Wednesday, 28 April 2021

F**K the "ಮುಸ್ರೆ, ಎಂಜಲು, ಶುದ್ಧ ಮತ್ತು ಮುಟ್ಟು"

ಮುಸ್ರೇ(ಉತ್ತರ ಕನ್ನಡ ಜಿಲ್ಲೆಯ ಭಾಷೆ )/ಕೊಳೆ(ಧಕ್ಷಿಣ ಕನ್ನಡ ಜಿಲ್ಲೆಯ ಭಾಷೆ); ಅಂದರೆ ಅನ್ನವನ್ನು ಮುಟ್ಟಿ ಬೇರೆ ಯಾವುದೇ ಪದಾರ್ಥ ಅಂದರೆ ಬೇರೆ ಅಡಿಗೆಗಳನ್ನೂ  (ಉದಾಹರಣೆಗೆ ಪಲ್ಯ, ಸಾಂಬಾರು, ಕೋಸಂಬರಿ, ಚಟ್ನಿ ಇತ್ಯಾದಿ.) ಮುಟ್ಟುವ/ ಬಡಿಸುವ ಮುನ್ನ ಕೈ ತೊಳೆದು ಮುಟ್ಟಬೇಕು/ ಬಡಿಸಬೇಕು (FYI:ಪ್ರತೀಸಲವೂ). ಹಾಗು ಅಕ್ಕಿ ಇಂದ ತಯಾರಿಸಿದ ಎಲ್ಲಾ ವಸ್ತುವಿಗಿ ಇದು ಅನ್ವಹಿಸುತ್ತದೆ. ಅಂದರೆ, ಅಕ್ಕಿ ಹಪ್ಪಲ್ಲ, ಅಕ್ಕಿ ರೊಟ್ಟಿ, ಅಕ್ಕಿ ಪಾಯಸ etc. ಅಲ್ಲದೆ ಇದರನ್ನು ತಯಾರಿಸಲು ಬಳಸಿದೆ ಎಣ್ಣೆ(ಆ ಉಳಿದ ಎಣ್ಣೆಯನ್ನು ಬೇರೇ ಯಾವುದೇ ಆಹಾರಕ್ಕೆ ಮತ್ತೆ ಬಳಸುವಂತಿಲ್ಲ, ಕೇವಲ ಮುಂದೆ ನೀವು ಮಾಡುವ ಅಕ್ಕಿ ಪದಾರ್ಥಕ್ಕೆ ಮಾತ್ರ ಬಳಸಬೇಕು), ಪಾತ್ರೆ, ಪಗಡ, ಎಲ್ಲವೂ ಮುಸ್ರೆಯೇ. ಅಕಸ್ಮಾತ್ ಈ ನಿಯಮ ಮರೆತು ನೀವು ಪಾಲಿಸದಿದ್ದಲ್ಲಿ, ನೀವು ಅನ್ನವನ್ನು/ಅಕ್ಕಿಯ ಅಡಿಗೆಗಳನ್ನು ಮುಟ್ಟಿ ಬೇರೆ ಯಾವ ತಿನ್ನುವ/ ಅಥವಾ ಪಾತ್ರೆ ಇತ್ಯಾದಿ ಮುಟ್ಟಿದರೆ ಅದೂ ಕೂಡ ಮುಸ್ರೆ ಆಗುತ್ತದೆ.  (ಯಾರು ಸತ್ತರು ಚಿಂತೆಯಿಲ್ಲ)

ಎಂಜಲು; ನೀವು ಊಟವನ್ನು ಬಲಗೈಯಲ್ಲೇ ಮಾಡು ತಿರಬಹುದು, ಆದರೂ ನಿಮ್ಮ ಎಡಗೈ ಎಂಜಲು(ನಿಮ್ಮ ಎಂಜಲು ತಟ್ಟೆಯನ್ನು ಮುಟ್ಟದ್ದಿದರು). ಹಾಗಾಗಿ ನಿಮಗೆ ಪ್ರತಿಸಲವೂ ಊಟವನ್ನು ಬೇರೆಯವರು, ಅಂದರೆ ಮಡದಿ, ತಾಯಿ, ಅಥವಾ ಇನ್ನೂಯಾರಾದರು ಬಡಿಸಬೇಕು. ಇಲ್ಲವಾದಲ್ಲಿ ನೀವು ನಿಮ್ಮ ಬಾಳೆ/ಊಟದ ತಟ್ಟೆ ಪಕ್ಕ ಒಂದು ಸ್ವಲ್ಪ ನೀರನ್ನು ಚೆಲ್ಲಿಕೊಂಡು, ಅದರಲ್ಲಿ ನಿಮ್ಮ ಎಡಗೈಯನ್ನು ಮುಟ್ಟಿ ನಂತರ ಅಡಿಗೆಯನ್ನು ಬಾಡಿಸಿಕೊಳ್ಳಬೇಕು. ಇದು ಪ್ರತಿಸಲವೂ ಅನ್ವಯವಾಗುತ್ತದೆ. ಅಂದರೆ, ಮೊದಲಿಗೆ ನೀವು ಅಣ್ಣ ಹಾಕಿಕೊಂಡು, ಕೈ ತೊಳೆದು ಸಾಂಭಾರ್ ಹಾಕಿಕೊಂಡು ಊಟ ಮಾಡುತ್ತಿರುವಾಗ ಉಪ್ಪು ಬೇಕೆನಿಸಿದರೆ ಮತ್ತೆ ನೀವು ಕೈ ತೊಳೆದು ಕೊಂಡು/ಅಥವಾ ನಿಮ್ಮ ತಟ್ಟೆಯ ಪಕ್ಕದಲ್ಲಿ ನಿರ್ಮಿಸಿರು ನೀರಿನ ಕೊಳ (ಪಕ್ಕದಲ್ಲಿ ಚೆಲ್ಲಿಕೊಂಡಿರು ನೀರು) ದಲ್ಲಿ ಕೈ ಅದ್ದಿ/ಮುಟ್ಟಿ ನಂತರೆವೆ ಹಾಕಿಕೊಳ್ಳಬೇಕು. ಈ ನಿಯಮ ಮರೆತಲ್ಲಿ, ನೀವು ಮುಟ್ಟಿದ ಎಲ್ಲ ಆಹರವು ನಿಮ್ಮದೇ, ಅದನ್ನು ನೀವೇ ತಿಂದು ಕಾಲಿ ಮಾಡಬೇಕು ಅಥವಾ ನಿಮ್ಮ ಎಂಜಲು ತಿಂದರೆ ತೊಂದರೆ ಇಲ್ಲದ ವ್ಯಕ್ತಿ ಅಂದರೆ ಗಂಡ ತನ್ನ ಹೆಂಡತಿ, ಮಗು ತನ್ನ ತಾಯಿಗೆ ಕೊಡಬಹುದು. ಬೇರೆಇನ್ಯಾರು ತಿನ್ನುವಂತಿಲ್ಲ. ಇಲ್ಲಿ ಒಂದು ಇನ್ನು ಒಂದು ವಿಷಯವಿದೇ, ಗಂಡ ತನ್ನ ಹಿಂಡತಿಗೆ ಕೊಡಬಹುದೇ ವಿನಃ ಹೆಂಡತಿ ಗಂಡನಿಗೆ ಕೊಡುವ ಹಾಗಿಲ್ಲ.  ಉಳಿದರೆ ಬಿಸಾಕಬೇಕು. (ಎಷ್ಟೇ ಸಮಯ ವ್ಯಾಯ್ವದರು ತೊಂದರೆ ಇಲ್ಲ)

