Tuesday, 27 February 2018

Try again

ಇದು ನೀನು,
ನಿನ್ನ ನಾ ಬಿಟ್ಟುಕೊಡಲಾರೆ.
ಬಿಟ್ಟುಕೊಡಲಾರೆ, ಹಾಗಂತ ಕಟ್ಟಿಡಲಾರೆ, ಬಚ್ಚಿಡಲಾರೆ.
ನಿನ್ನೊಂದಿಗಿರ ಬಯಸಿ ಪಡುವ
ಪ್ರತಿಭಾರಿಯಾ ಪ್ರಯತ್ನವೆಲ್ಲಾ ವ್ಯರ್ಥವಾಗುವುದು. ನೋವ ನೀಡುವುದು.
ನನ್ನಂತೆಯೇ ನೀನು ಚಡಪಡಿಸುವೆಯ? ಗೊತ್ತಿಲ್ಲ.
ಅಥವಾ ನಾನು, ನೀನು ಚಡಪಡಿಸಲು ಅವಕಾಶವೇ ನೀಡಿಲ್ಲವೇ? ಗೊತ್ತಿಲ್ಲ.
ನೀನೇಕೆ ಪ್ರತಿಬಾರಿಯೂ ಸೋಲಬೇಕು? ಸ್ವಾಭಿಮಾನವಿಲ್ಲವೇ ನಿನಗೆ?
ಕೇಳಿದಳು ನನ್ನ, ನನ್ನ ಗೆಳತಿ.
ಏನ್ನೆನುವುದು ಅವಳಿಗೆ? ಏನ್ನೆನುವುದು? 
ಅರಿಯದೆ ಸಣ್ಣದಾಗಿ ಅತ್ತಿದೆ.
ಮತ್ತದೇ ಪ್ರಶ್ನೆ, ನೀನೇಕೆ ಅಳಬೇಕು? ನಿನಗೇಕೆ ಈ ಬೇನೆ?
ನನ್ನ ಬಳಿ ಇದಕ್ಕೂ ಉತ್ತರವಿಲ್ಲ. ಕೇವಲ ನಾ ಬಲ್ಲೆ,
ನನ್ನ ಅಳುವೆಲ್ಲ ನನ್ನ ನಗುವಿಗಾಗಿಯೆ.
ಮನಸಾರೆ ಎಷ್ಟು ಅತ್ತಿರುವೆನು ಅಷ್ಟೇ ನಕ್ಕಿರು.
ನಿನಗಾಗಿ ಸಾವಿರ ಸೋಲು ಸರಿಯೇ,
ಸಾವಿರ ನೋವು ಸರಿಯೇ,
ಸಾವಿರ ಅವಮಾನವೂ ಸರಿಯೇ.
ಇದು ನೀನು,
ನಿನ್ನ ನಾ ಬಿಟ್ಟುಕೊಡಲಾರೆ.

Wednesday, 21 February 2018

Courage

It takes courage to hold it or to let it go.
Both of them requires a huge strength
and high willpower.

Tuesday, 20 February 2018

ತುಂತುರು

ಪಿರಿ ಪಿರಿ ಮಳೆ,
ಒಮ್ಮೊಮೆ ಮೋಡದ ಮರೆಯಿಂದ ನಿಲ್ಕಿ ನೋಡುವ ಸೂರ್ಯ,
ಕಾಮನಬಿಲ್ಲು,
ದಿನ ಪೂರ್ತಿ ಮಳೆ,
ರಾತ್ರಿ ಪೂರ್ತಿ ಮಳೆ,
ಮಳೆ, ಮಳೆ, ತುಂತುರು ಮಳೆ,
ಜಡಿ ಮಳೆ,
ಜಿಗಣೆ, ಕಂಬಳಿ ಹುಳುಗಳು,
ಮಹಿಂದ್ರಾ ಜೀಪು,
ಮಣ್ಣು ಮೆತ್ತಿಕೊಂಡ ಕಾಲುಗಳು,
ಮೈಗಂಟಿದ ಕೆಸರು,
ಒದ್ದೆಯಾದ ಕೂದಲು; ಬಟ್ಟೆ!, ಮೈಗಂಟಿ ಕಿರಿಕಿರಿ.
ಒಂದೊಳ್ಳೆ ಬಿಸಿ ಬಿಸಿ ಕೆ.ಟಿ.
ಬಿಸಿ ಬಿಸಿ ಓಲೆ ಹಂಡೆ ನೀರಿನ ಮೀಯಾಣ.
ಕೆಂಪಕ್ಕಿ ಗಂಜಿ, ಜೊತೆಯಲ್ಲಿ ಕೆಂಪು ಕಾಯಿ ಚಟ್ನಿ, ತುಪ್ಪ, ಉಪ್ಪು!
ಆ ಚಳಿ ಚಳಿ ರಾತ್ರಿ, ಬೆಚ್ಚನೆಯೆ ಕಂಬಳಿ!
ಟೂಯ್ಯ್ ಯೆಂದು ಪದವಾಡುವ ನುಸಿ,
ಅದ ಓಡಿಸಲು ಅಡಿಕೆ ಸಿಪ್ಪೆಯ ಅಗುಷ್ಟೇ
ಕತ್ತಲೆ ಕೊಣೆ.
ಅಜ್ಜಿಯ ಕಥೆಗಳು. 
ಒಳ್ಳೆಯ ನಿದ್ದೆ.
ಶಾಂತಿ, ನೆಮ್ಮದಿ, ಖುಷಿ.




