Sunday, 29 July 2018

ನಾನು=ಯಕಶ್ಚಿತ್, ನಿನ್ನೆದುರು

ತಂಬಿಗೆಯಷ್ಟು ತುಂಭಿಕೊಳ್ಳಬಹುದಷ್ಟೆ ಈ ನಿನ್ನ ಮೌನವ.
ಅದಕ್ಕಿಂತ ಹೆಚ್ಚು ಭಾರವ ನಾ ಹೊರಲಾರೆ.
ಅದುಹೇಗಿಷ್ಟು ನಿರಾಳಲು ನೀನು?
ಕಲಿಸಿಕೊಡೆ ನನಗು ಸ್ವಲ್ಪ.

ಏನ ಹೇಳ ಬಯಸುತಿಹೆ?

ಚಿಲಿಪಿಲಿಗುಟ್ಟುವ ಮುದ್ದು ಪಕ್ಷಿಯೇ,
ಏನ ಹೇಳ ಬಯಸುತಿಹೆ ನೀ?
ಓ ನನ್ನೊಲೊಮೆಯ ಸುಯ್ಯಿಂಗುಟ್ಟುವ ತಂಗಾಳಿಯೇ,
ಏನ ಹೇಳ ಬಯಸುತಿಹೆ ನೀ?
ಕಾಡುವ ಆಳದ ಮೌನ ಹೊತ್ತು ನಿಂತಿರುವ ಬೋಳುಮರವೇ, 
ಏನ ಹೇಳ ಬಯಸುತಿಹೆ ನೀ?
ಓ ಹಸಿರುಟ್ಟು ಮೈದುಂಬಿ ಮೆರೆವ ಮರವೇ,
ಏನ ಹೇಳ ಬಯಸುತಿಹೆ ನೀ?
ಬಡ್ಡನಂತೆ ಕೂತು, ಕೆಣಕುವ ಕಣ್ಣೋಟದಿ ನನ್ನನ್ನೇ ನೋಡುತಿಹ ಬೆಟ್ಟವೇ,
ಏನ ಹೇಳ ಬಯಸುತಿಹೆ ನೀ?
ದುಃಖ್ಖಿಸುತ್ತ, ದೀರ್ಘಲೋಚನೆಯಲ್ಲಿ ಮುಳಿಗಿರು ನೀಲಿಯಾಕಾಶವೇ,
ಏನ ಹೇಳ ಬಯಸುತಿಹೆ ನೀ?
ಒಮ್ಮೆ ಮೌನ ಮುರಿದು ನನ್ನೊಂದಿಗೆ ಮಾತನಾಡೆಯ?
ಒಮ್ಮೆ ನನ್ನ ತಬ್ಬಿ ಮುತ್ತನಿಟ್ಟು ನಿನ್ನಲ್ಲಿ ಲೀನವಾಗಿಸಿಕೊಳ್ಳಲಾರೆಯ?

ಡೆಡ್ಲಿ

Handsome 
by heart,
by face,
by brain,
by pocket. 
Its deadly hot combo. 

ಸೌಂಧರ್ಯ

ಸತ್ಯ,
ಸ್ವಾತಂತ್ರ್ಯ,
ಪ್ರೀತಿ,
ಮಮತೆ,
ಜ್ಞಾನ,
ವಿಜ್ಞಾನ,
ಆಕಾಶ,
ಸೂರ್ಯೋದಯ,
ಸಂಗೀತ,
ಅವನ ನಗು. 

ನೀನು ನೀನೆ

ತೊಟ್ಟ ಅಂಗಿ,
ತಿಂದ ಊಟ,
ಹೋದ ಜಾಗ,
ಇರುವ ಸ್ಥಳ,
ನೀನಾರೆಂದು ಸಂಪೂರ್ಣವಾಗಿ ಬಿಂಬಿಸಲಾರದು.

ನೀನು ನೀನೆ. ಯಾರು ಏನೆಂದರೂ, ನೀನು ನೀನೆ. 

