದುವೆಯ ಬಗ್ಗೆ ಹೇಳಿದ ಒಂದೇ ಮಾತೆಂದರೆ, "ಮಗಳೇ, ಮದುವೆಯೆಂದರೆ ಮಧು'ವ್ಯ' ". ಮೊದಲಿಗೆ ಮಧು (ಮಧು ಚಂದ್ರಮ). ನಂತರ ವ್ಯಾ(ಉಲ್ಟಿ/ವೊಮಿಟ್/ಕಾರುವುದು). ಎಂದು ಹೇಳಿ ನಕ್ಕಿದ್ದರು. ಇದು ಇಷ್ಟು ಸರಳ ವಾಕ್ಯವಲ್ಲ. ಇದರ ಹಿಂದೆಯೂ ಬಹಳ ಘಡತೆಯಿದೆ ಅವರ ಬೇರೆ ಮಾತುಗಳಂತೆ. ಆದರೆ ಅರ್ಥೈಸಿಕೊಳ್ಳುವಷ್ಟು ದೊಡ್ಡವಳಾಗಿಲ್ಲ ನಾನು.

ಜೀವನ ಚಕ್ರ ಚಲಿಸುತ್ತಲ್ಲೇ ಇರುತ್ತದೆ. ಜೀವನ ಬಂದಂತೆ ಸ್ವೀಕರಿಸಬೇಕು.
ಮುಂದೇನು ಅನ್ನುವುದಕ್ಕಿಂದ, ಇಂದು ಆರಾಮವಾಗಿ ನನಗಿಷ್ಟ ಬಂದಂತೆ ಇರೋಣ. ಬೆಚ್ಚಗೆ ಹೊದೆದು ಮಲಗೋಣ.



Friday, 26 January 2018

ಮಾಧುರಿ ಶಂಕರ್

ನಿನ್ನ ಫೇಸ್ಬುಕ್ ಹೆಸರು ಮಾಧುರಿ ಶಂಕರ್ ಯಾಕೆ? ನೀನು ಮಾಧುರಿ ಭಟ್ ಅಲ್ವ? ಅಂತ ನನ್ನ ಸ್ನೇಹಿತೆ ಕೇಳಿದಳು.
ಮತ್ತೆ ಹಲವು ಹಳೆಯ ಶಾಲಾ ಸ್ನೇಹಿತರು ನನಗೆ ಮದುವೆಯಾಗಿದೆ ಎಂದು ಮೆಸೇಜ್ ಕಳುಹಿಸಿದರು. ಇದು ಕೇವಲ ಇಂದು ನೆನ್ನೆಯ ವಿಷಯವಲ್ಲ, ಅವಾಗವಾಗ ಅವರಿವರು ಕೇಳುವ ಪ್ರಶ್ನೆ, ಹೊಸದಾಗಿ ಪರಿಚಯವಾದವರನ್ನು ಹೊರೆತು ಪಡಿಸಿ.
ಅವರೆಲ್ಲರ ಪ್ರಶ್ನೆಗೆ ಕೇವಲ ನನ್ನ ನಗುವೊಂದೇ ಉತ್ತರವಾಗಿತ್ತು. ಒಂದು ಹುಡುಗಿಯ ಮುಂದಿರುವ ಹುಡುಗನ ಹೆಸರಿಗೆ ಅಷ್ಟು ಮಹತ್ವವಿದೆಯೆ? ನನಗದೆಲ್ಲ ತಿಳಿದಿಲ್ಲ. ನನ್ನ ಫೇಸ್ಬುಕ್ ಹೆಸರಿನ ಹಿಂದುರುವುದು ಒಂದು ಸಿಂಪಲ್ ಲಾಜಿಕ್ ಇಷ್ಟೇ, ಬೇರೇನೂ ಕಥೆಯಿಲ್ಲ. ನನ್ನಪ್ಪನ ಹೆಸರು ಶಂಕರ ನಾರಾಯಣ ಭಟ್. ನನ್ನ ಅಣ್ಣ ನನಗಿಂತ ಮೊದಲೇ ಫೇಸ್ಬುಕ್ ಅಕೌಂಟ್ ತೆರೆದಿದ್ದ. ಫೇಸ್ಬುಕ್ ಹೆಸರು ಮುರಳಿ ನಾರಾಯಣ ಅಂತ ಕೊಟ್ಟಿದ್ದ. ಅದಕ್ಕೂ ಬೇರೇನೂ ಕಾಥೆಯಿಲ್ಲ, ಸುಮ್ಮನೆ ಶೋಕಿಗಷ್ಟೇ. (ಈ ಫೇಸ್ಬುಕ್ನಾವೂರು ಸಹ ಸರಿಯಿಲ್ಲ. ಅಕೌಂಟ್ ಕ್ರಿಯೇಟ್ ಮಾಡ್ಬೇಕಾದ್ರೆ, ಫಸ್ಟ್ ನೇಮ್, ಲಾಸ್ಟ ನೇಮ್, ಸುರನಮ್ ಅಂತ ಎಲ್ಲಾ ತಲೆ ತಿಂದ್ರೆ, ಪಾಪ ನನ್ನಣ್ಣ ಇನ್ನೇನು ಮಾಡ್ತಾನೆ, ಫುಲ್ ಬುದ್ಧಿವಂತಬೇರೆ, ಎಲ್ಲೋ ಲಾಸ್ಟ ನೇಮ್ ಅಂತ ಕೇಳಿರ್ಬೇಕು, ಅವನ ಲಾಸ್ಟ ನೇಮ್ ನಾರಾಯಣ್ ತಾನೆ, ಅದಕ್ಕೆ ಹಾಗೆ ಕೊಟ್ಟಿರ್ತಾನೆ.) ನನ್ನಪ್ಪನ ಅರ್ಧ ಹೆಸರನ್ನು ಮಾತ್ರ ಅವನಲ್ಲಿ ಹಾಕಿಕೊಂಡಿದ್ದ, ಬಾಕಿ ಇರುವ ಇನ್ನರ್ದ ಯಾರದ್ದು? ನನ್ನದೇ ಅಲ್ಲವೇ? ಹಾಗಾಗಿ ನಾನು ಮಾಧುರಿ ಶಂಕರ್ ಅದೇ ಅಷ್ಟೇ. ನನ್ನ ನಿಜ ಹೆಸರು ಮಾಧುರಿ ಶಂಕರ್ ಅಲ್ಲ, ಮಾಧುರಿ ಭಟ್ ಸಹ ಅಲ್ಲ. ನಾನು ಮಾಧುರಿ ಶಂಕರ್ ನಾರಾಯಣ್ (ಮಾಧುರಿ ಎಸ್ ಎನ್). ಇದನ್ನೆಲ್ಲ ಯಾರಿಗೆ ಹೇಳ್ಕೊಂಡು ಕೂರೋದು, ತುಂಬ ಬೋರಿಂಗ್ ಆಗಿದೆ.
ಆದ್ರೆ ಇಷ್ಟೆಲ್ಲದರ ಮದ್ಯೆ, ನನಗೆ ನನ್ನ ಫೇಸ್ಬುಕ್ ನೇಮ್ ಬಹಳಾನೇ ಇಷ್ಟವಾಗೊಕ್ಕೆ ಶುರುವಾಗಿದೆ. ನನ್ನ ಸ್ನೇಹಿತ ನನ್ನನ್ನು ಮಿಸ್ ಶಂಕರ್ ಎಂದು ಕರೆದಾಗಲೆಲ್ಲ ಒಂತರ ಖುಷಿಯಾಗುತ್ತದೆ. ನನ್ನ ಹೆಸರು ಮುದ್ದಾಗಿದೆ ಅನಿಸುತ್ತದೆ, ನನ್ನ ಅಪ್ಪನ ಹಾಗೆ.

