Tuesday, 19 November 2019

ಪ್ರಕ್ಷುಬ್ಧ

ಭಾರತೀಯ ಮಧ್ಯಮ ವರ್ಗದ ಹೆಣ್ಣು ಮಗಳಾಗಿ ಹುಟ್ಟಿ, ಸಂಶೋಧನಾ ವಿದ್ಯಾರ್ಥಿನಿಯಾಗಿ,  ವಿದ್ಯಾರ್ಥಿವೇತನವಿಲ್ಲದೆ ಹಾಗು ಯಾವುದೇ ಕೆಲಸಕ್ಕೂ ಹೋಗದೆ, ಇನ್ನೇನು ಈ ವರ್ಷದಿಂದ ಪ್ರೌಢಪ್ರಬಂಧ ಬರೆಯಬೇಕೆಂದಿರುವಾಗ, ಮದುವೆ ಮಾಡಿಕೊಂಡು, ಅತ್ತ ಹೊಸಜೀವನದ  ಸಿಹಿ ಅನುಭವಿಸುವ ಪುಣ್ಯವು ಇಲ್ಲದೆ, ಬೇಗ ಬೇಗ ಸಂಶೋಧನಾ ಕೆಲಸವನ್ನು ಮುಗಿಸಲಾರದೆ, ಸಂಶೋಧನಾ ಕೆಲಸದ ಒತ್ತಡದ ನಡುವೆ ಸಂಸಾರದ ಹೊಣೆ, ಜವಾಬ್ಧಾರಿ ಹೊರೆ ಹೊತ್ತು, ಜೀವನದ  ಜಂಜಾಟದಲ್ಲಿ ಸಿಕ್ಕಿ ವಿಲವಿಲನೆ ಒದ್ದಾಡಿ ಬೇಸತ್ತು, ದಿನದ ಅಂತಿಮ ಸಮಯವನ್ನಾದರೂ ನೆಮ್ಮದಿಯಿಂದ ಕಳೆಯೋಣವೆಂದರೆ, ಈಗಷ್ಟೇ ಹೊಸ ನೌಕರಿಗೆ ಸೇರಿರುವ ನನ್ನ ಗಂಡ ಟೆಕ್ಕಿ, ತನ್ನ ಕೆಲಸದಲ್ಲಿ ಎಷ್ಟು ವ್ಯಸ್ಥನೆಂದರೆ ಅಯ್ಯೋ ರಾಮಾ!!! ಒಂದು ಕ್ಷಣಕ್ಕೆ ಅನ್ನಿಸುತ್ತದೆ ಯಾರಿಗೆ ಬೇಕಿತ್ತು ಇಷ್ಟೆಲ್ಲಾ ಒದ್ದಾಟ. ಇತ್ತೀಚೆಗೆ ಎಷ್ಟು ಪ್ರಕ್ಷುಬ್ಧಳಾಗಿದ್ದೇನೆಂದರೆ ನನ್ನವನು ಮಾಡುವ ತುಂಟ ತರಲೆಗಳು ನನಗೆ ಅವನು ನನ್ನ ಅಣುಕಿಸುತ್ತಿದ್ದನೋನೆಂದನಿಸಿಬಿಡುತ್ತದೆ. ಪ್ರೀತಿ, ಮಮತೆಯ ಅಭಾವ, ಕೆಲಸದ ಕಿರಿಕಿರಿ, ಇವೆಲ್ಲವೂ ಒಬ್ಬ ಸಂಶೋಧನಾ ವಿದ್ಯಾರ್ಥಿಯನ್ನು ಎಷ್ಟರಮಟ್ಟಿಗೆ ಪಾತಾಳಕ್ಕೆ ತಳ್ಳುತ್ತದೆಂದರೆ ಅಲ್ಲಿಂದ ಹೊರಬರಲು ದಾರಿಯೇ ಕಾಣದಂತಾಗುತ್ತೆ. ಇದರಿಂದ ಎಷ್ಟು ಬೇಗ ಹೊರ ನಡೆಯುವೆವೋ ಎಂದನಿಸಿ ಬಿಡುತ್ತದೆ.  ಕ್ಷಣ ತಪ್ಪಿಗೆ ಯುಗ ಸಂಕಟ ಎಂಬಂತೆ, ಇಷ್ಟಪಟ್ಟು ಸೇರಿದ ಕೆಲಸ ಹುರುಳಾಗಿ ಕಷ್ಟ ಕೊಡುತ್ತಿದೆ. ಇದೆಲ್ಲಾ ಸಮಸ್ಯೆಗಳಿಗೂ ಸಮಾಧಾನ ತಿಳಿದ್ದಿದರು ಅಳವಡಿಸಿಕೊಳ್ಳೋ ಬಹಳಾನೇ ಹಿಂಸೆಯಾಗುತ್ತಿದೆ. ನಮ್ಮಿ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಒಂದು ಸಾಮಾನ್ಯ ವ್ಯಕ್ತಿಗೆ ಅಷ್ಟು ಸುಲಭದ ಮಾತ್ತಲ್ಲ. 

