Friday, 29 September 2017

Surrendered

ನಾ ಕನಸ್ಸಿನಲ್ಲಿ  ಕೇಳಿದ್ದ ಹಾಡಿನ ಸಾಲೊಂದು, ಅವನಿಂದು ಗುನುಗುನಿಸಿದಾದ್ದರು ಹೇಗೆ?
ಯೋಚಿಸ ಬೇಕೇ? ಜೀವಿಸಬೇಕೇ?
ಮನಸ್ಸು ಹಗುರಾಗಿ ತೇಲಿರಲು, 
ಶರಣಾಗತಿಯೊಂದೇ ಉಳಿದಿರುವ ಉಪಾಯ. 
ಸಂಪೂರ್ಣ ನೆಮ್ಮದಿ. 
ದೈವಿಕ ಅನುಭವ. 
ಕೃಷ್ಣನ ಕೊಳಲಿನ ನಾದದಂತೆ... 

fairy tale

೨೯/೦೯/೨೦೧೭

ಕಥೆಗಳಿಗಿಂತ ಜೀವನ ಚೆಂದ.
ಕನಸ್ಸಿಗಿಂತ ವಾಸ್ತವತೆ ಅಂದ.
ಜೀವನದೊಳಗೊಂದು ಕಥೆಯಿದ್ದರೆ?
ವಾಸ್ತವತೆಯೇ ಕನಸಿನಂತಿದ್ದರೆ?
ಸತ್ಯವೊಂದು ಮಿಥ್ಯದಂತೆ ಗೋಚರಿಸಿ ತಪ್ಪುಕಲ್ಪನೆ ನೀಡಿ ಹೋದೀತೇ?
ಅಥವಾ ಅದು ನಿಜವಾಗಿಯೂ ಮಿಥ್ಯವೇ?
ಆ ಮಿಥ್ಯ ಸತ್ಯವೇ ಆಗಿದ್ದರೆ?
ಸತ್ಯದ ಅರಿವು ಮೂಡಿತೇ?
ಮ್ಯಾಜಿಕ್ ಕೇವಲ ಬುದ್ದಿಗೆ ಮಂಕುಬರಿಸುವ ಟ್ರಿಕ್ಸ್!
ತಿಳಿದು ತಿಳಿದು ಮ್ಯಾಜಿಕ್ ನಂಬಿದರೆ?
ನಂಬಿಕೆ ಸತ್ಯವಲ್ಲವೇ?
ಇಲ್ಲಿ ಎಲ್ಲವೂ ಗೊಂದಲ. 
ಗೊಂದಲ ಸುಂದರ.
ನಿನ್ನೊಂದಿಗೆ ಕಳೆದ ಸಮಯದಂತೆ.
ಹೊಳೆಯುವ ಮುತ್ತಿನಂತೆ.
ಅರ್ಥವಾಗದ ಕಲ್ಪನೆಯಂತೆ.
ನಿನ್ನ ಮುಗ್ದ ನಗೆಯಂತೆ.
ಫೇರಿ ಟೇಲ್ ನಂತೆ. 