ಶುದ್ಧ/ ಮಡಿ; ಇದರ ಕಥೆ ಎಷ್ಟು ದೊಡ್ಡದೆಂದರೆ, ನಾನು ಅರ್ಥಮಾಡಿಕೊಳ್ಳಲ್ಲು ಧೈರ್ಯವೇ ಮಾಡಿಲ್ಲ. ನಾನು ಅರ್ಥ ಮಾಡಿಕೊಂಡಿರುವುದೇ ಇಷ್ಟು, ಮಡಿಬಟ್ಟೆಯನ್ನು ಕೆಲಸದವರ ಬಳಿ ತೊಳಿಸುವುದಿಲ್ಲ, ನಾವೇ ತೊಳೆದು ತಂದು ಮಡಿ ಮೆತ್ತಿ/ಮಡಿ ಕೋಣೆ ಯಲ್ಲಿ ವನಾಗಕಬೇಕು. ಅದನ್ನು ನಂತರ ಯಾರುಸಹ ಯಾವುದೇ ಕಾರಣಕ್ಕೂ ಮುಟ್ಟಬಾರದು. ಕೇವಲ ಮಡಿಯಲ್ಲಿ ಇರುವವರು ಮಾತ್ರ ಅದರನ್ನು ತೆಗೆದುಕೊಂಡು ಹೋಗಿ ಈಗಷ್ಟೇ ಸ್ನಾನಮಾಡಿ ಬಚ್ಚಲಿನಿಂದ ಬಂದವರಿಗೆ ಕೊಡಬಹುದು, ಅಥವಾ ಸ್ನಾನ ಮಾಡಿಕೊಂಡು ಆ ವ್ಯಕ್ತಿಯೇ ಮಡಿ ಮೆತ್ತಿ/ಮಡಿ ಕೋಣೆಗೆ ಹೋಗಿ ಬಟ್ಟೆ ಧರಿಸಬೇಕು. ಈ ನಡುವೆ ಅವನು ಸಂಪೂರ್ಣ ಮಡಿಯಲ್ಲಿ ಏರಬೇಕು. ಅಂದರೆ ಬಚ್ಚಲಿನಿಂದ ಮಾಡಿ ಕೋಣೆಗೆ ಬರುವವರೆಗೂ ಯಾರನ್ನು, ಏನನ್ನನು ಮುಟ್ಟದೆ ಬಂದು ಮಡಿ ಧರಿಸ ಬೇಕು. (ನಿಮ್ಮನ್ನು ಯಾರು ನಿರ್ವಸ್ತ್ರದಲ್ಲಿ ನೋಡಿದರು ಚಿಂತೆ ಇಲ್ಲ)