ಏಕಿಷ್ಟು ಚೆಂದ?

ಪ್ರತಿದಿನ ನಾ ನಡೆದು ಬರುವ ಹಾದಿಯ ಅಂಚಿನಲ್ಲಿರು, ಅಷ್ಟುದ್ದ ಬೆಳೆದುನಿಂತು ಬಾನ ಚುಂಬಿಸುತ್ತಿರುವ ಈ ಮರಗಳೇಕೆ, ಇಷ್ಟು ಚೆಂದ? ಈ ನೀಲಿ ನೀಲಿ ಬಾನೇಕೆ, ಇಷ್ಟು ಚೆಂದ? ನೀಲಿ ಬಾನಲಿ ಹತ್ತಿಯಂತೆ ಮೆದ್ದುಕೊಂಡಿರುವ ಈ ಮೋಡಗಳೇಕೆ,
ಇಷ್ಟು ಚೆಂದ? ಈ ಮೋಡಗಳ ಅಂಚಿನಿಂದ ಕದ್ದು ಮುಚ್ಚಿ ಆಟವಾಡುವ ಈ ಸೂರ್ಯನೇಕೆ, ಇಷ್ಟು ಚೆಂದ? ಸೂರ್ಯನ ಕಂಡು ಮುದ್ದಾಗಿ ಅರಳುವ ಈ ತಾವರೆ ಹೂವೇಕೆ, ಇಷ್ಟು ಚೆಂದ? ಬಣ್ಣ ಬಣ್ಣದಾ ಹೂಗಳು, ಮುದ್ದು ಮುದ್ದು ಮಗುವಂತೆ ನಗುತ್ತಾ,
ಆಕರ್ಶಿ ಮನಕೆ ಮುದ ನೀಡುವುದು.  ಎಲ್ಲಿಂದಲೋ ಕಡೆ ಇಲ್ಲದ ಕೊಡಿ ಇಲ್ಲದ ತಂಗಾಳಿ ಕೆನ್ನೆ ಸೋಕಿ, ಕಿವಿಯಲ್ಲೊಂದು ಗುಟ್ಟನೇಳಿ ಹೂಗುವುದೇಕೆ? ಅಬ್ಬಾ!!! ನಾನಿರುವ ಈ ಭೂಮಿ ಏಕಿಷ್ಟು ಚೆಂದ? ಚಿಗುರಿದ ಎಳೆಗಳು, ಬಾಡಿ ಮುದುಡಿ ವಣಗಿ ಬಿದ್ದ ಎಳೆಗಳು,  ಹೂಗಳು, ಹಣ್ಣುಗಳು, ಹಾರಾಡುತ ಹಾಡುವ ಹಕ್ಕಿಗಳು, ತಣ್ಣಗೆ ಬೀಸುವ ಗಾಳಿ,  ಹರಿವ ನದಿ, ನಿಂತ ನೀರು, ಸಾಗರದ ಅಲೆಗಳು, ಬೆಟ್ಟ ಗುಡ್ಡಗಳು, ಜಡಿಗಟ್ಟಿ ಸುರಿವ ಮಳೆನೀರು, ಸೋರುವ ಸೂರು, ಅಜ್ಜಿ ಇದ್ದ ಹಳೆಯ ಮಣ್ಣಿನ ಮನೆಯ ನೆನಪು, ನನ್ನಜ್ಜ, ನನ್ನಪ್ಪ, ಅಬ್ಬಾ! ಎಲ್ಲವೂ ಏಕಿಷ್ಟು ಚೆಂದ?  ಗರಿಬಿಚ್ಚಿ ನಲಿವ ನವಿಲು, ಆ ಗರಿಗಳಾ ಬಣ್ಣ, ಕೋಗಿಲೆಯ ಕುಹು ಕುಹೂ ಗಾನಾ, ಸಪ್ತ ಸ್ವರ, ಆ ಹಂಸ, ಅಯ್ಯೋ ಅಜ್ಜನ ಮನೆಯ ಆ ಕುರುಗಳು, ಕಯ್ಯೊಡ್ಡಿದರೆ ದೊರಗು ನಾಲಿಗೆಯಿಂದ ಮುದ್ದಿಸುವ ಚೆಂದ! ಅದು ಕೊಡುವ ಹಾಲು. ಸಕ್ಕರೆಯ ಪಾಕ. ಜೇನಿನ ಜಲ್ಲೆ. ಅಜ್ಜಿಯ ಕೋಣೆ ಕಿಟಕಿಯಿಂದ ಬರುವ ಬೆಳಕು, ನನ್ನ ಕೈಯ್ಯಿ ನೇವರಿಸುತ್ತಾ ಅವಳಾಡುತ್ತಿದ್ದ ಆ ಹಾಡುಗಳು, ಅವಳ ಪ್ರೀತಿಭರಿತ ನೋಟ, ಹಾನ್ !! ಕಾಡಮಧ್ಯವಿರುವ ಮನೆ, ಜೀರಿಂಬೆಯ ಶಬ್ಧ. ಕಾಡುವ ನಕ್ಷತ್ರ ಲೋಕ, ಅವಗಳ ಮಧ್ಯದಿ ನಗುವ ಚೆಂದಿರ.  ದೇವರೇ, ಎಲ್ಲವೂ ಏಕಿಷ್ಟು ಚೆಂದ?..... ಏಕಿಷ್ಟು ಚೆಂದ?