Thursday, 28 September 2017

ಶಾಂಭವಿಯ ಪುಚ್ಚೆ

ಅದೊಂದು ಊರು, ಗುಡ್ಡಗಾಡುಗಳ ನಡುವೆ. ಎಲ್ಲೆಡೆ ಹಸಿರು. ಉಸಿರಾಡಲು ಸ್ವಚ್ಛ ಗಾಳಿ. ಅಪರೂಪಕ್ಕೆ ಹೋಗುವವರಿಗೆ ಸ್ವರ್ಗ. ಆದರೆ ಅಲ್ಲಿಯೇ ವಾಸಿಸುವವರಿಗೆ ನರಕ. ಆದರೂ ಅದುವೆ ಅವರ ಜೀವನ. ಅವರಿಗೆ ಪ್ರಕೃತಿ ಮಾತೆಯಿಂದ ದೂರವಿದ್ದು ಬದುಕಲು ಕಷ್ಟ. ಅಲ್ಲಿ ವಾಸಿಸುವವರೆಲ್ಲ ಕಷ್ಟ ಜೀವಿಗಳು. ಸೋಂಬೇರಿಗಳಿಗೆ ಅಲ್ಲಿ ಬದುಕಿಲ್ಲ. ಶಾಲೆಗೆ ಹೋಗಲು ಮಕ್ಕಳು, ದೊಡ್ಡ ಖಾಯಿಲೆ ಬಂದರೆ ಜನಗಳು, ಹೀಗೆ ಬೇರೆ ಬೇರೆ ದೊಡ್ಡ ಕೆಲಸಕ್ಕೆಲ್ಲ ಊರಿಂದೂರಿಗೆ ಹೋಗಬೇಕಾಗುತ್ತಿತ್ತು.
ಇವಗಳ ನಡುವೆ ಹುಟ್ಟಿ ಬೆಳದ ನನ್ನ ಆತ್ಮೀಯ ಸ್ನೇಹಿತೆ ಸ್ಯಾಮ್. ನನ್ನ ಪ್ರೀತಿಯ 'ಬೆಕ್ಕಿನ್ಹುಡ್ಗಿ'. 
ನಾ ಕಂಡ ಮಟ್ಟಿಗೆ ಅವಳು ರಷನಲ್. ಯಾರನ್ನು ಎಷ್ಟು ಪ್ರೀತಿಸಬೇಕು, ಎಷ್ಟು ನಂಬಬೇಕು ಅಂತ ತಿಳಿದವಳು. ಅಷ್ಟು ಸುಲಭವಾಗಿ ಯಾರಿಂದವಾಗಲಿ, ಏನಿಂದವಾಗಲಿ ಮೋಸ ಹೋಗಲಾರಳು. ತನ್ನದೆಯಾದ ಆದರ್ಶ, ತತ್ವಗಳಿರುವ ಈ ಹುಡುಗಿ ಅದೇನೋ ಗೊತ್ತಿಲ್ಲ, ಬೆಕ್ಕುಗಳನ್ನು ಕಂಡರೆ ತನ್ನ ಪದ್ಧತಿ, ಅಥವಾ ಆದರ್ಶಗಳನ್ನು ಕೊಂಚ ಸಡಿಲ ಗೊಳಿಸುವಳು! ನಮ್ಮ ಡಿಪಾರ್ಟ್ಮೆಂಟ್ ಬೆಕ್ಕುಗಳನ್ನು, ಫಿಸಿಕ್ಸ್ ಕ್ಯಾಂಟೀನ್ ಬೆಕ್ಕುಗಳನ್ನು ಅತಿಯಾಗಿ ಮುದ್ದುಸಿಸುತಿದಲ್ಲೂ. ಅದನ್ನು ಕಂಡಾಗಲೇ ಅವಳ ಈ ಮುಖ ನನಗೆ ಪರಿಚಯವಾಗಿದ್ದು... ಅದೊಂದು ನಿಜವಾದ ಮುಗ್ದ ಪ್ರೀತಿ. 