 ಮುಟ್ಟು/ ಹೆರಗೆ; ತಿಂಗಳ ಮೂರು ದಿನ (ಋತುಚಕ್ರ ಪ್ರತಿಕ್ರಿಯೆಯ ದಿನ), ಅಡಿಗೆ ಮನೆಯ ಕೆಲಸಮಾಡಬಾರದು; ಅಡಿಗೆ. ಯಾವುದೇ ಪತ್ರೆ ಪಗಡ ಮುತ್ತ ಬಾರದು. ನಿಮಗೆ ದೂರದಿಂದಲೇ ನಿಮ್ಮ ಊಟದ ತಟ್ಟೆ/ಬಾಳೆಯೆಲೆ ಅವರಿಗೆ(ಊಟಬಡಿಸುವವರಿಗೆ) ಸ್ವಲ್ಪವೂ ತಗುಲದಂತೆ ಊಟ ಬಡಿಸುತ್ತಾರೆ. ಊಟ ಮಾಡಿದ ನಂತರ ನಿಮ್ಮ ಬಾಳೆಯನ್ನು ಅವಳೆಗೆ ಬಿಸುಡಬೇಕು (ಕಾರಣ ಅದನ್ನು ಎಲ್ಲರೂ ಬಳಸುವ ಕಸದ ಬುಟ್ಟಿಗೆ ಹಾಕುವಂತಿಲ್ಲ/ ಹಸುಗಳಿಗೆ ತಿನ್ನಲು ಕೊಡುವಂತಿಲ್ಲ, ಗಿಡಗಳ ಬುಡಕ್ಕೆ ಹಾಕುವಂತಿಲ್ಲ); ಊಟದ ತಟ್ಟೆಯಾದರೆ ನೀವು ಅದನ್ನು ತೊಳೆದು ಯಾರಿಗೂ ತೊಂದರೆ ಆಗದಂತೆ ದೂರ ಮನೆ ಇಂದ ಹೊರಗೋ ಅಥವಾ ಮನೆಯ ಯಾವುದೊ ಮೂಲೆಯೊ ಅಥವಾ ಬಚ್ಚಲುಮನೆಯಲ್ಲಿ ಇಡಬೇಕು. ತದನಂತರ ನೀವು ಊಟಕ್ಕೆ ಕುಳಿತ ಜಾಗವನ್ನು ಒಮ್ಮೆ ನಿಮ್ಮ ಕೈಗಳ್ಳಲ್ಲಿ ವರಸಿ, ನಂತರ ಸಗಣಿ ಹಾಕಿ ಒರಸಿ, ನಂತರ ಬಟ್ಟೆಯಲ್ಲಿ ಒರಸ ಬೇಕು. ಆ ಬಟ್ಟೆಯನ್ನು ತೊಳೆದು ಯಾರು ಮುಟ್ಟದ ಜಾಗದಲ್ಲಿ ಇಡಬೇಕು. (ಜಾಗರೂಕರಾಗಿ ಮಾಡಿ, ಸಣ್ಣದೊಂದು ಹನಿ ನೀರು ಕೂಡ ಉಳಿಯಬಾರದು; ದೂರ ಅದೆಲ್ಲೋ ಕೂತಿರುವ ಅಜ್ಜಿ ಕಣ್ಣಿಗೆ ಅದು ಕಂಡು, ಮಗ ಅಲ್ಲಿ ಒಂದು ಹನಿ ಹಾಗೆ ಇದೆ ವರೆಸು ಇನ್ನೊಮ್ಮೆ ಅಂದಾರು). ಇಲ್ಲಿಗೆ ಕಥೆ ಮುಗಿಯಲಿಲ್ಲ. ನೀವು ದೇವರ ಕೋಣೆಯಿಂದ ಹೇಗೂ ಬಹಿಷ್ಕಾರವೇ ಬಿಡಿ, ಆದರೆ ಮನೆಯ ಬೇರೆ ಯಾವುದೇ ಕೋಣೆಗೂ ಹೋಗುವಂತಿಲ್ಲ. ಹಾಸಿಗೆ ಯಲ್ಲಿ ಮಲಗುವು ಹಾಗಿಲ್ಲ, ಚಾಪೆಯಲ್ಲಿ ಮಲಗಬೇಕು. ಯಾವುದೇ ವಸ್ತ್ರಗಳನ್ನು ಮುಟ್ಟುವಹಾಗಿಲ್ಲ. ಗಂಡನನ್ನು ಮಗುವನ್ನು ಮುಟ್ಟುವಹಾಗಿಲ್ಲ, ಯಾವದೇ ಬೇರೆ ವ್ಯಕ್ತಿಯನ್ನು ಮುಟ್ಟುವಹಾಗಿಲ್ಲ. ಕಾಲುವರೆಸುವ mat ಮುಟ್ಟುವಂತಿಲ್ಲ. ''ಬೆಕ್ಕಿನ ಬಿಡಾರ ಬೇರೆ"ಅಂತ ಎಲ್ಲರಿಂದ ಎಲ್ಲಾವುದರಿಂದ ದೂರವಿರಬೇಕು. ಮನೆಗೆ ಹೋದವರು ಬಂದವರು ಅಕ್ಕ ಪಕ್ಕದವರು ಕೇರಿಯವಿರಿಗೆಲ್ಲ ನಿಮಗೆ ಮುಟ್ಟಾದರೆ ವಿಷಯ ತಿಳಿಯುತ್ತದೆ. ಬಂದವರೆಲ್ಲ ನಿನಗೆ ಮುಟ್ಟ ಅನ್ನುವುದೊಂದು ಬಾಕಿ. ಮಜವೆಂದರೆ ನಿಮ್ಮ ಕೆಲಸದವರು ನಿಮ್ಮ ಯಾವ ಕೆಲಸವನ್ನು ಮಾಡುವಂತಿಲ್ಲ. ಮೂರ ದಿನದ ಈ ಸುಂದರ ದಿನದ ನಂತರ ಬರುತ್ತದೆ ಮೀಯುವ ದಿನ. ಬೆಳಗ್ಗೆ ಬೇಗ ಎದ್ದು, ಮನೆಯ ಹಿರಿಯ ಹೆಂಗಸಿನ ಬಳಿ, ತೆಂಗಿನ ಎಣ್ಣೆ ತೆಗೆದುಕೊಂಡು, ತಲೆಗೂದಲಿಗೆ ಸವರಿ, ಅರಿಸಿನ ಪುಡಿ ಮುಖಕ್ಕೆ ಹಚ್ಚಿ, ಸ್ವಲ್ಪ ಅರಿಸಿನ ಮೀಯುವ ನೀರಿಗೂ ಹಾಕಿ ಸ್ನಾನ ಮಾಡಬೇಕು; ಅದಕ್ಕೂ ಮುಂಚೆ ನೀವು ಬಳಸಿದೆ ಚಾಪೆ, ವಸ್ತ್ರ, ತಟ್ಟೆ, ಬಟ್ಟಲ್ಲೂ ಏನೇನಿವೆ ಅವೆಲ್ಲವನ್ನು ತೊಳೆಯಬೇಕು. ಇಷ್ಟದಾ ನಂತರ tada, welcome to boring normal day.

 ಬೋನಸ್ ೧: ನಿಮ್ಮ ಸ್ಯಾನಿಟರಿ ಪ್ಯಾಡ್ ವ್ಯವಹಾರ/ ವಿಲೇವಾರಿ ಹೇಗೆ ಮಾಡುತ್ತಿರೋ ನೋಡಿ. ನನಗಂತೂ ಅದರ ಬಗ್ಗೆ ಬರೆಯಲು ಸಹ ಮನ್ನಸ್ಸಾಗುತ್ತಿಲ್ಲ. ನೆನಪಿನಲ್ಲಿಡಿ ಯಾರು ಮುಟ್ಟದ, ಹಾವುಗಳು ಓಡಾಡದ (ಸರ್ಪ ದೋಷ/ ನಿಮ್ಮ ಮುಂದಿನ ಪೀಳಿಗೆಗೆ ಕಣ್ಣಿನ ದೃಷ್ಟಿ ದೋಷ ಬರುವುದು), ಮುನಿಸಿಪಲ್ ವಾನ್ಗೆ ಕೊಡದ ಹಾಗೆ, ಹರಿವ ನೀರು ಕಲುಷಿತವಾಗಿ, ಅದನ್ನು ನಾವು ಕುಡಿದು ಸತ್ತರು ಚಿಂತೆಯೆಲ್ಲದ ಹಾಗೆ dispose ಮಾಡಬೇಕು. FYI: ಇದು ನಿಮ್ಮ ಕೇವಲ ಮೂರೂ ದಿನದ ಪ್ಯಾಡ್ಗೆ ಮಾತ್ರ ಅನ್ವಯ. ಅದರ ನಂತರದ ದಿನಗಲ್ಲಿ ಬಳಸುವ ಪ್ಯಾಡ್ ಪಂಚಾಂಬ್ರುತಕ್ಕೆ ಸಮ. ಅದನ್ನು dustbin ಹಾಕುವ ಅವಕಾಶವಿದೆ. ಅದು ತನ್ನ ಸ್ಥಾನವನ್ನು ಗಿಟ್ಟಿಸಿಕೊಡು ಬಾಹುಮನಾ ವಿಜೇತಳಾಗಿದ್ದಲ್ಲೇ. yay,, ಚಪ್ಪಾಳೆ. 