ನನಗೆ ಇನ್ನೊಂದು ಡೌಟ್, ನನ್ನ ಬ್ಲಾಗ್ ಅನ್ನು ಯಾರಾದರೂ ಓದಲು ಶುರುಮಾಡಿದರೆ, ಅವರು ನನ್ನ ಬ್ಲಾಗ್ ನೇಮ್ ಮಧುರ ಅಂತ ಯಾಕಿದೆ ಎಂದು ಕೇಳಬಹುದು. ಅಥವಾ ನನ್ನ ಕಾವ್ಯ/ಅಂಕಿತ ನಾಮವೇ ಎಂದು ಕೇಳಬಹುದು. ಆ ಹೆಸರಿಂದಿರು ವಿಷಯವನ್ನು ಮುಂದೊಂದು ದಿನ ಹೇಳುವೆ. 

Just go to hell

26-01-2018

The worst day of the year.
Saying goodbye,
goodbye forever,
to one of the best persons,
I ever meet.

Tomorrow he will be flying back.
Back to his place.

I'm angry,
Very angry!
Though I understand,
I don't want to understand.
I wanna stay angry,
Very angry.

Wednesday, 24 January 2018

ಅಶ್ರಗ

ನನ್ನ ಜೀವನದ ಅಶ್ರಗ ಅವನು.
ಅವನು ಬಳಿಯಿದ್ದರೆ ನನ್ನೊಳಗಿರುವ ಎಲ್ಲಾ ಬಣ್ಣಗಳ ಪರಿಚಯ.
ಅವನೀಡಿವ ಕುಂಚ ನನ್ನ ಬಣ್ಣವ ನಿರ್ಧರಿಸುತ್ತದೆ.
ಹಾಗಾದರೆ ನನ್ನ ಸ್ವಂತತೆ ಏನು?
ಮೈದುಬ್ಬಿಕೊಂಡಿರುವ ಬಣ್ಣವೇ?
ಅಥವಾ ನನ್ನ ಬಣ್ಣವ ನನಗೆ ಪರಿಚಯಿಸಿ, ಅವನಿಗ್ಯಾವುದು ಬೇಕೆಂಬುದರ ನಿರ್ಧರಿಸುವ ಅವನೇ?



(ಅಶ್ರಗ; ಪದದ ಪರಿಚಯ ನನ್ನ ತಮ್ಮ ಕೋತಿ ತಿಮ್ಮನಿಂದ. ಅವನ ಹುಚ್ಚುತನದ ಪರಿಚಯ ಬಯಸಿದಾದಲ್ಲಿ ಈ ಲಿಂಕ್ ಅನ್ನು ಕ್ಲಿಕ್ಕಿಸಿ/ಬಳಸಿ ನೋಡಿ [ http://ashraga.blogspot.in/2017/06/blog-post_23.html ] )  

Waiting

ಯಾಕಿ ಕಾಯುವಿಕೆ?
ಅವನಿಗಾಗಿಯೆ? ಅವನಿಗಿದು ತಿಳಿದಿದೆಯೇ?
ಒಂದು ರೀತಿಯ ತಿಳಿಯದ ನಂಬಿಕೆ, ಗಾಢನಂಭಿಕೆ ಅವನಿಗಾಗಿ ಕಾವುಯುವುದರಲ್ಲಿ.
ಆದರೆ ಕೆಲವೊಮ್ಮೆ ಅಸಾಧ್ಯ ಅಳುಒಂದು ಮೂಡುವುದು, ಬಹಳ ಬೇನೆ ನೀಡಿ.
ಯಾಕೀಗೆ?
ಯಾಕೀಗೆ?
ಮಾನವನ ಸಹಜಗುಣವಿದಿರಬಹುದೇ?

ಕಾಯಿಸಿ ಕಾಡಿದ ಅವನು ಬಂದ ನಂತರ ತಿಳಿಯುವುದು ನನ್ನ ಮೂರ್ಖತನ.
ಏತ್ತಕ್ಕಾಗಿ ಅವನನ್ನು ಕಾದಿದ್ದೆ? ಯಾಕಿಷ್ಟು ಕಡುಬಯಕೆ ಮೂಡಿತ್ತು? ನಾನೆಷ್ಟು ದಡ್ಡಿ ಎಂದೆಲ್ಲ ಅನಿಸಿ ನಗುವುದುಂಟು ಮುಜುಗರದಿಂದ.

ಕಲಿತ ಬುದ್ದಿ ಕ್ಷಣಿಕ, ಮರುದಿನ ಮತ್ತದೇ ಕಾಯುವಿಕೆ, ಅವನಿಗಾಗಿ, ಒಮ್ಮೆನೋಡಿ ಮಾತಾಡುವುದ್ದಕ್ಕಾಗಿ.