ಅಂದೊಂದು ದಿನ ನಾಕೇಳಿದ್ದೇ; ಅವಳು ಹೇಳಿದಲ್ಲೂ, 
ಬೆಕ್ಕುಗಳಂದ್ರೆ ಯಾಕಷ್ಟು ಪ್ರೀತಿ?- ನಾನು. 
ನಾನು ನಮ್ಮೂರಲ್ಲಿ ಇದ್ದಾಗ ಬೆಂಕೊಂದನ್ನು ಸಾಕಿದ್ದೆ. ಅವಳ ಹೆಸರು ಪಿಲ್ಲಿ.. 
(ಪಿಲ್ಲಿ ?- ಇದೆಂತ ಹೆಸರೇ?)
ಅವಳಂದ್ರೆ ನಂಗೆ ತುಂಬಾ ಪ್ರೀತಿ. ಅವಳಿಗೂ ಅಷ್ಟೇ ನನಕಂಡ್ರೆ ಅಷ್ಟೇ ಇಷ್ಟ. 
ಅದೆಷ್ಟು ಮರಿ ಹಾಕಿದಳೋ ಲೆಕ್ಕನೆ ಇಲ್ಲಾ. 
ನಮ್ಮಮ ಅವಳನ್ನು ಬಹಳ ಕಟ್ಟು ನಿಟ್ಟಿನಿಂದ ಬೆಳೆಸಿದ್ಲು. ಅದುಕ್ಕೆ ಅಮ್ಮನ ಕಂಡ್ರೆ ಸ್ವಲ್ಪ ಹೆದ್ರುತಿದ್ಲು. 
ಮನೆಗೆ ಯಾವುದೇ ಹೊಸ ಬ್ಯಾಗ್, ಬಟ್ಟೆ ಏನೇ ಬಂದ್ರು ಅದ್ರುಮೇಲೆ ಹೋಗಿ ಮಳುಗ್ತಿದ್ಲು. 
ಆದ್ರೂ ನಾನೇನು ಅವ್ಳಿಗೆ ಬೈತಿರ್ಲಿಲ್ಲ. 
ಯಾವುದೇ ಹೊಸ ಹೆಸರು ಕೇಳಿದ್ರು, ಅದು ಇಷ್ಟ ಆದ್ರೆ ಅವ್ಳಿಗೆ ಮರುದಿನದಿಂದ ಅದೇ ಹೆಸರು. 
ಚಿನ್ನಿ, ಪಿಲ್ಲಿ, ಪುಟ್ಟಿ.. ಹೀಗೆ ಹತ್ತು ಹಲವು ಹೆಸ್ರು ಅವ್ಳಿಗೆ. 
ಬಾಲ ಊದಿಸ್ಕೊಂಡು ನಮ್ಮ ಮನೆಯ ನಾಯಿಯನ್ನೇ ಹೆದ್ರಿಸಿದ್ಲು ಒಂದುಸಲ. 
ಅವಳಿಂದ ಎಷ್ಟೋ ಕ್ಲಾಸೆಸ್ ಮಿಸ್ ಆಗಿದೆ ನನ್ಗೆ. ಬೆಳ್ಳಿಗೆ ಬೇಗ ಎದ್ದು ಬಸ್ ಅಲ್ಲಿ ಶಾಲೆಗೆ ಹೋಗ್ಬೇಕಿತ್ತು. ಗಂಟೆಗೊಂದು ಬಸ್. ಅದು ಮಿಸ್ ಆದ್ರೆ ಮುಂದಿನ ಬಸ್ ಗೆ ಕಾದು ಶಾಲೆಗೆ ಹೋಗ್ಬೇಕಿತ್ತು. 
ನಾನು ಶಾಲೆಗೆ ಹೋರಾಟಗ ನನ್ನಿಂದೇನೆ ನನ್ಗೆ ಗೊತ್ತಾಗ್ದೇ ಇರೋ ರೀತಿ ಬಂದು ಬಿಡೋಳು. 
ಅವಳನ್ನು ಯೆತ್ತಿಕೊಂಡು ಮತ್ತೆ ಮನೆಗೆ ಕರ್ಕೊಂಡು ಹೋಗಿ ಬಿಡೋ ಅಷ್ಟ್ರಲ್ಲಿ ಬಸ್ ಮಿಸ್ ಆಗತಿತ್ತು. ಅಂತಾ ಪಿಲ್ಲಿ ಅವ್ಳು. 
(ಪಿಲ್ಲಿ ಬಗ್ಗೆ ಮಾತಾಡ್ಬೇಕರೇ ಸ್ಯಾಮ್ ಮುಖದಲ್ಲಿ ನಗು, ದ್ವನಿಯಲ್ಲಿ ಖುಷಿ ಇತ್ತು.) 
ಇಷ್ಟೇ ಅಲ್ಲ, ಅವ್ಳಿಗೆ ನನ್ನ ಸ್ನೇಹಿತಿಯ ಬೆಕ್ಕಿನೊಂದಿಗೆ ಮದುವೆ ಬೇರೆ ಮಾಡಿದ್ವಿ. ಅಂದು ನಕ್ಕಿದಳು. 
(ಕಾರ್ತಿಕ್ ಹಾಗು ಸ್ಯಾಮ್ ನಡುವೆ ಯಾವಾಗಲು ಮಾಂಸಾಹಾರದ ಬಗ್ಗೆ ವಾದ ನಡೆಯುತ್ತದೆ. ಒಂದುರೀತಿಯಲ್ಲಿ ಸ್ಯಾಮ್ ಮಾಂಸಾಹಾರದ ವಿರೋಧಿ ಅಂತ ಬೇಕಾರೂ ಹೇಳಬಹುದು.)
ಪಿಲ್ಲಿ ಮಾಂಸಾಹಾರಿ. ಆದ್ರೂ ಅವ್ಳಿಗೆ ಬೈದಿರಲಿಲ್ಲ, ತಿನ್ನಬೇಡ ಅಂದಿರಲ್ಲಿಲ್ಲ. 
ಅದೇನೋ ಗೊತ್ತಿಲ್ಲ, ಅವಳಂದ್ರೆ ನನ್ನ ನಿಜ ಪ್ರೀತಿ ಅಂದಿದ್ದಳು. - ಅವಳು 

ಹೀಗೊಂದು ಸಣ್ಣ ಮಾತು ಕಥೆ ಮುಗಿಸಿ ನಮ್ಮಮ್ಮ ಕೆಲಸಕ್ಕೆ ಹೊರೆಟೆವು. 










Happy bday mommyy (Google)

"ಮನೆಯೇ ಮೊದಲ ಪಾಠ ಶಾಲೆ, ತಾಯಿ ತಾನೆ ಮೊದಲ ಗುರುವು", ಚಿಕ್ಕ ವಯ್ಯಸ್ಸಿನಿಂದ ಈ ಗಾದೆ ಮಾತನ್ನು ಒಂದಲ್ಲ ಒಂದು ಕಡೆ ಕೇಳುತಲ್ಲೇ ಬೆಳೆದೆ. ಬೇರೆಯವರ ವಿಷಯ ನನಗೆ ಗೊತ್ತಿಲ್ಲ. ನನಗೆ ಮಾತ್ರ ಈ ಗಾದೆ ಮಾತು ಅಕ್ಷರಸಹ ಅನ್ವಹಿಸುತ್ತದೆ. ಪ್ರಾಥಮಿಕ ಶಿಕ್ಷಣ ಮಾಡುತಿದ್ದೆ ಸಮಯದಲ್ಲಂತೂ ಎಲ್ಲದಕ್ಕೂ ಅಮ್ಮ ಅಮ್ಮ.  ಈಗಲೂ ಅಷ್ಟೇ, ಶೈಕ್ಷಣಿಕ ವಿಷಯದಲ್ಲದಿದ್ದರು, ಅದು ಇದು ಅಂತ ದೈನಂದಿನ ಎಷ್ಟೋ ವಿಷಯಗಳಲ್ಲಿ  ಅವರ ಬಳಿಯೆ ಮೊದಲ ಸಲಹೆ ಕೇಳೋದು.

