ಆಶ್ಚರ್ಯ ಹಾಗು ಕೋಪ ಎರೆಡು ನನ್ನಮ್ಮನ ಮೇಲೆ! ಏತಕ್ಕಾಗಿ ಆಕೆ ತನಗೆಂದು ಏನನ್ನು ಮಾಡಲಿಲ್ಲ? ಎಂಬ ಪ್ರಶ್ನೆ? ಇದಕ್ಕೆ ನಾನು ಒಂದು ಕಾರಣವಿರಬಹುದೇ? ಎಂಬ ಒಂದು ಪ್ರಶ್ನೆ. ಇಂದು ನಮ್ಮ ಮನೆ (ಗೋಕರ್ಣದಲ್ಲಿ) ಇದ್ದೇನೆ. ಇಲ್ಲಿ ನನ್ನ ಅತ್ತಿಗೆ ತನ್ನ ಮಗಳು (ಕೇವಲ ೧೦ ವರ್ಷ) ಕೇಳಿದರೆ ಒಂದು ಲೋಟ ನೀರು ಕಾಡುವುದಕ್ಕೂ ಮೀನಾ ಮೇಷ ಎಣೆಸುತ್ತಾರೆ. ನೀನೆ ತೇಗೋಳೇ ಮಗಳೇ ಅನ್ನುತ್ತಾರೆ!!! ((ಇದನ್ನು ನಾನು ತಪ್ಪು ಅಥವಾ ಸರಿ ಯೆಂದು ಹೇಳುವುದಿಲ್ಲ. ಆಕೆಯನ್ನು ದೂರುವ ಉದ್ದೇಶವು ನನಗಿಲ್ಲ.)) ಇದನ್ನೆಲ್ಲ ನೋಡಿದರೆ ನನಗೆ ಬಹಳಾನೇ ಆಶ್ಚರ್ಯವಾಗುತ್ತದೆ. ೨೧ವರ್ಷಗಳ ತನಕ ನನ್ನಮ್ಮ ನನಗೆ ಒಂದು ದಿನವೂ ಹಾಗನ್ನೇ ಇಲ್ಲವಲ್ಲ! ನಾನು ಕೇಳುವ ಮುನ್ನವೇ ನನಗೆ ಬೇಕಿರುವುದೆಲ್ಲ ತಯಾರಿರುತ್ತಿತ್ತು. ಎದ್ದಕೂಡಲೇ ಶುಚಿಯಾಗಲು ಬೇಕಾದ ಎಲ್ಲವೂ ಬಚ್ಚಲಲ್ಲಿ ತಯಾರಿರುತ್ತಿತ್ತು. ಶುಚಿಯಾಗಿ ಬಂದಕೂಡಲೇ ತಿನ್ನಲ್ಲು ರುಚಿಯಾದ ತಿಂಡಿ ತಯಾರಿರುತ್ತಿತ್ತು. ತಿಂಡಿ ತಿಂದಕೂಡಲೇ ನನ್ನ ತಲೆ ಕೂದಲನ್ನು ಬಾಚಿ ಜೆಡೆ ಹಾಕುತ್ತಿದ್ದಳು. ನಿಜಕ್ಕೂ!! ೨೧ ವರ್ಷಗಳ ತನಕ!! ಸಂಜೆ ಶಾಲೆ ಮುಗಿಸಿ ಮನೆಗೆ ಬರುವಷ್ಟರಲ್ಲಿ ಕುಡಿಯಲು ಹಾಲು, ತಿನ್ನಲು ತಿಂಡಿ ಮಾಡಿಟ್ಟುಕೊಂಡು ಕಾದಿರುತ್ತಿದಳು. ಒಂದೇ ಒಂದು ದಿನವೂ ಬಾಕಿ ಇಲ್ಲ. ಪ್ರತೀ ದಿನ. ನಾವೇನು ಶ್ರೀಮಂತರಾಗಿರಲಿಲ್ಲ. ಒಬ್ಬರು ಮನೆ ಕೆಲ್ಸದವರಿರಲಿಲ್ಲ. ಎಲ್ಲವನ್ನು ಅವಳೇ ಮಾಡುತಿದ್ದಳು. ಈಗ ಇಲ್ಲಿ (ಗೋಕರ್ಣದ ಮನೆಯಲ್ಲಿ) ಎಲ್ಲಾದಕ್ಕು ಮನೆಕೆಲಸಕ್ಕು ಕೆಲಸದವರಿದ್ದಾರೆ. ಆದರೂ ಇಲ್ಲಿಯ ವಾತಾವರಣ ನನ್ನನು ಪ್ರತಿದಿನವೂ ಪ್ರತಿ ಘಳಿಗೆಯೂ ಆಶ್ಚರ್ಯ ಗೊಳಿಸುತ್ತದೆ. ನಾನು ನನ್ನ ಜೀವನದಲ್ಲಿ ಕಳೆದ ಆ ಹಳೆಯದಿನಗಳು ಅಷ್ಟೊಂದು ಆರಾಮದಾಯಕವಿಗ್ಗಿದೆತೆ? ನಾನು ಅಷ್ಟೊಂದು ಅದೃಷ್ಟವಂತಳಾಗಿದ್ದೇನೆ? ನನ್ನಮ್ಮನಿಗೆ ನಾನು ಸಹಾಯ ಮಾಡಬದಿತ್ತೇ? ಅವಳಿಗೆ ನನ್ನಿಂದ ತೊಂದರೆ ಯಾಗಿದೆಯೇ? ಯಾಕೆ ಅವಳು ನನ್ನನು ಅಷ್ಟು ಚೆಂದಕ್ಕೆ ಬೆಳೆಸಿದಳು? ಒಂದು ದಿನವೂ ನಾನು ತಿಂದ ಬಟ್ಟಲ್ಲನ್ನು ತೊಳೆದಿಲ್ಲ, ನೀರು ಕುಡಿದ ಲೋಟವನ್ನು ಅದರ ಜಾಗದಲ್ಲಿ ಇಟ್ಟಿಲ್ಲ. ತೊಳೆದ ಬಟ್ಟೆಯನ್ನು ಮಡಿಚಿಟ್ಟಿಲ್ಲ. ಅದೆಲ್ಲಾ ಹೋಗಲಿ, ಕಾಲೇಜು ಗೆ ಯಾವ ಬಟ್ಟೆಯನ್ನು ಹಾಕಿಕೊಂಡು ಹೋಗಬೇಕೆಂದು ನಾನಾಗಿಯೇ ಬೀರು ಇಂದ ಬಟ್ಟೆಯನ್ನು ಒಂದು ದಿನವೂ ತೆಗೆದುಕೊಂಡಿಲ್ಲ. ನಾನು ಮಿಂದು ಬರುವಷ್ಟರಲ್ಲಿ ಇಸ್ತ್ರೀ ಯಾದ ಬಟ್ಟೆ ನನಗಾಗಿ ಕಾದಿರುತ್ತಿತ್ತು. ಶಾಲೆಗೆ ಬೇಕಿರುವ ಊಟದ ಬುತ್ತಿ, ಪುಸ್ತಕದ ಬ್ಯಾಗು, ಎಲ್ಲವೂ ಎ ಟು ಝೆಡ್ ತಯಾರಿರುತ್ತಿತ್ತು. ನನಗೆ ಸುಳಿವು ಕೂಡ ಸಿಕ್ಕಿರಲಿಲ್ಲ. ಇದನೆಲ್ಲ ತಯಾರುಮಾಡುಲೂ ಎಷ್ಟು ಶ್ರಮವಿರುತ್ತದೆ. ಶ್ರಮಕ್ಕಿಂತ ಹೆಚ್ಚು ಎಷ್ಟು ತಾಳ್ಮೆ ಹಾಗು ಪ್ರೀತಿ ಇರಬೇಕಾಗುತ್ತದೆ ಎಂದು. ಈಗ ನನಗೆ ಮದುವೆ ಆಗಿದೆ. ಆದರೂ ನಾನು ಆಕೆಯ ಮನೆಗೆ (ನನ್ನ ತವರು ಮನೆಗೆ) ಹೋದಾಗ, ನಾನು ಬರುತ್ತಿದ್ದೇನೆ ಎಂದು ಎಲ್ಲವನ್ನು ತಯಾರಿಡುತಲೇ. ಹಾಸಿಗೆಗೆ ತೊಳೆದು ಸೂಚಿಯ ಚಾದರ ಹಸಿ, ಕುಡಿಯಲು