Tuesday, 31 October 2017

Winter is coming.

೩೧-೧೦-೨೦೧೭

ಹಾಳು ಖಾಯಿಲೆ.
ಚಳಿಗಾಲವಿನ್ನು ಶುರುವಾಗುವುದುವೆನ್ನುವಷ್ಟರಲ್ಲಿ ಶೀತ ಶುರುವಾಗಿದೆ.
ನನಗೆ ಶೀತವಿದ್ದರು ಇಷ್ಟು ತಲೆ ಕೆಡುವುದಿಲ್ಲ.
ನನ್ನ ಮಗುವಿಗೇಕೆ ಶೀತ?, ಎಂದು ಅಮ್ಮನ ಗೊಣಗಾಟ.
ಚಳಿಗಾಲವೆಂದರೆ, ಮಳೆಬರುವ ಮುನ್ನ ಗರಿಬಿಚ್ಚಿ ಕುಣಿವ ನವಿಲಿನಂತೆ ಖುಷಿಯಿಂದ ಅರಳುವ ಅಮ್ಮನ ಮೊಗವಿಂದು ಬಾಡಿದೆ. ಶೀತಕ್ಕೆ ಒಂದಷ್ಟು ಇಡಿ ಶಾಪವಕುತ್ತ ತಲೆಕೆಡಿಸಿಕೊಂಡು ಕುಳಿತಿದ್ದಾಳೆ.
ಅಮ್ಮನ ಈ ಗೊಣಗಾಟ ಕಂಡು ನಗಬೇಕೋ? ಶೀತದ ತಲೆನೋವಿಗೆ ಅಳಬೇಕೊ? ಎಷ್ಟು ಮಾಡಿದರು ಮುಗಿಯದ ಕೆಲಸಕ್ಕೆ ರಜೆಯಾಕಿ ಬೆಚ್ಚನೆ ಹೊದೆದು ಮಲಗಬೇಕೋ?



Monday, 30 October 2017

Never judge!

There is always a reason behind every acts,
Don't be blind for unseen!
Don't be very confident about seen!

ಆಸೆ

ಅವನ ಮನಗೆದ್ದ ಪ್ರೇಯಸಿ ನಾನಲ್ಲ, 
--ಅವನೊಂದು ವಸ್ತುವಲ್ಲ. 
ಅವನ ಹೃದಯದರಸಿ ನಾನಲ್ಲ,
--ಅವನ ಆಳುವ ಮನಸ್ಸು ನನಗಿಲ್ಲ. 
ಅವನು ಆರಾಧಿಸುವ ದೇವಿ ನಾನಲ್ಲ,
--ಅವನ ಸೇವೆ, ಭಕ್ತಿ, ಗುಲಾಮಗಿರಿ ನನಗೆ ಬೇಕಿಲ್ಲ. 

ನನಗೆ, ಅವನಾಗುವಾಸೆ, ಅವನಲ್ಲಿ ಲೀನವಾಗುವಾಸೆ.
ರಾಧೆಯಾಗಿಯೇ ಉಳಿಯುವಾಸೆ. 


