Friday, 26 January 2018

ಮಾಧುರಿ ಶಂಕರ್

ನಿನ್ನ ಫೇಸ್ಬುಕ್ ಹೆಸರು ಮಾಧುರಿ ಶಂಕರ್ ಯಾಕೆ? ನೀನು ಮಾಧುರಿ ಭಟ್ ಅಲ್ವ? ಅಂತ ನನ್ನ ಸ್ನೇಹಿತೆ ಕೇಳಿದಳು.
ಮತ್ತೆ ಹಲವು ಹಳೆಯ ಶಾಲಾ ಸ್ನೇಹಿತರು ನನಗೆ ಮದುವೆಯಾಗಿದೆ ಎಂದು ಮೆಸೇಜ್ ಕಳುಹಿಸಿದರು. ಇದು ಕೇವಲ ಇಂದು ನೆನ್ನೆಯ ವಿಷಯವಲ್ಲ, ಅವಾಗವಾಗ ಅವರಿವರು ಕೇಳುವ ಪ್ರಶ್ನೆ, ಹೊಸದಾಗಿ ಪರಿಚಯವಾದವರನ್ನು ಹೊರೆತು ಪಡಿಸಿ.
ಅವರೆಲ್ಲರ ಪ್ರಶ್ನೆಗೆ ಕೇವಲ ನನ್ನ ನಗುವೊಂದೇ ಉತ್ತರವಾಗಿತ್ತು. ಒಂದು ಹುಡುಗಿಯ ಮುಂದಿರುವ ಹುಡುಗನ ಹೆಸರಿಗೆ ಅಷ್ಟು ಮಹತ್ವವಿದೆಯೆ? ನನಗದೆಲ್ಲ ತಿಳಿದಿಲ್ಲ. ನನ್ನ ಫೇಸ್ಬುಕ್ ಹೆಸರಿನ ಹಿಂದುರುವುದು ಒಂದು ಸಿಂಪಲ್ ಲಾಜಿಕ್ ಇಷ್ಟೇ, ಬೇರೇನೂ ಕಥೆಯಿಲ್ಲ. ನನ್ನಪ್ಪನ ಹೆಸರು ಶಂಕರ ನಾರಾಯಣ ಭಟ್. ನನ್ನ ಅಣ್ಣ ನನಗಿಂತ ಮೊದಲೇ ಫೇಸ್ಬುಕ್ ಅಕೌಂಟ್ ತೆರೆದಿದ್ದ. ಫೇಸ್ಬುಕ್ ಹೆಸರು ಮುರಳಿ ನಾರಾಯಣ ಅಂತ ಕೊಟ್ಟಿದ್ದ. ಅದಕ್ಕೂ ಬೇರೇನೂ ಕಾಥೆಯಿಲ್ಲ, ಸುಮ್ಮನೆ ಶೋಕಿಗಷ್ಟೇ. (ಈ ಫೇಸ್ಬುಕ್ನಾವೂರು ಸಹ ಸರಿಯಿಲ್ಲ. ಅಕೌಂಟ್ ಕ್ರಿಯೇಟ್ ಮಾಡ್ಬೇಕಾದ್ರೆ, ಫಸ್ಟ್ ನೇಮ್, ಲಾಸ್ಟ ನೇಮ್, ಸುರನಮ್ ಅಂತ ಎಲ್ಲಾ ತಲೆ ತಿಂದ್ರೆ, ಪಾಪ ನನ್ನಣ್ಣ ಇನ್ನೇನು ಮಾಡ್ತಾನೆ, ಫುಲ್ ಬುದ್ಧಿವಂತಬೇರೆ, ಎಲ್ಲೋ ಲಾಸ್ಟ ನೇಮ್ ಅಂತ ಕೇಳಿರ್ಬೇಕು, ಅವನ ಲಾಸ್ಟ ನೇಮ್ ನಾರಾಯಣ್ ತಾನೆ, ಅದಕ್ಕೆ ಹಾಗೆ ಕೊಟ್ಟಿರ್ತಾನೆ.) ನನ್ನಪ್ಪನ ಅರ್ಧ ಹೆಸರನ್ನು ಮಾತ್ರ ಅವನಲ್ಲಿ ಹಾಕಿಕೊಂಡಿದ್ದ, ಬಾಕಿ ಇರುವ ಇನ್ನರ್ದ ಯಾರದ್ದು? ನನ್ನದೇ ಅಲ್ಲವೇ? ಹಾಗಾಗಿ ನಾನು ಮಾಧುರಿ ಶಂಕರ್ ಅದೇ ಅಷ್ಟೇ. ನನ್ನ ನಿಜ ಹೆಸರು ಮಾಧುರಿ ಶಂಕರ್ ಅಲ್ಲ, ಮಾಧುರಿ ಭಟ್ ಸಹ ಅಲ್ಲ. ನಾನು ಮಾಧುರಿ ಶಂಕರ್ ನಾರಾಯಣ್ (ಮಾಧುರಿ ಎಸ್ ಎನ್). ಇದನ್ನೆಲ್ಲ ಯಾರಿಗೆ ಹೇಳ್ಕೊಂಡು ಕೂರೋದು, ತುಂಬ ಬೋರಿಂಗ್ ಆಗಿದೆ.
ಆದ್ರೆ ಇಷ್ಟೆಲ್ಲದರ ಮದ್ಯೆ, ನನಗೆ ನನ್ನ ಫೇಸ್ಬುಕ್ ನೇಮ್ ಬಹಳಾನೇ ಇಷ್ಟವಾಗೊಕ್ಕೆ ಶುರುವಾಗಿದೆ. ನನ್ನ ಸ್ನೇಹಿತ ನನ್ನನ್ನು ಮಿಸ್ ಶಂಕರ್ ಎಂದು ಕರೆದಾಗಲೆಲ್ಲ ಒಂತರ ಖುಷಿಯಾಗುತ್ತದೆ. ನನ್ನ ಹೆಸರು ಮುದ್ದಾಗಿದೆ ಅನಿಸುತ್ತದೆ, ನನ್ನ ಅಪ್ಪನ ಹಾಗೆ.

ನನಗೆ ಇನ್ನೊಂದು ಡೌಟ್, ನನ್ನ ಬ್ಲಾಗ್ ಅನ್ನು ಯಾರಾದರೂ ಓದಲು ಶುರುಮಾಡಿದರೆ, ಅವರು ನನ್ನ ಬ್ಲಾಗ್ ನೇಮ್ ಮಧುರ ಅಂತ ಯಾಕಿದೆ ಎಂದು ಕೇಳಬಹುದು. ಅಥವಾ ನನ್ನ ಕಾವ್ಯ/ಅಂಕಿತ ನಾಮವೇ ಎಂದು ಕೇಳಬಹುದು. ಆ ಹೆಸರಿಂದಿರು ವಿಷಯವನ್ನು ಮುಂದೊಂದು ದಿನ ಹೇಳುವೆ. 

Just go to hell

26-01-2018

The worst day of the year.
Saying goodbye,
goodbye forever,
to one of the best persons,
I ever meet.

Tomorrow he will be flying back.
Back to his place.

I'm angry,
Very angry!
Though I understand,
I don't want to understand.
I wanna stay angry,
Very angry.

Wednesday, 24 January 2018

ಅಶ್ರಗ

ನನ್ನ ಜೀವನದ ಅಶ್ರಗ ಅವನು.
ಅವನು ಬಳಿಯಿದ್ದರೆ ನನ್ನೊಳಗಿರುವ ಎಲ್ಲಾ ಬಣ್ಣಗಳ ಪರಿಚಯ.
ಅವನೀಡಿವ ಕುಂಚ ನನ್ನ ಬಣ್ಣವ ನಿರ್ಧರಿಸುತ್ತದೆ.
ಹಾಗಾದರೆ ನನ್ನ ಸ್ವಂತತೆ ಏನು?
ಮೈದುಬ್ಬಿಕೊಂಡಿರುವ ಬಣ್ಣವೇ?
ಅಥವಾ ನನ್ನ ಬಣ್ಣವ ನನಗೆ ಪರಿಚಯಿಸಿ, ಅವನಿಗ್ಯಾವುದು ಬೇಕೆಂಬುದರ ನಿರ್ಧರಿಸುವ ಅವನೇ?



(ಅಶ್ರಗ; ಪದದ ಪರಿಚಯ ನನ್ನ ತಮ್ಮ ಕೋತಿ ತಿಮ್ಮನಿಂದ. ಅವನ ಹುಚ್ಚುತನದ ಪರಿಚಯ ಬಯಸಿದಾದಲ್ಲಿ ಈ ಲಿಂಕ್ ಅನ್ನು ಕ್ಲಿಕ್ಕಿಸಿ/ಬಳಸಿ ನೋಡಿ [ http://ashraga.blogspot.in/2017/06/blog-post_23.html ] )  

Waiting

ಯಾಕಿ ಕಾಯುವಿಕೆ?
ಅವನಿಗಾಗಿಯೆ? ಅವನಿಗಿದು ತಿಳಿದಿದೆಯೇ?
ಒಂದು ರೀತಿಯ ತಿಳಿಯದ ನಂಬಿಕೆ, ಗಾಢನಂಭಿಕೆ ಅವನಿಗಾಗಿ ಕಾವುಯುವುದರಲ್ಲಿ.
ಆದರೆ ಕೆಲವೊಮ್ಮೆ ಅಸಾಧ್ಯ ಅಳುಒಂದು ಮೂಡುವುದು, ಬಹಳ ಬೇನೆ ನೀಡಿ.
ಯಾಕೀಗೆ?
ಯಾಕೀಗೆ?
ಮಾನವನ ಸಹಜಗುಣವಿದಿರಬಹುದೇ?

