Saturday, 30 January 2021

ಸ್ನೇಹಿತೆ ಎಷ್ಟು ಮುಖ್ಯ?

ಹಾಗಾದರೆ ಸ್ವಾರ್ಥಕ್ಕಾಗಿ ಸ್ನೇಹಿತೆಯೇ? ಯೆಂದು ನಿಮಗನಿಸಿದರು ಚಿಂತೆಯಿಲ್ಲ . 

ನೆನ್ನೆ ಏಕೋ ಕಸಿಮಿಸಿ,  ಕಳೆದ  ೬ ವರ್ಷಗಳ ಜೀವನದ ಸಾರ್ತಕಥೆಯ ಪ್ರಶ್ನೆ. ಏನೇನೋ ಬೇಡದ ಯೋಚನೆಗಳ ಗೂಡಾದ ಮನಸ್ಸು. ಸ್ನೇಹಿತೆಗೆ ಮೆಸೇಜ್ ಮಾಡಿ ಬೇಜಾರು ನನಗೆ ಹೀಗೆಲ್ಲ ಅನ್ನಿಸುತ್ತಿದೆ ಎಂದು ಮಾನಸಿ ಅನ್ನಿಸಿದ್ದನು ಆದಷ್ಟು  ಒಳ್ಳೆಯ ರೂಪಾಂತರಿಸಿ ಎಷ್ಟು ಬೇಕೋ ಅಷ್ಟೇ ಅವಳಿಗೆ ಹೇಳಿದೆ. ಆಗ ಅವಳು ಹೇಳಿದ ಒಂದು ಮಾತು ಎಷ್ಟು ಸಮನಾದ ಕೊಟ್ಟಿತೆಂದರೆ ಬಾಯಾರಿದವನಿಗೆ ನೀರು ಸಿಕ್ಕಷ್ಟು. ಆಕೆ ಹೇಳಿದ್ದು ಇಷ್ಟೇ,

"ಮಧು, ಪರಿಸ್ಥಿತಿಗಳು ನಿಜವಾಗಿಯೂ ನೀನು ಹೇಳುವ ರೀತಿಯೇ ಇದಿಯೇ ಅಥವ ಕೇವಲ ನಿನಗೆ ಹಾಗನಿಸಿತ್ತುರುವುದೇಯೆಂದು ಸಮಾಧಾನದಿಂದ ಆಲೋಚಿಸು. ನಿನ್ನ ಮೇಲೆ ಮಾತ್ರ ನಿನ್ನ ಗಮನವಿರಲಿ, ಎಲ್ಲವೂ ತನ್ನಿಂದ ತಾನೇ ಸರಿಹೋಗುತ್ತದೆ. ನಾನು ಈ ಸವಾಲುಗಳ್ಳನ್ನು ಎದರಿಸಿ ಬಂದಿದ್ದೇನೆ" 

ಅನುಭವಗಳು ಕಲಿಸುವ ಪಾಠಕ್ಕೆ ಬೇರೆ ಸಾಟಿ ಇಲ್ಲ ಅನ್ನುವುದು ಇದಕ್ಕೆ ಇರಬೇಕು.   

ಹಾಗೆ ಸುಮ್ಮನೆ

ಅಮ್ಮನನ್ನೇ  ದಿಟ್ಟಿಸಿ ಏನನ್ನೋ ಯೋಚಿಸುತ್ತಿದ್ದ ಅಪ್ಪನಿಗೆ ಅಮ್ಮ "ಯಾಕ್ರೀ ಭಟ್ರೇ ನನ್ನನ್ನು ಹಾಗೆ ನೋಡ್ತೀರಾ" ಅಂದರು. ಅದಕ್ಕೆ ಉತ್ತರವಾಗಿ ಅಪ್ಪ ನೆನ್ನೆ ಏನು ಹೇಳಿದರು ಗೊತ್ತೇ?  

"ಹೆಂಡತಿ ಅನ್ನೋ ಹೆಸರಲ್ಲೇ ಹೆಂಡ ಇದೆ. ನಿನ್ನದೇ ಅಮಲು ನನಗೆ". ಎಂದು ನಕ್ಕಿ ಬಿಟ್ಟರು ನಮ್ಮ ಭಟ್ಟರು.  