Monday, 19 February 2018

Thursday, 15 February 2018

I crave

೧೪-೦೨-೨೦೧೮

ಭಾಗ-೧:

ಕೈಯ್ಯಲ್ಲಿ ಮೊಬೈಲ್ ಫೋನ್ ಹಿಡಿದು, ಹಾಗೆ ಕುಳಿತುಕೊಂಡು ಸುಮ್ಮನೆ ಫೇಸ್ಬುಕ್, ವಾಟ್ಸಪ್ಪ್ ಅನ್ನು ನೋಡುತಿದ್ದೆ. ಎಲ್ಲೆಡೆ   ಪ್ರೇಮಿಗಳ ದಿನಾಚರಣೆಯ ಪೋಸ್ಟ್ಗಳೆ. ತಮ್ಮ ತಮ್ಮ ಹಿಂಡತಿ, ಗಂಡ, ಮಕ್ಕಳು, ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್, ಅಪ್ಪ, ಅಮ್ಮ ಹೀಗೆ.
******

ಪದೇ ಪದೇ ಇಂತಹುದನ್ನೇ ನೋಡುತಿದ್ದರೆ ನಮ್ಮ ಮೆದುಳು ಅದಕ್ಕನುಗುಣವಾಗಿ ವರ್ತಿಸಲಾರಂಭಿಸುತ್ತದೆ. ಸೈಸ್ಕೋಲೊಜಿಕಲಿ ಇದನ್ನು "ಮೇರೆ ಇಕ್ಸ್ಪೋಜರ್" ಎಂದು ಕರೆಯುತ್ತಾರೆ.

