ಜೀವನದಲ್ಲಿ ದೊಡ್ಡ ದೊಡ್ಡ, ಹಾಗು ಮುಖ್ಯವಾದ ಸಂದರ್ಭಗಳು ಬರುತ್ತದೆ. ಅದರನ್ನು ಎಲ್ಲ ನೆನೆಯುತ್ತಾರೆ.
ಯಾರು ಅಷ್ಟಾಗಿ ಜೀವನದ ಸಣ್ಣ ಸಣ್ಣ ತುಣುಕನ್ನು ಮೆಲುಕುಹಾಕುವವರಿಲ್ಲ.
ಥ್ಯಾಂಕ್ಸ್ ಟು ಡೈಸ್ ಪ್ರೋಡ್ಯೂಕ್ಷನ್ಸ್. ನನ್ನ ಹಾಗೆ ಯೋಚಿಸುವವರು ಯಾರೋ ಇದ್ದಾರೆಂಭ ಖುಷಿಕೊಟ್ಟಿದ್ದಕ್ಕಾಗಿ.
ಕೆಲವೊಮ್ಮೆ ನಮ್ಮ ಮಹತ್ವದ ಅರಿವು ಯಾರಿಗೂ ಇರುವುದಿಲ್ಲ. ನಮಗೂ ಕೂಡ.
ಕೆಲವೊಮ್ಮೆ ಸ್ವಾಸ್ತ್ಯ ಜೀವನಕ್ಕೆ ಅಪ್ಪ್ರಿಶಿಯೇಷನ್ ಮುಖ್ಯವಾಗುತ್ತದ್ದೆ. ಅಪ್ಪ್ರಿಶಿಯೇಟ್ ಮಾಡುವವರಿಲ್ಲದಿರುವಾಗ ಸೆಲ್ಫ್ ಅಪ್ಪ್ರಿಶಿಯೇಷನ್ ಮಾಡ್ಕೊಳಿ, ಮಜಾ ಮಾಡಿ, ಆರೋಗ್ಯವಾಗಿರಿ. ಲವ್ ಯುವರ್ಸೆಲ್ಫ್.
ನನ್ನ ಕಳೆದ ೬೦ ಗಂಟೆಗಳ ಜೀವನ ಚಿತ್ರವನ್ನು ಇಲ್ಲಿ ಚಿತ್ರಿಸುವ ಸಣ್ಣ ಪ್ರಯತ್ನದಲ್ಲಿ...
ಯಾವುದೊ ಅಡ್ವೆಂಚರ್ ಸ್ಟೋರಿ ಅಲ್ಲ. ಆದರೆ ತುಂಬಾ ಬಣ್ಣಗಳ್ಳನು ಒಳಗೊಂಡ ನನ್ನ ದಿನನಿತ್ಯ ಜೀವನದ ತುಣುಕು.
೨೩-೮-೧೭ (ರಾತ್ರಿ)
ಸ್ವಲ್ಪ ಜ್ವರ. ಸ್ವಲ್ಪ ಅಲ್ವ ಯಾರಿಗು ಹೇಳ್ಲಿಲ್ಲ.
ಅಮ್ಮಂಗೆ ಹುಷಾರಿಲ್ಲ ಅಂತ ಬೇರೆ ತಲೆಬಿಸಿ. ನಿದ್ದೆನು ಸರಿಯಾಗಿ ಬರ್ಲಿಲ್ಲ.
೨೪-೮-೧೭ (ಗೌರಿ ಹಬ್ಬ)
ಅಮ್ಮನಿಲ್ಲದೆ ಮನೆ ಬಿಕೋ ಅಂತಿತ್ತು. ಎಲ್ಲರೂ ಇದ್ರು ಕಾಲಿ ಕಾಲಿ ಅನ್ಸೋ ಮನೆ ಮನ. ಮನೆಯವರನ್ನೆಲ್ಲ ಒಂದಾಗಿಸಿ ಇಡುವ ಕೊಂಡಿ ಅಂದ್ರೆ ಅಮ್ಮ.
ಅಮ್ಮ ಬೆಳಗ್ಗಿನ ೯.೦೦ ರ ಬಸ್ಸಿಗೆ ಪುತ್ತೂರು ಬಿಟ್ಟು ಸಂಜೆ ೫.೩೦ ತಕ್ಕೆ ಬೆಂಗಳೂರು ತಲುಪೂವರಿದ್ದರು.