Sunday, 10 January 2021

ಕೃಷ್ಣೇ

  ನಮ್ಮಜೊತೆಗಾರರ ಪ್ರಭಾವ ಎಷ್ಟರ ಮಟ್ಟಿಗೆ ಆಗುತ್ತದೆಂದರೆ ನನ್ನ ಕೃಷ್ಣನ ಪಡೆದ ಮೇಲೆ ನಾನು ಮಧುವಾಗಿಲ್ಲ ಕೃಷ್ಣೆಯಾಗಿದ್ದೇನೆ. 

ಕಳೆದು ಹೋದ ಸಮಯ - ೨

ಅಂದು ಅಮ್ಮನ ಬಗ್ಗೆ ಮಾತನಾಡುತ್ತಿದ್ದೆ. ಈಗ ಮಾತು ಮುಂದುವರಿಸುವೆ. 

ಎಷ್ಟೋ ದಿನಗಳ ನಂತರ ಕೇವಲ ನಾನು, ಅಮ್ಮ ಮತ್ತು ಅಪ್ಪ ಮನೆಯಲ್ಲಿ ಜೊತೆಯಲ್ಲಿ ಇರುವ ಸಂದರ್ಭ ಬಂದಿದೆ. ಇಲ್ಲದಿದ್ದಲ್ಲಿ ಕಳೆದ ೬ ವರ್ಷಗಳಲ್ಲಿ ನಾವು ಮೂವರು ಮಾತ್ರ ಜೊತೆ ಇದ್ದ ಸಂದರ್ಭ ಬೆರಳೆಣಿಕೆಯಷ್ಟು. ಅಣ್ಣ ಅತ್ತಿಗೆ, ನನ್ನ ಗಂಡ ಹೀಗೆ ಒಬ್ಬರಲ್ಲ ಒಬ್ಬರು ಇರುತ್ತಿದ್ದರು. ಅವರೆಲ್ಲ ಇರುವಾಗ ನಮ್ಮ ಮೂವರಿಗೆ ಮಾತ್ರ ಸೀಮಿತವಾದ ಹಳೆಯದಿನಗಳ ಸವಿಯನ್ನು ಮೆಲುಕುಹಾಕುವುದು ಸಾಧ್ಯವಾಗುವುದಿಲ್ಲ. ಕಳೆದ ೪-೫ ದು ದಿನಗಳಿಂದ ಈ ಸುಸಂದರ್ಭದ ನಮಗೊದಗಿ ಬಂದಿದೆ. ನಾವು ನಮ್ಮ ಹಳೆಯ ಜೀವನದಬಗ್ಗೆ ಮಾತನಾಡುತ್ತ ಜೋರ ಜೋರಾಗಿ ನಗುತ್ತ ಕಾಲ ಕಳೆಯುತ್ತಿದ್ದೇವೆ. ಒಂದು ರೀತಿ ನಿರಾಳ ವೆನಿಸುತ್ತದೆ. ನೆಮ್ಮದಿಯ ಅನುಭವ. ಜೀವನ ಎಷ್ಟು ಬದಲಾಗಿದೆ ಎಂಬುದರ ಸಣ್ಣ ಅರಿವು. ಕೊಂಚ ನಡುಕ ಅಯ್ಯೋ ಇಷ್ಟು ಬೇಗ ಅಷ್ಟು ದೊಡ್ಡವಳದೇನೆ ಎಂದು. ನೆನ್ನೆ ಮೊನ್ನೆ ಅಷ್ಟೇ ಯಾರೋ ಅಪರಿಚಿತರು ಏನು ಪುಟ್ಟಿ ಏನು ನಿನ್ನ ಹೆಸರು ಅಂತ ನನ್ನನ್ನು ಮುದ್ದು ಮುದ್ದಾಗಿ ಮಾತನಾಡಿಸಿದಾಗ ಅಮ್ಮನ ಸೆರಗ ಹಿಂದೆ ಅವಿತ ನೆನಪು. ಪಾಪ ಪಿನ್ನು ಹಾಕಿದ್ದ ಅವಳ ಸೆರಗ ಎಳೆದು ಎಷ್ಟು ಸಲ ನಾನು ತೊಂದರೆ ಕೊಟ್ಟಿರಬಹುದು ಎಂದು ನೆನೆದರೆ ನಗು ಬರುತ್ತದೆ. ಈಗ ಎಲ್ಲಿಗಾದರೂ ಹೋಗುವಾಗ ನನ್ನ ಸೀರೆ ಸ್ವಲ್ಪ ಸುಕ್ಕಾದರೂ ಕೋಪ ಬರುತ್ತದೆ!! ಅಮ್ಮಂದಿರು ಮಕ್ಕಳನ್ನು ದೊಡ್ಡಮಾಡಲು ಒಳ್ಳೆ ಸರ್ಕಸ್ ಮಾಡಿರುತ್ತಾರೆ ಅಲ್ಲವೇ? ಅಷ್ಟೇ ಅಲ್ಲದೆ ತಮ್ಮ ಜೀವನವೇ ಅವರು ಎಂಬಂತೆ ತಮ್ಮ ಜೀವನವನ್ನು ಬದಿಗಿರಿಸಿ ಬದುಕ್ಕುತ್ತಾರೆ. ಪ್ರಪಂಚದಲ್ಲಿ ಎಲ್ಲ ಅಮ್ಮಂದಿರು ಹೀಗೆ ಇರಬಹುದೇ ಎಂಬ ಒಂದು ಸಣ್ಣ ಪ್ರಶ್ನೆ. ಅದುವೆ ಜಗದ ನಿಯಮವೇ? ಜೇವನದ ಉದ್ದೇಶವೇ ಅದುವೇ? ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲವಾದರೂ ನನ್ನ ಗಂಡನ ಬಳಿ ಇದೆ. ಅವರು ಹೇಳುವುದು ಏನೆಂದರೆ ಮದುವೆಯ ಉದ್ದೇಶವೇ ಮಕ್ಕಳು, ಮಕ್ಕಳನ್ನು ಹಡೆದು ಅವರ ಭವಿಷ್ಯ ನಿರ್ಮಿಸುವುದು. ಈ ಉತ್ತರ ಸರಿ ಅನಿಸಬಹುದು ಏಕೆಂದರೆ ಜೀವನದಲ್ಲಿ ಯಾವುದಕ್ಕೂ ಅರ್ಥವಿಲ್ಲ. ಒಬ್ಬರಿಗೆ ಸಹಾಯ ಮಾಡುವುದು, ದುಡಿಯುವು, ತಿನ್ನುವುದು, ಸುತ್ತುಹೋಗುವುದು. ಅದು ಇದು ನಮ್ಮ ಎಂಟರ್ಟೈನ್ಮೆಂಟ್ಗಾಗಿ ಮಾಡುವುದು ಎಲ್ಲವೂ ಅಗತ್ಯವೂ ಹೌದು ಹಾಗೆ ಅನಗತ್ಯ. ಎಲ್ಲವೂ ಒಂದು ರೀತಿಯಲ್ಲಿ ವ್ಯರ್ಥ. ಹಾಗಾದರೆ ವ್ಯರ್ಥವಲ್ಲದ್ದು ಅಂದರೆ ಏನು ಎಂಬ ಪ್ರಶ್ನೆ ಬರುತ್ತದೆ ? ಅದಕ್ಕೆ ಉತ್ತರವಿಲ್ಲ. ಯಾವ ವ್ಯಕ್ತಿಯು ಜಗದ ನಿಯಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವರು ಹೇಳಬಹುದು ಜೀವನದಲ್ಲಿ ಒಂದಷ್ಟು ಜನಕ್ಕೆ ಸಹಾಯವಾಗುವಂತ , ಜೀವನ ಸುಲಭವಾಗುವತಹ ಕೆಲಸಮಾಡಿದರೆ/ಕಂಡುಹಿಡಿದರೆ ಜೀವನ ಸಫಲ ಅಂತ. ಆದರೆ ನನಗೆ ಮೂಡುವ ಪ್ರಶ್ನೆ ಎಂದರೆ, ಹೀಗೆ ಒಬ್ಬರ ಜೀವನ ಉದ್ದಾರ ಮಾಡಿರುವೆ ಅಂದ್ಕೊಂಡವರು ನಿಜವಾಗಿಯೂ ಉದ್ದಾರ ಮಾಡಿರುವರೋ  ಅಥವಾ ಹಾಳು ? ಬೇರೆ ಜೀವ ಪ್ರಬೇಧಗಳು ಹುಟ್ಟಿದ್ದೇವೆ ಹಾಗಾಗಿ ಬದುಕ ಬೇಕು, ಬದುಕ್ಕುತೇವೇ, ಹುಟ್ಟಿದ ಮೇಲೆ ಸಾವು ಸಹಜ, ಸಾಯುತ್ತೇವೆ. ಅಷ್ಟೇ. ಆದರೆ ಮನುಷ್ಯಮಾತ್ರ ಏಕೆ ಏನೇನೋ ಆವಿಷ್ಕಾರ ಮಾಡ ಹೊರಡುತ್ತಾರೇ? ಕಷ್ಟಗಲ್ಲನು ಸೃಷ್ಟಿಸುವವರು ನಾವೇ , ಅದಕ್ಕೆ ಪರಿಹಾರ ಕಂಡುಕೊಳ್ಳುವುದು ನಾವೇ. ಮನುಷ್ಯನೆಂಬ ಪ್ರಾಣಿಯ ಹುಟ್ಟೇ ತಪ್ಪು ಅನಿಸುತ್ತದೆ ಕೆಲವೊಮ್ಮೆ. ತನ್ನ ಯೋಚನಾಶಕ್ತಿಯಿಂದ ಇಚ್ಚಾಶಕ್ತಿಯಿಂದ ಎಲ್ಲವನ್ನು ಬದಲಿಸುತ್ತಾನೆ. ನಾವೆಲ್ಲರೂ ಈ ಮಾಯಾಜಾಲದಲ್ಲಿ ಎಷ್ಟರಮಟ್ಟಿಗೆ ಬಲಿಯಾಗಿದ್ದೇವೆಯೆಂದರೆ ಅದರಿಂದ ಹೊರಬರಲು ಅಸಾಧ್ಯ. ನಿಜವೆಂದರೆ ನಾವ್ಯಾರು ಹೊರಬರಲು ಬಯಸುವುದೇ ಇಲ್ಲ. ಇನ್ನು ಪ್ರಯತ್ನವೆಲ್ಲಿ ಮಾಡಿರುತ್ತೇವೆ? ಅಲ್ಲವೇ.? ಅಯ್ಯೋ ನಾನು ನನ್ನ ಮೂಲ ಉದ್ದೇಶದಿಂದ ದೂರಹೋಗುತಿದ್ದೇನೆ. ನಾವಿಲ್ಲಿ ಈಗ ಮಾತನಾಡಿತ್ತಿರುವುದು ನನ್ನಮ್ಮನ ಬಗ್ಗೆ. 