ಬೋನಸ್ ೨: ಮರೆಯದಿರಿ ನೀವು ಈ ಮೂರುದಿನ ಬಹಳಾನೇ ಶಕ್ತಿಯುತ ಮಹಿಳೆ. ನೀವು ಯಾವುದೇ ಹಸುಗೂಸು/ ಸಣ್ಣ ಮಕ್ಕಳನ್ನು ಮುಟ್ಟಿದರೆ/ ಹತ್ತಿರ ಸುಳಿದರೋ (ಅವರ ತಂದೆ ತಾಯಿಗೆ ನೀವು ಮುಟ್ಟು ಎಂಬ ವಿಷಯದ ಅರಿವಿಲ್ಲದೆಯೋ/ ಅಥವಾ ಪೇಟೆಯ ದಾರಿಯಲ್ಲಿ ಅಪರಿಚಿತರಾಗಿಯೋ), ಆ ಮಗುವಿಗೆ ಮುಟ್ಟು ದೋಷ ಕಾಣಿಸಬಹುದು. ಇದರಿಂದ ಮುಕ್ತ ಗೊಳ್ಳಲ್ಲು ಪಾಪ ಪಾಪು ಮೆಹೆಂದಿ ಕಷಾಯ ಕುಡಿಯ ಬೇಕಾದೀತು. 

Welcome aboard. you are now qualified enough.  

Monday, 12 April 2021

ಹಾಗೇಸುಮ್ಮನೆ

 ಯಾವಾಗ ನೋಡಿದರು ನನ್ನ ದೇಹದ ಬಗ್ಗೆ ಹೀಯಾಳಿಸುವುದನ್ನು ಕೇಳುತಿದ್ದೆ. ಈಗ ಜೊತೆಯಲ್ಲಿ ನನ್ನ ನಿರುದ್ಯೋಗವು ಸೇರಿಕೊಂಡಿದೆ. ಮನುಷ್ಯರೊಂದಿಗೆ ಜೀವಿಸುವುದೇ ಬೇಡವೆನಿಸುತ್ತಿದೆ. ಸುಂದರ ರೂಪವಿದ್ದರೂ ದಪ್ಪವಿರುವ ಕಾರಣದಿಂದ ಸಾಕಷ್ಟು ನೋವು ಅನುಭವಿಸ್ಸಿದಾಯ್ತು, ಈಗ ಒಳ್ಳೆಯ ಡಿಗ್ರಿ ಕೈಯಲ್ಲಿ ಇದ್ದರು ಕೆಲಸವಿಲ್ಲದೇ ತೆಗಳಿಕೆಗೆಗೆ ಕಾರಣವಾಗಿರುವೆ. ನನ್ನದೇ ನಿರ್ಧಾರಗಳು, ನಾನೇ ಕಾರಣ ನನ್ನೀಸ್ಥಿತಿಗೆ. ನಾನು ನನ್ನೊಂದಿಗೆ ಖುಷಿಯಾಗಿಯೇ ಇದ್ದೇನೆ, ಆದರೆ ಜನಗಳ ಮಾತು ನನ್ನನು ಬಹಳವಾಗಿ ನೋಯಿಸುತ್ತಿದ್ದೆ. 


  

Sunday, 28 March 2021

Why?

ನನಗಿಷ್ಟವಾದಂತೆ ನಾ ನಿನ್ನ ಪ್ರೀತಿಸಿದೆ. 

ನನ್ನನ್ನು ನೀನು ಹೇಗೆ ಪ್ರೀತಿಸಬೇಕೆಂಬ ಆಸೆ ನನಗಿದೆ ಹಾಗೆ ನಾ ನೀನ್ನ ಪ್ರೀತಿಸಿದೆ. 

ಆದರೆ ನೀ ಹೇಗೆ ಪ್ರೀತಿಸಿದೆ ನನ್ನ? 

ನಿನಗೆ ನಾ ನಿನ್ನ ಹೇಗೆ ಪ್ರೀತಿಸಬೇಕೆಂದಿದೆ ಆ ರೀತಿಯಲ್ಲೆ?

ನನಗಿದು ಅರಿವಾಯಿತು, ಆದರೆ ನಿನಗೆ?

Thursday, 25 February 2021

A soundless noise

ಯಾರ ಜೊತೆ ಮಾತನಾಡಲಿ ನಾನು ಯಾರ ಜೊತೆ?  ಮಾತನಾಡಲು ಇರುವರು ಹಲವಾರು. ಅವರೊಂದಿಗೆ ಮಾತನಾಡಲು ಮಾತಿಲ್ಲ ನನ್ನ ಬಳಿ. ಹೇಳಬೇಕಿರುವುದೆಲ್ಲ ನಿನಗೆ. ಮಾತನಾಡಲು ಬೇಕಿರುವವನು ನೀನೊಬ್ಬನೇ. ಕೀಳಿಸಿಕೊಳ್ಳ ಬೇಕಿರುವುದು ನೀ ತಾನೇ? ಏತಕ್ಕಾಗಿ ಕಾಡಿಸುವೆ, ಕಾಯಿಸುವೆ, ನೋಯಿಸುವೆ? ಅಂದು ನೀ ಕೇಳಿದ್ದೆ "ಏನು ಉಡುಗರೇ ಬೇಕೆಂದು", ನ ಹೇಳಿದ್ದೆ "ಕೊಡು ನಿನ್ನ ಸ್ವಲ್ಪ ಸಮಯವ ನನಗೆಂದು", ''ನನ್ನ ಎಲ್ಲ ಸಮಯವೂ ನಿನಗೆಯಲ್ಲವೇ"ಅಂದ್ದಿದ್ದೆ ನೀನು. ಈಗ ೧ ನಿಮಿಷವೂ ನನ್ನ ಮಾತ ಕೇಳಲು ಸಮಯವಿಲ್ಲ ನಿನಗೆ. ಅಥವಾ ಮನಸೇ ಇಲ್ಲವೇ? ದಿನಕ್ಕೆ ಆಗುವುದೇ ೪ ಭೇಟಿ. ತಿಂಡಿ, ಊಟ, ಕಾಫಿ, ನಿದ್ದೆ.! ತಿನ್ನುವಾಗಲು ಮೊಬೈಲ್ ಫೋನ್ ಬೇಕು. ಕಾಫಿ ಸಮಯದಿ ಅಮ್ಮ ಅಜ್ಜಿ ಸೊಸೆ ಸಾಕು. ಮಲುಗುವಾಗ ಒಂದು ಚೆಸ್ ಆಟ. ಜೊತೆಯಲ್ಲಿ ಸುಮ್ಮನೆ ಕುಳಿತಿರಬೇಕು ನಾನು. ಕೂದಲಿಗೆ ಎಣ್ಣೆ ಹಾಕುವುದೊಂದೇ ನೆನಪು, ಮರುಗಳಿಗೆಯಲ್ಲಿ ನಿನ್ನ ಗೊರಕೆಯ ಇಂಪು.  