ಅಮ್ಮನ ಕರೆತರಲು ನಾನು ಮೆಜೆಸ್ಟಿಕ್ ಬಸ್ಸು ನಿಲ್ದಾಣಕ್ಕೆ ಹೋಗಬೇಕಿತ್ತು.
ಸಂಜೆ ೪.೩೦
ನಿದ್ದೆಯಿಂದಯೆದ್ದು ಅಮ್ಮನ ಕರೆತರಲು ಹೊರಟೆ. ಜ್ವರದ ಅಮಲು, ನಿದ್ದೆ ಬೇರೆ ಸರಿಯಾಗಿರಲ್ಲಿಲ್ಲ. ಜೊತೆಯಲ್ಲಿ ಇಡೀ ದಿನ ಮೊಬೈಲ್ ಗುರುಟ್ಟಿದ್ದೆ. ಕಣ್ಣುಗಳು ಸುಸ್ತಾಗಿದ್ದವು. (ಕಳೆದ ೨ ವಾರಗಳಿಂದ ಮೊಬೈಲ್ ಸಹವಾಸ ಹೆಚ್ಚಾಗಿದೆ)
ಓಲಾ, ಊಬರ್ ಯಾವ್ದ್ರಲ್ಲೂ ಕ್ಯಾಬ್ಸ್ ಇಲ್ಲ.
(ಅಯ್ಯೋ ದೇವ್ರೇ!!! ಲೇಟ್ ಆಯ್ತು).
ಫೈನ್ನ್ಲಲಿ ಕ್ಯಾಬ್ ಸಿಕ್ತು.
೫.೧೫ ದಕ್ಕೆ ಮನೆ ಬಿಟ್ಟೆ. ೬.೩೫ ಕ್ಕೆ ಇಂದಿರಾನಗರ ಮೆಟ್ರೋ ಸ್ಟೇಷನ್ ತಲುಪಿದೆ!!!! ೧.೩೦ ಘಂಟೆ !!
(ದೇವ್ರೇ. ನಮ್ಮ ಬೆಂಗಳೂರ ಕಥೆ ಯಾರಿಗೆ ಅಂತ ಹೇಳೋದು. ಅಮ್ಮ ಮೆಜೆಸ್ಟಿಕ್ ತಲುಪಿದ್ದಾರೆ ಸುಮ್ನೆ ಪ್ಯಾನಿಕ್ ಆಗ್ತಾರಲ್ಲ. )
ಅಮ್ಮನಿಗೆ ಕರೆ ಮಾಡಿದೆ. ಅವರ ಬಸ್ಸು ಸಹ ಲೇಟ್. ಖುಷಿ ಆಯ್ತು.
ಮೆಟ್ರೋ ಸ್ಟೇಷನ್ ಒಳ ಬಂದರೆ ಮತ್ತೊಂದು ನರಕ ಪ್ರದರ್ಶನ ನನಗಾಗಿ ಕಾದಿತ್ತು. ನಮ್ಮ ಪುತ್ತೂರು ಜಾತ್ರೆಯಲ್ಲೂ ಇಷ್ಟು ಜನ ಸೇರಲ್ವೇನೋ.. ಅಷ್ಟೊಂದು ಜನಸಾಗರ. ಚೆಕ್ ಇನ್ ಆಗುವಷ್ಟರಲ್ಲಿ ಸಾಕು ಸಾಕಾಗಿತ್ತು. ರೈಲು ಫುಲ್ಲಿ ಪ್ಯಾಕ್ಡ್. ಉಸಿರಾಡಲು ಜಾಗವಿರಲಿಲ್ಲ. ಪಕ್ಕದಲ್ಲೇ ಅಂಟಿ ನಿಂತಿದ್ದ ಅಜ್ಜನೊಬ್ಬ ನಾನೊಂದಿ ಕಥೆ ಬೇರೆ ಕುಯ್ಯುತಿದ್ದರು. ಆದರೆ ನನ್ನ ತಲೆ ಪೂರಾ ಅಮ್ಮನ ಕಡೆಯೇ ಇದ್ದಕಾರಣ ಹೂ ಹಾನ್ ಬಿಟ್ಟು ಬೇರೇನೂ ಮಾತನಾಡಲಿಲ್ಲ.
ಅಂತೂ ಇಂತೂ ಮೆಜೆಸ್ಟಿಕ್ ಬಂತು. ಅಮ್ಮ ಕೂಡ ಮೆಟ್ರೋ ಸ್ಟೇಷನ್ ಬಳಿಯೇ ನಿಂತಿದ್ದರು.
ಬಹಳ ಹಸಿವಾಗಿದೆ ಅಂದ್ರು. ಹೊಟೇಲ್ ಹೋದ್ರೆ ಪಕ್ಕ ಲೇಟ್ ಆಗುತ್ತೆ ಅಮ್ಮಾ. ಮನೆ ತಲುಪಲು ಕಷ್ಟ ಇದೆ ಇಂದು ಅಂದೇ. ಪಕ್ಕದಲ್ಲೇ ಇದ್ದ ಫ್ರೂಟ್ ಬೌಲ್ ಖರೀದಿಸಿ ಕೊಟ್ಟು ಕ್ಯಾಬ್ ಬುಕ್ ಮಾಡಿದೆ. ಮಧ್ಯಾಹ್ನ ಊಟ ಸರಿ ಸೇರದ ಕಾರಣ ನನಗು ಹಸಿವಾಗಿತ್ತು. ಆದರೆ ಹಣ್ಣುತಿನ್ನುವ ಮನಸಿರಲಿಲ್ಲ. ಕ್ಯಾಬ್ ಬರಲು ಹೇಗೂ ೧೦ನಿಮಿಷ ಸಮಯವಿದ್ದ ಕಾರಣ, ಅಮ್ಮನನ್ನು ಅಲ್ಲಿಯೇ ನಿಲ್ಲಿಸಿ, ಅಲ್ಲೇ ಸ್ವಲ್ಪ ದೂರದಲ್ಲಿದೆ ಮಾರುತ್ತಿದ್ದ ಕಡ್ಲೆ ಕಾಯಿಯನ್ನು ತಂದೆ.
ಕ್ಯಾಬ್ ಹತ್ತಲ್ಲೂ ಮತ್ತೊಂದು ಸಾಹಸ. ಟ್ರಾಫಿಕ್ ಹೆಚ್ಚಿದ್ದ ಕಾರಣ, ಕ್ಯಾಬ್ ಡ್ರೈವರ್ ನಮ್ಮನ್ನೇ ರಸ್ತೆ ಧಾಟಿ ಬರುವಂತೆ ಸೂಚಿಸಿದರು. ರಾತ್ರಿಯ ಕತ್ತಲ್ಲನ್ನು ಓಡಿಸುವ ವಾಹನಗಳ ಬೆಳಕು. ದೊಡ್ಡದ ರಸ್ತೆ. ಹುಷಾರಿಲ್ಲದ ಅಮ್ಮ. ಎರೆಡು ಬ್ಯಾಗ್ಸ್. ಹೆವಿ ಟ್ರಾಫಿಕ್, ಜೊತೆಯಲ್ಲಿ ಪಿರಿ ಪಿರಿ ಮಳೆ. ರಸ್ತೆ ದಾಟುವುದು ಒಂದು ಸಹವೇ ಸರಿ. ಕ್ಯಾಬ್ ಹತ್ತುವವರೆಗೂ ಅಮ್ಮನಿಗೆ ತಳಮಳ. ಇನ್ನು ಯಾಕೆ ಕರೆ ಮಾಡಿಲ್ಲವೆಂಭ ಚಿಂತೆ ಮನೆಯಲ್ಲಿದ್ದ ಅಪ್ಪನಿಗೆ. ಕರೆಯ ಮೇಲೆ ಕರೆ ಬರುತ್ತಲ್ಲೇ ಇತ್ತು. ಕರೆ ಸ್ವೀಕರಿಸುವ ಸ್ಥಿತಿಯಲ್ಲಿ ನಾವಿಲ್ಲ. ಇಷ್ಟೆಲ್ಲಾ ತೊಂದರೆಗಳನ್ನು ಧಾಟಿ ಕಾರ್ ಹತ್ತಿ ಕುಳಿತೆವು. ಅಮ್ಮನೊಂದಿಗೆ ನಿಲ್ಲದ ಮಾತುಕಥೆ ಶುರುವಾಯ್ತು. ಇಟ್ಸ್ ಮಮ್ಮಿ ಡಾಟರ್ ಟೈಮ್. ಜೊತೆಯಲ್ಲಿ ಅಪ್ಪನಿಗೊಂದು ಕರೆ. ಗೆಳಯನಿಗೊಂದು ಸಂದೇಶ. ಸಮಯ ಹೋದದ್ದೇ ತಿಳಿಯಲ್ಲಿಲ. ದಿನದ ಬಚ್ಚಲ್ಲೆಲ್ಲ ಕಳೆದು ಹೋಗಿ ನೆಮ್ಮದಿ ಅನಿಸಿತ್ತು. ಅಂತೂ ಇಂತೂ ಮನೆ ತಲುಪಿದೆವು.