ಕಾಯಿಸಿ ಕಾಡಿದ ಅವನು ಬಂದ ನಂತರ ತಿಳಿಯುವುದು ನನ್ನ ಮೂರ್ಖತನ.
ಏತ್ತಕ್ಕಾಗಿ ಅವನನ್ನು ಕಾದಿದ್ದೆ? ಯಾಕಿಷ್ಟು ಕಡುಬಯಕೆ ಮೂಡಿತ್ತು? ನಾನೆಷ್ಟು ದಡ್ಡಿ ಎಂದೆಲ್ಲ ಅನಿಸಿ ನಗುವುದುಂಟು ಮುಜುಗರದಿಂದ.

ಕಲಿತ ಬುದ್ದಿ ಕ್ಷಣಿಕ, ಮರುದಿನ ಮತ್ತದೇ ಕಾಯುವಿಕೆ, ಅವನಿಗಾಗಿ, ಒಮ್ಮೆನೋಡಿ ಮಾತಾಡುವುದ್ದಕ್ಕಾಗಿ.

Tuesday, 23 January 2018

ಪಾಪದ ಮಾಣಿ

೨೩-೦೧-೨೦೧೮

ಸುಂದರವಾದ ಕಪ್ಪು ಬಿಳುಪಿನ ಭಾವಚಿತ್ರವೊಂದು ಇಂದು ಅವನ ಡಿಸ್ಪ್ಲೇ ಪಿಕ್ಚರ್ ಆಗಿತ್ತು, ಜೀವನದ ತನ್ನೆಲ್ಲಾ ಬಣ್ಣಗಳ ಹೊತ್ತು. ಹೆತ್ತಮ್ಮನಿಗೆ ಹೆಗ್ಗಣ್ಣ ಮುದ್ದು ಅನ್ನುವ ಹಾಗೆ, ನಮಗಿಷ್ಟ ಆದವರು ಹೇಗಿದ್ದರೂ ಚೆಂದ. ಆದರೆ ನನಗೆ ಬಲು ನಂಬಿಕೆಯಿದೆ ಇವನು ಹೆಗ್ಗಣ ಅಲ್ಲ, ನಾನಂತು ಹೆತ್ತಮ್ಮನಲ್ಲ, ಇವನೆಂದರೆ ಇಷ್ಟ ಅಷ್ಟೇ. ಹಾಗಾಗಿ ನಿಜವಾಗಿಯೂ ಇವ ಚೆಂದವೇ ಇರುವ. ಸಪೂರವಾಗಿ ಉದ್ದ ಉದ್ದವಿರು ಎರೆಡು ಕೈಯ್ಯ ಬೆರಳುಗಳನ್ನು ಒಟ್ಟಿಗೆ ಸೇರಿಸಿ, ಮಡಚ್ಚಿದ್ದ  ತನ್ನ ಉದ್ದಾನೆಯೇ ಕಾಲುಗಳ ಮಂಡಿಯಮೇಲೆ ಇರಿಸಿದ್ದ. ರಸವೀರಿದ ಕಬ್ಬಿಣ್ಣ ಜಲ್ಲೆಯೇ ಹಾಗೆ ನಡುಬಾಗಿಲಿನ ಮೂಲೆಯಲ್ಲಿ ಕುಳಿತು ಕೊಂಚ ಗಾಂಭೀರ್ಯದಿಂದ ತನ್ನ ದೃಷ್ಟಿಯನ್ನು ಮತ್ತೆಲ್ಲೋ ಹಾಯಿಸಿದ್ದ, ಛೇ ಒಬ್ಬ ಒಳ್ಳೆಯ ಫೋಟೋಗ್ರಾಫರ್ ಅನ್ನು ನೋಡಿ, ಅವನ ಕ್ಯಾಮೆರಾ ಕಣ್ಣುಗಳ್ಳನು ಕಂಡು ನಕ್ಕು ಅಣುಕಿಸಲಾರೆ ಎಂಬಂತೆ. ಆದರೆ ನನ್ನಕಣ್ಣಿಗದು ಬೇರೆಯ ರೀತಿಯಲ್ಲಿ ಕಂಡಿತ್ತು. ಒಬ್ಬ ಪಾಪದ ಮಣಿಯ ಹಾಗೆ, ಭಾವಚಿತ್ರ ನೋಡಿದ ಕೂಡಲೇ ಸ್ವಲ್ಪ ಹೆಚ್ಚೇ ಮುದ್ದು ಮುದ್ದು ಅನಿಸಿದ್ದ.  ಅವನ ಕಣ್ಣಿನಲ್ಲಿ ಏನೋ ಅಸಮಾಧಾನ, ನನ್ನನ್ನು ಬಿಟ್ಟುಬಿಡಿ ದಯವಿಟ್ಟು ಎಂಬ ಸಣ್ಣನೆಯ ಕೋಪ. ಇವಾ ಕೂತ ಶ್ಯಲಿ, ಆ ಜಾಗ, ಆ ನೋಟ, ಏನೋ ನನಗಂತೂ ಏನು ಹೇಳಬೇಕು ತೋಚುತ್ತಿಲ್ಲ. ಮನೆಗಳಲ್ಲಿ ನಡೆವ ವಾದವಿವಾದದ ಚಿತ್ರಒಂದು ಕಣ್ಮುಂದೆ ಬಂದು ಓಡಿ ಹೋಗಿತ್ತು. ತನ್ನವಾದ ಮಂಡಿಸಿಲಾಗದೆ ಪೇಚಾಡುತ್ತಿದ್ದ ಪಾಪದ ಮಾಣಿಯಾಗಿ ಇವಾ ಕಂಡಿದ್ದ. 

