Why? Why we do something, sometimes which doesn't make sense to others? We do something sometimes without any reasons. This something has a magical touch in it, which helps us heal. which makes our ears sharper to hear our own voice. Bas yunhi, bas yunhi we do something sometimes for ourselves.
Saturday, 17 July 2021
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ
Sunday, 4 July 2021
ಆಷಾಢ ಮಾಸ ಬಂದಿತವ್ವ
ಗೂಗಲ್ ಪ್ರಕಾರ ಜೂಲೈ ೧೧ ರಿಂದ ಆಷಾಢ ಮಾಸ. ಮದುವೆ ಮಾಡಿ ಕಳುಹಿಸಿದ ಹೆಣ್ಣು ಮಗಳನ್ನು ಆಷಾಢ ಮಾಸದಲ್ಲಿ ತವರಿಗೆ ತಾಯಿ/ಅಣ್ಣ ಕರಿಸಿಕೊಳ್ಳುವ ಆಚರಣೆ ಘಟ್ಟದ ಮೇಲಣ ಎಷ್ಟೋ ಊರುಗಳ್ಳಿ ಒಂದು ಪದ್ಧತಿ ಇದೆ. (ಇದಕ್ಕೆ ಸೈಂಟಿಫಿಕ್ ಕಾರಣಗಳಿವೆ ಈಗ ಅದು ಬೇಡ). ಸಣ್ಣ ವಯಸ್ಸಿನಲ್ಲಿ (ಆರನೇ ತರಗತಿ ಅಂದರೆ ೧೨ ವರ್ಷ ವಯಸ್ಸು) ನನ್ನ ಒಬ್ಬನೇ ಅಣ್ಣ ಬೋರ್ಡಿಂಗ್ ಶಾಲೆಗೆ ಸೇರಿದ. ಅದಾದ ನಂತರ ಅವನು ನಮ್ಮೊಂದಿಗೆ ಉಳಿಯಲು ಶುರು ಮಾಡಿದ್ದೂ ಎಂಟೆಕ್ ಮುಗಿಸಿ ಕೆಲಸಕ್ಕೆ ಸೇರಿದ ಬಳಿಕವೇ. ಯಾವಾಗಲು ಒಬ್ಬನ್ನೇ ಇದ್ದು ಎಷ್ಟು ರೂಢಿಯಾಗಿದೆ ಯೆಂದರೆ ಸಂಸಾರ ಕೆಲವು ಪಾಶಗಳು ಅಷ್ಟೆಲ್ಲಾ ರಷನಲ್ ಅನ್ನಿಸುವುದಿಲ್ಲವೋ ಅಥವಾ ಅದರ ಬಗ್ಗೆ ಅನುಭವದ ಕೊರತೆಯೋ, ಸಮಯದ ಅಭಾವವೋ, ನನಗೆ ಗೊತ್ತಿಲ್ಲ. ಮನಸ್ಸಿನ್ನಲ್ಲಿ ತುಂಭಾ ಪ್ರೀತಿ ಇದ್ದರು ತಂಗಿ ಎಂದು ಎಷ್ಟೇ ಕೇರ್ ಇದ್ದರು, ಭಾಂದವ್ಯ ಎಷ್ಟೇ ಗಟ್ಟಿ ಇದ್ದರು, ನನ್ನ ಮದುವೆಯ ಬಳಿಕ ಒಡನಾಟ ನನ್ನೊಂದಿಗೆ ಸ್ವಲ್ಪ ಕಮ್ಮಿ.
ನಾನು ೯ನೇ ತರಗತಿಯಲ್ಲಿ ಇದ್ದಾಗ ಕರ್ನಾಟಕ ಸರ್ಕಾರ ವರ್ಷಕೊಮ್ಮೆ ನಡೆಸುವ ಪ್ರತಿಭಾ ಕಾರಂಜಿಯಲ್ಲಿ ಜಾನಪದ ಹಾಡುಗಳ ಸ್ಪರ್ಧೆಯಲ್ಲಿ ನಾನು ಒಂದು ಹಾಡು ಹೇಳಿ ಮೊದಲನೇ ಬಹುಮಾನ ಗೆದ್ದಿದ್ದೆ. " ಆಷಾಢ ಮಾಸ ಬಂದಿತವ್ವ, ಅಣ್ಣ ಬರಲಿಲ್ಲ ಕರೆಯಾಕ". ಒಂದು ಹೆಣ್ಣು ಮಗಳು ತನ್ನ ತವರಿನ ಕರೆಗಾಗಿ ಕಾಯುವ ಸನ್ನಿವೇಶದಲ್ಲಿ ಹೇಳುವ ಹಾಡಿದು.
