Saturday, 18 November 2017

ತಾಳ್ಮೆ

'ನೀರಿಳಿಯದ ಗಂಟಲೋಳ್  ಕಡುಬು ತುರುಕಿದಂತೆ' 
ನಾನು ಪ್ರೌಢಶಾಲೆಯಲ್ಲಿರುವಾಗ ಕನ್ನಡದ ಪಠ್ಯಪುಸ್ತಕದಲ್ಲಿ ಎಲ್ಲೊ ಓದಿದ ಮುದ್ದಣ್ಣ ಮನೋರಮೆಯರ ಪ್ರೇಮ ಸಲ್ಲಾಪ ಪ್ರಸಂಗದ ಈ ಸಾಲು ನೆನಪಾಗುತಿದೆ. ಒಂದು ರೀತಿಯಲ್ಲಿ ಈ ಸಾಲು ನನಗು ಅನ್ವಾಸಿತುದೇನೋ , ಕೆಲವು ತಿದ್ದುಪಡಿಗಳೊಂದಿಗೆ!! ನನ್ನ ರೂಪಾಂತರದ ಸಾಲುಗಳು 'ಸಾಮಾನ್ಯವಾದ ದಿನನಿತ್ಯದ ಮಾತುಗಳೇ ಹೊರಡದ ಬಾಯಲ್ಲಿ, ಕಷ್ಟಕರವಾದ ಮಾತು ಅಷ್ಟು ಬೇಗ ಹೊರಡೀತೇ', ಯಾ ಐ ನೋ ಇಟ್ ಕ್ಯಾನ್ ಬಿ ಫ್ರೇಮ್ಡ್ ಲಿಟಲ್ ಮೋರ್ ಗುಡ್ ವೆ!! ಆದರೆ ನಾನು ಮುದ್ದಣ್ಣನಲ್ಲ. 


ಅವನಿಗೇನೊ ಕೇಳುವ ತಾಳ್ಮೆ ಇದೆ, ನಾನೆ ಸ್ವಲ್ಪ ಹೆಚ್ಚು ನಿದಾನ. ಮೊದಲಿಂದಲೂ ಹಾಗೆ, ನಾನು ಹೆಚ್ಚು ಗೌರವಿಸುವ ವ್ಯಕ್ತಿಗಳೊಂದಿಗೆ ಅಷ್ಟು ಸುಲಭವಾಗಿ ಮಾತನಾಡಲಾಗುವುದಿಲ್ಲ. ಎಷ್ಟೇ ಅವರ ಮೇಲೆ ಪ್ರೀತಿ ಇದ್ದರು, ಅವರಮೇಲಿರುವ ಅಭಿಮಾನದಿಂದ ಒಂದು ರೀತಿಯ ಅಂಜಿಕೆ ಹಾಗು ಭಯ. ತುಂಬಾ ಮಾನ್ಯತೆಯುಳ್ಳ, ತಿರುಳಿರುವ ವಿಷಯವಷ್ಟೇ ಅವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಕೆಲವು ವಿಷಯಗಳ್ಳನು ಹೇಳಬಯಸಿದರು ನಾಲಿಗೆ ಹೊರಳುವುದಿಲ್ಲ. ತುಂಬಾ ಕಷ್ಟ ಪಟ್ಟನಂತರ ಒಂದಷ್ಟು ಹೇಳುತ್ತೇನೆ. ಇಂದು ಈ ವಿಷಯ ಇಲ್ಲಿ ಹಂಚಿಕೊಳ್ಳುವ ಮನಸಾಯಿತು. ನನ್ನಲಿ ಹುದುಗಿಹೋಗಿರುವ ಎಷ್ಟೋ ಕಥೆಗಳಿವೆ. ಎಲ್ಲದಕ್ಕಲ್ಲದಿದ್ದರು ಕೆಲವೊಂದಕ್ಕೆ ಉಸಿರು ತುಂಬುವಾಸೆ. ಇನ್ನು ಕೆಲವೆಲ್ಲ ನನಗೆ ಮರೆತು ಹೋಗಿವೆ. ಹಹ..  


ಹೆಚ್ಚಿನ ಸಂದರ್ಭದಲ್ಲಿ ತಪ್ಪು ನನ್ನದೇ ಆಗಿರುತ್ತದೆ. ತರ್ಕಬದ್ಧವಾದ ಕೆಲಸ ಮಾಡುವುದು ಬಿಟ್ಟು, ತಪ್ಪೆನಿಸಿದರು ನನ್ನೆದುರಿಗಿರುವವರ ಮಾತಿಗೆ ಸಮ್ಮತಿಸಿಬಿಡುತ್ತೇನೆ. ಇದರಿಂದಲೇ ಸಂಕಷ್ಟಕ್ಕೆ ಗುರಿಯಾಗುತ್ತೇನೆ. ತಪ್ಪಾದನಂತರ ಎಲ್ಲವನ್ನು ಹೇಳಲು ಮತ್ತೆ ಮತ್ತೆ ಅವನ ಬಳಿ ಹೋಗಿ ಅರ್ಧಬರ್ದ ವಿಷಯವೇಲಿ ಕೋಪ ಬರಿಸಿ ಬರುತ್ತೇನೆ. ನಾಯಿ ಬಾಲ ಎಷ್ಟಾದರೂ ಡೊಂಕೇ ಅಲ್ಲವೇ. ಇದನ್ನು ಅರ್ಥ ಮಾಡಿಕ್ಕೊಳಬೇಕಾದವರು ಜ್ಞಾನಿಗಳು. ಸುಮ್ಮನೆ ಮುದ್ದು ಮುಗ್ದ ನಾಯಿಯನ್ನೇಕೆ ದೂರಬೇಕು. 

ನೀನ್ಯಾಕೆ ಹೀಗೆ?

ನೀನ್ಯಾಕೆ ಹೀಗೆ?
ನನಗೆ ನನ್ನ ಫ್ರೆಂಡ್ ಯಾವಾಗ್ಲೂ ಕೇಳೋ ಪ್ರಶ್ನೆ ಇದು.
ನಾನು ಹಿಂಗೇನೆ ಅಂತ ಅವ್ನು ಕೇಳ್ದಗೆಲ್ಲ ಹೇಳ್ತೀನಿ.
ಆದ್ರೆ ಯಾಕೇ ನಾನು ಆವ್ನುನ್ನ ನೀನ್ಯಾಕೆ ಹೀಗೆ ಅಂತ ಇದುವರ್ಗು ಕೇಳಿಲ್ಲ?
ಈಗ ನೆನಪಾಗ್ತಿದೆ. ಕರೆಮಾಡಿ ಕೇಳ್ತಿನಿ.


Shadow. (The darkest part)

The hidden, shy part of mine.
Which is my own,
Companion, inseparable.
The darkest passion.
My true world.
My real freedom,
Where non of us put on mask.
Pristine, so pure, so real me.
Shadow.
The darkest part.
everything is beautiful.
Owning all d colors of life.

Close your eyes. (Part 2)

ಇನಿಯನ ನೋಡದೆ ನೀರಿಲ್ಲದ,
ಮೀನಂತೆ ಚಡಪಡಿಸುತ್ತಿದ್ದ ಆಕೆಯ ಮನದಲ್ಲಿ,
ಸಾವಿರಾರು ಮಾತುಗಳು ಹುದುಗಿದ್ದವು.
ಅವನನ್ನು ಕಂಡು ಅದನ್ನೆಲ್ಲಾ ಹೇಳಿಬಿಡುವ ತವಕ.
ಎಂದಿನಂತೆಯೇ ಇಂದು ಅವನ ಕಂಡು ಮಾತುಗಳು ಸೋತಿವೆ, ಸತ್ತಿವೆ.
ಕಂಡ ಸಂತೋಷದಿ ಮಾತುಗಳ ಸಮಾದಿಯ ಮೇಲೆಯೇ ನಗುವೊಂದು ಹುಟ್ಟಿದೆ.
ಉಸಿರುಗಟ್ಟಿಸುವಷ್ಟು ಸಂಭ್ರಮ.
ಅವನಾಡಿದ ಮಾತಿಗೊಂದಿಷ್ಟು ನಾಚಿಕೆ.
ಅವಳಿಗೆ ಅವಳ ಪರಿಚಯಿಸುವ ಅವನ ಆಟ.
ಅನಿರೀಕ್ಷಿತವಾಗಿ ಮಳೆ, ಬಿಸಿಲು.
ಮಿನುಗುವ ಮಳೆಬಿಲ್ಲು.
ಆಗ ಮೂಡಿದ ಪಿಸುಮಾತು,
ಕಣ್ಣ ಮುಚ್ಚಿಕೋ.
ಕಣ್ಣು ಮುಚ್ಚಿಕೊ, ಮಳೆಬಿಲ್ಲಿನಲ್ಲಿ ಜಾರುವ.
ಜಾರುತ ಕಾಣೆಯಾಗುವ.