Sunday, 21 January 2018

Random

ಏನಾದರು ಮಾತನಾಡು,
ಮಾತನಾಡು,
ಮನಸ್ಸಿಗೆ ತೋಚಿದ್ದು,
ಅಥವಾ ಎಂದಾದರೂ ಪುಸ್ತಕದ ಕಾಲಿ ಹಾಳೆಯಲ್ಲಿ ಗೀಚಿದ್ದು,
ಅಥವಾ ನಿನ್ನ ಹುಚ್ಚುತನ,
ನಿನ್ನ ಯೋಚನೆ,
ಏನಾದರು ಸರಿಯೇ, ಮಾತನಾಡು,
ಏನು ಮಾಡುತ್ತಿರುವೆ, ಏನು ತಿನ್ನುತ್ತಿರುವೆ,
ಸುಮ್ಮಸುಮ್ಮನೆ ಏನಾದರು ಮಾತನಾಡು,
ನನ್ನಗೆ ನಿನ್ನ ಮಾತು ಕೇಳಬೇಕೀಗ,
ನನ್ನೊಂದಿಗೆ ನೀನು ಆಡುವು ಇಲ್ಲದ, ಸಲ್ಲದ, ಬೇಡದ, ಬೇಕಾದ ಮಾತನ್ನು ಕೇಳಬೇಕೀಗ.
ನಿನ್ನ ಸ್ವರತರಂಗಗಳ ಸ್ಪರ್ಶಿಸ ಬೇಕೀಗ. ಮಾತನಾಡು.
ಏನನ್ನಾದರೂ ಮಾತನಾಡು. 

Tired

ಸುಸ್ತಾಗಿದೆ.

ಬಂದು ಹೋಗುವ ಬಂಧುಗಳಿಂದ, ಸುಸ್ತಾಗಿದೆ ನನಗೆ.
ನಮ್ಮವರನ್ನು ಅರ್ಥಮಾಡಿಕೊಂಡು,ಸುಸ್ತಾಗಿದೆ ನನಗೆ. 
ನನ್ನ ಬರಿದಾಗುತ್ತಿರುವ  ಭಾವನೆಗಳಿಂದ, ಸುಸ್ತಾಗಿದೆ ನನಗೆ.

ನನ್ನ ನಾನು ಹುಡುಕ ಹೋದಷ್ಟು ಕಳೆದು ಹೋಗುತ್ತಿರುವೆ.
ನನ್ನ ನಾನು ಅರ್ಥ ಮಾಡಿಕೊಂಡಷ್ಟು ನನ್ನಿಂದ ನಾನು ದೂರವಾಗುತ್ತಿರುವೆ.
ಬೇಡವಾದ ಸುಳಿಗೆ ನಾನೇ ಹೋಗಿ ಸಿಲುಕಿ ನಲುಗಿ ಹೋಗುತ್ತಿರುವೆ.

ಜಾರಿ ಹೋಗುತ್ತಿರುವ ಮರಳು ರಾಶಿಯ ತಡೆದು ತಡೆದು, ಸುಸ್ತಾಗಿದೆ ನನಗೆ.
ಸಮಯದ ಕ್ರೂರತನದಿಂದ, ಸುಸ್ತಾಗಿದೆ ನನಗೆ.
ನಾನೇನು ಅಲ್ಲವೆಂಬ ವಿಷಯದ ಅರಿವಿದ್ದರೂ, ಎಲ್ಲವನ್ನು ಸರಿ ಮಾಡಹೋಗಿ, ಸುಸ್ತಾಗಿದೆ ನನಗೆ. 

ಸುಸ್ತಾಗಿದೆ ನನಗೆ, ನನ್ನಿಂದ ನನಗೆ ಸುಸ್ತಾಗಿದೆ.