ನಮ್ಮಲ್ಲಿ ಈ ಆಷಾಢದ ಪದ್ದತ್ತಿ ಈಗ ರೂಢಿಯಲ್ಲಿ ಇಲ್ಲ. ಮೊದಲಿಂದವು ಇಲ್ಲವಾ? ನನಗೆ ಗೊತ್ತಿಲ್ಲ. ನಾನಂತೂ ನಮ್ಮನ ಮನೆಗೆ ಯಾವಾಗ ಬೇಕವಾಗ ಹೋಗುತ್ತಲ್ಲೇ ಇರುತ್ತೇನೆ. ಆದರೆ ಆಷಾಢ ಮಾಸ ಬಂತು ಅಂತ ಯಾರಾದರೂ ಮಾತನಾಡುವುದ್ದನ್ನು ಕೇಳಿದಾಗ ಈ ಹಾಡು ನೆನಪಿಗೆ ಬಂದು ನನ್ನನ್ನು ಬಹಳವಾಗಿಯೇ ಕಾಡುತ್ತದ್ದೆ. ನನಗು ನನ್ನ ಅಣ್ಣ ನನ್ನ ಮನೆ ಗೆ ಬಂದು ನನ್ನನ್ನು ತನ್ನೊಂದಿಗೆ ನನ್ನ ತವರಿಗೆ ಕರೆದೊಯ್ಯಬಾರದೇ ಎಂಬ ಆಸೆ ಆಗುತ್ತದೆ. ಕಣ್ಣಚಿನಲ್ಲಿ ಸಣ್ಣದೊಂದು ಹನಿ ನನ್ನ ಹೀಯಾಳಿಸಿ ನಕ್ಕು ಮರೆಯಾಗುತ್ತದೆ. ಒಡಹುಟ್ಟಿದವರು ಎಂದರೆ ಅದೆಂಥಾ ಮೋಹ. ಅದೆಂತಾ ಪ್ರೀತಿ. ಅಬ್ಬಾ.. ಬೇಗ ಹೋಗಿ ಅಣ್ಣನ್ನನ್ನು ಒಮ್ಮೆ ತಬ್ಬಿ ಖುಷಿಯಿಂದ ಅಳುವಾಸೆ.
Mutual/ಪರಸ್ಪರ
ನೀನು ಎಷ್ಟು ಒಳ್ಳೆಯವನು ಎಂಬುದು ಸಂಬಂಧಿಕ. ಈ ಪ್ರಪಂಚದಲ್ಲಿ ಯಾವ್ದು ಪುಕ್ಕಟ್ಟೆ ಸಿಗೋದಿಲ್ಲ ಗುರು. ಹೇಗೆ ನನ್ನ ಅಪ್ಪ ಅಮ್ಮ ನಂತ ಪೋಷಕರನ್ನು ಪಡೆಯಲು ನಾನು ಮತ್ತು ನನ್ನ ಅಣ್ಣ ಪುಣ್ಯ ಮಾಡಿದ್ದೇವೋ ಹಾಗೆಯೆ ಅವರು ನಮ್ಮನ್ನು ಮಕ್ಕಳಾಗಿ ಪಡೆಯಲು ಪುಣ್ಯ ಮಾಡಿದ್ದಾರೆ. ಹೇಗೆ ನನ್ನ ಕೃಷ್ಣ ನನ್ನು ಪಡೆಯಲು ನಾನು ಪುಣ್ಯ ಮಾಡಿರುವೆ ಹಾಗೆಯೆ ಅವರು ನನ್ನನ್ನು ಪಡೆಯಲು ಪುಣ್ಯ ಮಾಡಿದ್ದಾರೆ.
ನಾನು ಸಣ್ಣವಳಿದ್ದಾಗ ಹಾಥಿಮ್ ಅಂತ ಒಂದು ಧಾರಾವಾಹಿ ನೋಡುತಿದ್ದೆ. ಅದರಲ್ಲಿ ಹಾಥಿಮ್ ತನ್ನ ಪ್ರೇಯಸಿಯ ತಮ್ಮನನ್ನು ದಜ್ಜಾಲ್ ಎಂಬ ಕ್ರೂರಿಯಾ ಮಾಯಾಜಾಲದಿಂದ ಉಳಿಸಲು ಏಳು ಪ್ರಶ್ನೆಗಳಿಗೆ/ಒಗಟಿಗೆ ಉತ್ತರಿಸ ಬೇಕಿತ್ತು. ಅದರಲ್ಲಿ ಒಂದು ಪ್ರಶ್ನೆ/ಒಗಟು ಹೀಗಿತ್ತು "ಜೈಸೇ ಕರ್ನಿ ವೈಸೆ ಭರ್ನೀ". ಇದು ನಿಜ ಜೀವನದಲ್ಲೂ ಎಷ್ಟು ಸತ್ಯ ಅಲ್ಲವೇ?