Friday, 17 November 2017

Close your eyes. (Part 1)


ಬೆಕ್ಕು ಕಣ್ಣಮುಚ್ಚಿ ಹಾಲು ಕುಡಿದರೆ, ಲೋಕಕ್ಕೆ ಕಾಣಿಸದೆ?
ಎಷ್ಟು ಸುಂದರ ಈ ಗಾದೆಮಾತು. ಈ ಗಾದೆಮಾತಿನ ಒಂದು ರೂಪವನ್ನು ಎಲ್ಲರೂ ಅರ್ಥೈಸಿಕೊಂಡಿರುತ್ತಾರೆ, ಆದರೆ ಇಂದೇಕೋ ನನ್ನಲ್ಲಿ ಬೇರೆಯದೇ ಗೊಂದಲ. ಇಲ್ಲಿ ಬೆಕ್ಕು ಬುದ್ಧಿವಂತ! ಕೆಲವೊಮ್ಮೆ ಜಾಣ ಕುರುಡುತನವು ಅಗತ್ಯ, ನಮ್ಮ ಕಾರ್ಯ ಸಾಧನೆಗೆ, ಅಲ್ಲವೇ? ಬೆಕ್ಕಿಗೆ ಹಾಲು ಬೇಕಿತ್ತು, ಕುಡಿಯಿತು. ಲೋಕಕ್ಕೆ ಕಂಡರೇನಂತೆ? ಅದನ್ನು ದಂಡಿಸಿಯಾರೇ? ದಂಡಿಸಿ, ಎಂಜಲು ಹಾಲ ಬಳಸಿಯಾರೇ? ಬೆಕ್ಕಿಗೆ ಅದರ ಚಿಂತೆಯಿಲ್ಲ. ಅದರ ಪ್ರಕಾರ ಲೋಕದ ಕಣ್ಣಿನಿಂದ ಅದು ದೂರ. ಅದು ಮಾಡುತ್ತಿರುವುದು ತಪ್ಪು ಅಲ್ಲ, ಯಾರಕಣ್ಣಿಗು ನಾನು ಕಾಣಿಸುವುದೂವಿಲ್ಲವೆಂಬ ನೆಮ್ಮದಿ ಅದಕ್ಕೆ. ಅಹಂ ಭ್ರಮಾಸ್ಮಿ ಎಷ್ಟು ಸತ್ಯ. ದಿನದ ಅಂತ್ಯದಲ್ಲಿ ನಮಗೆ ಬೇಕಾಗಿರುವು  ನಮ್ಮ ಆತ್ಮಕ್ಕೆ ನೆಮ್ಮದಿ, ಸಂತೃಪ್ತಿ. ನಾನಿದ್ದರೆಯೆ ನನಗೆ ಜಗತ್ತು. ಹಾಗಂತ ಸಂಪೂರ್ಣವಾಗಿ ಲೋಕದ ನಿಯಮಾವಳಿಯಿಂದ ದೂರಗಬೇಕೆಂಬುದು ನನ್ನ ವಾದವಲ್ಲ. ಅದು ಸಾಧ್ಯವೂ ಇಲ್ಲ. ಮನುಷ್ಯ ಸಂಗಾ ಜೀವಿ. ನಾವು ಬದುಕ್ಕುತಿರುವ ಸಮಾಜದ ಕಟ್ಟುಪಾಡಿಗೆ ನಮ್ಮನನ್ನು ಬಂದಿಸಿಕೊಳ್ಳುವ ಅವಶ್ಯಕಥೆ ಇಲ್ಲವೆಂಬುದಷ್ಟೇ  ನನ್ನ ವಾದ. ಅದರ ಪರವೂ ಬೇಡ, ವಿರೋದವು ಬೇಡ. ನಿಯಮಗಳು, ಕಟ್ಟುಪಾಡುಗಳು ನಾವೇ ಮಾಡಿಕೊಂಡಿರುವುದು. ಅವುಗಳು ತಪ್ಪು ಅಲ್ಲ. ಒಂದು ಆರೋಗ್ಯಕರ ಸಮಾಜಕ್ಕೆ ಅದರವಶ್ಯಕಥೆ ಇದೆ. ಹಾಗಂತೂ ಅದುವೇ ನಮ್ಮ ಸಂಪೂರ್ಣ ಜೀವನವಲ್ಲ. ಆಫ್ಟರ್ ಆಲ್ ರೂಲ್ಸ್ ಆರ್ ಮೇಡ್ ಟು ಬ್ರೇಕ್, ರೈಟ್?.
ಇಷ್ಟೆಲ್ಲಾ ಗೊಂದಲದ ನಡುವೆ ನನಗೆ ಇನ್ನೊಂದು ಪ್ರಶ್ನೆ ಮೂಡುತಿದೆ. ನಾನು ಮಾಡುತ್ತಿರುವುದು ತಪ್ಪಲ್ಲವೆಂದು ಬೆಕ್ಕಿಗೆ ಗೊತ್ತೇ? ಗೊತ್ತಿದ್ದರೆ ಕಣ್ಣೇಕೆ ಮುಚ್ಚಿಕೊಂಡು ಹಾಲು ಕುಡಿಯ ಬೇಕಿತ್ತು?
ಕಾರಣ, ಜಗತ್ತು ಅದನ್ನು ತಪ್ಪೆಂದು ಪರಿಗಣಿಸಬಹುದೆಂಬ ಕಲ್ಪನೆಯಿಂದಿರಬಹುದು. 