Tuesday, 23 January 2018

ಪಾಪದ ಮಾಣಿ

೨೩-೦೧-೨೦೧೮

ಸುಂದರವಾದ ಕಪ್ಪು ಬಿಳುಪಿನ ಭಾವಚಿತ್ರವೊಂದು ಇಂದು ಅವನ ಡಿಸ್ಪ್ಲೇ ಪಿಕ್ಚರ್ ಆಗಿತ್ತು, ಜೀವನದ ತನ್ನೆಲ್ಲಾ ಬಣ್ಣಗಳ ಹೊತ್ತು. ಹೆತ್ತಮ್ಮನಿಗೆ ಹೆಗ್ಗಣ್ಣ ಮುದ್ದು ಅನ್ನುವ ಹಾಗೆ, ನಮಗಿಷ್ಟ ಆದವರು ಹೇಗಿದ್ದರೂ ಚೆಂದ. ಆದರೆ ನನಗೆ ಬಲು ನಂಬಿಕೆಯಿದೆ ಇವನು ಹೆಗ್ಗಣ ಅಲ್ಲ, ನಾನಂತು ಹೆತ್ತಮ್ಮನಲ್ಲ, ಇವನೆಂದರೆ ಇಷ್ಟ ಅಷ್ಟೇ. ಹಾಗಾಗಿ ನಿಜವಾಗಿಯೂ ಇವ ಚೆಂದವೇ ಇರುವ. ಸಪೂರವಾಗಿ ಉದ್ದ ಉದ್ದವಿರು ಎರೆಡು ಕೈಯ್ಯ ಬೆರಳುಗಳನ್ನು ಒಟ್ಟಿಗೆ ಸೇರಿಸಿ, ಮಡಚ್ಚಿದ್ದ  ತನ್ನ ಉದ್ದಾನೆಯೇ ಕಾಲುಗಳ ಮಂಡಿಯಮೇಲೆ ಇರಿಸಿದ್ದ. ರಸವೀರಿದ ಕಬ್ಬಿಣ್ಣ ಜಲ್ಲೆಯೇ ಹಾಗೆ ನಡುಬಾಗಿಲಿನ ಮೂಲೆಯಲ್ಲಿ ಕುಳಿತು ಕೊಂಚ ಗಾಂಭೀರ್ಯದಿಂದ ತನ್ನ ದೃಷ್ಟಿಯನ್ನು ಮತ್ತೆಲ್ಲೋ ಹಾಯಿಸಿದ್ದ, ಛೇ ಒಬ್ಬ ಒಳ್ಳೆಯ ಫೋಟೋಗ್ರಾಫರ್ ಅನ್ನು ನೋಡಿ, ಅವನ ಕ್ಯಾಮೆರಾ ಕಣ್ಣುಗಳ್ಳನು ಕಂಡು ನಕ್ಕು ಅಣುಕಿಸಲಾರೆ ಎಂಬಂತೆ. ಆದರೆ ನನ್ನಕಣ್ಣಿಗದು ಬೇರೆಯ ರೀತಿಯಲ್ಲಿ ಕಂಡಿತ್ತು. ಒಬ್ಬ ಪಾಪದ ಮಣಿಯ ಹಾಗೆ, ಭಾವಚಿತ್ರ ನೋಡಿದ ಕೂಡಲೇ ಸ್ವಲ್ಪ ಹೆಚ್ಚೇ ಮುದ್ದು ಮುದ್ದು ಅನಿಸಿದ್ದ.  ಅವನ ಕಣ್ಣಿನಲ್ಲಿ ಏನೋ ಅಸಮಾಧಾನ, ನನ್ನನ್ನು ಬಿಟ್ಟುಬಿಡಿ ದಯವಿಟ್ಟು ಎಂಬ ಸಣ್ಣನೆಯ ಕೋಪ. ಇವಾ ಕೂತ ಶ್ಯಲಿ, ಆ ಜಾಗ, ಆ ನೋಟ, ಏನೋ ನನಗಂತೂ ಏನು ಹೇಳಬೇಕು ತೋಚುತ್ತಿಲ್ಲ. ಮನೆಗಳಲ್ಲಿ ನಡೆವ ವಾದವಿವಾದದ ಚಿತ್ರಒಂದು ಕಣ್ಮುಂದೆ ಬಂದು ಓಡಿ ಹೋಗಿತ್ತು. ತನ್ನವಾದ ಮಂಡಿಸಿಲಾಗದೆ ಪೇಚಾಡುತ್ತಿದ್ದ ಪಾಪದ ಮಾಣಿಯಾಗಿ ಇವಾ ಕಂಡಿದ್ದ. 

Sunday, 21 January 2018

Random

ಏನಾದರು ಮಾತನಾಡು,
ಮಾತನಾಡು,
ಮನಸ್ಸಿಗೆ ತೋಚಿದ್ದು,
ಅಥವಾ ಎಂದಾದರೂ ಪುಸ್ತಕದ ಕಾಲಿ ಹಾಳೆಯಲ್ಲಿ ಗೀಚಿದ್ದು,
ಅಥವಾ ನಿನ್ನ ಹುಚ್ಚುತನ,
ನಿನ್ನ ಯೋಚನೆ,
ಏನಾದರು ಸರಿಯೇ, ಮಾತನಾಡು,
ಏನು ಮಾಡುತ್ತಿರುವೆ, ಏನು ತಿನ್ನುತ್ತಿರುವೆ,
ಸುಮ್ಮಸುಮ್ಮನೆ ಏನಾದರು ಮಾತನಾಡು,
ನನ್ನಗೆ ನಿನ್ನ ಮಾತು ಕೇಳಬೇಕೀಗ,
ನನ್ನೊಂದಿಗೆ ನೀನು ಆಡುವು ಇಲ್ಲದ, ಸಲ್ಲದ, ಬೇಡದ, ಬೇಕಾದ ಮಾತನ್ನು ಕೇಳಬೇಕೀಗ.
ನಿನ್ನ ಸ್ವರತರಂಗಗಳ ಸ್ಪರ್ಶಿಸ ಬೇಕೀಗ. ಮಾತನಾಡು.
ಏನನ್ನಾದರೂ ಮಾತನಾಡು. 

Tired

ಸುಸ್ತಾಗಿದೆ.

ಬಂದು ಹೋಗುವ ಬಂಧುಗಳಿಂದ, ಸುಸ್ತಾಗಿದೆ ನನಗೆ.
ನಮ್ಮವರನ್ನು ಅರ್ಥಮಾಡಿಕೊಂಡು,ಸುಸ್ತಾಗಿದೆ ನನಗೆ. 
ನನ್ನ ಬರಿದಾಗುತ್ತಿರುವ  ಭಾವನೆಗಳಿಂದ, ಸುಸ್ತಾಗಿದೆ ನನಗೆ.

ನನ್ನ ನಾನು ಹುಡುಕ ಹೋದಷ್ಟು ಕಳೆದು ಹೋಗುತ್ತಿರುವೆ.
ನನ್ನ ನಾನು ಅರ್ಥ ಮಾಡಿಕೊಂಡಷ್ಟು ನನ್ನಿಂದ ನಾನು ದೂರವಾಗುತ್ತಿರುವೆ.
ಬೇಡವಾದ ಸುಳಿಗೆ ನಾನೇ ಹೋಗಿ ಸಿಲುಕಿ ನಲುಗಿ ಹೋಗುತ್ತಿರುವೆ.