ಉದಾಹರಣೆಗೆ,ಟಿವಿಯಲ್ಲಿ ಬರುವ ಜಾಹಿರಾತುಗಳು, ರಸ್ತೆ ಬದಿಯಲ್ಲಿ ಕಂಡುಬರುವ ಜಾಹಿರಾತುಗಳ ಬ್ಯಾನೆರ್ಗಳನ್ನೂ ಪದೇ ಪದೇ ನೋಡುವುದರಿಂದ ನಮ್ಮಲ್ಲಿ ಅದರ ಮೇಲಿನ ಕುತೂಹಲ ಹೆಚ್ಚುತ್ತದೆ, ಅಥವಾ ಅವುಗಳ್ಳನ್ನು ಕೊಂಡು ಬಳಸುವ ಮನಸಾಗುತ್ತದೆ, ಇದನ್ನೇ "ಮೇರೆ ಇಕ್ಸ್ಪೋಜರ್" ಎಂದು ಕರೆಯುವುದು. ೧೦೦ರಲ್ಲಿ ೯೦ರಷ್ಟು ಪ್ರೀತಿ ಪ್ರೇಮದ ಕಥೆಗಳಿಗೂ ಇದುವೇ ಕಾರಣ. ಒಬ್ಬ ವ್ಯಕ್ತಿಯನ್ನು ಪದೇ ಪದೇ ಭೇಟಿಯಾಗುವುದು, ಮಾತನಾಡುವುದರಿಂದ ಅವರಲ್ಲಿ ಆಸಕ್ತಿ ಮೂಡುತ್ತದೆ, ಕರ್ಮೇಣವಾಗಿ ಪ್ರೀತಿಯಾಗಿ ಬದಲಾಗುತ್ತದೆ. ಇಂತಹ ಭಾವನೆಗಳು ಹೆಚ್ಚು ಕಾಲ ಹಾಗೆಯೇ ಹಳಸದಂತೆ  ಉಳಿಯಬೇಕಾದರೆ, ಪ್ರೀತಿಯಂಬ ಸಂಭಂದದಲ್ಲಿ ಇಬ್ಬರ ನಡುವೆಯೂ ಭಾವೋದ್ರೇಕಥೆ ಇರಬೇಕು. ಇದಕ್ಕಾಗಿ ಹೊಸ ಹೊಸ ದಾರಿಯನ್ನು ಕಂಡುಕೊಳ್ಳ ಬೇಕು. ಒಬ್ಬರನೊಬ್ಬರು ಖುಷಿಯಾಗಿಡವ ಪ್ರಯತ್ನ ಎಂದಿಗೂ ನಿಲ್ಲಬಾರದು.ಈ ಪ್ರಯತ್ನದ ಹಾದಿ ನಮಗೂ ಸಂತೋಷಮಯವಾಗಿರುವಂತಹದಾಗಿರಬೇಕು.  ಪ್ರೀತಿಯಂಬ ಎರೆಡಕ್ಷರದ ಈ ಸೌಮ್ಯ ಸಸಿಯನ್ನು ಓಮ್ಮೆ ಗಟ್ಟಿಬೇರೂರುವರೆಗಷ್ಟೇ ಸರ್ಕಸ್. ನಂತರ ಒಬ್ಬರಮೇಲೊಬ್ಬರಿಗೆ ಪ್ರೀತಿ ಎಷ್ಟು ಗಾಢವಾಗುವುದೆಂದರೆ, ಅದು ಮಾಸಿ ಹೋಗುವಷ್ಟರಲ್ಲಿ ನಾವೇ ಮಾಸಿಹೋಗಿರುತ್ತೇವೋ ಏನೋ.
******

ಇದೆಲ್ಲವೂ ನನ್ನ ಕಲ್ಪನೆಗಳಿಗಷ್ಟೇ ಸೀಮಿತವಾಗಿದೆ.
******

ಭಾಗ-೨:

ನನಗೊಂದು ಕನಸು,
ನನಗೆ, ನಾನು ಹೇಗೆ ನನ್ನವರನ್ನು ಪ್ರೀತಿಸುತ್ತೇನೋ,ಹಾಗೆಯೇ ನನ್ನನು ಪ್ರೀತಿಸುವವರು ಬೇಕು.
ಡಿಟ್ಟೋ ಡಿಟ್ಟೋ.
ಆ ಪ್ರೀತಿ (ನಾನು ಪ್ರೀತಿಸುವಬಗೆಯ ಪ್ರೀತಿ) ಹೇಗಿರುವುದೆಂದು ನಾನೊಮ್ಮೆ ಅನುಭವಿಸಿ ನೋಡಬೇಕು. I wanna get loved by the way I love!! & wanna explore it.
******

ಹೀಗೆಲ್ಲ ಏನ್ ಏನೋ ಅನಿಸುವುದುಂಟು ಕೆಲವೊಮ್ಮೆ.
ಒಬ್ಬಳೆ ನಗುವುದುಂಟು ಕೆಲವೊಮ್ಮೆ.
ನಕ್ಕು ನಂತರ ಬೇಜಾರು ಮಾಡಿಕೊಳ್ಳುವುದುಂಟು ಕೆಲವೊಮ್ಮೆ.
******

I crave, I crave for my part of love.
******

ತಿಗಣೆ

ಅಪ್ಪ ಯಾವಾಗ್ಲೂ ಹೇಳ್ತಾರೆ. ಒಳ್ಳೆಯ ಊಟ, ಒಳ್ಳೆಯ ಜೀವನ ಸಂಗಾತಿ, ಒಳ್ಳೆಯ ಸ್ನೇಹಿತರು, ಒಳ್ಳೆಯ ಗುರುಗಳು, ಒಳ್ಳೆಯ ಜೊತೆಗಾರರು (ಕೆಲಸ ಮಾಡುವ ಸ್ಥಳದಲ್ಲಾಗಲಿ, ಅಕ್ಕಪಕ್ಕದ ಮನೆಯವರಾಗಲಿ, ಹೀಗೆ .. ), ........  ಸಿಗಲು ಪುಣ್ಯ ಮಾಡಿರಬೇಕು ಅಂತ. ಹೌದು ಅಂತ ಅನಿಸುತ್ತಿದೆ, ನಿಮಗೆ ತೊಂದರೆ ಕೊಡುವುದೇ ನನಗೆ ಸುಖ ಅನ್ನುವಹಾಗೆ ನಡೆದುಕೊಳ್ಳುವ, ಒಂದೇ ರೂಮ್ನಲ್ಲಿರುವ ರೂಮಿಯನ್ನು ಸಹಿಸಿಕೊಂಡು ಸಹಿಸಿಕೊಂಡು, ಸಹನಶಕ್ತಿಯ ಕಟ್ಟೆಯೊಡೆದು ಅತಿಯಾದ ಕೋಪವೊಂದು ಬರುತಿದೆ, ಕೋಪಕ್ಕಿಂತಲೂ ಹೆಚ್ಚು ನೋವಾಗುತ್ತಿದೆ. ಹಾಗಂತ ಚೆಂಡಿಯಂತೆ ಅವಳ ಮೇಲೆ ಎಗರಾಡಿ ಕಿರುಚಾಡಿ ರಚ್ಚೆ ಮಾಡಲು ನನಗೆ ಸಾಧ್ಯವಿಲ್ಲ. ಬೇಕಿದ್ರೆ ನಾಲ್ಕು ಪೆಟ್ಟೇ ಕೊಡೋದು. ದಂಡಂ ದಶಗುಣಮ. ಹಾಹಾ.