ನಂಬಿಕೆ ಎಂಬುದು ಎಷ್ಟು ಮುಖ್ಯ ಜೀವನ ನಡೆಸಲು. ಸಂಘಜೀವಿ ಯಾಗಿದ್ದೆ ಮನುಷ್ಯನ ತಪ್ಪೇ? 

ನನ್ನಮ್ಮ ಕೆಲಸಕ್ಕೆ ಹೋಗುವುದು ಅಪ್ಪನಿಗೆ ಇಷ್ಟ ಇರಲ್ಲಿಲ್ಲ ಯೆಂದು ಆಗಲೇ ಹೇಳಿದ್ದೆ. ನಮ್ಮಮ್ಮನಿಗೇಕೊ ಬರಿ ಮನೆಗೆಲಸ ಮಾಡಿಕೊಂಡು ಆರಾಮವಾಗಿ ಇರುವುದು ಅಷ್ಟೆಲ್ಲ ಇಷ್ಟವಿರಲಿಲ್ಲ. ನನಗೊಂದು ಹೆಣ್ಣು ಮಗಳಿದ್ದಾಳೆ, ಅವಳಿಗೆ ಮದುವೆ ಮಾಡಬೇಕು. ಒಂದು ಸರಿಯಾದ ದಡ ಸೇರಿಸಬೇಕೆಂದು ನಾನು ಹುಟ್ಟಿದಾಗಲೇ ನಿರ್ಧಾರ ಮಾಡಿರಬೇಕು ಅನಿಸುತ್ತದೆ. ಹಾಗಾಗಿ ತನ್ನ ಕೈಲಾದ ಎಲ್ಲ ಪ್ರಯತ್ನ ಪಟ್ಟಿದಾಳೆ. ಅಪ್ಪ ನಮಗೆ ಯಾವುದೇ ಕಮ್ಮಿ ಮಾಡಿಲ್ಲವಾದರೂ, ಅಮ್ಮ ಬುಟ್ಟಿ ಹೆಣೆದು ಮಾರುತ್ತಿದಳು, ಹೋಲಿಗೆ ಕಲಿತು ರವಕೆ, ಸೀರೆ ಜಿಗ್ ಝಗ್, ಫಾಲ್ಸ್, ಸೆರಗಿಗೆ ಕುಚ್ಚುಕಟ್ಟುವುದು ಹೀಗಿಲ್ಲ ಮಾಡಿ ಸಂಪಾದಿಸುತ್ತಿದಳು. ಹಪ್ಪಳ ಮಾಡಿ ಮಾರುತ್ತಿದಳು. ಬಿಡುವಿಲ್ಲದಷ್ಟು ಕೆಲಸ ಮಾಡುತಿದ್ದಳು. ಹೀಗೆ ಮಾಡಿ ಕುಡಿಸಿಟ್ಟ ಹಣವನ್ನು ಚೀಟಿ ಹಾಕುತ್ತಿದಳು. ಒಂದು ದೊಡ್ಡಮಟ್ಟಿನ ಹಣ ಸಂಗ್ರಹವಾದಮೇಲೆ ನನಗೆ ವಡವೆ ಗಲ್ಲುನು ಮಾಡಿಸುತ್ತಿದ್ದಳು. ಅವರಪ್ಪ ಅಂದರೆ ನನ್ನ ಅಜ್ಜ ಆಕೆಗೆ *** ಗ್ರಾಂ ಚಿನ್ನ ಮದುವೆ ಯಲ್ಲಿ ಹಾಕಿ ಕಳಿಸಿದ್ದರಂತೆ. ಅಷ್ಟೇ ಅವಳು ನನಗು ಕೊಡಬೇಕು ಅನ್ನುವುದು ಅವಳಿಷ್ಟವಾಗಿತ್ತು. ಎಲ್ಲವೂ ಸರಿಯಾಗಿಯೇ ಅವಳಂದುಕೊಂಡಂತೆ ಇತ್ತು.  ಚಿನ್ನವು ಅವಳಿಗನಿಸಿದಷ್ಟು ಮಾಡಿಸಿದಳು. ಸೊಸೆಗೆಂದು ಮಾಡತೊಡಗಿದಳು. ನಾನು ಶಾಲೆ ಮುಗಿಸಿ ಕಾಲೇಜು ಮೆಟ್ಟಿಲು ಹತ್ತಿದೆ. ಆಕೆಗೀಗ ನನ್ನ ಮದುವೆಗೆ ಹಣ ಸಂಗ್ರಹಿಸುವ ಯೋಚನೆ ಬಂತು. ಚಿನ್ನ ಗಿನ್ನ ಸಾಕು. ಮದುವೆಯ ಕರ್ಚಿಗಾಗಬೇಕಲ್ಲ ವೆಂದು ನನ್ನ ಕಾಲೇಜು ಗೆಳತಿಯ ಅಮ್ಮನ ಬಳಿ ಚೀಟಿ ಹಾಕಿದಳು. ನನ್ನ ಗೆಳತಿಯ ಅಪ್ಪ ನಮ್ಮ ಕಾಲೇಜು ನಲ್ಲಿಯೇ ಒಳ್ಳೆಯ ಉದ್ಯೋಗದಲ್ಲಿದ್ದರು. ಅವರಮ್ಮ ಏನೋ ತನ್ನ ಸಂತಾನದ ಉದ್ದಾರಕೆಂದು ಹೆಚ್ಚೇ ಆಮಿಷಕ್ಕೆ ಒಳಗಾಗಿ ಕೈಲಾಗಷ್ಟು ವ್ಯವಹಾರ ಮಾಡಿ ಶಾರ್ಟ್ ಕಟ್ ನಲ್ಲಿ ಬೇಗ ಹಣಗಳಿಸ ಹೋಗಿ ಎಡವಟ್ಟು ಮಾಡಿಕೊಂಡರು. ಅದನ್ನು ಸರಿಮಾಡಿಕೊಳ್ಳ ನಮ್ಮಮ್ಮನಂತ ಎಷ್ಟು ಅಮ್ಮಂದಿರ ಹಣಕ್ಕೆ ಟೊಪ್ಪಿ ಹಾಕಿಬಿಟ್ಟರು. ಅಮ್ಮನಿಗೆ ಬಹಳಾನೇ ನೋವಾಗಿತ್ತಾದರೂ, ಅವರ ಪರಿಸ್ಥಿತಿ ಅರ್ಥಮಾಡಿಕೊಂಡು ಕ್ಷಮಿಸಿದರು. ತಾನೇ ತಪ್ಪುಮಾಡಿದೆನೇ ಎಂದು ಅತ್ತರು. ಆದರೆ ಅವರು ಈಗಲೂ ನಮ್ಮಮ್ಮನ  ಹಣ ಹಿಂತಿರುಗಿಸಲು ತಯಾರಿಲ್ಲ. ತನ್ನ ಸಂತಾನವನ್ನು ಉದ್ಧರಿಸಿರುವಳು. ಎಲ್ಲರೂ ಸಮಾಜದಲ್ಲಿ ಒಳ್ಳೆ ಸ್ನಾನಮಾನದಲ್ಲಿದಾರೆ. ಅವರಿಗೆ ಸರ್ಕಾರದಿಂದ ಪೆನ್ಷನ್ ಸಹ ಬರುತ್ತದೆ. ಯಾಕೆ ಜನರು ನಂಬಿಕೆಯ ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಶಾಶ್ವತ! ನನಗೆ ಈಗಲೂ ನೆನಪಿದೆ. ಅಮ್ಮನ ಬಳಿ ಸೀರೆ ಜಿಗ್ಝಗ್ ಮಾಡಿಸಲು ಕೇವಲ ೩ ರೂಪಾಯಿ ಇದ್ದಿತು. ಬಂದವರು ಅದರಲ್ಲಿ ಡಿಸ್ಕೌಂಟ್ ಕೇಳುತ್ತಿದ್ದರು. ೩ ರುಪಾಯಿಗೆ ಕೆಲಸ ಮಾಡಿ ಹಣ ಒಟ್ಟು ಹಾಕಿದಲ್ಲೂ. ೧೦೦ ಹಪ್ಪಳಕ್ಕೆ ೧೦-೨೫ ದು ರು. ಗಳು. ಮನೆಗೆ ಹೊಡೆದ ಹಪ್ಪಳ, ಮಾರುವುದಕ್ಕೆ ಸರಿಯಾದ ಹಪ್ಪಳ. ಹನಿ ಹನಿ ಸೇರಿ ಕೊಳ್ಳ, ಕೊಳ್ಳಗಳು ಸೇರಿ ನದಿ, ನದಿಗಳು ಸೇರಿ ಸಮುದ್ರ ಎಂಬ ಮಾತು ಅವಳನೋಡಿದಾಗ ಸತ್ಯವೆನಿಸುತ್ತದೆ. ಅವಳಿಗಾದ ಅನ್ಯಾಯ ನೆನೆಸಿಕೊಂಡರೆ ಭಯಂಕರದ ದುಃಖ್ಖವಾಗುತ್ತದೆ. ಅವಳು ಕಳೆದುಕೊಂಡಷ್ಟು ಹಣ ಈಗ ಕೇವಲ ಒಂದು ತಿಂಗಳಿನಲ್ಲಿ ನಾವೆಲ್ಲ ದುಡಿಯುತ್ತಿರಬಹುದಾದರೂ, ಅವಳ ಆ ಹಣ ಅವಳ ಜೀವನದ ಒಂದು ಸತ್ಯವಾಗಿತ್ತು. ಅವಳ ಎಷ್ಟೋ ವರ್ಷಗಳ ತಪ್ಪಸಾಗಿದ್ದಿತು. ಅವಳ ಜೀವನದ ಎಷ್ಟೋ ಕ್ಶಣಗಳಾಗಿತ್ತು, ಎಷ್ಟೋ ತ್ಯಾಗಗಳಾಗಿತ್ತು, ಎಷ್ಟೋ ಕನಸುಗಳಾಗಿತ್ತು. ಅದಕ್ಕೆ ಬೆಲೆ ಇಲ್ಲ. ಅವಳನಿರ್ಧಾರಗಳೇ ಅವಳಿಗೆ ಖುಷಿ ಕೊಟ್ಟಿದ್ದು ಹಾಗು ದುಃಖ. 