ಜಾರಿ ಹೋಗುತ್ತಿರುವ ಮರಳು ರಾಶಿಯ ತಡೆದು ತಡೆದು, ಸುಸ್ತಾಗಿದೆ ನನಗೆ.
ಸಮಯದ ಕ್ರೂರತನದಿಂದ, ಸುಸ್ತಾಗಿದೆ ನನಗೆ.
ನಾನೇನು ಅಲ್ಲವೆಂಬ ವಿಷಯದ ಅರಿವಿದ್ದರೂ, ಎಲ್ಲವನ್ನು ಸರಿ ಮಾಡಹೋಗಿ, ಸುಸ್ತಾಗಿದೆ ನನಗೆ. 

ಸುಸ್ತಾಗಿದೆ ನನಗೆ, ನನ್ನಿಂದ ನನಗೆ ಸುಸ್ತಾಗಿದೆ.


Friday, 19 January 2018

ಥಟ್ ಅಂತ ಹೇಳಿ

೧೯-೦೧-೨೦೧೮
೧೧.೫೭ AM

ಚಂದನ ಟಿ.ವಿ. ಯಲ್ಲಿ ಬರುವ ಡಾ. ನಾರಪ್ಪ ಸೋಮೇಶ್ವರರವರು ನಡಿಸಿಕೊಡುವ ಕಾರ್ಯಕ್ರಮದ ಹೆಸರು, 'ಥಟ್ ಅಂತ ಹೇಳಿ'.
ಇಂದು ಈ ಹೆಸರನ್ನು ನಾನೇಕೆ ಇಲ್ಲಿ ಬಳಸುತ್ತಿದ್ದೇನೆ, ನನ್ನ ಪೋಸ್ಟ್ಗು ಇದಕ್ಕೂ ಏನು ಸಂಭಂದಯಂಬ ಪ್ರಶ್ನೆಯೇ? ಇದಕ್ಕೆ ಉತ್ತರ ನನಗು ತಿಳಿದಿಲ್ಲ. ಲ್ಯಾಬ್ನಲ್ಲಿ ಕುಳಿತು ಏನನ್ನೋ ಓದುತ್ತಿದ್ದೆ. ಓದುತ್ತ ಇದ್ದಂತೆ ಥಟ್ ಅಂತ ನನ್ನೊಬ್ಬ ಸ್ನೇಹಿತ ನೆನಪಾದ, ಕಾರಣ ಇಷ್ಟೇ, ನಾ ಓದುತ್ತಿದ್ದ ವಿಷಯ ಅವನಿಗೂ ರುಚಿಸಬಹುದೆಂಬ ಕಲ್ಪನೆ. ತಗೋಳಪ್ಪಾ, ಅವನ್ನನು ನೆನಪಿಸಿಕೊಳ್ಳುತಿದಂತೆ ಥಟ್ ಅಂತ ಅವನ ಸಂದೇಶ ನನ್ನ ಸಂಚಾರಿವಾಹಿನಿಯಲ್ಲಿ. "ಅಚ್ಚ" ಅಂತ. ಯಾಕೆ ಅಚ್ಚ ಅನ್ದನೋ ನನ್ಗೆ ಗೊತ್ತಿಲ್ಲ, ಚಾಟ್ ಹಿಸ್ಟ್ರಿ ಕ್ಲಿಯರ್ ಆಗಿತ್ತು. ಆದ್ರೂ ಆ ಸಮಯದಲ್ಲಿ ಅವನ ಸಂದೇಶ ನೋಡಿ ಥಟ್ ಅಂತ ಮುಖದಲ್ಲಿ ನಗು ಮೂಡಿತ್ತು. ಹಾಗಾಗಿ 'ಥಟ್ ಅಂತ ಹೇಳಿ'ನ ಬರೀಬೇಕು ಅಂತ ಅನ್ಸಿ ಥಟ್ ಅಂತ ಬರ್ದುಬಿಟ್ಟೆ.  

Tuesday, 16 January 2018

Smile

ನಗು. 
ಮನಸಾರೆ ನಗು. 

Everyone is unique


ನಿನ್ನ ಕಲ್ಪನೆಗೆ ತಕ್ಕಂತವನು ಅವನಿರಬಹುದು.
ಅವನ ಕಲ್ಪನೆಗೆ ತಕ್ಕಂತವಳು ನೀನಾಗಿರಬೇಕೆಂಬ ಯಾವುದೇ ನಿರ್ದಿಷ್ಠಗಳಿಲ್ಲ.
ಅವನ ಕಲ್ಪನೆಯ ಹುಡುಗಿಯ ಕಲ್ಪನೆಯ ಹುಡುಗ ನಿನ್ನ ಕಲ್ಪನೆಗೆ ತಕ್ಕಂತಿದ್ದ ಅವನಾಗಿರಬೇಕಿಲ್ಲ.
ಎಲ್ಲರಿಗು ಕಲ್ಪನೆಗಳಿರುವುವು ಎಂದು ಹೇಳಲು ಆಗುವುದಿಲ್ಲ. ಕಲ್ಪನೆಗಲ್ಲಿದ್ದರು ಅವು ನಿನ್ನ ಕಂಡು ಬದಲಾಗದೆಂದು ಹೇಳಲಾಗುವುದಿಲ್ಲ. ಕಲ್ಪನೆಗಳು, ಯೋಚನೆಗಳು, ಯೋಜನೆಗಳು ಹರಿವ ನದಿನೀರು. ಕಾಲಕ್ಕೆ ತಕ್ಕಂತೆ ಕೋಲಾ. ಅಷ್ಟಲ್ಲದೆಯೇ ಹಿರಿಯರು ಹೇಳಿಯಾರೇ 'ಕಾಗೆ ಮೆಚ್ಚಿದ ಬೇವು' ಎಂದು. ಎಲ್ಲರಿಗೂ ತಮ್ಮದೇಯಾದ ತಮ್ಮತನ, ಅಭಿರುಚಿ ಇರುತ್ತದೆ. ತಮ್ಮತನ ಇಲ್ಲದೆ ಇರುವವರು ಇರಬಹುದು. ಅದು ಸಹ ಒಂದು ರೀತಿಯ ತಮ್ಮತನವೆ.


Monday, 15 January 2018

ನೇಯ್ದ ಕನಸು

ಅದು ಹಗಲುಗನಸಲ್ಲ.
ಇರುಳುಗನಸಲ್ಲ.
ನನಗೇನು ಬೇಕೆಂಬ ಕನಸಲ್ಲ.
ಮುಂದೇನು ಎಂಬ ಕನಸಲ್ಲ. 
ಹೊಸದಾಗಿ ನೇಯ್ದ ಕನಸು.
ಕೆಲವೊಮ್ಮೆ ಕಣ್ಬಿಟ್ಟು,
ಕೆಲವೊಮ್ಮೆ ಕಣ್ಮುಚ್ಚಿ.
ಅವನನ್ನು ನೆನೆಯುತ್ತ.
ಹೇಗಿದ್ದಾರೆ ಹೇಗೆಂಬ ಕಲ್ಪನೆ ಮಾಡುತ್ತ,
ನಾನಾಗಿಯೇ ಒಂದೊಂದು ಕನಸುಗಳ ಜೋಡಿಸುತ್ತ ಕಟ್ಟಿದ ಕನಸು.