Brahmin

What makes you brahmin?
*ಬ್ರಹ್ಮ ಜ್ಞಾನವನ್ನುಳ್ಳವನು ಬ್ರಾಹ್ಮಣ.
*ಸರ್ವೇ ಭವಂತು ಸುಖಿನಃ ಎಂದು ಬಯಸುವವ ಬ್ರಾಹ್ಮಣ.
*ಮನದಲ್ಲಿ ಪ್ರೀತಿ, ಮಾತಿನಲ್ಲಿ ಮಾಧುರ್ಯವುಳ್ಳವ ಬ್ರಾಹ್ಮಣ.
*ಬೇರೆಯವರ ಕಷ್ಟ ಕಂಡು ಮರುಗುವವ ಬ್ರಾಹ್ಮಣ.
*ಆ ಕಷ್ಟವನ್ನು ಎದುರಿಸಲು ಸಹಾಯ ಮಾಡುವವ ಬ್ರಾಹ್ಮಣ.
*ಮನಸ್ಸಿಗ್ಗೆ ಶಾಂತಿ, ಚೈತನ್ಯ ತುಂಬುವವ ಬ್ರಾಹ್ಮಣ.
*ಕ್ರೂರ ಮೃಗದಲ್ಲೂ ಸಾಧುತ್ವ ಕಾಣುವವ ಬ್ರಾಹ್ಮಣ.
*ಎಲ್ಲಾ ಜೀವಕುಲವ ಸಮನಾಗಿ ಕಾಣುವವ ಬ್ರಾಹ್ಮಣ.
*ಬೇರೆಯವರ ಪ್ರಶ್ನಿಸುವ ಮೊದಲು ತನ್ನ ತಾ ಪ್ರಶ್ನಿಸಿಕೊಳ್ಳುವವ ಬ್ರಾಹ್ಮಣ.
*ಅಲ್ಪಐಶ್ವರ್ಯದಲ್ಲಿ ತೃಪ್ತ, ಪಡೆದಷ್ಟು ಸಾಲದೆಂಬ ಜ್ಞಾನಾತೃಪ್ತ (ಜ್ಞಾನ+ಅತೃಪ್ತ) ಬ್ರಾಹ್ಮಣ.
*ಕೇವಲನಲ್ಲಿ ಕೇವಲ ನಾನೆಂದು ನಂಬಿದವ ಬ್ರಾಹ್ಮಣ.


ಪ್ರಪಂಚಂದ ಯಾವುದೇ ಜನಾಂಗ, ಧರ್ಮ, ಜಾತಿಯವ ಬೇಕಾದರೂ ಬ್ರಾಹ್ಮಣನಾಗಬಹುದು.
ಏಕೆಂದರೆ ಬ್ರಾಹ್ಮಣವೆಂಬುದು ಕೇವಲ ಒಂದು ಜಾತಿಯಲ್ಲ. ಅದು ಆಚರಣೆ. ಅದು ಪ್ರೀತಿ. ನಿಜವಾದ ಬ್ರಾಹ್ಮಣನಾಗಗಳು ಎಲ್ಲರಿಂದ ಸಾಧ್ಯವಿಲ್ಲ. ಅದಷ್ಟು ಸುಲಭದ ಮಾತ್ತಲ್ಲ.

Think over it

An absence of evidence does not mean the evidence of absence.
Insufficient information always leads to a wrong conclusion.
Think before you judge.
Question yourself, how do I know what I know is the truth?
Sometimes the truth is not enough, either the belief.
The combination of these two can only bring the justification.
Analyse, think, understand, then act. 

Tuesday, 24 July 2018

Do something. Yah I'm.

When people ask why you so quiet? what you up to? what you thinking? why you not doing anything and sit still?

Oh come on,
I'm hearing more when I'm quiet.
and I'm not always up to something.
I don't always think. I prefer to give some rest to part of my brain a few times.
Why is it always necessary to do something visible? My heart is pumping blood throughout my body every second, regulating everything and it's a hell of a lot of work. yeah, and I breathe.

ಕಥೆಯೊಂದ ಕೇಳಿದೆ.

