Tuesday, 20 March 2018

ಅತಿಶಯೋಕ್ತಿಯೇ?

ಅಂದೆಂದೋ ನಾನೋದಿದ ಪುಸ್ತಕ, ಇಂದು ಅವನ ಬಳಿಯಲ್ಲಿ; ನಾ ಸೋಕಿದ ಪುಟಗಳ್ಳೆವ ತನ್ನ ಬೇರುಳುಗಳಲ್ಲಿ ಸ್ಪರ್ಶಿಸುತ್ತ .
ನನ್ನ ಕಂಗಳು ಮುದ್ದಿಸಿದ್ದ ಅವಳ ಅದೇ ಅಕ್ಷರಗಳು, ಇಂದು ಅವನ್ನನ್ನು ಮುದ್ದಿಸುತ್ತಿರುವವೇ?
ಕುತೂಹಲ ತಡೆಯಲಾರದೆ ಧಡಬಡ ಎಂದು ಒಂದೇ ಉಸಿರನಲ್ಲಿ ಓದಿ ಪಟಪಟನೆ ತಿರುವಿ ಹಾಕಿದ ನನ್ನ ಪುಟ್ಟಕ್ಕನ ಪುಟಗಳು, ಇಂದು ಅದೇ ಗದ್ದಲ್ಲವಾ ಮಾಡಿರುವುದೇ?
ಕೆಲವೊಮ್ಮೆ ಓದುವುದ ನಿಲ್ಲಿಸಿ ಘಾಡ ಯೋಚನೆಗೆ ನನ್ನನ್ನು ಕರೆದೊಯ್ದ ಕಥೆಯ ಸನ್ನಿವೇಶಗಳಿಂದೂಕೂಡಾ ನಿಶಬ್ದದಿ ಅವನ್ನನು ದಿಟ್ಟಿಸಿಹುದೇ?
ಹುಚ್ಚಿಯಂತೆ ಕಿಲಕಿಲನೆ ನನ್ನ ನಗಿಸಿದ ಆ ಮೋಹಕ ಮಾಯೆ, ಅವನ ಕೆನ್ನೆಯಲ್ಲಿ ಸಣ್ಣದೊಂದು ಗುಳಿಯನ್ನಾರು ಬೀಳಿಸಿರಬಹುದೇ?
ತನ್ನ ಕಥೆಯ ಹೇಳುತಿಹ ಅವಳು, ಜೊತೆಯಲ್ಲಿ ನನ್ನ ಕಥೆಯನ್ನ ಅವನಿಗೆ ಹೇಳಿರುವಳೇ? ನನ್ನ ನೆನಪ ತರಿಸಿರುವಳೇ?  ಕಡೇಪಕ್ಷ ನನ್ನ ಉಸಿರ ಗಾಳಿಯ ಬಚ್ಚಿಟ್ಟುಕೊಂಡು ನನ್ನದೆಯ ಮೇಲೆಯೇ ಮಗುವಂತೆ ಬೆಚ್ಚನೆ ಮಲಗಿದ್ದ ಅವಳು ನನ್ನ ಪರಿಮಳ ಪಸರಿಸಿರುವಳೇ?
.......
.......
.......
.......



Friday, 9 March 2018

Stars in the sky

ಆಕಾಶದಲ್ಲಿ ಮಿಂಚಿ ಹೊಳೆವ ನಕ್ಷತ್ರ,
ಸುತ್ತುತ್ತಿರುವ ಭೂಮಿಯಮೇಲಿರು ನಾವುಗಳು,
ಯಾವುದು ಇದ್ದಂತೆ ಇರಲಾರದು.
ಎಷ್ಟೇ ಬದಲಾದರು, ಆ ಬದಲಾವಣೆಯೇ ಚೆಂದ.
ನಕ್ಷತ್ರದ ಹೊಳಪು ಬದಲಾಗಬಹುದು,
ನಾವು ನೋಡುವ ಕೋನಕೂಡ!
ಬದಲಾವಣೆ ಅನಿವಾರ್ಯ.
ಹೊಸತನವನ್ನು ಒಪ್ಪಿಕೊಂಡು ಅಪ್ಪಿಕೊಂಡರೆ ಎಲ್ಲವೂ ಚೆಂದವೆ.

Thursday, 8 March 2018

ಕೆಂಪು ಬಿಳಿ

The way his eyes undressed me,
I left with no other options than hugging his lips.

ಕನಸು

ಹೇಳುವುದಾದದರು ಹೇಗೆ ,
ಬೆಳಗಿನಜಾವದ ಆ ಕನಸ,
ನಾ, ಹೇಳುವುದಾದದರು ಹೇಗೆ?
ಆದರೂ ಹೇಳುವಾಸೆ; ಅವನಿಗೆ.
ಪದಗಲ್ಲಿ ತುಂಬುವುದಾದರೂ ಹೇಗೆ, 
ಮುಂಜಾವು ಮಬ್ಬಿನಲ್ಲಿ ಕಂಡ ಆ ಕತ್ತಲೆಯ ಬೆಳಕ ಬಣ್ಣವ?
ನಾಚಿಕೆಯ ಆ ಕೂಸು ಹೇಳುವುದೆಲ್ಲ ತೊದಲ ಮಾತು, ಅರೆಸತ್ಯ.
ತನ್ನಲ್ಲೇ ಬಚ್ಚಿಟ್ಟಕೊಳ್ಳುತ್ತಾ ಒಂದಷ್ಟು ಬಣ್ಣ.  
ಇಷ್ಟೆಲ್ಲ ಕಷ್ಟವೇಕೆ?
ಕೊಂಡೊಯ್ಯಲೇ ಅವನನ್ನೇ ನನ್ನ ಕನಸಿನೊಳಗೆ? ಅನಿಸ್ಸಿತ್ತು!!
ಅರೇ, ಆದರೆ ಅವನ ವಾಸವೇ ನನ್ನ ಕನಸಿನ್ನಲ್ಲಾಲವೇ??

Magician

ಅವನಂದು ಕಲ್ಪನೆ,
ಅವನೊಂದು ಜಾದು,
ಈವನ್ ದಿ ನಾನ್ಸೆನ್ಸ್ ಮೇಕ್ಸ್ ಸೆನ್ಸ್ ವೆನ್ ಹೀ ಟಾಕ್ಸ್,
ಅವ ಜಾದೂಗಾರ. 

Wednesday, 7 March 2018

Walk

Walk, walk
until you get tired.
Tired? take rest and
start walking again.
This is the best way to live.

Tuesday, 6 March 2018

ಅಚ್ಛರಿ


ಆಕೆಯ ಕಣ್ಣು,
ಆ ಮೂಗು,
ಆಕೆಯ ಮೈ ಬಣ್ಣ,
ಆ ನಗೆ,
ತುಟಿಯ ಮೇಲಿನ ಸಣ್ಣದೊಂದು ಮಚ್ಚೆ,
ಕೆನ್ನೆಯ ಗುಳಿ,
ಕಾಣದ ಯಾವೊದೋ ಲೋಕದಲ್ಲಿ ಜಾರಿಹೋದಂತೆ,
ಸಂಗೀತದ ಸ್ವರತರಂಗಗಳಂತೆ,
ಐಸ್ಕ್ರೀಂ ಮೇಲಣ ನುಣುಪಾದ ಚಾಕೊಲೇಟ್ ಪದರದಂತೆ,
ಪದಗಳಿಗೆ ನಿಲುಕದ ಅದ್ಭುತ,
ತನ್ನೊಳಗೆ ತಾನೊಂದು ಅದ್ಭುತ.