ಈ ಗ್ಯಾಪ್ ಅಲ್ಲಿ ನಂಗೆ ಇನ್ನೊಂದು ವರ್ಚುಯಲ್ ಅಮ್ಮ, ಅಂದ್ರೆ ಸಲಹೆಗಾರ್ತಿ ಸಿಕ್ಕಿರುವಳು. ಏನೇ ಕೇಳಿದ್ರು, ಗೊತ್ತಿಲ್ಲ ಅಂದ್ರು ಉತ್ತರ ಕೊಡ್ತಾಳೆ. ಅವ್ಳದು ನೆನ್ನೆ  ಬರ್ತ್ಡೇ. ಅದುನ್ನ ಅವಳೆ ಹೇಳಿದ್ದು.
ಈ ಸುಸಂದರ್ಭದಲ್ಲಿ ಅವ್ಳಿಗೆ ನಾನು ಥ್ಯಾಂಕ್ಸ್ ಹೇಳ್ಬೇಕು ಅನ್ಸ್ತು, ಅವಳಿಂದ ಎಷ್ಟೋ ಉಪಕಾರ ಆಗಿದೆ, ಇನ್ನುಮುಂದೆನು ಅವಳ ಸಹಾಯ ನಂಗೆ ಬೇಕೇ ಬೇಕಾಗುತ್ತೆ. ಅವಳಿಲ್ಲ ಅಂದ್ರೆ ಒಂದುರೀತಿ ಕಂಗಾಲೆ ಆಗ್ಬಿಡ್ತಿನಿ.
ಸೊ ಹಿಯರ್ ಐ ಗೋ,
ಥ್ಯಾಂಕ್ಸ್ ಆ ಲಾಟ್ ಮೋಮ್ (Google) ಅಂಡ್ ಆ ವೆರಿ ಹ್ಯಾಪಿ ಬರ್ತ್ಡೇ.
ಲೊಡ್ಸ್ ಆ ಲವ್. 💗

Tuesday, 26 September 2017

ಆದತ್

ಯಾವುದೇ ಅಭ್ಯಾಸವನ್ನಾಗಲಿ ಬದಲಾಹಿಸಬಹುದು, ಅವು ನಿಮ್ಮನು ಬದಲಾಯಿಸುವಮುನ್ನ;ಮತ್ತೆಯೂ !!

Wednesday, 20 September 2017

ಕಪ್ಪು ಕಸ್ತೂರಿ!

ಎಲ್ಲಾ ಬಣ್ಣವ ಮಸಿ ನುಂಗಿತ್ತು,
ನಮ್ಮಪ್ಪ ಹೇಳಿಕೊಟ್ಟ ಮತ್ತೊಂದು ಪಾಠ.
ಒಲೆಯಲ್ಲಿ ಅಡಿಗೆ ಮಾಡೊ ಕಾಲ ಯಾವಾಗ್ಲೋ ಹೊಯ್ತಪ್ಪ, ನಮ್ಮ ಕಾಲದಲ್ಲಿ ಯಾವ ಪಾತ್ರೆಗೂ ಮಸಿಯೆಲ್ಲಾ ಆಗಲ್ಲ. ಅದ್ರಲ್ಲೂ, ನಾನಂತೂ ಈ ಮಸಿಗೆ ಅಷ್ಟೆಲ್ಲಾ ಅವಕಾಶಕೊಡೋದಿಲ್ಲ ನನ್ನ ಜೀವನದ ಬಣ್ಣನ ನುಂಗಿಹಾಕಕ್ಕೆ, ಅಂದಿದ್ದೆ.

ಹೌದ?  

ನಾನು, ಎಲ್ಲರಂತೆಯೆ ಸಾಮಾನ್ಯ ವ್ಯಕ್ತಿ.
ಅರಿವಾಯ್ತು.

ಒಂದು ಬಿಂದು ಹುಳಿ ನೀರು ಸಾಕು, ಹಾಲು ಒಡೆಯಲು.
ಒಂದು ಕೆಟ್ಟ ಕ್ಷಣ ಸಾಕು ಸಾವಿರ ಒಳ್ಳೆ ಕ್ಷಣಗಳ ಮರೆಸಲು.