ಬೆಚ್ಚನೆಯ ಗೂಡಲ್ಲಿ ಬಚ್ಚಿಟ್ಟಿದ ಹೃದಯವ ಅವಳ ನಗುವಿಗೆ ಉಡುಗರೆಯಾಗಿ ನೀಡಿದ್ದ ಮೂರ್ಖನೊಬ್ಬ.
ಅವಳನುಗುವಿನೊಂದಿಗೆ ಮಿಡಿಯುತ್ತಿದ್ದ ಆ ಹೃದಯ ತನ್ನಸ್ತಿತ್ವವ ಮರೆತ್ತಿತ್ತು. ಜೀವಿಸಲು ಬೆಚ್ಚನ್ನೆಯ ಗೂಡೊಂದ್ದು ಬೇಕೆಂಬುದರ ಕಲ್ಪನೆಯಿಲ್ಲದೆ ಅವಳ ನಗುವಿನೊಂದಿಗೆ ಚಲಿಸುತ್ತ ಚಲಿಸುತ್ತ ಹೊರಜಗ್ಗತ್ತಿನ ತಣ್ಣನೆಯ ಗಾಳಿ ಸೋಕಿ ಶೀತವಾಗುತ್ತಾ ಹೋಗಿತ್ತು. ಇಂದೀಗ ಅದು ಸಂಪೂರ್ಣವಾಗಿ ಶಿಥಿಲಗೊಂಡಿದೆ. 
ಮಂಜುಗಡ್ಡೆಯಾಗಿದೆ. ನಗುವಿನಿಂದೆ ಸುತ್ತುವ ಭರದಿ ಜಾರಿಬಿದ್ದು ಪುಡಿ ಪುಡಿಯಾಗಿ ಅವ ನಡೆವ ದಾರಿಯಲ್ಲಿ ಎಲ್ಲೆಡೆ ಹರಡಿದೆ.   ಅದರ ಚೂಪಾದ ತುಣುಕೊಂದು ಅವನ ಕಾಲಿಗೆ ತಾಕಿ ನೆತ್ತರು ಸುರಿದರು ಈಗವನಿಗೆ ನೋವಿನ ಅನುಭವವಾಗುತ್ತಿಲ್ಲ. ಮಿಡಿಯುವ ಹೃದಯವೇ ಜೊತೆಗಿಲ್ಲ.


ದಾರಿಹೋಕ

ಅದೇ ಹಳೆಯ ದಾರಿ,
ಅದೇ ಹಳೆಯ ಹುಲ್ಲಿನ ಅಂಗಡಿ, ಸೋಗೆಯ ಸೂರು.
ಸೂರಿನಡಿ ಅದೇ ಹಳೆಯ ಕಬ್ಬಿನ್ನಹಾಲು ಮಾರುವವ,
ಹಳೆಯದಾರಿಯಲ್ಲಿ, ಹಳೆಯ ಹುಲ್ಲಿನಂಗಡಿಯ ಮುಂದೆ ನಡೆದು ಹೋಗುತ್ತಿದ್ದ ಹೊಸ ದಾರಿಹೋಕ,
ಹೇಳದೆ ಕೇಳದೆ ದೊಯ್ಯ್ ಎಂದು ಸುರಿದ ಮಳೆ.
ಮಳೆಯಿಂದ ರಕ್ಷಿಸಿಕೊಳ್ಳುವಾತುರದಿ,
ಕಬ್ಬಿನಹಾಲ ಸಿಹಿಯಲ್ಲಿ ಮುಳುಗಿದ್ದ ನಮ್ಮೆಡೆಗೆ ನುಗ್ಗಿದ.
ಮಳೆ ಮೌನವಾಗುವವರೆಗೂ ದಾರಿಹೋಕನ ಮಾತು ನಿಂತಿರಲ್ಲಿಲ್ಲ.
ಆಗಲೇ ತಿಳಿದ್ದದ್ದು ಆ ಹಳೆಯ ದಾರಿ, ಹಳೆಯ ಹುಲ್ಲಿನಂಗಡಿ, ಅವನಿಗೆ ನನಗಿಂತಲೂ ಹಳೆಯದೆಂದು.
ನಮ್ಮಿಬ್ಬರ ಗುರಿಗಳು ಬೇರೆಯಾದರು ಹೋಗುವ ದಾರಿಯು ಒಂದೇ ಎಂದು.