ಮೋಹ ಪಾಶದ ಬಲೆಗೆ ಸಿಲುಕಿರುವ ನಾವುಗಳು ಸುಖ ದುಃಖ್ಖಗಳಿಂದ ಮುಕ್ತವಾಗಿ ಸಂಪೂರ್ಣ ಶಂತತೆ ಪಡೆಯಲು ಎಂದಿಗೂ ಸಾಧ್ಯವಿಲ್ಲ. ಇಲ್ಲಿ ಯಾರದ್ದು/ಯಾವುದು ತಪ್ಪಿ, ಸರಿ ಇಲ್ಲ. ಎಲ್ಲವೂ ಒಂದು ಮಾಯಾಜಾಲ. ತರ್ಕಕ್ಕೆ ಸಿಲುಕದ್ದು. 













Friday, 8 January 2021

ಮೂಗು ಬೊಟ್ಟು

ಆರ್ಥಿಕತೆ ಸ್ವಾತಂತ್ರ್ಯ (Financial independence) ಎಂಬುದು ಪ್ರತಿಯೊಂದು ಮನುಷ್ಯನಿಗೆ ಎಷ್ಟು ಅಗತ್ಯ? ನಿಮಗೆ ಕೆಲವು ಸಣ್ಣ ಸಣ್ಣ ಉಧಾರಣೆಗಳನ್ನು ಕೊಡುತ್ತೇನೆ. 