ಬಾಟಲಿಗೆ ನೀರು ತುಂಬಿಸಿ, ಹೋದಕೂಡಲೇ ಕೈಕಾಲು ತೊಳೆಯಲು ಚಳಿಗಾಲದಲ್ಲಿ ಬಿಸಿ ನೀರು/ ಸೆಕೆ ಕಾಲದಲ್ಲಿ ತಂಪಾದ ನೀರು ರೆಡಿ ಇಟ್ಟಿರುತ್ತಾಳೆ. ಜೀವನವನ್ನು ಸುಲಭಗೊಳಿಸುವ ಎಲ್ಲಾ ವ್ಯವಸ್ಥೆ ಮೊದಲೇ ಆಗಿರುತ್ತದೆ.! ಏನೆಂದು ಹೇಳಲಿ? ಹೇಳುತ್ತಾ ಹೋದಷ್ಟು ಹನುಮಂತನ ಬಲದ ಹಾಗೆ ಬೆಳೆಯುತ್ತಾ ಹೋಗುತ್ತದೆ ಆಕೆಯು ನನಗೆ ಮಾಡಿರುವ ಸೇವೆಯ ಪಟ್ಟಿ!! ಒಂದು ದಿನವೂ ಆಕೆ ನನಗೆ ಬಿದಿಲ್ಲ. ನಾನು ಎಷ್ಟೋ ಅಮ್ಮಂದಿರನ್ನು ನೋಡಿದ್ದೇನೆ, ಶಾಲೆಗೆ ಮಕ್ಕಳ್ಳನ್ನು ಬಿಟ್ಟು ಹೋಗಲು ಬಂದವರು ಗುರುಗಳ ಬಳಿ ಹೋಗಿ "ನನ್ನ ಮಗ/ಮಗಳು ತಪ್ಪುಮಾಡಿದರೆ ನಾಲ್ಕು ಪೆಟ್ಟು ಕೊಡಿ ನಮಗೇನು ಬೇಜಾರಿಲ್ಲ" ಎಂದು ಹೇಳಿ ಹೋಗುತ್ತಾರೆ. ಆದರೆ ನನ್ನಮ್ಮ ಶಾಲೆಯಲ್ಲಿ ಅಪ್ಪಿತಪ್ಪಿ ಏನಾದರು ಮೇಸ್ಟ್ರು ನನಗೆ ಒಂದೇ ಒಂದು ಪೆಟ್ಟುಕೊಟ್ಟರು, ಮೇಸ್ಟ್ರಬಳಿ ಹೋಗಿ ಏಕೆ ಹೊಡೆದಿರಿ ನನ್ನ ಮಗಳಿಗೆ ಎಂದು ಸವಾಲು ಹಾಕುವುದಲ್ಲದೇ ನನ್ನ ಮಗಳಿಂದು ಏನು ತಪ್ಪಿಲ್ಲ ಎಂದು ಹೇಳಿಬರುತ್ತಿದರು. ಇದು ಕೇವಲ ಒಂದು ನಿದರ್ಶನವಷ್ಟೇ, ಈ ರೀತಿ ಎಷ್ಟೋ ಮಂದಿಗೆ ಹೇಳಿದ್ದಾರೆ. ಅವಳ ಆ ನಂಬಿಕೆ ಇಂದಲೋ ಏನು, ನಾನು ಕೂಡ ಹಾಗೆಯೇ ಬೆಳಿದ್ದಿದೆ. ಯಾರ ತಂಟೆಗೂ ಹೋಗುತ್ತಿರಲಿಲ್ಲ. ಹಾಗು ನನ್ನಮ್ಮನಿಗೆ ಏನು ಕೊಡಸಿಲು ಕಷ್ಟವಾಗಬುದು ಅದನ್ನು ಎಂದಿಗೂ ಕೇಳುತಲ್ಲೂ ಇರಲಿಲ್ಲ.
ಒಂದು ನಿಮಿಷ ಈ ಕತೆಗೆ ಇಲ್ಲಿ ಕಡಿವಾಣ ಹಾಕೋಣ. ನನಗೆ ಒಂದು ಪ್ರಸಂಗ ನೆನಪಾಗುತ್ತಿದೆ. ಅದರ ಬಗ್ಗೆ ಹೇಳಬೇಕಿನಿಸುತ್ತಿದೆ.