ಅಶನ ಬೆಂದಿದೆಯೆ ನೋಡಲು ಒಂದು ಅಗುಲು ಪರೀಕ್ಷಿಸಿದರೆಸಾಕು.

ಮೊತ್ತೊಮ್ಮೆ ಅಪ್ಪನ ಮಾತು ಸತ್ಯ ಸಾಭೀತಾಯಿತು.
ಎಲ್ಲಾ ಬಣ್ಣವ ಮಸಿ ನುಂಗಿತ್ತು...
😐😐😓😢😢😢😢😢😢😢😢😢😢😢😩😥

Tuesday, 19 September 2017

ಮರುಳ ಮನಸ್ಸೇ!

ಇನಿಯನ ಸಂದೇಶವೊಂದು ಬಂದಿತ್ತು.
ಯುಗದ ನೋವು ಕ್ಷಣದಿ ದೂರಾಯ್ತು.
ಮಾಡಿದ ತಪ್ಪಿಗೆ, ಮಗುಮನದ ಆ ನಗೆ ಕಂಡು, ಕ್ಷಮೆ ಮೂಡಿತ್ತು.
ಮರಳು ಮನಸ್ಸು ಮತ್ತೆಮ್ಮೆ ಮರುಳಾಗಿತ್ತು. 

Monday, 18 September 2017

ಪ್ರಶ್ನೆಯೇ? ಗೊತ್ತಿಲ್ಲ.

ಕಾರ್ಮೋಡ.
ಎಲ್ಲೆಡೆ ಕತ್ತಲು.
ಮಳೆಯಾದೀತೆ?
ನೋವ ಮರೆಸೀತೆ?
ಗಾಳಿಯದೆ ಚಿಂತೆ.
ನೋವ ದೂರ ಕೊಂಡೊಯ್ಯುವ ನೆಪದಲ್ಲಿ ಮಳೆಯ ತಡೆದೀತೆ?
ಸಂಶಯ.
ಒಂದು ವೇಳೆ ಮಳೆಯೂ ಇಳೆಯ ಸೇರಿದರೆ?
ಮತ್ತೊಂದು ಸುಂದರವಾದ ಪಾಪಸ್ಕಳ್ಳಿಯು ಚಿಗುರೊಡೆದೀತೆ ? ಹೂ ಅರಳಿತೇ?
ಗೊಂದಲ.
ಕಡೆಯಿಲ್ಲದ ಗೊಂದಲ.
ಸರಿತಪ್ಪುಗಳ ಎಲ್ಲೇ ಮೀರಿ.
ಬೇರ್ಪಡಿಸಲಾಗದ ಬಣ್ಣಗಳು.
ಬಿಳಿಯ ಹಾಳೆ.
ಬೇರಾವುದೋ ಲೋಕ.
ಒಬ್ಬಳೇ ನಾನ್ಲಿಲ್ಲಿ.
ಹೆಚ್ಚೇನ ಹೇಳಲಾರೆ.
ಅಮ್ಮ ಮಾಡಿಕೊಟ್ಟ ಚಹಾಗಿಂದು ಮೋಸ ಮಾಡಿದೆ. ಅದೀಗ ತಣ್ಣಗಾಗಿದೆ.
ಸುತ್ತಲೂ ತಣ್ಣನೆಯ ವಾತಾವರ್ಣ.
ಮಂಜುಗಡ್ಡೆಯ ಮನುಸುಗಳು.
ಕಲ್ಲು.
ಹೃದಯ ಬಡಿತವಿಲ್ಲ.
ಬೆಚ್ಚನೆಯ ಭಾವವಿಲ್ಲ.
ಮಾನವೀಯತೆ?
ಅವಳೊಂದು ಮುದ್ದು ಯಕ್ಷಿಣಿ.
ಚಳಿಗೆ ಬೆಚ್ಚಗೆ ಹೊದೆದು ಮಲಗಿ ವರ್ಷಗಳಾಗಿವೆ.
ಹೋದಕೆಯ ಮೇಲೆ ಮಂಜಿನ ರಾಶಿ.
ಶಿಥಿಲ.
ನಿಶಬ್ಧ.
ಅಯ್ಯೋ. ಮತ್ತೆ ಮತ್ತೆ ಕಾಡುತಿಹ ಪ್ರಶ್ನೆ!?

ಕೊನೆಯೆಲ್ಲಿ ?
ಕೂತು ಮಾತಾಡಬೇಕಿದೆ.
ಯಾರಿಹರಿಲ್ಲಿ?
ಕನ್ನಡಿಯು ಇಲ್ಲ.
ಮಳೆಯೂ ಇಲ್ಲ.
ನೀರು ಹಿಂಗಿದ ಬರಡು ನೆಲ.
ಜೊತೆಯಲ್ಲಿ ನನ್ನ ಕಿವುಡು ಕಿವಿ.

ಸಾಕಾಯ್ತು.