ನಾನೊಂದು ಮೂಗು ಬೊಟ್ಟು ತೆಗೆದುಕೊಳ್ಳಬೇಕೆಂದು ಕಳೆದ ೮ ವರ್ಷಗಳಿಂದ ಬಯಸಿದ್ದೇನೆ. ಆದರೆ ಈ ವರೆಗೂ ತೆಗುದುಕೊಳ್ಳಲಾಗಿಲ್ಲ. ೮ ವರ್ಷಗಳ ಹಿಂದೆ ೧೦೦೦ ರು. ಗೆ ಸಿಯುತ್ತಿತ್ತೇನೋ. ಈಗ ೧೦೦೦೦ ರು. ಆದರೂ ಬೇಕು. ನೋಡುವವರಿಗೆ ನಾನು ಬಡವಳಲ್ಲ. ತಕ್ಕಮಟ್ಟಿಗೆ ಹಣವುಳ್ಳವಳೇ. ೨೦೧೫-೧೮ ವರೆಗೆ ಸಣ್ಣ ಸಣ್ಣ ಉದ್ಯೋಗಳನ್ನುಮಾಡಿದ್ದೇನೆ. ಮನೆಗೆಂದು ಒಂದಷ್ಟು ಹಣವನ್ನು ಕೊಟ್ಟಿದ್ದೇನೆ. ಆದರೆ ನನಗೆ ಸಾಕಾಗುವಷ್ಟು ಅಂದರೆ ಮೂಲಭೂತವಾದ/ ದಿನ ನಿತ್ಯದ ಖರ್ಚು ವೆಚ್ಚಗಳ ಹೊರತಾಗಿ ಬೇರೇನೂ ನಿಭಾಯಿಸಲು ಸಾಧ್ಯವಾಗಿಲ್ಲ. ನನ್ನ ಮದುವೆ ಸಮಯದಲೊಂದಷ್ಟು ಕೂಡಿಟ್ಟ ಹಣವನ್ನು ಆಡಂಬರಕ್ಕಾಗಿ ಖರ್ಚು ಮಾಡಿದ್ದೂ ಹೊರತಾಗಿ ಬೇರೆ ಏನು ಮಾಡಿಲ್ಲ. ೮ ವರ್ಷಗ ಹಿಂದೆ ಒಮ್ಮೆ ಅಮ್ಮನ ಬಳಿ ನನಗೆ ಮೂಗು ಬೊಟ್ಟು ಬೇಕೆಂದಿದ್ದೆ. ನನ್ನ ಬಳಿ ಇರುವ ಎಲ್ಲಾ ಒಡವೆಯನ್ನು ಅಮ್ಮನೇ ಕೊಡಿಸಿದ್ದಾದರೂ ಯಾಕೋ ಇಷ್ಟು ಚಿಕ್ಕ ಮೂಗುಬೊಟ್ಟು ಕೊಡಿಸಲು ಅಂದು ಅವಳು ಮನಸು ಮಾಡಿರಲಿಲ್ಲ. ಅದಾದ ನಂತರ ಯಾವತ್ತೂ ಅದರ ಬಗ್ಗೆ ಅವಳಲ್ಲಿ ಪ್ರಸ್ತಾಪಿಸಲಿಲ್ಲ. ಮದುವೆ ಆದ ಮೇಲೆ ನನ್ನ ಗಂಡನ ಬಳಿ ಒಂದು ೪-೫ ಸಲ ಹೇಳಿದ್ದೆ ಏನು ಬೇಕು ಅಂತ ಕೇಳಿದಾಗಲೆಲ್ಲ!!! ಅವರು ಯಾಕೋ ಇನ್ನು ಮನಸೇ ಮಾಡಿಲ್ಲ ಕೊಡಿಸೋದಕ್ಕೆ!!! ಪಿಹೆಚ್.