Thursday, 19 July 2018

Surprise

I went to surprise him.
Instead, I get surprised, by seeing him not surprised by my surprise.  

Tuesday, 17 July 2018

ನಾನವನಲ್ಲ.

ಅವನ ಹೆಸರಿಡಿದು ಕರೆದ್ದಿದ್ದೆ ಅಂದು ನಾನು.
ಉಪೇಂದ್ರನಂತೆ ನಾನವನಲ್ಲ ಎಂದಿದ್ದ ಅವನು. 

Marketing, trading, trending.

There is a saying,
"never judge a book by its cover",
can't a good writer design a cover of his book properly?
I mean the author has all the time of this world to write a nice book and no time to execute it properly?!!!

wait a second.
That's not true.
I'm also like that stupid fellow.
I realized it last Sunday.

*********************************************************************************
ವಧೂವರರ ಮಾರುಕಟ್ಟೆ. ಅದೊಂದು ಜಾತ್ರೆ.
ತಮ್ಮ ತಮ್ಮ ಮಕ್ಕಳನ್ನು ಪ್ರದರ್ಶಿಸುತ್ತ, ಮಧುವೆಯ ವ್ಯಾಪಾರ ಮಾಡಿದಂತಿತ್ತು.
ಮಾರುಕಟ್ಟೆಯಲ್ಲಿ ತರಕಾರಿಯನ್ನು ಆಯ್ದುಕೊಳ್ಳುವಹಾಗೆ ವಧುವನ್ನು , ವರನನ್ನು ಆಯ್ದುಕೊಳ್ಳುವ ಮಾರುಕಟ್ಟೆ ಅದಾಗಿತ್ತು. ವಿಚಾರ ಮಾಡಿ ನೋಡಿದರೆ ಅದು ತಪ್ಪೆನ್ನಲ್ಲವೆನಿಸಿದರು, ಮನಸಿಗೇಕೊ ಇರುಸು ಮುರುಸು. ಒಳ್ಳೆಯ ವ್ಯಾಪಾರವಂತರಿಗದು ಸರಿಯಾದ ಸ್ಥಳವಾಗಿತ್ತು.
*********************************************************************************
ನಿನ್ನ ವಸ್ತು ಹೇಗೆಯೇ ಇರಲಿ, ಅದ ನೀನು ಎಷ್ಟರ ಮಟ್ಟಿಗೆ ಪ್ರದರ್ಶಿಸುವೆ ಎಂಬುದರ ಮೇಲೆ ನಿನ್ನ ವ್ಯಾಪಾರ ನಿಂತಿದೆ.
ವರಟಾಗಿ ಕೇಳಿಸಿದರು, ಇದುವೇ ಸತ್ಯ, ಮೂರ್ಖ ಜನಗಳೇ ನಮ್ಮಲ್ಲಿ ಹೆಚ್ಚು. ಪುಸ್ತಕದ ಒಳಗಿನ ವಿಚಾರಕ್ಕಿಂತ ಮೇಲ್ಹೊದಿಕೆಯೇ ಮುಖ್ಯ.
ಬುದ್ಧಿವಂತ ಅವನು, ಯಾರನ್ನು ಹೇಗೆ ನಂಬಿಸುವುದು, ಯಾವುದನ್ನೂ ಹೇಗೆ ವ್ಯಾಪಾರ ಮಾಡುವುದೆಂದು ಬಲ್ಲವನು. 
ಬುದ್ಧಿವಂತ ಮನುಷ್ಯ ಅವನು, ತನ್ನ ಒಳ್ಳೆಯ ವಾಸ್ತುವನ್ನು ಹೇಗೆ ಒಳ್ಳೆಯರೀತಿಯಲ್ಲಿ ವ್ಯಾಪಾರ ಮಾಡುವುದೆಂದು ಬಲ್ಲವನು.
ಜ್ಞಾನಿ ಅವನು, ವ್ಯಾಪಾರದ ಬಗ್ಗೆ ಎಂದು ಚಿಂತೆ ಮಾಡದವನು. ತನಗಾಗಿ ತಾನು ಬದುಕಿ ಹಣದಲ್ಲಿ ಬಡವನಾಗಿ ಸಾಯುವವನು.
*********************************************************************************