 




ಮಳೆಬರುವ ಮುನ್ಸೂಚನೆ

 ಇಂದು:


ಹೇಳಲು ಸಾಕಷ್ಟಿವೆ.
ಆದರೆ ಮೂಗಿ ನಾನು.
ಮಗುವಂತೆ 'ಅತ್ತು'ಬಿಡಲೇ'?
ಮಗುವಿನಂತೆ 'ಅಳು'ವೆನೋ ಬರುತಿದೆ, ಆದರೆ ಈ ಮೋಹ ಪಾಶವ 'ಬಿಡಲು' ಸಾಧ್ಯವೇ?

ಅಪ್ಪ ಹೇಳಿಕೊಟ್ಟ ಪಾಠ ನನಗೆ ಅರ್ಥವಾಗಿದ್ದರು, ಕಲಿಯಲಾಗಲಿಲ್ಲ.

"be connected to everything, never get attached"

Saturday, 16 September 2017

ಕಥೆಯಲ್ಲ ಜೀವನ ಸಿ.೧, ನಮ್ಮಮ್ಮ -ಎಪಿ.೧

ಯಾರದ್ದು ತಪ್ಪು?  
ಇಲ್ಲಿ ಯಾರದ್ದು ತಪ್ಪಿಲ್ಲ. ಹೌದು.
ತಾಯಿ ಮಕ್ಕಳ್ಳ ಸಂಬಂಧವೇ ಹಾಗೆ.

ಓದುಗರಿಗೆ ಸೂಚನೆ: ಒಂದಕೊಂದು ಬೆಸೆಯುವ ಪ್ರಯತ್ನ ಬೇಡ.
ಬೇರೆ ಬೇರೆ ಫ್ಲೇವರ್ ಪೇಸ್ಟ್ರೀಸ್ ಇವು.

👉ಮನೆಗೆ ತಲುಪಿದ ಕೂಡಲೇ ಅಪ್ಪನ ಹತ್ತಿರ ಕೇಳುವ ಮೊದಲ ಪ್ರಶ್ನೆ,
ಏನ್ ಭಟ್ರೇ, ಅಮ್ಮ ಯೆಲ್ಲಿ ?
ಈ ಪ್ರಶ್ನೆ ಏಕೆ ಕೇಳಿದೆ ಅನ್ನುವದ್ದಕ್ಕೆ ಉತ್ತರವಿಲ್ಲ.

👉ನಮ್ಮಪ್ಪ ಅವಾಗವಾಗ ನನಗೆ ಹೇಳುವುದುಂಟು,
'ತಾಯಿಯ ಕಂಡರೆ ತಲೆ ನೋವು.'
ಇದಕ್ಕೆ ಬೇಕಾದಷ್ಟು ಅರ್ಥಕಲ್ಪಿಸಬಹುದು. ಅವರವರ ಭಾವಕ್ಕೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ.
ನನ್ನ ಮತ್ತು ಅಪ್ಪನ ಭಾವಕ್ಕೆ ತಕ್ಕಂತೆ ಹೇಳುವುದಾದರೆ, ಈ ಗಾದೆಗೆ ಎರೆಡು ಅರ್ಥ,
ಮೊದಲನೆಯದು,
ಅಮ್ಮನ ಕಂಡ ಕೂಡಲೇ ಇಡೀ ದಿನದ ಕಥೆ ಉರುಗುತ್ತೇನೆ, ಜೊತೆಯಲ್ಲಿ ಅಮ್ಮ ಅಲ್ಲಿ ನೋವು ಇಲ್ಲಿ ನೋವ, ಸುಸ್ತಾಯ್ತು ಅಂತ ಬೇರೆ ಒಂದಷ್ಟು ವದರುತ್ತೇನೆ. ಆಗ ಅಪ್ಪ 'ತಾಯಿಯ ಕಂಡರೆ ತಲೆ ನೋವು' ನನ್ನ ಮಗಳಿಗೆ ಅಂತಾರೆ. 😅😆... ನಮ್ಮಪ್ಪನ ಸಾರ್ಕ್ಯಾಸ್ಮ್ ಸಹಿಸುವುದು ಅಷ್ಟು ಸುಲಭದ ಮಾತಲ್ಲ.
ಮತ್ತೊಂದೂ..... ಬಿಡಿ ಬೇಡ. ಹೇಳೊದುಕ್ಕು ಕೇಳೊದುಕ್ಕು ಇದೊಂದು ವಿಷಯವೇ ಅಲ್ಲ.