ಮತ್ತೊಂದಷ್ಟು ಮನೆ ಮಂದಿಯೊಂದಿಗೆ ಹರಟೆ. ಊಟ, ಮನೆಕೆಲಸ, ನಿದ್ದೆ.
(ಇಂದು ಮತ್ತೆ ತಡವಾಗಿ ಮಲಗಿದೆ).
೨೫-೮-೧೭
ನಿನ್ನೆ ಮದ್ಯಾಹ್ನ (೨೪-೮-೧೭, ಸರಿ ಸುಮಾರು ೧೨.೦೦ ಗಂಟೆ) ಮುರಳಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ (IISc) ಬಯೋಲಾಜಿಕಲ್ಲ್ಲಿ ಸೈನ್ಸ್ ಡಿಪಾರ್ಟ್ಮೆಂಟ್ ನಲ್ಲಿ ಲ್ಯಾಬ್ ಟೆಕ್ನಿಶಾನ್ ಆಗಿ ಕಾರ್ಯ ನಿರ್ವಹಿಸುವವರು, ಹಾಗು ನನ್ನ ಸ್ನೇಹತ.) ಕರೆ ಮಾಡಿ ಲ್ಯಾಬ್ ಗೆ ಬರುವಂತೆ ಸೂಚಿಸಿದರು. ಆದರೆ ನಾನು ಮನೇಲಿದ್ದ ಕಾರಣ, ಅಮ್ಮನನ್ನು ಪಿಕ್ ಮಾಡಬೇಕಿದ್ದ ಕಾರಣ, ಇಂದು ಸಾಧ್ಯವಿಲ್ಲ, ನಾಳೆ ಬರುವೆ ಅಂದಿದ್ದೆ. ನನಗಾಗಿ ಅವರು ಗಣೇಶಾ ಚತುರ್ಥಿ ಇದ್ದರು ಕೆಲಸ ಮಾಡಲು ಒಪ್ಪಿದ್ದರು.
ಬೆಳ್ಳಿಗೆ ೬ ಗಂಟೆ ಯೆದ್ದು ಮನೆಯಿಂದ ಹೊರಟೆ. ಬೆಂಗಳೂರು ವಿಶ್ವವಿದ್ಯಾನಿಲಯ ತಲುಪಲು ಮೂರರಿಂದ ಐದು ಬಸ್ಸು ಬದಲಾಯಿಸ ಬೇಕು. ೮.೩೦ ಕ್ಕೆ ಡೆಪಾರ್ಮೆಂಟ್ತಲುಪಿದೆ. ಯಾರು ಇಲ್ಲದ ಕಾರಣ ಗೇಟ್ಅನ್ನು ನಾನೇ ತೆರೆಯಬೇಕಾಯ್ತು. ನನ್ನ ಲ್ಯಾಬ್ ನಿಂದ ಸ್ಯಾಂಪಲ್ ಸಂಗ್ರಹಿಸಿ, ಹೊರಡುವಷ್ಟರಲ್ಲಿ, ಡಿಪಾರ್ಟ್ಮೆಂಟ್ ಗೇಟ್ ತೆರದಿದ್ದ ಕಾರಣದಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಒಳ ಬಂದುಬಿಟ್ಟಿದ್ದರು.