ಗೊತ್ತಿಲ್ಲ

ಇಂದು ಹುಣ್ಣೆಮೆಯ ಚಂದ್ರನ ಹೊಳಪು ಹೆಚ್ಚೋ,
ಅಥವಾ ಅವನ ಹಿಂದಿರುವ ಆಕಾಶ ಹೆಚ್ಚು ಮಬ್ಬೊ?
ಗೊತ್ತಿಲ್ಲ.
ಚೆಂದಿರನಿರುವಾಗ ಬೇರೆ ಯೋಚನೆಗಳೇಕೆ? 

Ashes of memories; ನೆನಪುಗಳ ಚಿತಾಭಸ್ಮ

I have forgotten the way you used to look at me,
I have forgotten how your eyes used to speak to me,
I have forgotten how rhythmically your heart is beating,
I have forgotten  how handsome you were when you smile,
I have forgotten the way you used to love me,
I have forgotten your smell, 
I have forgotten the how it feels to touch you,
how it feels to get touched. 
All I remember is I used to be happy when you were around. 
Except that I forgot everything about you. almost everything. 
Intense memories burn and burn and burn to leave the ashes. 
eventually, ashes flew away. 

Evanescence

ನನಗೆ ಸ್ವಲ್ಪ ಮರೆವು.
ನಿನ್ನ ನೆನಪು ಮಬ್ಬಾಗವು ಮುನ್ನ ಮರಳಿ ಬರುವುದಾದರೆ ಬಾ.
ನೀ ಮಾಡಿದ ಗಾಯದ ನೋವು ಮೊದಮೊದಲಿಗೆ ರುಚಿಸಿದರು,
ಗಾಯವೀಗ ಮಾಸುತ್ತಿದೆ. ಮತ್ತೆ ಮತ್ತೆ ನಾನದರ ಕೆದಕಲಾರೆ.
ಮಾಸಿದ ಗಾಯ ಸಾವಿರ ಕಥೆಯನ್ನೇಳುವ ಕಲೆಯವುಳಿಸಬಹುದೇನೋ,
ಕಾಲ ಕ್ರಮೇಣ ಕಲೆಯು ಮಾಸಬಹುದು.
ನನಗೆ ಸ್ವಲ್ಪ ಮರೆವು.

Secret Recipe

ಎಲ್ಲರಿಗೂ, ಎಲ್ಲಾದಕ್ಕೂ ತನ್ನದೇಯಾದ ಗುಟ್ಟೊಂದಿದೆ,
ನಾನು, ನನ್ನ ಪದಗಳು ಅದರಿಂದ ಹೊರತೇನಲ್ಲ.

Understanding


ನಿನಗೆ ಕಾಟ ಕೊಡುವಾಸೆ, ಕೋಪ ಭರಿಸುವಾಸೆ, ತೀಟಲೆ ಮಾಡುವಾಸೆ.
ಕೊಟ್ಟ ಕಾಟದಿಂದ ನಿನಗಾದ ಕಾಟ, ಬಂದ ಕೋಪ, ಆದ ಹಿಂಸೆ,
ಅದರಿಂದ ನನಗಾದ ನೋವು, ಸಂಕಟ,
ಸ್ವಲ್ಪ ಮಟ್ಟಿಗೆ ನನಗರಿವಾಯಿತು ನಾನು ಯಾರೆಂದು, ನಾನು ಏನೆಂದು.
ನಿನಗರ್ಥವಾಯಿತೇ ನಾನುಯಾರೆಂದು? ನಾನುಯೇನೆಂದು?