 

Sunday, 21 February 2021

ಆಶ್ಚರ್ಯ ಹಾಗು ಕೋಪ

 ಆಶ್ಚರ್ಯ ಹಾಗು ಕೋಪ ಎರೆಡು ನನ್ನಮ್ಮನ ಮೇಲೆ! ಏತಕ್ಕಾಗಿ ಆಕೆ ತನಗೆಂದು ಏನನ್ನು ಮಾಡಲಿಲ್ಲ? ಎಂಬ ಪ್ರಶ್ನೆ? ಇದಕ್ಕೆ ನಾನು ಒಂದು ಕಾರಣವಿರಬಹುದೇ? ಎಂಬ ಒಂದು ಪ್ರಶ್ನೆ.  ಇಂದು ನಮ್ಮ ಮನೆ (ಗೋಕರ್ಣದಲ್ಲಿ) ಇದ್ದೇನೆ. ಇಲ್ಲಿ ನನ್ನ ಅತ್ತಿಗೆ ತನ್ನ ಮಗಳು (ಕೇವಲ ೧೦ ವರ್ಷ) ಕೇಳಿದರೆ ಒಂದು ಲೋಟ ನೀರು ಕಾಡುವುದಕ್ಕೂ ಮೀನಾ ಮೇಷ ಎಣೆಸುತ್ತಾರೆ. ನೀನೆ ತೇಗೋಳೇ ಮಗಳೇ ಅನ್ನುತ್ತಾರೆ!!! ((ಇದನ್ನು ನಾನು ತಪ್ಪು ಅಥವಾ ಸರಿ ಯೆಂದು ಹೇಳುವುದಿಲ್ಲ. ಆಕೆಯನ್ನು ದೂರುವ ಉದ್ದೇಶವು ನನಗಿಲ್ಲ.)) ಇದನ್ನೆಲ್ಲ ನೋಡಿದರೆ ನನಗೆ ಬಹಳಾನೇ ಆಶ್ಚರ್ಯವಾಗುತ್ತದೆ. ೨೧ವರ್ಷಗಳ ತನಕ ನನ್ನಮ್ಮ ನನಗೆ ಒಂದು ದಿನವೂ ಹಾಗನ್ನೇ ಇಲ್ಲವಲ್ಲ! ನಾನು ಕೇಳುವ ಮುನ್ನವೇ ನನಗೆ ಬೇಕಿರುವುದೆಲ್ಲ ತಯಾರಿರುತ್ತಿತ್ತು. ಎದ್ದಕೂಡಲೇ ಶುಚಿಯಾಗಲು ಬೇಕಾದ ಎಲ್ಲವೂ ಬಚ್ಚಲಲ್ಲಿ ತಯಾರಿರುತ್ತಿತ್ತು. ಶುಚಿಯಾಗಿ ಬಂದಕೂಡಲೇ ತಿನ್ನಲ್ಲು ರುಚಿಯಾದ ತಿಂಡಿ ತಯಾರಿರುತ್ತಿತ್ತು. ತಿಂಡಿ ತಿಂದಕೂಡಲೇ ನನ್ನ ತಲೆ ಕೂದಲನ್ನು ಬಾಚಿ ಜೆಡೆ ಹಾಕುತ್ತಿದ್ದಳು. ನಿಜಕ್ಕೂ!! ೨೧ ವರ್ಷಗಳ ತನಕ!! ಸಂಜೆ ಶಾಲೆ ಮುಗಿಸಿ ಮನೆಗೆ ಬರುವಷ್ಟರಲ್ಲಿ ಕುಡಿಯಲು ಹಾಲು, ತಿನ್ನಲು ತಿಂಡಿ ಮಾಡಿಟ್ಟುಕೊಂಡು ಕಾದಿರುತ್ತಿದಳು. ಒಂದೇ ಒಂದು ದಿನವೂ ಬಾಕಿ ಇಲ್ಲ. ಪ್ರತೀ ದಿನ. ನಾವೇನು ಶ್ರೀಮಂತರಾಗಿರಲಿಲ್ಲ. ಒಬ್ಬರು ಮನೆ ಕೆಲ್ಸದವರಿರಲಿಲ್ಲ. ಎಲ್ಲವನ್ನು ಅವಳೇ ಮಾಡುತಿದ್ದಳು. ಈಗ ಇಲ್ಲಿ (ಗೋಕರ್ಣದ ಮನೆಯಲ್ಲಿ) ಎಲ್ಲಾದಕ್ಕು ಮನೆಕೆಲಸಕ್ಕು ಕೆಲಸದವರಿದ್ದಾರೆ. ಆದರೂ ಇಲ್ಲಿಯ ವಾತಾವರಣ ನನ್ನನು ಪ್ರತಿದಿನವೂ ಪ್ರತಿ ಘಳಿಗೆಯೂ ಆಶ್ಚರ್ಯ ಗೊಳಿಸುತ್ತದೆ. ನಾನು ನನ್ನ ಜೀವನದಲ್ಲಿ ಕಳೆದ ಆ ಹಳೆಯದಿನಗಳು ಅಷ್ಟೊಂದು ಆರಾಮದಾಯಕವಿಗ್ಗಿದೆತೆ? ನಾನು ಅಷ್ಟೊಂದು ಅದೃಷ್ಟವಂತಳಾಗಿದ್ದೇನೆ? ನನ್ನಮ್ಮನಿಗೆ ನಾನು ಸಹಾಯ ಮಾಡಬದಿತ್ತೇ? ಅವಳಿಗೆ ನನ್ನಿಂದ ತೊಂದರೆ ಯಾಗಿದೆಯೇ? ಯಾಕೆ ಅವಳು ನನ್ನನು ಅಷ್ಟು ಚೆಂದಕ್ಕೆ ಬೆಳೆಸಿದಳು? ಒಂದು ದಿನವೂ ನಾನು ತಿಂದ ಬಟ್ಟಲ್ಲನ್ನು ತೊಳೆದಿಲ್ಲ, ನೀರು ಕುಡಿದ ಲೋಟವನ್ನು ಅದರ ಜಾಗದಲ್ಲಿ ಇಟ್ಟಿಲ್ಲ. ತೊಳೆದ ಬಟ್ಟೆಯನ್ನು ಮಡಿಚಿಟ್ಟಿಲ್ಲ. ಅದೆಲ್ಲಾ ಹೋಗಲಿ, ಕಾಲೇಜು ಗೆ ಯಾವ ಬಟ್ಟೆಯನ್ನು ಹಾಕಿಕೊಂಡು ಹೋಗಬೇಕೆಂದು ನಾನಾಗಿಯೇ ಬೀರು ಇಂದ ಬಟ್ಟೆಯನ್ನು ಒಂದು ದಿನವೂ ತೆಗೆದುಕೊಂಡಿಲ್ಲ. ನಾನು ಮಿಂದು ಬರುವಷ್ಟರಲ್ಲಿ ಇಸ್ತ್ರೀ ಯಾದ ಬಟ್ಟೆ ನನಗಾಗಿ ಕಾದಿರುತ್ತಿತ್ತು. ಶಾಲೆಗೆ ಬೇಕಿರುವ ಊಟದ ಬುತ್ತಿ, ಪುಸ್ತಕದ ಬ್ಯಾಗು, ಎಲ್ಲವೂ ಎ ಟು ಝೆಡ್  ತಯಾರಿರುತ್ತಿತ್ತು. ನನಗೆ ಸುಳಿವು ಕೂಡ ಸಿಕ್ಕಿರಲಿಲ್ಲ. ಇದನೆಲ್ಲ ತಯಾರುಮಾಡುಲೂ ಎಷ್ಟು ಶ್ರಮವಿರುತ್ತದೆ. ಶ್ರಮಕ್ಕಿಂತ ಹೆಚ್ಚು ಎಷ್ಟು ತಾಳ್ಮೆ ಹಾಗು ಪ್ರೀತಿ ಇರಬೇಕಾಗುತ್ತದೆ ಎಂದು. ಈಗ ನನಗೆ ಮದುವೆ ಆಗಿದೆ. ಆದರೂ ನಾನು ಆಕೆಯ ಮನೆಗೆ (ನನ್ನ ತವರು ಮನೆಗೆ) ಹೋದಾಗ, ನಾನು ಬರುತ್ತಿದ್ದೇನೆ ಎಂದು ಎಲ್ಲವನ್ನು ತಯಾರಿಡುತಲೇ. ಹಾಸಿಗೆಗೆ ತೊಳೆದು ಸೂಚಿಯ ಚಾದರ ಹಸಿ, ಕುಡಿಯಲು ಬಾಟಲಿಗೆ ನೀರು ತುಂಬಿಸಿ, ಹೋದಕೂಡಲೇ ಕೈಕಾಲು ತೊಳೆಯಲು ಚಳಿಗಾಲದಲ್ಲಿ ಬಿಸಿ ನೀರು/ ಸೆಕೆ ಕಾಲದಲ್ಲಿ ತಂಪಾದ ನೀರು ರೆಡಿ ಇಟ್ಟಿರುತ್ತಾಳೆ. ಜೀವನವನ್ನು ಸುಲಭಗೊಳಿಸುವ ಎಲ್ಲಾ ವ್ಯವಸ್ಥೆ ಮೊದಲೇ ಆಗಿರುತ್ತದೆ.! ಏನೆಂದು ಹೇಳಲಿ? ಹೇಳುತ್ತಾ ಹೋದಷ್ಟು ಹನುಮಂತನ ಬಲದ ಹಾಗೆ ಬೆಳೆಯುತ್ತಾ ಹೋಗುತ್ತದೆ ಆಕೆಯು ನನಗೆ ಮಾಡಿರುವ ಸೇವೆಯ ಪಟ್ಟಿ!! ಒಂದು ದಿನವೂ ಆಕೆ ನನಗೆ ಬಿದಿಲ್ಲ. ನಾನು ಎಷ್ಟೋ ಅಮ್ಮಂದಿರನ್ನು ನೋಡಿದ್ದೇನೆ, ಶಾಲೆಗೆ ಮಕ್ಕಳ್ಳನ್ನು ಬಿಟ್ಟು ಹೋಗಲು ಬಂದವರು ಗುರುಗಳ ಬಳಿ ಹೋಗಿ "ನನ್ನ ಮಗ/ಮಗಳು ತಪ್ಪುಮಾಡಿದರೆ ನಾಲ್ಕು ಪೆಟ್ಟು ಕೊಡಿ ನಮಗೇನು ಬೇಜಾರಿಲ್ಲ" ಎಂದು ಹೇಳಿ ಹೋಗುತ್ತಾರೆ. ಆದರೆ ನನ್ನಮ್ಮ ಶಾಲೆಯಲ್ಲಿ ಅಪ್ಪಿತಪ್ಪಿ ಏನಾದರು ಮೇಸ್ಟ್ರು ನನಗೆ ಒಂದೇ ಒಂದು ಪೆಟ್ಟುಕೊಟ್ಟರು, ಮೇಸ್ಟ್ರಬಳಿ ಹೋಗಿ ಏಕೆ ಹೊಡೆದಿರಿ ನನ್ನ ಮಗಳಿಗೆ ಎಂದು ಸವಾಲು ಹಾಕುವುದಲ್ಲದೇ ನನ್ನ ಮಗಳಿಂದು ಏನು ತಪ್ಪಿಲ್ಲ ಎಂದು ಹೇಳಿಬರುತ್ತಿದರು. ಇದು ಕೇವಲ ಒಂದು ನಿದರ್ಶನವಷ್ಟೇ, ಈ ರೀತಿ ಎಷ್ಟೋ ಮಂದಿಗೆ ಹೇಳಿದ್ದಾರೆ. ಅವಳ ಆ ನಂಬಿಕೆ ಇಂದಲೋ ಏನು, ನಾನು ಕೂಡ ಹಾಗೆಯೇ ಬೆಳಿದ್ದಿದೆ. ಯಾರ ತಂಟೆಗೂ ಹೋಗುತ್ತಿರಲಿಲ್ಲ. ಹಾಗು ನನ್ನಮ್ಮನಿಗೆ ಏನು ಕೊಡಸಿಲು ಕಷ್ಟವಾಗಬುದು ಅದನ್ನು ಎಂದಿಗೂ ಕೇಳುತಲ್ಲೂ ಇರಲಿಲ್ಲ. 