👉 'ಬಾಯಿಗಡ್ಡ ಬಾಲೆಲು', ಮತ್ತೊಂದು ಡೈಲಾಗ್, ಅಯ್ಯೋ ಬಿಡಿ ನಮ್ಮಪ್ಪನ ಬಿಟ್ಟು ಬೇರೆ ಯಾರ್ತನೆ ಗಾದೆಗಳಲ್ಲಿ ನನ್ನಜೊತೆ ಮಾತಾಡ್ತಾರೆ?
ಇದು ತುಳು ಭಾಷೆಯಲ್ಲಿದೆ.  ನಮ್ಮಪ್ಪ ಈ ನುಡಿಮುತ್ತುನ್ನ ಉದುರಿಸುವುದು ಯಾವಾಗ? , ಕೇಳ್ರಿ ಹೇಳ್ತೀನಿ.
ಬ್ರಾಹ್ಮಣ ಕುಟಂಬಕ್ಕೆ ಸೇರಿದ ನಮ್ಮಮ್ಮ , ಶ್ರದ್ಧೆ, ಭಕ್ತಿಗೆ ನಮ್ಮ ಮನೆಯಲ್ಲೇ ವರ್ಲ್ಡ್ ಫೇಮಸ್. ಆಚಾರವಂತರು, ವಿಚಾರವಂತರು. ಕೊಳೆ, ಮೈಲಿಗೆ, ಶುದ್ಧ ಈ ಪದಗಳಿಗೆ ನಮ್ಮ ಎಡಬಿಡಂಗಿತನದ (so called my rationalism) ಧೂಳುತಾಕಿ ದಮ್ಮುಕಟ್ಟುವಾಗ ನಮ್ಮಮ್ಮ ಉಸಿರು ದಾನ ಮಾಡಿ ಅವುಗಳನ್ನು ಜೀವಂತವಾಗಿರಿಸಿಕ್ಕೊಳ್ಳುತ್ತಾರೆ.
ಅದೇನೋ ಗೊತ್ತಿಲ್ಲ, ನಮ್ಮಮ್ಮನ ಊಟದ ತಟ್ಟೆಯಲ್ಲಿ ಇರುವ ಕುಸುಗಲಿಕ್ಕಿಯ ಪದಾರ್ಥವಾಗಲಿ (ಹವ್ಯಕ ಭಾಷೆಯಲ್ಲಿ ಪದಾರ್ಥವೆಂದರೆ ಸಾಂಬಾರ್, ಪಲ್ಯ ಹೀಗೆ... ) ಅಥವಾ ಬೇರೆ ಯಾವುದೇ ತಿಂಡಿ ತಿನಿಸಾಗಲಿ ಒಂದು ನಮೂನೆ ಯಮ್ಮಿಯಾಗಿ ಕಾಣಿಸುತ್ತದೆ. ಟ್ರಸ್ಟ್ ಮೀ, ಇದು  ಸತ್ಯ. ನಾನಾಗಿಯೇ ಮಿಶ್ರಮಾಡಿದ ಅಶನ ಪದಾರ್ಥಗಳ ಪಾಕ ಅಷ್ಟು ಚೆಂದ ಹಾಗು ರುಚಿಕರವಾಗಿ ಕಾಣುವುದಿಲ್ಲ. ಹಾಗಾಗಿ ಯಾವಾಗಲು ಅಮ್ಮನ ತಟ್ಟೆಯಿಂದ ನನಗೆ ಊಟ ಬೇಕು, ಕೇಳುತ್ತೇನೆ. ಆಗಲೇ ನಮ್ಮಪ್ಪನ ಡೈಲಾಗ್ ಬರೋದು. ಬಾಯಿಗಡ್ಡ ಬಾಲೆಲು, ಅಂದ್ರೆ ತಿನ್ನುವ ತುತ್ತಿಗೆ ಮಕ್ಕಳು ಅಡ್ಡ ಬರ್ತಾರೆ ಅಂತ. ನೀವೇ ಹೇಳಿ ಇದ್ರಲ್ಲಿ ನನ್ನ ತಪ್ಪೇನಾದ್ರು ಇದಿಯಾ? ನಾನು ಎಷ್ಟು ಮುಗ್ದೆ. ಹಾಹಾ :)

ಮುಂದುವರಿಯಲಿದೆ..... 








Wednesday, 13 September 2017

ಅಚ್ಚಾ!

ಅಚ್ಚಾ! - ದೀಪಕ್ ಪ್ರತಿಕ್ರಿಯಿಸಿದ.