ಕುಪ್ಪಿ ಲೋಟ

ನನ್ನ ಜೀವನದಲ್ಲಿ ಸಂಭವಿಸಿದ ಅತ್ಯುತ್ತಮ ವಿಷಯ "ನನ್ನಣ್ಣ".
ಬೇರೆಯವರ ಮನೆ ವಿಷಯ ನಂಗೊತ್ತಿಲ್ಲ.
ನನ್ನಮ್ಮ ಮಾತ್ರ ಏನೇ ವಸ್ತು ತಂದ್ರು, ಎರೆಡೆರೆಡು ತರ್ತಿದ್ರು. ನನಗೊಂದು ಅಣ್ಣನಿಗೊಂದು.
ತಿನ್ನುವ ವಸ್ತುವಾಗಲಿ, ಬೇರೆ ಏನೇ ಆಗಲಿ, ನಮ್ಮಿಬರಿಗೆ ಸಮಾನ ಹಂಚುವಿಕೆ.
ಆದರೂ ಬೇಕಂತ ಜಗಳ ಆಡ್ತಿದ್ವಿ. ಹೊಡೆದಾಡಿದ್ದು ಇದೆ.

ಒಂದು ತುಣುಕು:
ಇದು ಬಹಳ ವರ್ಷದ ಹಿಂದಿನ ಕತೆ.
ಕುಪ್ಪಿ (ಗ್ಲಾಸ್) ಲೋಟದಲ್ಲಿ ಚಹಾ ಕುಡಿಯುವುದೆಂದರೆ ನನಗೆ ಹಾಗು ನನ್ನಣ್ಣನಿಗೆ ತುಂಬಾ ಇಷ್ಟ.
ಅದು ಸಹ ಸಣ್ಣ ಸಣ್ಣ ಕ್ಯಾಂಟೀನ್ಗಳಲ್ಲಿ ಕೊಡುವಂತಹ ಕುಪ್ಪಿ ಲೋಟ.
ಅದನ್ನರಿತ ಅಮ್ಮ, ಎರೆಡು ಕುಪ್ಪಿ ಲೋಟ ತಂದರು.
ಅಂದಿನಿಂದ ನನಗು ಅಣ್ಣನಿಗೂ ಅದರಲ್ಲಿಯೇ ಚಹಾ.
ಅದೊಂದು ದಿನ ಅದರಲ್ಲಿ ಒಂದು ಲೋಟ ಹೊಡೆದುಹೋಯ್ತು.
ಈಗ ಇರುವುದು ಕೇವಲ ಒಂದೇ.
ಇಂನೊಂದು ಲೋಟವ ಅಂಗಡಿ ಹೋಗಿ ತರಲು ಅಮ್ಮನಿಗೆ ಬೆಂಗಳೂರು ಗೊತ್ತಿಲ್ಲ. ಮಕ್ಕಳಾದ ನಮಗೆ ಸಮಯವಿಲ್ಲ.
ವಾರಕೊಮ್ಮೆ ಮನೆಗೆ ಬರುವ ನನಗೆ ಈಗಲೂ ಅಮ್ಮ ಅದೇ ಹಳೆಯ ಕುಪ್ಪಿ ಲೋಟದಲ್ಲಿ ಚಹಾ ಕೊಡುತ್ತಾರೆ.
ಅಣ್ಣ ಹುಸಿಮುನಿಸು ತೋರಿಸುತ್ತಾನೆ. ನಮ್ಮ ಕಾಗೆ ಜಗಳ ನಿರಂತರ.
ಎಷ್ಟೇ ದೊಡ್ಡವರಾದರು ಈ ಸಣ್ಣ ಸಣ್ಣ ಹುಸಿ ದಡ್ಡತನ ಖುಷಿ ಕೊಡುತ್ತದೆ.
ಈ ಪುಟ್ಟ ಪುಟ್ಟ ಜಗಳದಲ್ಲಿ ನಮ್ಮ ದೊಡ್ಡ ದೊಡ್ಡ ಖುಷಿ ಅಡಗಿದೆ.

ಅಣ್ಣತಂಗಿಯ ಸಂಭಂದ ಬಲುಮಧುರ.
  

Emptiness.

ಈ ಸಂದರ್ಭದಲ್ಲಿ ಜೋಗಿ ಸರ್ ಹೇಳಿರುವ ಮಾತನ್ನ ನಾನ್ಲಿಲ್ಲಿ ನೆನಪಿಸಿಕೊಳ್ಳಬಯಸುತ್ತೇನೆ. ಅದೇನೆಂದರೆ, 
"ಬರುವ ಮೊದಲಿನ ಖಾಲಿಗೂ, ಬಂದು ಹೋದ ನಂತರದ ಖಾಳಿಗೂ ಎಷ್ಟೊಂದು ವಿತ್ಯಾಸ..?" 
ಸರಿಯಾದ ಮಾತು. 
ನಮ್ಮವರು ನಮಗೆ ಎಷ್ಟು ಅಭ್ಯಾಸವಾಗಿ ಬಿಟ್ಟಿರುತ್ತಾರೆಂದರೆ, ಅವರ ಸ್ಥಾನವನ್ನು ಬೇರೆಯವರು ತುಂಬಲು ಅಸಾಧ್ಯವಾಗಿಬಿಡುತ್ತದೆ. ಬೇರೆಯವರನ್ನು ಆ ಸ್ಥಾನದಲ್ಲಿ ಕಲ್ಪಿಸಿಕ್ಕೊಳ್ಳುವುದು ಎಂದರೆ ಮುಳ್ಳುಚುಚ್ಚಿದಂತೆ ಭಾಸವಾಗುತ್ತದೆ. 
ಈ ಭಾವನೆಗಳೆಲ್ಲ ನಮ್ಮ ಮೆದುಳಿನ ಆಟ. ಇವೆಲ್ಲವೂ ನಮ್ಮ ತತ್ವಗಳು, ನೀತಿಗಳು, ನೈತಿಕಥೆಗಳ ಪ್ರಭಾವದಿಂದ ಹಾಗು ನಾವುಗಳು ಬೆಳೆದುಬಂದ ವಾತಾವರಣವನ್ನು ಅನುಸರಿಸಿರುತ್ತವೆ.