Saturday, 28 October 2017

ಮುಂದಿನಬಾರಿ

ಯಾವಾಗ ಕೇಳಿದರು ಮುಂದಿನಬಾರಿ,
ಈ ಮುಂದಿನಬಾರಿ ಯಾವಾಗ ಬರುತ್ತೋ, ತಿಳಿಯದು.
ಆಗುವುದಿಲ್ಲವೆಂದರೆ ಆಗದು ಎಂಬ ಸತ್ಯವ ಏಕೆ ಹೇಳಲಾರೆ ?
ಕಠೋರ ಸತ್ಯವೇ ನನಗೆ ಪ್ರಿಯ, ನಿನ್ನ ಸುಳ್ಳಿಗಿಂತ.
ನಿನ್ನ ಸುಳ್ಳಿಗೆ ಕಾರಣ ಸಾವಿರವಿರಬಹುದು,ನನ್ನ ಮೇಲಿನ ಪ್ರೀತಿಯು ಆಗಿರಬಹುದು. 
ಆದರೆ ನಿನ್ನ ಸತ್ಯಕೆ ಕಾರಣ ನನ್ನ ಮೇಲಿರುವ ನಂಬಿಕೆ ಮಾತ್ರ. 
ಪ್ರೀತಿ ಇಲ್ಲದೆಯೇ ಬದುಕಬಹುದು, ನಂಬಿಕೆ ಇಲ್ಲದಿದ್ದರೆ ಸಾವು ಸಹ ಘೋರ.
ಸಂಪೂರ್ಣ ನಿಷ್ಠೆಯ ಬಯಸಲಾರೆ, ಏಕೆಂದರೆ ನಾನು ಸಂಪೂರ್ಣ ನಿಷ್ಠಾವಂತಳಲ್ಲ.
ನೀ ಕೊಟ್ಟ ನೋವಿನಲ್ಲೂ ನಗುವಿನ ಮುಖವಾಡ ಧರಿಸಿರುವೆ, ನಿನಗಾಗಿ.
ನಿನಗೆಂದಿಗೂ ಅಪರಾಧೀಭಾವವ ನಾ ನೀಡಲಾರೆ.
ನಿನ್ನ ಸಾವಿರ ಸುಳ್ಳಿಗು ನನ್ನಲ್ಲಿ ಕ್ಷಮೆ ಇದೆ.
ನೀ ನೀಡುವ ಸಾವಿರ ನೋವಿಗೂ ನನ್ನಲ್ಲಿ ನಗುವಿದೆ.
ನೀನೆಂದರೆ ನಾನೆಂದು ಗ್ರೇಶಿದ ನನ್ನಲ್ಲಿ, ನಿನಗಾಗಿ ರಾಶಿ ಪ್ರೀತಿಯ ಜೊತೆಗೆ ನಂಬಿಕೆಯು ಇದೆ.
ನೀನು ಹೇಳಿದ "ಮುಂದಿನಬಾರಿ"ಯ ನಿರೀಕ್ಷೆಯಲ್ಲಿ ಸದಾ ಜೀವಿಸುವೆ, ಖುಷಿ ದುಃಖಗಳ ಗೊಂದಲದಲ್ಲಿ.
ನಿನ್ನ ಮಾತಿಗೆ ಸಮ್ಮತಿಸುತ್ತ, ನೀರವ ಮೌನದಿ. 

Friday, 27 October 2017

Detached

The more you get detached,
the more you love,
you love,
truly,
by set him free,
by letting him breathe,
no fear of darkness,
no fear of falling,
no fear of losing,
coz you love him,
being detached,
not being attached.

The more you detached,
the more you love,
you love,
truly,
by giving him more,
by expecting less, 
without jealousy,
without ego,
without insecurity,
coz you love him,
being detached,
not being attached.


Something just like that.

ಅದೊಂದು ದಿನ,
ನನ್ನನು ನನ್ನ ಸಂಪೂರ್ಣ ಹೆಸರಿನಿಂದ ಕರೆದ. 
ಹಿಂತಿರುಗಿ ನೋಡಿದೆ. 
ಕಣ್ಣಿನಲ್ಲಿಯೇ ನಕ್ಕ ನನ್ನ ಕಂಡು, ತಲೆ ಕೆರೆದು ಕೊಂಡ. 
ಏನೋ? ನಾ ಕೇಳಿದೆ. 
ಸುಮ್ಮನೆ ಕರೆದೆ ಎಂದಿದ್ದ. 
ಮರು ಪ್ರಶ್ನಿಸಲಿಲ್ಲ. 
ಉತ್ತರವ, ನಾಚಿ ನೆಲನೋಡುತ್ತಿದ್ದ ಅವನ ಕಣ್ಣು ರೆಪ್ಪೆಗಳೇ ಹೇಳಿದ್ದವು.

ಯೋಚನೆ

ದೂರ ಅದೆಲ್ಲೋ ಕುಳಿತು ಇಷ್ಟು ಸತಾಯಿಸುವ ನೀನು,
ಸಮೀಪವಿದ್ದರೆ?