Friday, 3 November 2017

Whisper

She whispered in his ear,
babe, you are turning out be a better kisser,
he smiled and said,
I own the best trainer.
She smiled back at him.
They kissed.



Thursday, 2 November 2017

ಒಪ್ಪಂದ

ಅದೊಂದುದಿನ ಅವರಿಬ್ಬರೂ  ಒಪ್ಪಂದ ಒಂದಕ್ಕೆ ಬಂದಿದ್ದರು. ಇನ್ನೇರುಡು ತಿಂಗಳುಗಳ ಕಾಲ ಒಬ್ಬರಿಗೊಬ್ಬರು ಸಿಗುವುದಿಲ್ಲವೆಂದು. ಮಾಡಿ ಮುಗಿಸಬೇಕಾದ ಕೆಲಸ ಕಾರ್ಯಗಳು ಹೆಚ್ಚಿದ್ದವೆಂದು.! ಅದೊಂದು ಅರ್ಥವಿಲ್ಲದ ಒಪ್ಪಂದ.!
ದಿನಬೆಳಗಾದರೆ ಅವನ್ನನು  ನೋಡದೆಯೇ ಸಮಾಧಾನವಿಲ್ಲದ ಅವಳಿಗೆ, ೨ ತಿಂಗಳ ಕಾಲ ದೂರವಿರಲು ಸಾಧ್ಯವೇ? ಒಪ್ಪಂದವ ಮರೆತು, ಮತ್ತೆ ಎಂದಿನಂತೆ ಅವನಲ್ಲಿಗೆ ಹೊರಟಳು. ಏನೆ ಮರೆತೆಯ ಒಪ್ಪಂದವವೆಂದು ಅವನು ಕೇಳಿದ. ಅಲ್ಲಿಯೇ ಮರುಗಿ ಹೋಗಿತ್ತು ಆ ಜೀವ. ಪಾಪ ಅವನಿಗೇನು ಗೊತ್ತು, ಅವನಿಲ್ಲದ ಒಂದು ದಿನವೇ ಅವಳಿಗೆ ಯುಗದಂತೆ ಕಳೆಯುವುದೆಂದು. ಇನ್ನು ೨ ತಿಂಗಳ ಕಾಲ ದೂರವಿರಲು ಹೇಗೆ ತಾನೇ ಸಾಧ್ಯ?