ಅಲ್ಲಿ ನಡೆದ್ದು ಅದುವೇ.

ಅವಳೊಬ್ಬಳು ಪಾಪದ ಹುಡುಗಿ, ಭಾವುಕಳು.
ಅವನು ಪಾಪದ ಹುಡುಗ, ಜೀವನದಲ್ಲಿ ಏನ್ನನ್ನೋ ಸಾಧಿಸಬೇಕೆಂಬ ಆಸೆಯುಳ್ಳವ.
ಅವರಿಬ್ಬರ ಪ್ರಕಾರ ಅವರು ಕೇವಲ ಒಳ್ಳೆಯ ಸ್ನೇಹಿತರು.
ಇಬ್ಬರಿಗೂ ಇದು ಸುಳ್ಳುಯಂಬ ಸುಳಿವಿದೆ.
ಸತ್ಯವನ್ನು ತತ್ಕಾಲಿಕವಾಗಿ ನಿರ್ಲಕ್ಷಿಸಿರುವರು ಅಷ್ಟೇ.

ಅದೊಂದು ದಿನ, ಕಠೋರ ದಿನ.
ಅವನನ್ನು ಅವಳು ಬೀಳ್ಕೊಡುವ ಭೀಕರದಿನ.
ಅವನ ಪ್ರಕಾರ ಅವಳು ಅವನ ಸಾಧನೆಯ ದಾರಿಗಿದ್ದ ದೊಡ್ಡ ಅಡೆಚಣೆ, ಆಕರ್ಷಣೆ.
ಅದನ್ನು ಸಮಾದಾನದಿಂದಲೇ ಸ್ವೀಕರಿಸಿ, ಹೃದಯ ಗಟ್ಟಿ ಮಾಡಿ ಅವನಿಗೆ ವಿಧಾಯವೇಳಿದಳು. 

ಇಬ್ಬರು ಮುಗ್ಧರು, ಅವರಿಗೆನು ಗೊತ್ತು, ಅವರಿಬ್ಬರೂ ಒಬ್ಬರಿಗೊಬ್ಬರ ಸಾಧನೆಯ ಸ್ಫೂರ್ತಿ. ಜೀವನದ ಪ್ರೀತಿಯೆಂದು.
ದೂರವಾದ ನಂತರ ಈಗ ಕಾಡುತಿರು ಕಾಲಿತನ ಸಹಿಸಲಸಾಧ್ಯ ಬೇನೆ.

ಎಲ್ಲಾದಕ್ಕೂ ಪರ್ಯಾಯ ಯೋಜನೆಗಲ್ಲಿರುತ್ತವೆ. ಜೀವನದಲ್ಲಿ ಅತಿಮುಖ್ಯವೆಂದರೆ ಜೀವನ. ಇದನ್ನು ಅರ್ಥಹಿಸಿಕೊಂಡ ದಿನ ನೀನು ಜೀವನವನ್ನು ಜೀವಿಸುತ್ತೀಯಾ.
ಯಾರನ್ನೋ ಕಳೆದು ಕೊಂಡ ದಿನವೆ ಅವರಿಲ್ಲದ ಕಮ್ಮಿ ಕಾಣಿಸದೆ ಇರಬಹುದು. ಸಮಯಾಂತರದಲ್ಲಿ ಅವರ ಸ್ಥಾನದ ಬೆಲೆ  ಅರ್ಥವಾಗುತ್ತದೆ. ಮುಂದೊಂದು ದಿನ ಪಶ್ಚಾತಾಪದ ಭಾವ ಮೂಡುವಮುನ್ನ ಇಂದೆ ಎಚ್ಚರಿತುಕೊ.

ಇದ್ದು ಸಾಧಿಸು. ನಿಮ್ಮವರನ್ನು ಸದಾ ಪ್ರೀತಿಸು. ನಿನ್ನ ಸಾಧನೆಗೊಂದು ಅರ್ಥನೀಡು.






Tuesday, 9 January 2018

ಮೈ'ಸೂರು'

೨೬-೧೨-೨೦೧೭
ಕಾರಣವಿಲ್ಲದೆಯೇ ಕೆಲವು ಸ್ಥಳ,
ಕೆಲವು ವ್ಯಕ್ತಿಗಳು,
ಕೆಲವು ವಸ್ತುಗಳು,
ಇನ್ನು ಅನೇಕ ಕೆಲವುಗಲು...
ಇಷ್ಟವಾಗಿಬಿಡುತ್ತವೆ.
ಎಷ್ಟರಮಟ್ಟಿಗೆಯೆಂದರೆ, ಜೀವನದ ಅತಿಮುಖ್ಯ ಭಾಗವಾಗಿಬಿಡುತ್ತದೆ.
ಅಂದಿನ ಆ ತಂಪಾದಗಾಳಿಯ ಕಾರಣವಿಲ್ಲದ ಪಯಣ
ತಿಳಿಯದಂತೆ ನನ್ನ ಮನಹೊಕ್ಕು ತನ್ನದೊಂದು ಬೆಚ್ಚನೆಯ ಜಾಗ ಪಡೆದಿತ್ತು. 

Totally hooked

೦೮-೦೧-೨೦೧೮

ಅದೊಂದು ಅದ್ಭುತವಾದ ನಗು.
ಅಲ್ಲಿಯೇ ಸಿಲುಕಿಹೋಯಿತು ಮನಸು.
ಬಿಡಿಸಿಕೊಳ್ಳುವ ಮನಸಿಲ್ಲ.
ಸದಾಕಾಲ ಆ ನಗುವನ್ನು ನೋಡುವಾಸೆ.
ನೋಡಿ ತಬ್ಬುವಾಸೆ.
ಮುದ್ದಾದ ನಗುವೆಂದರೇನೆಂದು?
ನಿಘಂಟಿನಲ್ಲಿ ನೋಡಿದಾದರೆ,
ಅವನ ನಗುವಿನ ವರ್ಣನೆ ಸಿಗಬಹುದೇ?
ಅದರ ವರ್ಣನೆಯು ಕಮ್ಮಿಯಾಗುವುದೇನೋ?