ಜನ ಮರುಳೋ ಜಾತ್ರೆ ಮರುಳೋ ಅಂತ ನಮ್ಮಪ್ಪ ಯಾವಾಗ್ಲೂ ಹೇಳ್ತಾರೆ. ನಮ್ಮ ಯೂನಿವರ್ಸಿಟಿ ಒಳಗೆ ಬಹಳ ಹಾವಿನ ಹುತ್ತಗಳಿದ್ದು, ಯಾವುದೇ ಹಬ್ಬಗಳು ಬರಲಿ, ದೂರ ದೂರದಿಂದ ಜನರು ಬಂದು ಹುತ್ತಕ್ಕೆ ಪೂಜೆ ಮಾಡುತ್ತಾರೆ. ಇಂದು ಸಹ ಅದರಿಂದ ಹೊರತೇನಲ್ಲ. ಆದರೆ ಇಂದು ಸ್ವಲ್ಪ ಹೆಚ್ಚೇ ಡಿಮಾಂಡ್ಸ್ ಹುತ್ತಗಳಿಗೆ. ಕ್ಯೂ ಸಿಸ್ಟಮ್ ಅಲ್ಲಿ ಜನರ ಪೂಜೆ ಸಾಗಿತ್ತು. ಈ ಇಬ್ಬರು ಅಪರಿಚಿತ ವ್ಯಕ್ತಿಗಳು ಪೂಜೆಗಾಗಿಯೇ ಬಂದವರು. ಅವರಲ್ಲಿ ಒಬ್ಬರು ಕುಡಿಯುವ ನೀರಿಗಾಗಿ ಬಂದಿದಾರರು. ಮತ್ತೊಬ್ಬರು ಹೇಳದೆ ಕೇಳದೆ ಮಹಡಿಯನ್ನು ಹತ್ತಿ ಹೋಗಿದ್ದರು. ನೀರು ಕೇಳಿದವರಿಗೆ ನೀರು ಕೊಟ್ಟು ಕಳಿಸುವಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಎಲ್ಲು ಕಾಣಿಸಲಿಲ್ಲ. ಜೋರು ಜೋರು ಏರಿದ ಧ್ವನಿಯಲ್ಲಿ ಅವರನ್ನು ಕರೆಯುತ್ತ ಅಲೆದು. ಯಾವ ಪ್ರತಿಕ್ರಿಯೆ ಬರಲಿಲ್ಲ. ದೂರದಿಂದಲೇ ಮಹಡಿಯನ್ನು ಹುಡುಕಿದ್ದೆ. ಎಲ್ಲೂ ಕಾಣಿಸಲಿಲ್ಲ. ಡಿಪಾರ್ಟ್ಮೆಂಟ್ ಅಲ್ಲಿ ನನ್ನ ಬಿಟ್ಟು ಬೇರೆ ಯಾರಿಲ್ಲ. ಒಬ್ಬಳೇ ಮಹಡಿ ಹತ್ತುವುದು ಬೇಡವೆಂದು, ಕಾರ್ತಿಕ್ ಗೆ ಕರೆಮಾಡುವ ಅಂದುಕೊಂಡೆ. ಆದರೆ ಅವನು ಯಾವಕೆಲಸದಲ್ಲಿ ಬ್ಯುಸಿ ಇರುವನೋ ಅಂತ ಸುಮ್ಮನಾದೆ. ಎಲ್ಲಿಲ್ಲದ ಪಿತ್ತ ಕೆದರಿತ್ತು. ಗೇಟಿಗೆ ಬೀಗ ಜಡಿದು ಅಲ್ಲಿಂದ ಹೊರಟೆ. ಆದರೆ ಮನಸು ತಡೆಯದೆ ಮತ್ತೆ ಗೇಟ್ ತೆಗೆದು ಒಳ ಬಂದು ಮಹಡಿ ಹತ್ತಿ ಅವರನ್ನು ಹುಡುಕಲಾರಂಭಿಸಿದೆ. ಎಲ್ಲಿಯೂ ಕಾಣಲಿಲ್ಲ. ಹಿಂತಿರುಗಿ ಬರುವಷ್ಟರಲ್ಲಿ ಅವರು ಕಂಡರೂ. ಅವರನ್ನು ಪ್ರಶ್ನಿಸಿದ ಬಳಿಕ ತಿಳಿಯಿತು, ಗಣಪತಿ ಪೂಜೆಗಾಗಿ ಮಾವಿನ ಸೊಪ್ಪು ಹುಡುಕಿ ಬಂದಿದ್ದರೆಂದು. ಹೀಗೆಲ್ಲ ಬರುವ ಹಾಗಿಲ್ಲ ಅಂತ ಹೇಳಿ ಕಳುಹಿಸಿದೆ. (ಏನಕ್ಕೂ ಇರಲಿ ಎಂದು ನನ್ನ ಮತ್ತೊಬ್ಬ ಸ್ನೇಹಿತನಿಗೆ ಕರೆ ಮಾಡಿ ಕೈಯ್ಯಲ್ಲಿ ಮೊಬೈಲ್ ಹಿಡಿದು ಕೊಂಡಿದ್ದೆ.)