ಡಿ . ಡಿಫೆನ್ಸ್ ಆದನಂತರ ನನ್ನ ಸ್ನೇಹಿತರಿಗೆ ಹಾಗು ಡೆಪಾರ್ಮೆಂಟ್ ಮಂದಿಗೆ ಊಟ ಕೊಡಿಸಬೇಕೆಂದು, ಥೀಸಿಸ್ ಪ್ರಿಂಟ್ ಮಾಡಿಸಲೆಂದು ಹಾಗು ಒಂದು ಕ್ಯಾಮೆರಾ ತೆಗುದು ಕೊಳ್ಳಬೇಕೆಂದು  ಒಂದಷ್ಟು ಸಣ್ಣ ಮಟ್ಟಿನ ಹಣ ಕೂಡಿಟ್ಟಿದು ಹಾಗೆ ಇದೆ. ಆದರೂ ಅದನ್ನು ಮೂಗು ಬೊಟ್ಟು ತೆಗೆದು ಕೊಳ್ಳಲು ಬಳಸಿಲ್ಲ!! ಹೇಳಿಕೊಳ್ಳಲು ನಮ್ಮ ಮೂವರಿಗೂ  ಮೂಗು ಬೊಟ್ಟಿಗೆ ತೆಗೆದು ಕೊಳ್ಳುವುದು ಒಂದು ದೊಡ್ಡ ವಿಷಯವೇ ಅಲ್ಲ. ಆದರೂ ತೆಗೆದು ಕೊಳ್ಳಲಾಗುತ್ತಿಲ್ಲ. ಹಣಕಾಸಿನ ವ್ಯವಹಾರ ಗೌಪ್ಯವಾಗಿರಬೇಕು ಹೌದು ಆದರೆ ನಾನಿಲ್ಲಿ ಇಷ್ಟು ವಿವರಣೆ ಕೊಟ್ಟಿದ್ದು ಕೇವಲ ಫೈನಾನ್ಸಿಯಲ್ ಇಂಡಿಪೆಂಡೆನ್ಸ್ ಎಷ್ಟು ಮುಖ್ಯ ಎಂದು ಹೇಳಲು. 

ನಾ ಹೇಳುವುದಿಷ್ಟೇ, ಕಳೆದುಹೋದ ಸಮಯ ಕಳೆದು ಹೋಯಿತು. ಎಷ್ಟೇ ಹುಡುಕಿದರು ಮತ್ತೆ ಸಿಗದು. ಅವರವರ ಬಾಯಿಗೆ ಅವರವರ ಕೈ. ಆದಷ್ಟು ದುಡಿಯೋಣ. ನಾವು ಬೆಳೆಯೋಣ, ನಮ್ಮವರನ್ನು ಬೆಳೆಸೋಣ.  ಕೆಲಸಗಳಲ್ಲಿ ಸಣ್ಣದು ದೊಡ್ಡದು ಎಂಬ ಭೇದ ಬೇಡ. ಏನು ಇಲ್ಲ ಎಂಬುದಕ್ಕಿಂತ ಏನೋ ಸ್ವಲ್ಪವಾದರೂ ಇದೆ ಎಂಬುದು ನೆಮ್ಮದಿ ತರುತ್ತದೆ.!