Friday, 5 January 2018

Murmuring -1

ಅದ್ಯಾವುದೋ ರಾಗದ ಹಾಡೊಂದ ಅವನು ಯಾವಾಗಲು ಗುನುಗುಡುವ.
ಯಾವುದದು? ಬಹಳವಾಗಿ ನನ್ನನ್ನು ಸೆಳೆಯುವ ರಾಗ ಯಾವುದದು?
ಅವನ ಧ್ವನಿಯೇ? ನನ್ನೊಡನೆ ಮಾತನಾಡುವಾಗ ಅವನ ಧ್ವನಿಯಲ್ಲಿ ಮೂಡುವ ಸೌಮ್ಯತೆಯತೆಯೇ?
ಯಾವುದದು? ಬಹಳವಾಗಿ ನನ್ನನ್ನು ಸೆಳೆಯುವ ರಾಗ ಯಾವುದದು?
ಪ್ರೀತಿಯಿಂದ ಗಧರಿಸುವ ಇಂಪಾದ ರಾಗವೇ? ರೇಗಿಸುವ ಅವನ ತುಂಟ ದನಿಯೇ?
ಯಾವುದದು? ಬಹಳವಾಗಿ ನನ್ನನ್ನು ಸೆಳೆಯುವ ರಾಗ ಯಾವುದದು?
ಕೃಷ್ಣನನ ಕೊಳಲಿನನ ಶಾಂತತೆಯ ಮಧುರ ರಾಗವೇ? ನನ್ನವನ ಮೌನದ ಧ್ವನಿಯೇ?
ಯಾವುದದು? ಯಾವುದದು?


- ಚಿಂಪು ❤

Thursday, 4 January 2018

ಮಾಸಿದ ಬಣ್ಣ

     ರವಿ ಬೆಳಗೆರೆ ಬರೆದಿರುವ "ಹೇಳಿ ಹೋಗು ಕಾರಣ" ಪುಸ್ತಕ ನೆನಪಾಗುತ್ತಿದೆ. ಕೆಲವೊಂದು ಬಾರಿ ನಮ್ಮ ನಿರ್ಧಾರಗಳಿಗೆ ಕಾರಣಗಳ್ಳನ್ನು ಇನ್ನೊಬ್ಬರಿಗೆ ಹೇಳಲು ಸದ್ಯವಾಗುವುದಿಲ್ಲ. ಆ ಕೆಲವೊಂದು ನಮ್ಮ ನಿರ್ಧಾರಗಳು ಕೇವಲ ನಮ್ಮನು ಒಳಗೊಂಡಿದ್ದಾರೆ ತೊಂದರೆಯಿಲ್ಲ. ಹೆಚ್ಚಾಗಿಯೂ ನಮ್ಮೊಂದಿಗೆ ಮಿಳಿತಗೊಂಡ ಎಷ್ಟೋ ಜೀವಗಳಿಗೆ ನಮ್ಮ ನಿರ್ಧಾರಗಳು ಸಂಬಂಧಿಸಿರುತ್ತದೆ, ಹಾಗು ಅದರ ಪರಿಣಾಮಗಳ್ಳನು ಅವರು ಅನುಭವಿಸಬೆಕಾಗುತ್ತದೆ.
     ಜೊತೆಯಲ್ಲಿರುವೆ ಎಂದು ನಂಬಿಕೆ ನೀಡಿದ್ದ ಬಂಧವೊಂದು ಧಿಡೀರ್ ಎಂದು ಕೊಂಡಿ ಕಳಿಚಿಕೊಂಡರೆ? ಅದು ಕೂಡ ನಿಮಗೆ ಒಂದು ನಿರ್ದಿಷ್ಟವಾದ ಕಾರಣವಾ ಹೇಳದೆಯೇ.! ಅವರು ನಿಮ್ಮವರೇ ಆದ ಕಾರಣದಿಂದ ನಿಮಗೆ ಒಂದಷ್ಟು ಕಾರಣಗಳ್ಳನು ಊಹಿಸಿಕೊಳ್ಳಾಗುವುದು, ಆದರೆ ಅದು ಎಷ್ಟರಮಟ್ಟಿಗೆ ಸರಿಯಂಬುದು ಕೇವಲ ಆ ನಿಮ್ಮವರು ಎಂದೆನಿಸಿಕೊಂಡ ನಿಮ್ಮವರಿಗೆ ಮಾತ್ರ ತಿಳಿದಿರುತ್ತದೆ.
     ಅಂದು ಅಲ್ಲಿ ಅವರಿಬ್ಬರ ನಡುವೆ ನಡದ್ದದು ಸ್ವಲ್ಪ ಹೀಗೆಯೇ.

ಅವನು: ಸಹಾಯಮಾಡುವುದೆಂದರೆ ನಿನಗೆ ಬಹಳ ಇಷ್ಟ ಅಲ್ಲವೇ?
ಹಾಗಾದರೆ ನನಗೊಂದು ಸಹಾಯ ಮಾಡು, ನನ್ನೊಂದಿಗೆ ಮತ್ತೆಂದೂ ಮಾತನಾಡಬೇಡ.

ಅವಳು: ಅವನದ್ವಾನಿಯಲ್ಲಿದ್ದ ಗಾಂಭೀರ್ಯತೆಯ ಅರಿವು ಮೂಡಿತ್ತಾದರೂ ಹೆಚ್ಚುನು ಪ್ರತಿಕ್ರಿಯಸಲಿಲ್ಲ. ಕಾರಣ ಎಲ್ಲಾ ಸರಿ ಹೋಗುವುದೆಂಬ ನಂಬಿಕೆ.
(ಇದೇನು ಮೊದಲ ಬಾರಿಯಲ್ಲ ಅವರಿಬ್ಬರನಡುವಿನ ಈ ಜಗಳ)

ಈ ಘಟನೆ ನಡೆದು ಸುಮಾರು ಘಂಟೆಗಳಾಯಿತು, ದಿನಗಳು ಕಳೆದವು, ಆಗಿದ್ದ ಗಾಯ ಮಾಸುವ ಯಾವುದೇ ಲಕ್ಷಣಗಳು ಕಾಣುತ್ತಿರಲಿಲ್ಲ.

ಮುಲಾಮು ಹಚ್ಚುವ ಅವಳೆಲ್ಲಾ ಪ್ರಯತ್ನಗಳು ಸೋತ್ತಿದ್ದವು.

ಅವಳ ಕಟು ಮಾತುಗಳು ಪ್ರಯೋಜನಕ್ಕೆ ಬರಲಿಲ್ಲ.
ಗಾಯಕ್ಕೆ ಕಾರದ ಪುಡಿ ಹಾಕಿದರೆ ಉರಿಯುವುದು ಸಹಜವಾದರೂ, ಅದೊಂದು ಒಳ್ಳೆಯ ಮೂಲಮಾಗುವುದೆಂಬ ನಂಬಿಕೆಯು ಹುಸಿಯಾಯ್ತು.

ತಿಂಗಳುಗಳು ಕಳೆದವು.

ಅವಳು: ಏಕೀಗೆ ಮಾಡುತ್ತಿರುವೆ?
ಅವನು: ನನ್ನಿಷ್ಟ.
ಅವಳು: ಹಾಗಾದರೆ ನಾನು ನನ್ನಿಷ್ಟದಂತೆ ಮಾಡಲೇ?
ಅವನು: ಮಾಡು. ಆದರೆ ನನ್ನ ತಂಟೆಗೆ ಬರಬೇಡ.