ಇಷ್ಟಕ್ಕೆ ಮುಗಿಯಲಿಲ್ಲ. ಡೆಪಾರ್ಮೆಂಟ್ ಗೇಟ್ ಜಾಮ್ ಆಗಿ, ಎಷ್ಟೇ ಎಳೆಯಲು ಪ್ರಯತ್ನಿಸಿದರು ಆಗುತ್ತಿರಲಿಲ್ಲ. ಒಂದಷ್ಟು ಹೊತ್ತುಗಳ ಸಾಹಸದ ನಂತರ ಹೇಗೋ ಗೇಟ್ ಲಾಕ್ ಮಾಡಿದೆ.
ಇಂದು ಹಬ್ಬವಿದ್ದ ಕಾರಣ ನಿಯಮಿತ ಬಸ್ಸುಗಳು. ಬಹಳ ಹೊತ್ತು ಕಾದ ನಂತರ ಕೆ.ರ್.ಮಾರ್ಕೆಟ್ ಬಸ್ಸು ಬಂತು. ಹತ್ತಿದೆ. ಹೆಂಗಸರು ಕೂರುವ ಸ್ಥಳದಲ್ಲೇಲ ಗಂಡಸರು ಕುಳಿತಿದ್ದರು. ಹೀಗಾಗಿ ಕೆಲವು ಹೆಂಗಸರು ನಿಂತಿದ್ದರು. ನಾನು ಒಬ್ಬ ಹುಡುಗನನ್ನ ಸೀಟ್ನಿಂದ ಏಳಿಸಿ ಅಲ್ಲಿ ಕುಳಿತೆ. ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಒಂದು ಮಗುವನ್ನು ಸೊಂಟದಲ್ಲಿ, ಮತ್ತೊಂದ್ದು ಮಗುವನ್ನು ಕೈಯ್ಯಲ್ಲಿ ಹಿಡಿದು ಒಬ್ಬ ಮಹಿಳೆ ಬಸ್ಸು ಹತ್ತಿದರು. ಯಾರು ಯೆದ್ದು ಸ್ಥಳ ಬಿಟ್ಟು ಕೊಡಲಿಲ್ಲ. ಮತ್ತೊಬ್ಬರನ್ನು (ಮಹಿಳೆಯರಿಗೆಂದು ಮೀಸಲಿದ್ದ ಸ್ಥಳದಲ್ಲಿ ಕುಳಿತಿದ್ದ ಗಂಡಸನ್ನು) ಎಬ್ಬಿಸಲು ಮನಸಾಗದೆ ನಾನೇ ಯೆದ್ದು ಆಕೆಗೆ ಕೂರಲು ಸ್ಥಳ ಕೊಟ್ಟೆ. ಅದನ್ನು ಕಂಡ ಬಸ್ ಕಂಡಕ್ಟರ್ ತಮ್ಮ ಸ್ಥಳದಲ್ಲಿ ಕೂರುವಂತೆ ನನಗೆ ಸೂಚಿಸಿದರು. (ಪುಣ್ಯ ಡ್ರೈವರ್ ತಮ್ಮ ಸ್ಥಳಬಿಟ್ಟುಕೊಡಲ್ಲಿಲ).
ಕಥೆ ಇನ್ನು ಇದೆ ಕಣ್ರೀ. ಮುಗಿಲಿಲ್ಲ.