ನಿನ್ನೊಂದಿಗೆ ಮುನಿಸಿ ಕೊಳ್ಳುವಾಸೆ, ನಿಂನ್ನಿಂದ ದೂರ ಹೋಗಿ ನಿನ್ನ ಚಡಪಡಿಸುವಾಸೆ,
ನಾಲ್ಕು ಪೆಟ್ಟು ಕೊಡುವಾಸೆ, ಒಂದಷ್ಟು ಕಣ್ಣೀರು ಬಾರಿಸುವಾಸೆ,
ನನ್ನ ಈ ವರ್ತನೆಗೆ ನಿನ್ನಲ್ಲಿ ಏನು ಬದಲಾಗದ ಭಾವನೆಯಕಂಡು,
ಸ್ವಲ್ಪ ಮಟ್ಟಿಗೆ ನನಗರಿವಾಯಿತು ನಾನು ಯಾರೆಂದು, ನಾನು ಏನೆಂದು.
ನಿನಗರ್ಥವಾಯಿತೇ ನಾನುಯಾರೆಂದು? ನಾನುಯೇನೆಂದು?

ಮಮತೆಯಿಂದ ನಿನ್ನ ತಾಯಾಗುವಾಸೆ, ಶಿಸ್ತಿನ ತಂದೆಯಾಗುವಾಸೆ,
ಉಪದ್ರ ಕೊಡುವ, ನಕ್ಕು ನಗಿಸುವ ಗೆಳತಿಯಾಗುವಾಸೆ,
ಕಷ್ಟ ನಷ್ಟದಿ ಸಂಗಾತಿಯಾಗುವಾಸೆ, ಮತ್ತೆ ಕೆಲವುಮ್ಮೆ ನಿನ್ನ ಮಗಳಾಗುವಾಸೆ.
ಆದರೆ ನಾನು ನಿನಗಾಗಿ ಹಂಬಲಿಸಬಾರದೆಂಬ ನಿನ್ನ ಮಾತುಕೇಳಿ,
ಸ್ವಲ್ಪ ಮಟ್ಟಿಗೆ ನನಗರಿವಾಯಿತು ನಾನು ಯಾರೆಂದು, ನಾನು ಏನೆಂದು.
ನಿನಗರ್ಥವಾಯಿತೇ ನಾನುಯಾರೆಂದು? ನಾನುಯೇನೆಂದು?

ನನ್ನ ಮೇಲೆ ನಿನಗೆ ತಪ್ಪು ಕಲ್ಪನೆ ಮೂಡಿಸುವಾಸೆ,
ಮೂಡಿಸಿಯು ನಿನಗೆ ತಪ್ಪು ಕಲ್ಪನೆ ಮೂಡಬಾರದೆಂಬ ಆಸೆ,
ತಪ್ಪು ಕಲ್ಪನೆ ಮುಡಿದರು ಬಿಡದೆ ನೀನನ್ನ ಕೈ ಹಿಡಿದಿರಬೇನೆಂಬ ಆಸೆ,
ನೀ ನನ್ನನ್ನು ಕ್ಷಮಿಸಬೇಕೆಂಬ ಆಸೆ, ನಾನು ನಿನ್ನವಳಾಗಿಯೇ ಇದ್ದು ಹೋಗಬೇಕೆಂಬ ಆಸೆ.
ನನ್ನ ಈ ಎಲ್ಲಾ ಭಾವನೆಯು ನಿನಗೆ ನಾ ಹೇಳದೆಯೇ ತಿಳಿಯಬೇಕೆಂಬ ಆಸೆ.
ನಿನ್ನೊಂದಿಗಿದ್ದು ನನ್ನ ನಾ ಸಂಪೂರ್ಣ ಅರಿತುಕೊಳ್ಳುವಾಸೆ.