ನನಗನಿಸುತ್ತದೆ,
ನನ್ನ ಪಾಲಿನ ಪುಣ್ಯವೆಲ್ಲಾ ಒಳ್ಳೆಯ ಅಪ್ಪ ಅಮ್ಮನ ಪಡೆಯುವುದರಲ್ಲಿಯೇ ಖರ್ಚಾಗಿ ಹೋಗಿರಬೇಕು. ಒಳ್ಳೆಯ ರೂಮಿ ಪಡೆಯಲು ಏನು ಉಳಿದಿಲ್ಲವೆಂದೆನಿಸುತ್ತದೆ. ಆಫ್ಟರ್ ಆಲ್ ಅತ್ಯಮೂಲ್ಯವಾದದ್ದು ನನ್ನ ಬಳಿಇರುವಾಗ ಎಲ್ಲಾ ಪುಣ್ಯವು ಅದರಲ್ಲಿಯೇ ಖರ್ಚಾಗಳೇ ಬೇಕಿತ್ತು. 

Sunday, 11 February 2018

Pervert

ಸಂಗಾತಿಯೊಡನೆ ಲೈಂಗಿಕ ಆಕರ್ಷಣೆ ಬಲುಮುಖ್ಯ. ಇದು ಜೀವಸಂಕುಲನಾಭಿವೃದ್ದಿಗೆ ಎಲ್ಲಾ ಜೀವಿಗಳಲ್ಲಿಯೂ ಕಂಡು ಬರುವ ಸಾಮಾನ್ಯ ಪ್ರಕ್ರಿಯೆ. ಮನುಷ್ಯ ಬುದ್ದಿಜೀವಿ. ತನ್ನದೆಯಾದ ಸುಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದಾನೆ. ಆಚಾರವಂತ ವಿಚಾರವಂತ. ಮನುಷ್ಯನು ಈ ಕಾರಣದಿಂದಲೇ ಬೇರೆಲ್ಲಾ ಜೀವಿಗಳಿಂತ ಉತ್ಕ್ರಷ್ಟ ಮಟ್ಟದಲ್ಲಿರುವುದು. ಮಾನವನನ್ನು ಮಾನವನಾಗಿಸುವುದು ಅವನ ಈ  ಮಾನವೀಯತೆ ಹಾಗು ಅವನ ವಿಚಾರವಂತಿಕೆಯೇ. ಹೀಗಿರುವಾಗ ಕೆಲವರೇಕೆ ಮನುಷ್ಯರಾಗಿ ಮನುಷ್ಯರನ್ನು ಇಷ್ಟುಕಟುವಾಗಿ,ಕೆಟ್ಟದಾಗಿ ನಡಿಸಿಕೊಳ್ಳುತ್ತಾರೆ? ಈ ದುಷ್ಟ ಮನಃಸ್ಥಿತಿ ಇರುವ ಮನುಷ್ಯರನ್ನು ಏನೆಂದು ಕರೆಯಬೇಕು? ಅವರನ್ನು ಹೇಗೆ ನಡಿಸಿಕೊಳ್ಳಬೇಕು? ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು?

:( :( :( 

Saturday, 10 February 2018

He

The best part,
I never get bored when he is around.
Whether he is talking to me, 
or just staring at me,
or busy doing his office works,
or sleep off. 
Whatever he does,
He is the best for me,
Coz I never get bored when he is around.

Friday, 9 February 2018

ನಾನೇಕೆ ಹೀಗೆ?... ಎಲ್ಲರಂತೆಯೇ.