Comparison/ ಹೋಲಿಕೆ
ನಾ ನೋಡಿರುವ ಜನಗಳಲ್ಲಿ ೧೦೦ರಲ್ಲಿ ೯೦ರಷ್ಟು ಜನಗಳು ಎಲ್ಲವನ್ನು ಬೇರೆಯರ ಜೀವನಕ್ಕೆ/ ಬುದ್ದಿವಂತಿಗೆಗೆ/ ಜ್ಞಾನಕ್ಕೆ, ಹೀಗೆ ಹಲವಾರು ವಿಷಯಗಲ್ಲಿ ತಮ್ಮವರನ್ನು ಹೋಲಿಸಿಕೊಂಡು ತಮ್ಮವರಿ ಕೀಳರಿಮೆ ಮೂಡಿಸುವುದು ಅಥವಾ ಭೈಯುವುದನ್ನು ನೋಡಿದ್ದೇನೆ, ಅನುಭವಿಸಿಯೂ ಇದ್ದೇನೆ. ಈ ರೀತಿ ಹೋಲಿಕೆ ಮಾಡಿ ತಮ್ಮವರನ್ನೇ ತೆಗಳುವ ವ್ಯಕ್ತಿಗಳಿ ನನ್ನದೊಂದು ಪ್ರಶ್ನೆ, ಎಂದಾದರೂ ತಮ್ಮನು ತಾವು ಇನ್ನೊಬರಿಗೆ ಹೋಲಿಸಿ ತೆಗಳಿಕೊಡಿರುವರೇ?
ಇದಕ್ಕೆ ಏನೋ "ಹೇಳುವುದಷ್ಟು ಕಾಶಿ ಕೆಂಡ, ತಿನ್ನುವುದು ಮಾತ್ರ ಮಸಿ ಕೆಂಡ" ಅಂತ ಹೆಂದಿನ ಕಾಲದವರು ಗಾದೆ ಮಾಡಿರುವುದು.
Friday, 2 July 2021
Difference between showiness and cleanliness.
ನನಗೆ ಹರಗಣದಿಂದ ಮುಜುಗರವೇ ಹೊರತು ಬಡತನದಿಂದಲ್ಲ. ಅಥವಾ ಬ್ರ್ಯಾಂಡೆಡ್ ವಸ್ತುಗಳಿಲ್ಲವಲ್ಲ ಎಂಬ ನಾಚಿಕೆಯಲ್ಲ. ೧೦೦ ವರ್ಷಗಳ ಹಳೆ ಮನೆಯಾದರೂ, ಬಹಳ ಸುಂದರವಾಗಿದೆ. ನನಗೆ ಹೇಗೆ ಇಷ್ಟವೋ ಹಾಗೆ. ಆದರೆ ಮನೆ ಸ್ವಲ್ಪ ಕೂಡ ಅಚ್ಚುಕಟ್ಟಾಗಿಲ್ಲ. ಎಲ್ಲಂದರಲ್ಲಿ ಗೊಬ್ಬರದ ಗುಂಡಿಯ ಹಾಗೆ ಹರಗಿ ಕೊಂಡಿರುವ ವಸ್ತುಗಳು. ಧೂಳು ಹಿಡಿದಿರುವ ಪಾತ್ರೆ ಪಗಡಗಳು. ಜೇಡರ ಬಲೆ. ಅಯ್ಯೋ ರಾಮಾ. ಈ ಮನೆ ನೋಡಿದರೆ ತಲೆ ಕೆಟ್ಟುಹೋಗುತ್ತದೆ. ಅಲ್ಲಾ ನನ್ನದೊಂದು ಪ್ರಶ್ನೆ, ಅಲ್ಲ ಅಲ್ಲ ಎರೆಡು ಪ್ರಶ್ನೆ, ಮಡಿ ಮೈಲಿಗೆ ಅನ್ನೋ ಜನಗಳಿಗೆ ಸ್ವಚತ್ತೆ, ಮನೆಯ ಶುಚಿತ್ವದ ಬಗ್ಗೆ ಯೋಚನೆ ಇಲ್ಲವೇ? ಮುಖಕ್ಕೆ ಪೌಡರ್ ಹಚ್ಚುವ ಜನಗಳಿಗೆ ಮನೆಯನ್ನು ಅಚ್ಚುಕಟ್ಟಾಗಿಡಲು ಸಮಯವಿಲ್ಲವೇ?