ಒಂದು ನಿಮಿಷ ಈ ಕತೆಗೆ ಇಲ್ಲಿ ಕಡಿವಾಣ ಹಾಕೋಣ. ನನಗೆ ಒಂದು ಪ್ರಸಂಗ ನೆನಪಾಗುತ್ತಿದೆ. ಅದರ ಬಗ್ಗೆ ಹೇಳಬೇಕಿನಿಸುತ್ತಿದೆ. 

ನನ್ನ ವಯಸ್ಸು ಸರಿಸುಮಾರು ೮-೯ ನ ಸಮಯವದು. ಆಗ ನಾವು ಚನ್ನರಾಯಪಟ್ಟಣದಲ್ಲಿ ವಾಸವಿದ್ದೆವು. ಚನ್ನರಾಯಪಟ್ಟಣದಲ್ಲಿ ಶನಿವಾರ ಸಂತೆ. ಪ್ರತಿ ಶನಿವಾರ ಅಮ್ಮ ತಪ್ಪದೆ ಸಂತೆಗೆ ಹೋಗಿ ಒಂದು ವಾರಕ್ಕೆ ಬೇಕಾದಷ್ಟು ಸಾಮಾನುಗಳನ್ನು ತರುತ್ತಿದ್ದಳು. ನಾನಾಗ ಚಿನ್ನವಳೆಂದು ನನ್ನನ್ನು ಕರೆದೊಯ್ಯುತ್ತಿರಲಿಲ್ಲ. ಅಲ್ಲಿಯೇ ಅಕ್ಕ ಪಕ್ಕದ ಮನೆಯೇ ಮಕ್ಕಳೊಂದಿಗೆ ಆಟವಾಡಯೆಂದು ಹೇಳಿ ಬಿಟ್ಟು ಹೋಗುತ್ತಿದ್ದಳು. ಹೇಗಿದ್ದಾಗ ಒಂದು ಶನಿವಾರ ನನಗೆ ಅಮ್ಮನ ಜೊತೆ ಸಂತೆಗೆ ಹೋಗಬೇಕೆಂಬ ಅಸೆ ಉಂಟಾಯಿತು. ನಾನು ಬರುತ್ತೇನೆ ಅಮ್ಮ ಎಂದೇ. ಅಮ್ಮ ಅದಕ್ಕೆ ಪ್ರತ್ಯುತ್ತರವಾಗಿ"ಬೇಡ ಮಗಳು ಅಲ್ಲಿ ಹಸುಗಳು ಎಲ್ಲಿ ಬೇಕೆಂದರಲ್ಲಿ ನುಗುತ್ತವೆ. ತರಕಾರಿ ಬುಟ್ಟಿ ಇಡಿದುಕೊಂಡು ನಿನ್ನನು ನೋಡಿಕೊಳ್ಳಲ್ಲು ಕಷ್ಟ" ಎಂದು ಏನೋ ಹೇಳಿದಳು, ಅಷ್ಟು ಸರಿ ನೆನಪಿಲ್ಲ, ಒಟ್ಟು ನನ್ನನ್ನು ಕರೆದೊಯ್ಯಲಿಲ್ಲ. ಅವಳ ಬೆನ್ನ ಹಿಂದೆಯೇ ಸ್ವಲ್ಪ ದೂರ ಹೋದೆ, ಹೀಗಮ್ಮ ಮನೆಗೆ ಎಂದರು. ನಾನು ಕೋಪದಲ್ಲಿ "ಕೋಳಿಮುನ್**" ಎಂದು ಬೈದೆ. ಎಲ್ಲಿತ್ತೊಯೇನೋ ಅಮ್ಮನ ಕೋಪ, ದರ ದರ ಯೆಂದು ಬೀದಿಯಲ್ಲಿ ಎಳೆದು ಕೊಂಡು ಬಂದು ಒಂದು ಪೆಟ್ಟು ರಾಪ್ ಅಂತ ಕೊಟ್ಟಳು", ಸ್ನೇಹಿತರೊಂದಿಗೆ ಆಟವಾಡು ಎಂದರೆ ಏನೆನೊನು ಕೆಟ್ಟ ಪದ ಮಾತನಾಡಲು ಕಲಿಯುತ್ತೀಯ ಎಂದು ಗದರಿಸಿದ್ದಳು. ನನಗೆ ಹೊಡೆದು ಅವಳೇ ಅತ್ತಿದಲ್ಲೂ. ಆ ದಿನ ಯಾರು ಸಂತೆಗೆ ಹೋಗಲೇ ಇಲ್ಲ. ನಾನು ಕೂಡ ಮತ್ತೆಂದೂ ಸಂತೆಗೆ ಕರೆದೊಯ್ಯುವಂತೆ ಹಠ ಮಾಡಲಿಲ್ಲ. ನನಗೆ ನೆನಪಿರುವಾಗೆ ಅದೇ ಮೊದಲು ಅದೇ ಕೊನೆ ಅವಳು ನನಗೆ ಹೊಡೆದದ್ದು ಹಾಗು ನಾ ಆ ರೀತಿ ಪದ ಬಳಸಿದ್ದು. ಈಗಲೂ ಕೂಡ ಆ ರೀತಿ ಪದ ಅಥವಾ ಯಾವುದೇ ಬಯ್ಯೋ ಶಬ್ದಗಳನ್ನು ಉಚ್ಚರಿಸಲು ಆಗುವುದೇ ಇಲ್ಲ. ಒಂದು ರೀತಿ ಕಷ್ಟ ಎನಿಸುತ್ತದೆ. 


ಉಳಿದ ವಿಷಯವನ್ನು ಇನ್ನು ಯಾವಾಗಲಾದರೂ ಮಾತನಾಡೋಣ. ಟಾಟಾ. 




Tuesday, 16 February 2021

Scary

ಎಷ್ಟು ವಿಚಿತ್ರ ಮನುಷ್ಯನ ಜೀವನ! ಎರೆಡು ವರ್ಷಗಳ ಹಿಂದೆಯಷ್ಟೆ ಒಬ್ಬಳೇ ಊರೂರು ಸುತ್ತಿದ್ದೆ. ಎರೆಡು ವರ್ಷಗಳ ನಂತರ ಮೊದಲ ಬಾರಿ ಇಂದು ಒಬ್ಬಳೇ ಇದ್ದೇನೆ. ಒಂದು ರೀತಿ ನಡುಕ. ಏನೋ! ಅರ್ಥವಾಗದ, ವಿಚಿತ್ರವಾದ ಹೆದರಿಕೆ. ಎಂತಾ ಬದಲಾವಣೆ ಕೇವಲ ಈ ಎರೆಡು ವರ್ಷಗಳಲ್ಲಿ.!ನಮ್ಮಮ್ಮ ಹೇಳುತ್ತಿರುತ್ತಾರೆ "ಮನುಷ್ಯರು ಇಂದು ಇದ್ದ ಹಾಗೆ ನಾಳೆ ಇರರು" ಅವರು ಹೇಳಿದ್ದು ಮನುಷ್ಯನ ವ್ಯವಹಾರದಬಗ್ಗೆ, ಆದರೆ ನನಗನಿಸುತ್ತದೆ, ನನ್ನಲ್ಲಿ ಕಾಣಸಿಗುವ ಬದಲಾವಣೆ ಹಾಗು ಅಮ್ಮ ಸಾಮಾಜಿಕವಾಗಿ ಹೇಳುವ ಆ ಬದಲಾವಣೆಗೂ ಮೂಲ ಒಂದೇ ಆಗಿರಬಹುದೇನೋ? ಯಂದು. ಮನುಷ್ಯನ ಮೆದುಳು ಯಾವರೀತಿ ಕೆಲಸಮಾಡುತ್ತದೆ ಹಾಗು ಭಾವನೆಗಳ ಹತೋಟಿ ಎಷ್ಟರಮಟ್ಟಿಗೆ ಇರುತ್ತದೆ ಎಂದು ಯಾರಿಗೂ ಅರಿವಿರುವುದಿಲ್ಲ. 