ನಾನೇಕೆ ಹೀಗೆ?
ಬಹಳವಾಗಿ ಕಾಡುತಿದೆ ಈ ಪ್ರೆಶ್ನೆ.
ಯಾವಾಗಲು ಕಾಡುವ ಹಳೆಯ ಪ್ರಶ್ನೆಯಾದರು ನಿನ್ನೆಯಿಂದ ಬೆಂಬಿಡದ ಬೇತಾಳನಂತೆ ಹೆಗಲೇರಿದೆ.....
ಕಾರಣ:
ಹಂಪಿ ಸುತ್ತಲು ಹೋದ ತಿರ್ಗಾಡಿ ಸ್ನೇಹಿತನೊಬ್ಬ ವಿಜಯನಗರ ಮಹಾಸಂಭ್ರಾಜ್ಯದ ವೈಭವವನ್ನು ತನಗೆ ಸಾಧ್ಯವಾದಷ್ಟರಮಟ್ಟಿಗೆ, ತನ್ನ ಉದ್ದ ಉದ್ದ ಬೆರೆಳುಗಳಿರುವ ಪುಟ್ಟ ಕೈಯಲ್ಲಿ ಹೊತ್ತುತಂದು, ಜಂಭದಿಂದ ಪ್ರದರ್ಶಿಸುತ್ತ ನಮಗೆಲ್ಲ ಖುಷಿ ನೀಡುತಿದ್ದ, ಜೊತೆಯಲೊಂದಿಷ್ಟು ಸುಂದರ ಅಸೂಯೆ. ಅವನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಒಂದೊಂದು ಚಿತ್ರಪಟಗಳು ಮುತ್ತಿನಂತಹುಗಳು. ಅಬ್ಬಾ! ಆ ಸ್ಮಶಾನ ಮೌನದಿ ನಿಂತಿರುವ ಒಂದೊಂದು ಕಲ್ಲುಗಳು ಇಂದಿಗೂ ಜೀವಂತ. ಅದಾವುದೋ ಅಗಾಧ ಶಕ್ತಿಯೊಂದು ತನ್ನ ಬಳಿ ಬರುವಂತೆ ಕೂಗಿ ಸೆಳೆದಂತೆ. ಈ ಸೆಳೆತದ ಹಿಡಿತ ಬಲು ಗಟ್ಟಿ. ಮಾತನಾಡುತ್ತ ಹೋದರೆ ತಡೆದು ನಿಲ್ಲಿಸಲು ಕಷ್ಟ. ಸಧ್ಯಕ್ಕೀಗ ನನ್ನ ಗೊಂದಲದ ಬಗ್ಗೆ ಹೇಳಬೇಕಿರುವುದರಿಂದ ಇದನ್ನು ಇಲ್ಲಿಯೇ ನಿಲ್ಲಿಸೋಣ.
ಹಾನ್, ನನ್ನ ಪ್ರೆಶ್ನೆ, ನಾನೇಕೆ ಹೀಗೆ?
ಹೀಗೆ? ಹೀಗೆ ಹೇಳಿದರೆ ಹೇಗೆ?
ಎ ನಾರ್ಮಲ್ ಹ್ಯೂಮನ್?
....
ನಿನ್ನೆ ಅವನು ಇನ್ಸ್ಟಾಗ್ರಾಮ್ ಅಲ್ಲಿ ಕಮಲ ಮಹಲ್ ಫೋಟೋವನ್ನು ಅಪ್ಲೋಡ್ ಮಾಡಿದ್ದ. ಆ ಬೆರಗುಗೊಳಿಸುವ ಸೌಂಧರ್ಯವನ್ನು ಕಂಡಕೂಡಲೆ ನಾ ಉದ್ಗರಿಸಿದ ಪದವೊಂದೇ "ಮ್ಯಾಗ್ನಿಫಿಸೆಂಟ್".. ಸ್ವಲ್ಪ ಸಮಯ ಕಳೆದು ಅದೇ ಫೋಟೋವನ್ನು ಫೇಸ್ಬುಕ್ ನಲ್ಲಿ ನೋಡಿದೆ, ಅಲ್ಲಿ ಮೊದಲೇ ಯಾರೋ ಒಬ್ಬರು "ಮ್ಯಾಗ್ನಿಫಿಸೆಂಟ್" ಎಂದು ಕಾಮೆಂಟ್ ಮಾಡಿದ್ದರು.
ಒಂತರಾ ಸಂಕಟವಾಯಿತು.
ಕೆಲವು ದಿನಗಳ ಹಿಂದೆಯಷ್ಟೇ ಯಾವುದೊ ವಿಷಯದಲ್ಲಿ, ನಾನು ಹಾಗು ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಒಂದೆ ರೀತಿಯ ವಾಕ್ಯ ಬಳಕೆ ಮಾಡಿದ್ದೆವು.!!!
ಅರೇ!!! ಯಾಕೀಗೆ?
ಒಂದು ವಿಷಯದ ಬಗ್ಗೆ ಸಾದಾರಣವಾಗಿ ಎಲ್ಲರೂ ಅಪ್ರೋಚ್ ಮಾಡುವ ವಿಧಾನ ಆಲ್ಮೋಸ್ಟ್ ಒಂದೇ ರೀತಿಯದಾಗಿರುತ್ತದೆ. ಯಾಕೀಗೆ?
ಮೊದಲಿನಿಂದ ನಮ್ಮ DNAಯಲ್ಲಿ ಇದು ಹರಿದು ಬಂದಿದೆಯೇ? ಈ ಈ ವಿಷಯವನ್ನು ಹೀಗೀಗೆ ನೋಡಬೇಕು, ಹೀಗೆ ಅರ್ಥಯಿಸಿಕೊಳ್ಳಬೇಕು, ಹೀಗೆ ಪ್ರತಿಕ್ರಿಯಸಬೇಕೆಂದು??
ನೋ. ನನಗದು ಸ್ವಲ್ಪವೂ ಇಷ್ಟವಾಗುತ್ತಿಲ್ಲ.
ನನಗೆ ಬರಿದಾಗುವಾಸೆ.
ಎಲ್ಲಾ ಸಾಮಾನ್ಯ ಯೋಚನೆಗಳಿಂದ ಮುಕ್ತವಾಗುವಾಸೆ.
ಖಾಲಿಯಾಗುವಾಸೆ.
ಪೂರ್ಣವಾಗಿ ಖಾಲಿಯಾಗಿ ಎಲ್ಲವನ್ನು ಹೊಸತಾಗಿ ನೋಡುವಾಸೆ.!!
ನೋಡಿ ಕಲಿಯುವಾಸೆ. ಮಾಡಿ ತಿಳಿಯುವಾಸೆ.!
ನನಗೆ ನಾನಾಗುವಾಸೆ.
ಹುಚ್ಚುತನದ ಪರಮಾವಧಿಯ ತಲುಪುವಾಸೆ.
ಸಾಮಾನ್ಯರಲ್ಲಿ ಸಾಮಾನ್ಯವಾಗುವಾಸೆ.
(ಎಕ್ಸ್ಟ್ರಾ ನಾರ್ಮಲ್ ಇನ್ ಬಿಟ್ವೀನ್ ದಿ ನಾರ್ಮಲ್ ಹ್ಯೂಮನ್ಸ್ )
ಆದರೆ ನಾನೇಕೆ ಹೀಗೆ?
ಎಲ್ಲರಂತೆಯೇ.