ನೀನೆಂಬುದು ನನ್ನ ಕಲ್ಪನೆಯಷ್ಟೇಯಾದರೂ, ನನ್ನ ಭಾವನೆಗಳ ಅಸ್ಥಿತ್ವ ನಿಜವಾದವು.
ಸ್ವಲ್ಪ ಮಟ್ಟಿಗೆ ನಾನೇನೆಂಬ ಅರಿವಿನ ಜೊತೆಗೆ, ನೀನು ನನಗೇನೆಂಬ ಅರಿವಾಗಿದೆ.


ಕುಪ್ಪಿ ಲೋಟ ಪಾರ್ಟ್ ೨

Just like more is less,
less is more sometimes!
ಮೊನ್ನೆ ಮೊನ್ನೆಯವರೆಗೂ ಇದ್ದ ಒಂದು ಕುಪ್ಪಿ ಲೋಟಕ್ಕಾಗಿ ಜಗಳವಾಡಿದುಂಟು.
ಹೊಸ ಲೋಟ ಬಂದಾಗಿನಿಂದ, ಹಳೆಯ ಲೋಟದೊಂದಿಗೆ ನಮ್ಮ ಮುದ್ದಾದ ಜಗಳವು ಮೂಲೆಗುಂಪಾಗಿದೆ.

Saturday, 14 July 2018

ತೂಕ

ನನ್ನ ತೂಕ ನನಗಿಂತ ಹೆಚ್ಚು ನನ್ನವರಿಗೆ ತೂಕವಾಗಿದೆ. 😞

Wednesday, 11 July 2018

MaD, ArroGant .

Be ignorant. 
For your pride.
For the respect that your true feeling deserves. 
sometimes respect is more important than love. 
In fact, respect is the true name for love. 

Story

Be a story.
Don't be so busy being a chapter for someone else story.  
Be a story.  

ಯೋಚನೆ ಹಾಗು ಭಾವನೆಗಳ ನಡುವೆ ಸಿಲುಕಿದಾಗ.

I found it strange. 
Very strange. 
I always end up doing what I don't want to do!  

Addiction

Haruki Murakami's somewhere once told that he hates to get addicted.
And I can see that this man always does what he hated the most!
Now!, I'm doing the same.
Meanwhile rather than to think about that consequences,
I wish I become an addiction for my addiction.
Thinking much doesn't always end up giving the solution.
It may lead us to pointless conclusions.
***************
I mean what the use of wasting ones beautiful 1000 moment by thinking about the consequences which may not be lost long! or may never occur! or whatsoever.
Few risks are worth taking.
Pain is an emotion too, which taste good sometimes.
Life is a fucking short bro, just live it before it leaves you.
***************
  

Monday, 9 July 2018

Again

ಮತ್ತದೇ ಸಂಜೆ,
ಮತ್ತದೇ ಬಿಸಿ ಚಹಾದ ಲೋಟ ಕೈಯ್ಯಲ್ಲಿ,
ಮತ್ತದೇ ಮಳೆಯ ಮೋಡ,
ಮಬ್ಬು ಬೆಳಕು,
ಎಲ್ಲವೂ ನೆನ್ನೆ ಇದಂತೆಯೇ ಇದೆ.
ಗೋಡೆಯಲ್ಲಿ ತಗುಲು ಹಾಕಿದ್ದ ಕ್ಯಾಲೆಂಡರ್ ಬದಲಾಗಿದೆಯಷ್ಟೇ.
ಸಮಯವೂ ಸರಿಸುಮಾರು ೬ ಗಂಟೆ.
ಏನೋ ನೆನಪುಗಳು.
ಮತ್ತದೇ ಹಳೆಯ ಯೋಚನೆಗಳು.
ಹಳೆಯವಾದರೂ ನವನವೀನ.

Sunday, 8 July 2018

Hormones

A confusion,
How to retain the innocence of love? 
getting too much into it is suffocating and 
not involved in it is ignorance and arrogance. 
Balancing the emotions is the most difficult task. 
Hormone sucks. 

Shadow ; the grief.

Don't let her soul cast a shadow. 

Taste her soul

Her spirit is more alcoholic than her body,
make love to her thoughts,
touch her mind,
hold her veins,
taste her soul.  