Sunday, 14 February 2021

Beauty lies in the eyes of the beholder

"Beauty lies in the eyes of the beholder'' ಅನ್ನೋ ಮಾತು ನೀವೆಲ್ಲರೂ ಕೇಳಿಯೇ ಇರುತ್ತೀರಿ. ಹಾಗೆ ಈ ಮಾತನ್ನು ಒಪ್ಪಿಯೂ ಇರಬಹುದು ಅಥವಾ ಒಪ್ಪದೆಯೂ ಇರಬಹುದು. 

ನಾನು ಅಷ್ಟೆಲ್ಲ ಇದರ ಬಗ್ಗೆ ಯೋಚಿಸಲು ಹೋಗಿಲ್ಲ. ಎಷ್ಟೋ ಮಂದಿ ಹಾಗೇ ಸುಮ್ಮನೆ ತುಂಬಾ ಚೆನ್ನಾಗಿ ಇದ್ದರೆಂದು ಅನಿಸಿದ್ದಿದೆ (symmetry ಕರಣ ವಿರಬಹುದು).  ಆದರೆ ನನ್ನ ಗಮನ ಸೆಳೆದ ವಿಷಯ ಏನಪ್ಪಾ ಎಂದರೆ ಸಾಮಾನ್ಯವಾಗಿ ಯಾವಾಗಲು ನನಗೆ ನನ್ನ ಅಣ್ಣ, ನನ್ನ ಅತ್ತಿಗೆ, ನನ್ನ ಅಪ್ಪ, ನನ್ನ ಗಂಡ, ನನ್ನ ಅತ್ತೆ, ನನ್ನ ಸ್ನೇಹಿತರು ಹೀಗೆ ನನ್ನ ಎಂಬ ಪದ ಎಲ್ಲಿಯೆಲ್ಲ ಇದೆಯೋ ಅವರುಗಳು ಬೇರೆಯವರಿಗಿಂತ ಚೆಂದ ಇದ್ದಾರೆ ಅಂತ ಅನಿಸುತ್ತದೆ. ನಾನು ಅಮ್ಮ ಯಾವುದಾದರು ಮದುವೆ ಮುಂಜಿ ಕಾರ್ಯಕ್ರಮಕ್ಕೆ ಹೋದರೆ ಎಷ್ಟೋ ಭಾರಿ ಅಮ್ಮನಿಗೆ ಹೇಳಿದುಂಟು "ಇಲ್ಲಿ ಇರುವ ಎಲ್ಲಾ ಹೆಂಗಸರಿಗಿಂತ ನೀವೇ ಬ್ಯೂಟಿಫುಲ್ ಅಮ್ಮ". ಅದು ಸುಳ್ಳು ಸುಳ್ಳು ಹೊಗಳಿಕೆಯಲ್ಲ, ನಿಜಕ್ಕೂ ಅವರು ನನ್ನ ಕಣ್ಣಿಗೆ ಯೆಲ್ಲರಿಗಿಂತ ಸುಂದರವಾಗಿ ಕಾಣಿಸುತ್ತಾರೆ. ಹಾಗೆಯೇ ನನ್ನ ಗಂಡನು ಕೂಡ. ಅವರ ಎಷ್ಟೋ ಸ್ನೇಹಿತರನ್ನು ಭೇಟಿ ಅದಾಗಲೆಲ್ಲ ಹಾಗೆ ಅನಿಸುತ್ತದೆ. ಇವರೇ ಚೆಂದವೆಂದು.!! ಯಾವುದೇ ವಿಷಯದಲ್ಲಾದರೂ (ರಿಲೇಟಿವ್) ಏನನ್ನು ಇನ್ನೊಂದಕ್ಕೆ ಹೋಲಿಸಿ ನಾನು ಹೇಳದಿದ್ದರೂ, ಈ ವಿಷಯ ಯಾಕೋ ಹೀಗಿದೆ!! ಚೆಂದ ಎಂಬ ವಿಷಯವು ಕೇವಲ ಆಪ್ಟಿಕಲ್ ನರ್ವ್ಸ್ ಮೆದುಳಿಗೆ ಕಳಿಸು ವಿದ್ಯುತ್ ಸಂಕೇತದ ಮೇಲಷ್ಟೇ ಅಲ್ಲ ನಿಮಗೆ ಆ ವಸ್ತು/ವ್ಯಕ್ತಿಯ ಮೇಲಿರುವ ಭಾವನೆಯು ಪ್ರಭಾವ ಬೀರುತದ್ದೇ.  

ಇದಕ್ಕೆ ಇನ್ನೊಂದು ಉದಾಹರಣೆ ಯೆಂದರೆ ಅಡಿಗೆಗಳು. ಕೆಲವರಿಗೆ ಕೆಲವು ಅಡಿಗೆ ಸೇರುವುದೇ ಇಲ್ಲ ಅಥವಾ ಕೆಲವು ಅಡಿಗೆಗಳು ಕೆಲವರಿಗೆ ಬಹಳಾನೇ ಇಷ್ಟ.! ಇದಕ್ಕೆ ಕರಣ ಕೇವಲ ಅಡಿಗೆಯ ರುಚಿ ಮಾತ್ರವಲ್ಲ. ಅದರ ಬಣ್ಣ, ಅದರ ವಿನ್ಯಾಸ/ಟೆಕ್ಸ್ಚರ್, ಪರಿಮಳ, ಅಥವಾ ಅದು ಯಾವುದಾದರು ಇಷ್ಟವಿರುವ/ವಿಲ್ಲದ ವಸ್ತುವಿನ ಹೋಲಿಕೆ, ಅಥವಾ ಅಡಿಗೆ ಮಾಡಿದವರ ಮೇಲಿನ ಭಾವನೆ ಹೀಗಿ ಹತ್ತು ಹಲವು ಕಾರಣಗಳ ಮಿಶ್ರಿತ ಫಲಿತಾಂಶವಾಗಿರುತ್ತದೆ. 

ಪಂಚೇಂದ್ರಿಯ ಪ್ರಚೋಧನೆ ಯೆನ್ನ ಬಹುದೇನೋ! ಗೊತ್ತಿಲ್ಲ. ಅಥವಾ ಅನುವಂಶಿಕ ಹಾಗು ನಮ್ಮ ಸುತ್ತಮುತ್ತಲಿನ ವಾತಾವರಣ/ಪರಿಸರವು ಪ್ರಭಾವಬೀರಬಹುದು. ಎಷ್ಟು ಸಂಕೀರ್ಣವಾದ ವಿಷಯವಿದು. ಯೋಚಿಸಿದಷ್ಟೂ ಗಾಢವಾಗುತ್ತ ಹೋಗುತ್ತದೆ. ಕೆಲವೊಮ್ಮೆ ಏನನ್ನು ಯೋಚಿಸುತ್ತಿದ್ದೇವೆ ಎಂಬುದೇ ಮರೆತು ಹೋಗುತ್ತದೆ.