Monday, 5 February 2018

She

Soft,
yet
very Strong. 

Bus Yunhi

ಬರಿದಾಗಿರುವೆ ಬರಡಲ್ಲ. 

Ecuadorian hairless dog

ಏಕ್ವಡೋರ್ ಅಲ್ಲಿ ಕಂಡು ಬರುವ ಹೇರ್ಲೆಸ್ಸ್ಸ್ ಡಾಗ್ ಬಗ್ಗೆ ಓದ್ತಾಇದ್ದೆ. ಅಚಾನಕ್ ಆಗಿ ಇಂಗ್ಲಿಷ್ ಫ್ಯಾಂಟಸಿ ಮೂವೀಸ್, ಫಿಕ್ಷನ್ಸ್ ಹಾಗು ಧಾರವಾಹಿಗಳಲ್ಲಿ ಬರುವ ವಿಚಿತ್ರ ವೈಲ್ಡ್ ಪ್ರಾಣಿಗಳೆಲ್ಲಾ ನೆನಪಿಗೆ ಬಂತು. (Ecuadorian hairless is cute. ಅದಕ್ಕೂ ನಾನಿಲ್ಲಿ ಹೇಳುತ್ತಿರುವುದಕ್ಕೂ ಸಂಭಂದವಿಲ್ಲ) ನಮ್ಮ ಹಿಂದೂ ಮೈಥಾಲಜಿ ಒಳಗು ಅಂತ ದುಷ್ಟ ಪ್ರಾಣಿಗಳ ಉಲ್ಲೇಖವಿರಬಹುದೇನೋ ಅನ್ನಿಸಿ ಅಪ್ಪನ ಹತ್ತಿರ ಕೇಳಿದೆ,
"ಅಪ್ಪಾ, ನಮ್ಮ ಮೈಥಾಲಜಿಯಲ್ಲಿ ಯಾವುದಾದರು ದುಷ್ಟ ಪ್ರಾಣಿಗಳ ಉಲ್ಲೇಖವಿದೆಯೇ? ಓದಿದ್ದಿರೆ"
ಒಂದು ಕ್ಷಣವೂ ಯೋಚಿಸದೆ ಪಟ್ಟ್ ಎಂದು ಉತ್ತರಿಸಿದರು.
"ಮನುಷ್ಯನಷ್ಟು ಉಘ್ರ, ದುಷ್ಟ, ಕ್ರೂರ ಪ್ರಾಣಿ ಮತ್ತೊಂದಿಲ್ಲ ಮಗಳೇ". 