Monday, 2 July 2018

ಹೌದು

ಅವನನ್ನು ಪ್ರೀತಿಸುವುದೆಂದರೆ ಕೇವಲ ಅವನನ್ನಲ್ಲ,
ಅವನ ಪ್ರಪಂಚವನ್ನು, ಆ ಪ್ರಪಂಚದಲ್ಲಿರುವ ಎಲ್ಲವನ್ನು ಪ್ರೀತಿಸುವುದು. 

He; my madness. (ಅವನೆಂಬ ಹುಚ್ಚು)

ಅವನಿಗೆ ಜನ್ಮವಿತ್ತ ಆ ತಾಯಿ, ಕಾರಣಕರ್ತ ತಂದೆ,
ಅವನ ಕಾಡಿಸಿ ಸತಾಯಿಸುವ ಪುಟ್ಟ ತಂಗಿ,
ಅವನು ವಾಸಿಸಿದ ಆ ಮನೆ, ಅವನ ಕೋಣೆ , ಅವನು ಅವಿತು ಕುಳಿತಿದ್ದ ಮಂಚದಾ ಸಂದಿ,
ಅವನ ಪುಸ್ತಕ, ಅವನ ಲೇಖನಿ, ಅವನ ಸ್ನೇಹಿತರು, ಅವನಾಟಪಾಠದ ಸಹಪಾಠಿಗಳು, ವಸ್ತುಗಳು,
ಅವನ ಕೊಂಡೊಯ್ಯುವ ಬಂಡಿ, ಅವನೊಡಾಡಿದ ಸ್ಥಳ, ಅವನು ಹೆಚ್ಚು ಸಮಯಕಳೆವ ಆಫೀಸ್ನ ಆ ಮೂಲೆ ಟೇಬಲ್,
ಅವನ ನಿತ್ಯವೂ ಸ್ಪರ್ಶಿಸುವ ಅವ ತೊಟ್ಟ ಅಂಗಿ, ತಿಂದ ಊಟ, ಕುಡಿದ ನೀರು, ಅವನ ಎಲ್ಲ ಭಾವನೆಗಳು, ಖುಷಿ, ದುಃಖ್ಖ, ನೋವು, ನಲಿವು, ಉದಾಸೀನ, ಬೇಜಾರು, ಮೌನ, ಮಾತು, ಅವನಿಗಿಷ್ಟವಾದ ಹಾಡು, ಉಪದ್ರವನಿಸುವ ವಿಷಯ, ಒಟ್ಟಿನಲ್ಲಿ ಅವನುಸಿರು ತಾಕಿದ ಎಲ್ಲವಕ್ಕೂ ಚೇತನ ತುಂಬುವ ಅವನೆಂಬ ನನ್ನ ಹುಚ್ಚು. ಹುಚ್ಚು ಪ್ರೀತಿ. ಹುಚ್ಚು ಕಲ್ಪನೆ. ಹುಚ್ಚಯೆಂಬ ಖುಷಿ. 

Rhapsody

ನೊರೆ ನೊರೆಯ ಬಿಳಿ ಅಲೆಯ ಪದಗಳು ಅವನ ಕಣ್ಣಿನಿಂದ ಧಾಳಿಯಾಮಾಡಿರಲು,
ಬಿಸಿಯುಸಿರ ಏರಿಳಿತದ ಸಹಿಸಲಾಗದ ಹಾವಳಿಗೆ ನಾ ಸಿಲುಕಿ ನಾಗಲುಗಿರಲು, 
ಅವನ ಲಯಬದ್ದ ಹೃದಯದಾ ಬಡಿತಕ್ಕೆ ತಾಳಸೇರಿಸಿ, ಸ್ವರತಂತಿಯಾಗಿ ಮಿಡಿದು
ನಮ್ಮದೇಯಾದ ಲೋಕಾದಿ ನಮ್ಮದೇ ಸಂಗೀತವ ಹಾಡಿದ್ದೆವು. ಹಾಡಿ ನಲಿದ್ದಿದ್ದೆವು.