ಕೇವಲ ಎಲ್ಲ ವಸ್ತುವನ್ನು ಅದರದರ ಜಾಗದಲ್ಲಿ ಇಡೀ ಎಂದರೆ ನಾನೇನೋ ಆಡಂಬರಮಾಡುತ್ತಿರುವಂತೆ ನೋಡುತ್ತಾರೆ!!
ಪರಿವಾರ
ತುಂಬು ಪರಿವಾರವೆಂದರೆ ಮೊದಲಿನಿಂದ ತುಂಬಾ ಕುತೂಹಲ ಹಾಗು, ನಾನು ತುಂಬು ಕುಟಂಬದಲ್ಲಿ ಇರಬೇಕೆಂಬ ಆಸೆ ಇದ್ದ ಕಾಲ ಒಂದಿತ್ತು. ಈಗ ನನ್ನನ್ನು ಪರಿವಾರದ ಜನರು ಕೆಣಕದೆ ಸುಮ್ಮನೆ ಬಿಟ್ಟರೆ ಸಾಕಪ್ಪ ಅನ್ನುವಷ್ಟು ನನ್ನ ಆಸೆಗಳು ಬದಲಾಗಿದೆ. ಜಾಗತೀಕರಣವಾದ ನಂತರ ಜಗತ್ತೆಲ್ಲ ಒಂದು ಪುಟ್ಟ ಊರಾಗಿದೆ. ಜನರೆಲ್ಲಾ ವಿದ್ಯಾವಂತರಾಗಿದ್ದರೆ. ಸರಿ ತಪ್ಪುಗಳ ಅರಿವಿದೆಯೋ ಇಲ್ಲವೋ ಅದು ಅವರವರ ಯೋಚನೆಗೆ ಬಿಟ್ಟುದ್ದು, ಆದರೆ ತಮ್ಮ ಜೀವನ ಹೇಗಿರಬೇಕು ಎಂಬ ಅರಿವಂತು ಇದ್ದೆ ಇರುತ್ತದೆ. ಒಂಟಿಯಾಗಿ ಜೀವಿಸುವುದು ಈಗಿನವರಿಗೆ ಕಷ್ಟವಲ್ಲ, ಬದಲಿಗೆ ಇಷ್ಟ. ಯಾರ ಉಪದ್ರವೂ ಇರುವುದಿಲ್ಲ. ಯಾರ ಆಸೆಗಳ ಒತ್ತೆಯಾಳಾಗಿ ಬದುಕಬೇಕಾದ ಅನಿವಾರ್ಯವಿರುವುದಿಲ್ಲ. ಇಷ್ಟವಿಲ್ಲದ್ದ ಆಚರಣೆಗಳನ್ನು ಪಾಲಿಸುವ ಹಿಂಸೆ ಇರುವುದಿಲ್ಲ. ಎಲ್ಲಾದಕ್ಕಿಂತ ಹೆಚ್ಚು ನಮ್ಮ ನಮ್ಮ ಪ್ರೀತಿ ಪಾತ್ರರಿಗೆ ಎಲ್ಲಿ ನೋವು ಕೊಟ್ಟುಬಿಡುತ್ತೇವೋ, ಅವರಿಗಿಷ್ಟ ವಿಲ್ಲದ ಕೆಲಸ ಮಾಡಿ ಅವರ ಮನ ನೋಯಿಸುವೆವೋ ಎಂಬ ಗೊಂದವಿಲ್ಲ. ನೀನಾಯಿತು ನಿನ್ನ ಕೆಲಸವಾಯಿತು ಅಷ್ಟೇ ಜೀವನ.
ಎಲ್ಲರಲ್ಲೂ ಒಂದಲ್ಲ ಒಂದು ಸಾರಿ ಹೀಗೆ ಯೋಚನೆ ಮೂಡಿರುತ್ತದೆ. ಏನು ಮಾಡುವುದು, ಮನುಷ್ಯ ಸಂಘಜೀವಿ ಮಾತ್ರವಲ್ಲ, ಪರಿವಾರ, ವಂಶವಾಯಿ, ಪರಂಪರೆಯ ಕಟ್ಟುಪಾಡಿ. ಬಿಟ್ಟುಬರುವೆನೆಂದರು ಬಿಟ್ಟುಹೋಗದ ಪಾಶ. ಬಂಧಮುಕ್ತವಾಗುವುದು ಕಠಿಣ ಸಾಧನೆ ಸರಿ.