ಮೈಸೂರ್ ಸರ್ಕಲ್ ಅಲ್ಲಿ ಬಸ್ ಇಳಿದೆ. ಸಮಯ ಸುಮಾರು ೯.೩೦. ಮೆಜೆಸ್ಟಿಕ್ ಬಸ್ಸಿಗಾಗಿ ಕಾಯ್ಯುತ್ತಿದೆ. ವಯಸ್ಸಾದ ಮಹಿಳೆಯೊಬ್ಬರು ಬಂದ ಬಸ್ಸುಗಳ ಎಲ್ಲಾ ಕಂಡಕ್ಟರ್ಸ್ ಬಳಿ ಹೋಗಿ ಮೆಜೆಸ್ಟಿಕ್ ಹೋಗುತ್ತಾ ಯೆಂದು ಕೇಳುತ್ತಿದ್ದರು. ಅವರನ್ನು ನೋಡಲಾಗಲಿಲ್ಲ. ಹಾಗಂತೂ ಅವರನ್ನು ಹೆಚ್ಚು ಮಾತನಾಡಿಸುವ ಮನಸಂತೂ ನಂಗಿರ್ಲಿಲ್ಲ. ನಾನು ಮೆಜೆಸ್ಟಿಕ್ ಹೋಗ್ತಿರದು, ನಾನು ಹತ್ತುವ ಬಸ್ಸು ಹತ್ತಿ ಅಂದು ಸುಮ್ಮನಾದೆ. ಹೂ ಅಂದರು. ಬಸ್ಸು ಬಂತು. ಹತ್ತಿದೆ. ಆದರೆ ಆಕೆ ಬಸ್ಸು ಹತ್ತಲು ಕಷ್ಟ ಪಡುತ್ತಿದ್ದರು. ಸರಿ ಇನ್ನೇನು ಮಾಡದು ಅಂತ ಕೈಯ್ಯಿ ಹಿಡಿದು ಹತ್ತಿಸಿದಯ್ತು.
ಮೆಜೆಸ್ಟಿಕ್ ತಲುಪಿದೆ. ಅಲ್ಲಿಂದ IISc. ಮುರಳಿಗೆ ಕರೆ ಸಿಗಲಿಲ್ಲ. ಅವರನ್ನು ಕಾಯುತ್ತ ನಿಂತಿರುವಾಗ, ಕಣ್ಣಿಗೆ ಬಣ್ಣ ಬಣ್ಣದ ಚಿಟ್ಟೆಗಳು ಕಂಡವು. ಅವುಗಳ್ಳನು ನೋಡುತ್ತಾ ಇದ್ದಾಗ ಇವನಿಗೆ ತೋರಿಸಬೇಕೆನಿಸಿ ವಿಡಿಯೋ ಮಾಡಿದೆ. ಕಳುಹಿಸಿದೆ.
ಅಷ್ಟರಲ್ಲಿ ಮುರಳಿ ಬಂದರು. ಕೆಲಸ ಮುಗಿಸಿ ಮದ್ಯಾಹ್ನ ಮನೆಗೆ ಹೊರಟೆ. ಜೋರು ಹಸಿವಾಗಿತ್ತು. ಹಬ್ಬದ ದಿನ ಮನೆಯವರೊಂದಿಗೆ ಊಟ ಮಾಡವು ಎಂದು ಗ್ರೇಶಿದ್ದೆ. ಆದರೆ ಮನೆ ತಲುಪುವಷ್ಟರಲ್ಲಿ ಎಲ್ಲರೂ ಊಟ ಮಾಡಿ ಮಲಗಿದ್ದರು.
ಇವನಿಗೆ ಮೆಸೇಜ್ ಮಾಡಿದೆ, ಇವನು ಬ್ಯುಸಿ ಇದ್ದ . ಸುಸ್ತಾಗಿತ್ತು, ಹಶುವಾಗಿತ್ತು, ಸ್ವಲ್ಪ ಜ್ವರ ಬೇರೆ, ಇದರ ಮಧ್ಯ ಒಬ್ಬಳೆ ಊಟ ಮಾಡಿ ಬಂದು ನಾನು ಮಲಗಿದೆ.