ಅವಳು (ಅಭ್ಬಾ, ಪ್ರತಿ ತಿಂಗಳ ಆ ಮೂರು ದಿನಗಳು)

ಋತುಚಕ್ರ ನೈಸರ್ಗಿಕ ಪ್ರಕ್ರಿಯೆ. ಇದರಲ್ಲಿ ನಾಚಿಕ್ಕೊಳ್ಳುವಂತಹ ಯಾವುದೇ ಪ್ರಸಂಗವಿಲ್ಲ.
ಈ ಸಂದರ್ಭದಲ್ಲಿ ದೇಹದಲ್ಲಿಯಾಗುವ ಅತೀವವಾದ ಹಾರ್ಮೋನಲ್ ಏರಿಳಿತಗಳು, ಆಕೆಯ ಮಾನಸಿನ ಸ್ಥಿತಿಯನ್ನು ಸ್ವಲ್ಪ ಹೆಚ್ಚೇ ಸೂಕ್ಷ್ಮವನ್ನಾಗಿಸುತ್ತದೆ.  ಋತುಚಕ್ರದ ಸಂದರ್ಭದಲ್ಲಿ ೧೦೦ ರಲ್ಲಿ ಶೇಕಡಾವಾರು ೨೦ ರಷ್ಟು ಮಹಿಳೆಯರಿಗೆ ದೇಹದ ನಾನಾ ಭಾಗಗಲ್ಲಿ ಸೆಳೆತಗಳು ಹಾಗು ಅಸಾಧ್ಯ ನೋವುಗಳು ಕಂಡು ಬರುತ್ತದೆ. ಉಳಿದ ಕೆಲವರಿಗೆ ಸಾಮಾನ್ಯ ದಿನದಂತೆಯೆ ಇರುತ್ತದೆ. ಆಹಾರ ಶೈಲಿ, ಧೈನಂದಿನ ಚಟುವಟಿಗೆಗಳ್ಲಲಿ ವ್ಯತ್ಯಾಸ ಅಥವಾ ಭಾವನಾತ್ಮಕ ಒತ್ತಡಗಳು, ಹೀಗೆ ಹತ್ತು ಹಲವು ವಿಷಯಗಳು ಋತುಚಕ್ರ ಸೆಳೆತೆಗಳಿಗೆ ಬಹಳವಾಗಿಯೇ ಪರಿಣಾಮಗಳು ಬೀರುತ್ತವೆ. ಈ ನೋವುಗಳು ಅಷ್ಟಿಷ್ಟು ಸಾಮಾನ್ಯವಾದವಲ್ಲ ಸೀಳು ನಾಯಿ ಮಾಂಸಕಾಂಡಗಳ ಕಚ್ಚಿ ಎಳೆದಂತೆ ಕೆಳ ಹೊಟ್ಟೆಯ ಮಾಂಸವನ್ನು ಯಾರೋ ಜೋರಾಗಿ ಎಳೆದು ಕಿತ್ತು ತಿಂದಂತಾಗುತ್ತದೆ. 
ಒಂದಲ್ಲ ಒಂದು ಸಲವಾದರೂ ಹೆಣ್ಣಾಗಿ ಹುಟ್ಟಿದ ಜೀವವೊಂದು ಈ ರೀತಿಯಾದ ಬೇನೆಯನ್ನು ಅನುಭವಿಸಿಯೇ ಅನುಭವಿಸಿರುತ್ತಾಳೆ. ಇಂತಹ ಸಂದರ್ಭಗಳ್ಲಲಿ ಆಕೆಗೆ ಬೇಕಿರುವುದು ನೆಮ್ಮದಿ ಹಾಗು ಅವಳನ್ನು, ಅವಳ ಚಿತ್ತವನ್ನು (ಮೂಡ್) ಅರ್ಥಮಾಡಿಕೊಂಡು ಅನುಸರಿಸಿ ಕೊಂಡೋಗುವ ಸಂಗಾತಿ. 
ಅವಳಿಗಾಗಿ ಕರುಣೆ ಬೇಡ, ಪ್ರೀತಿಸಿ, ಸಹಜವಾಗಿ ನಡಿಸಿಕೊಳ್ಳಿ. ಆಫ್ಟರ್ ಆಲ್, ಇಟ್ಸ್ ನ್ಯಾಚುರಲ್. ನಥಿಂಗ್ ಇಸ್  ದೇರ್ ಟು ಬಿ ಅಷೇಮ್ಡ್ ಅಬೌಟ್.