(ಕೆಲವು ಕ್ಷಣಗಳ ನಿಶಬ್ಧ, ಯಾವುದೋ ಯೋಚನಾಲಹರಿಯಲ್ಲಿ ತೇಲಿಹೋದಂತೆ.. ಕಳೆದ ಎರೆಡು ತಿಂಗಳುಗಳಲ್ಲಿ ನಡೆದ ಎಲ್ಲಾ ನೆನಪುಗಳು ಕಣ್ಣಮುಂದೆ ಹಾಗೆ ಸುಳಿದು ಹೋದವು. ನೆನಪುಗಳೇ ಹಾಗೆ ನೆನಪಾಗುತ್ತಲೇ ಇರುತ್ತದೆ. ಮತ್ತೊಮ್ಮೆ ಕಳೆದು ಹೋದ ಸಮಯವನ್ನು ಹುಡಿಕಿ ಚೀಲ್ಲಕ್ಕೆ ತುಂಬಿಸಿ ಹೊತ್ತು ತರುತ್ತದೆ. ಒಂದು ನೆನಪಿನ ಜೊತೆ ಮಿಳಿತಗೊಂಡ ನೂರಾರು ನೆನಪುಗಳು. ಸಾಲು ಸಾಲು ನೆನಪುಗಳು. ಸುಂದರ ನೆನಪುಗಳು. ದುಃಖವೆಂದರೆ ಈ ರೀತಿಯ ಇನ್ನೊಂದಷ್ಟು ನೆನಪುಗಳ ಬುತ್ತಿ ಕಟ್ಟಲು ನಮ್ಮಿಬ್ಬರ ನಡುವೆ ಮೊದಲಿನಂತ ಸ್ನೇಹ ಉಳಿದಿಲ್ಲ.)

Wakad Pune,
೦೯/೦೯/೨೦೧೭.

ಕೆಲವು ಗಂಟೆಗಳ ಹಿಂದೆಯಷ್ಟೇ ನನ್ನ ಸಂಚಾರಿ ದೂರವಾಣಿಯನ್ನು ಕಳೆದುಕೊಂಡಿದ್ದೆ.
IISER ಅಲ್ಲಿ ಯಾವುದೊ ಕೆಲ್ಸದ ಮೇಲೆ ಪೂನೆಗೆ ಬಂದಿದ್ದೆ. ಮಹಾರಾಷ್ಟ್ರಕ್ಕೆ ಹೊರಡಬೇಕೆಂದಕೂಡಲೇ ನೆನಪಾದದ್ದು ಅಭಿ. (ಹೆಸರನ್ನು ಬದಲಾಯಿಸಿದ್ದೇನೆ).
ಮೊದಲೇ ನಿರ್ಧರಿಸಿದಂತೆ ಅರುಣನ ಸ್ನೇಹಿತ ದೀಪಕ್ ನನ್ನನ್ನು ಅವನ ಸಹೋದ್ಯೋಗಿ ರಾಧಾಳ ಮನೆಗೆ ಕರೆದುಕೊಂಡು ಹೋದ. ಅವನು ತನ್ನ suzuki access 125 ತಂದಿದ್ದ. ಅದನ್ನು ನೋಡಿಯೇ ಅಭಿಯ ನೆನಪು ಕಾಡಿತ್ತು. ದೀಪಕ್ನ ಕುಶಲೋಪರಿ ಯನ್ನು ವಿಚಾರಿಸುತ್ತಾ ನಮ್ಮ ಪಯಣ ಸಾಗಿತ್ತು. ನನ್ನ ಯಾವೊದೊ ಉತ್ತರಕ್ಕೆ, ಪ್ರತಿಕ್ರಿಯಿಸುತ್ತಾ 'ಅಚ್ಚಾ' ಎಂದ.

'ಅಚ್ಚಾ', ಕೇವಲ ಒಂದು ಸಾಮಾನ್ಯ ಪದ. ಮಹಾರಾಷ್ಟ್ರದಲ್ಲಿ ಸರ್ವೇಸಾಮಾನ್ಯ...

ಈ ಸಣ್ಣ ವಿಷಯವು ಯಾರದೋ ನೆನಪು ತರಿಸಲು ಸಾಧ್ಯವೇ? ಈಕೆಗೇನು ಹುಚ್ಚೇ ಎನಿಸಬಹುದು.
(It maybe nothing for others, but everything for some.)
ನಮ್ಮವರು ಅನಿಸಿದವರ ಸಣ್ಣ ಸಣ್ಣ ವಿಷಯವು ನಮಗೆ ಹೆಚ್ಚೇ. ಎಲ್ಲಾ ಸಣ್ಣ ವಿಷಯಗಳಲ್ಲೂ ತನ್ನದೆಯಾದ ಸುಖದುಃಖ್ಖ ಒಳಗೊಂಡಿರುತ್ತದೆ. ಎಲ್ಲೆಡೆ ತನ್ನ ಛಾಪ ಮೂಡಿಸುತ್ತದೆ.

ಇದೊಂದು ಕೇವಲ ನಿದರ್ಶನವಷ್ಟೇ. ಇಂತಹ ಎಷ್ಟೋ ವಿಷಯಗಳು ದಿನ ನಿತ್ಯ ಕಾಡುವುದುಂಟು.

ಮೊಗದಲ್ಲೊಂದು ಸಣ್ಣ ನಗು ಮೂಡಿಸುವುದುಂಟು. ಮನದಲ್ಲಿ ಸಾವಿರ ನೆನಪುಗಳು ಸುಳಿದು ಹೋಗುವುದುಂಟು.