ಸಂಭಾಷಣೆ ಮುಂದುವರಿಸಲು ಬೇರೇನುವುಳಿದಿರಲ್ಲಿಲ. ಅವರಿಬ್ಬರನಡುವೆ ನಡುಗಡ್ಡೆಯ ಶೀತಲತೆಯ ಮೌನವೊಂದು ಮೂಡಿತ್ತು.

ಸಮಯದ ಸುಳಿಗೆ ಸಿಲುಕಿ ನಲುಗಿಹೋಗಿತ್ತು ಅವಳ ಮನಸ್ಸು.
ಅಲ್ಲಿಗೊಂದು ಸುಂದರ ಚಿತ್ರವೊಂದರ ಬಣ್ಣ ಕದಳಲಿ ಹೋಗಿತ್ತು.



Monday, 1 January 2018

ಹೀಗೊಂದು ಯೋಚನೆ.

"ಕೈಲಾಗದವ್ನು ಮೈಪರಚಿಕೊಂಡನಂತೆ"
ನಾನು ಯಾವುದಾದ್ರೂ ವಿಷಯಕ್ಕೆ ಕೋಪ ಮಾಡ್ಕೊಂಡು ಕಿರ್ಚಾಡಿದ್ರೆ ಅಪ್ಪ ಈ ಮಾತು ಹೇಳ್ತಿದ್ರು.
ನಿನ್ನೆ ಅಮ್ಮನ ಮೇಲೆ ಸಿಕ್ಕಾಪಟ್ಟೆ ಕೋಪಮಾಡಿಕೊಂಡು ಗುರ್ ಅಂತಿದ್ದೆ(ಅವರದ್ದೇನು ತಪ್ಪಿರಲಿಲ್ಲವಾದರೂ). ಆಗ ಯಾವತ್ತೂ ಏನು ಹೇಳದಿದ್ದ ನನ್ನಣ್ಣ ಹೇಳ್ದ, "ಇತ್ತೀಚಿಗೆ ತುಂಬಾ ಕೋಪ ಮಾಡ್ಕೋತಿಯಲ್ಲ ಯಾಕೆ ಅಂತ".

ಹೌದಾ ? ನನ್ನಲ್ಲೇ ಪ್ರಶ್ನೆಯೊಂದು ಹುಟ್ಟಿತ್ತು.
ತಾಳ್ಮೆ ಕಮ್ಮಿ ಆಗಿದಿಯ? ಸಹನಾ ಶಕ್ತಿ ಕಮ್ಮಿ ಆಗಿದಿಯ?
ಯೋಚನಮಾಡಿದೆ.

ಇಲ್ಲಾ! ನನ್ನ ಸಹನಾ ಶಕ್ತಿ ಕಮ್ಮಿಯಾಗಿಲ್ಲ.

ಬಗ್ಗಿದವನಿಗೆ ಒಂದು ಗುದ್ದು ಹೆಚ್ಚು.
ನಾನು ಸಹಿಸಿಗೊಂಡದ್ದು ಹೆಚ್ಚಾಯ್ತು. ಈಗ ಅರ್ಥ ಆಯ್ತು.
ಆದರೆ ಕೋಪಮಾಡಿಕೊಳ್ಳುವುದು ಅದಕ್ಕೆ ಉತ್ತರವಲ್ಲ.

ಕೋಪಮಾಡಿಕೊಂಡರೆ, ನಾನು ಯಾರ ಮೇಲೆ, ಏತ್ತಕ್ಕಾಗಿ ಕೋಪಮಾಡಿಕೊಂಡೆನೋ ಅದೇ ತಪ್ಪು ನಾನು ಮಾಡಿದಂತೆ. ನನಗು ಅವರಿಗೂ ಆಗ ವ್ಯತ್ಯಾಸವೇನು? ಹಾಗಾದರೆ ನಾನು ನನ್ನ ಮೇಲೆಯೇ ಕೋಪ ಮಾಡಿಕೊಳ್ಳಬೆಕ್ಕಲ್ಲವೇ?
ಮೌಢ್ಯ!

ನನ್ನಣ್ಣ ಇನ್ನುಒಂದು ಮಾತು ಅವಾಗವಾಗ ಹೇಳ್ತಾನೆ,"ನಾನೇನು ದೇವರಲ್ಲ, ಮನಸಿನ್ನಲ್ಲಿ ಏನಿದೆ ಅಂತ ಹೇಳ್ಬೇಕು. ಬೇಕು ಅನ್ಸಿದನ್ನು ಕೇಳಿ ತಗೊಂಡು ಬಿಡ್ಬೇಕು. ಮನುಷ್ಯಂಗೆ ಕ್ಲ್ಯಾರಿಟಿ ತುಂಬಾ ಮುಖ್ಯ. ನಿನ್ನ ಮನಸ್ಸಿನ ಮಾತಿಗೆ ಧ್ವನಿ ಕೊಡ್ಬೇಕು, ಸುಮ್ನಿದ್ರೆ ಏನು ಆಗಲ್ಲ. ಬೇರೆಯವರು ಅವರಾಗಿಯೇ ಅರ್ಥ ಮಾಡ್ಕೊಳ್ಳಿ ಅಂತ ಬಿಟ್ರೆ, ಅವರು ಅವರವರಿಗೆ ಬೇಕಾದ ಹಾಗೆ ಅರ್ಥ ಮಾಡ್ಕೋತಾರೆ, ನೀನು ಯೋಚ್ನೆ ಮಾಡಿದತರ ಅವ್ರು ಯೋಚ್ನೆ ಮಾಡ್ಬೇಕು ಅಂತ ಏನು ಇಲ್ವಲ್ಲ. ಅದುಕ್ಕೆ ಬಿ ವೋಕಲ್. ನೀನು ಏನು ಅಂದ್ಕೊಂಡಿದೀಯ ಅದುನ್ನ ಅರ್ಥ ಮಾಡ್ಸು." 

ತಲೆಕೆಡುತ್ತೆ ಹೀಗೆಲ್ಲ ಒಂದೋಂದುಸಲ ನನ್ಗೆ. 

ನ್ನನ್ನೊಬ್ಬ ಸ್ನೇಹಿತ ಹೇಳಿದ್ದ,'ಯೋಚಿಸಿದಷ್ಟು ಗೊಂದಲ ಹೆಚ್ಚು', ನಿಜವಾದ ಮಾತು.
ಹಾಗಾಗಿ ಸದ್ಯಕ್ಕೆ ಸುಮ್ಮನಿರುವುದು ವಾಸಿ.