ನನ್ನ ವಯಸ್ಸು ಸರಿಸುಮಾರು ೮-೯ ನ ಸಮಯವದು. ಆಗ ನಾವು ಚನ್ನರಾಯಪಟ್ಟಣದಲ್ಲಿ ವಾಸವಿದ್ದೆವು. ಚನ್ನರಾಯಪಟ್ಟಣದಲ್ಲಿ ಶನಿವಾರ ಸಂತೆ. ಪ್ರತಿ ಶನಿವಾರ ಅಮ್ಮ ತಪ್ಪದೆ ಸಂತೆಗೆ ಹೋಗಿ ಒಂದು ವಾರಕ್ಕೆ ಬೇಕಾದಷ್ಟು ಸಾಮಾನುಗಳನ್ನು ತರುತ್ತಿದ್ದಳು. ನಾನಾಗ ಚಿನ್ನವಳೆಂದು ನನ್ನನ್ನು ಕರೆದೊಯ್ಯುತ್ತಿರಲಿಲ್ಲ. ಅಲ್ಲಿಯೇ ಅಕ್ಕ ಪಕ್ಕದ ಮನೆಯೇ ಮಕ್ಕಳೊಂದಿಗೆ ಆಟವಾಡಯೆಂದು ಹೇಳಿ ಬಿಟ್ಟು ಹೋಗುತ್ತಿದ್ದಳು. ಹೇಗಿದ್ದಾಗ ಒಂದು ಶನಿವಾರ ನನಗೆ ಅಮ್ಮನ ಜೊತೆ ಸಂತೆಗೆ ಹೋಗಬೇಕೆಂಬ ಅಸೆ ಉಂಟಾಯಿತು. ನಾನು ಬರುತ್ತೇನೆ ಅಮ್ಮ ಎಂದೇ. ಅಮ್ಮ ಅದಕ್ಕೆ ಪ್ರತ್ಯುತ್ತರವಾಗಿ"ಬೇಡ ಮಗಳು ಅಲ್ಲಿ ಹಸುಗಳು ಎಲ್ಲಿ ಬೇಕೆಂದರಲ್ಲಿ ನುಗುತ್ತವೆ. ತರಕಾರಿ ಬುಟ್ಟಿ ಇಡಿದುಕೊಂಡು ನಿನ್ನನು ನೋಡಿಕೊಳ್ಳಲ್ಲು ಕಷ್ಟ" ಎಂದು ಏನೋ ಹೇಳಿದಳು, ಅಷ್ಟು ಸರಿ ನೆನಪಿಲ್ಲ, ಒಟ್ಟು ನನ್ನನ್ನು ಕರೆದೊಯ್ಯಲಿಲ್ಲ. ಅವಳ ಬೆನ್ನ ಹಿಂದೆಯೇ ಸ್ವಲ್ಪ ದೂರ ಹೋದೆ, ಹೀಗಮ್ಮ ಮನೆಗೆ ಎಂದರು. ನಾನು ಕೋಪದಲ್ಲಿ "ಕೋಳಿಮುನ್**" ಎಂದು ಬೈದೆ. ಎಲ್ಲಿತ್ತೊಯೇನೋ ಅಮ್ಮನ ಕೋಪ, ದರ ದರ ಯೆಂದು ಬೀದಿಯಲ್ಲಿ ಎಳೆದು ಕೊಂಡು ಬಂದು ಒಂದು ಪೆಟ್ಟು ರಾಪ್ ಅಂತ ಕೊಟ್ಟಳು", ಸ್ನೇಹಿತರೊಂದಿಗೆ ಆಟವಾಡು ಎಂದರೆ ಏನೆನೊನು ಕೆಟ್ಟ ಪದ ಮಾತನಾಡಲು ಕಲಿಯುತ್ತೀಯ ಎಂದು ಗದರಿಸಿದ್ದಳು. ನನಗೆ ಹೊಡೆದು ಅವಳೇ ಅತ್ತಿದಲ್ಲೂ. ಆ ದಿನ ಯಾರು ಸಂತೆಗೆ ಹೋಗಲೇ ಇಲ್ಲ. ನಾನು ಕೂಡ ಮತ್ತೆಂದೂ ಸಂತೆಗೆ ಕರೆದೊಯ್ಯುವಂತೆ ಹಠ ಮಾಡಲಿಲ್ಲ. ನನಗೆ ನೆನಪಿರುವಾಗೆ ಅದೇ ಮೊದಲು ಅದೇ ಕೊನೆ ಅವಳು ನನಗೆ ಹೊಡೆದದ್ದು ಹಾಗು ನಾ ಆ ರೀತಿ ಪದ ಬಳಸಿದ್ದು. ಈಗಲೂ ಕೂಡ ಆ ರೀತಿ ಪದ ಅಥವಾ ಯಾವುದೇ ಬಯ್ಯೋ ಶಬ್ದಗಳನ್ನು ಉಚ್ಚರಿಸಲು ಆಗುವುದೇ ಇಲ್ಲ. ಒಂದು ರೀತಿ ಕಷ್ಟ ಎನಿಸುತ್ತದೆ.
ಉಳಿದ ವಿಷಯವನ್ನು ಇನ್ನು ಯಾವಾಗಲಾದರೂ ಮಾತನಾಡೋಣ. ಟಾಟಾ.