Sunday, 10 November 2019

ಮುಂದಿನ ಭಾನುವಾರ

ದಿನಗಳನ್ನು ಎಣಿಸುವ ಚಟವೇನು ನನಗಿಲ್ಲ. ಅದ್ಯಾಕೋ ಇಂದು ಸುಮ್ಮನೆ ಕುಳಿತಿರುವಾಗ, ನನ್ನ ಕೃಷ್ಣನ ಜೊತೆಯಲ್ಲಿ ಶುರುವಾದ ಈ ನನ್ನ ಪಯಣವ ಹಿಂತುರುಗಿ ನೋಡಿದೇ.. ಅರೇ ಮುಂದಿನ ಭಾನುವಾರಕ್ಕೆ ೨೦೦ ದಿನಗಳು ಕೆಳದವು ನಮ್ಮಿ ಪಯಣಕೆ!!!!! ಅದುಯೆಲ್ಲಿ, ಹೇಗೆ ಕಳೆದು ಹೋಯಿತೋ ಈ ೨೦೦ ದಿನಗಳು???  ಹುಡುಕಿತರುವುದಾದರೂ ಯೆಲ್ಲಿಂದ? ನೆನಪಿನ ಬುಟ್ಟಿಯೆಲ್ಲ ಬರಿ ಕಾಲಿ ಕಾಲಿ!! ನಿನ್ನೆಯಷ್ಟೇ ಹಸೆಮಣೆ ಏರಿದ ಹಾಗನಿಸುತ್ತದೆ. ನನ್ನ ಕೃಷ್ಣನನನ್ನು ನೋಡಿದಾಗ ಇಂದಿಗೂ, ಈ ಕ್ಷಣವೂ ಆಶರ್ಯವೆನಿಸುತ್ತದೆ, ಅದು ಹೇಗೆ ಈ ನನ್ನ ಮುದ್ದು ನನ್ನವನಾದನೆಂದು?? ಸಮಯ ಕಳೆದಂತೆ ಪರಿಪಕ್ವವಾಗುತ್ತಿರುವ ಈ ಸಂಭಂದ, ನಶ್ವರದ ಬದುಕಿನ ಶಾಶ್ವತ ಬೆಸುಗೆ. ಕಳೆದ ದಿನಗಳ್ಳಲ್ಲಿ ಇದ್ದ ಎಷ್ಟೋ ಯೋಚನೆಗಳು ಬದಲಾಗಿವೆ. ಇನ್ನೊಂದಷ್ಟು ಯೋಚನೆಗಳು ಸರಿಯಾದ ಪತ ತುಳಿದಿವೆ. ನೆನ್ನೆ ನೆನ್ನೆ ವರೆಗೂ ಅದು ಹೇಗೋ ಅನಿಸುತ್ತಿದೆ ಕೃಷ್ಣನಿಂದು ಬೇರೆಯೇ ರೀತಿ ಕಾಣಿಸುತ್ತಿದಾನೆ. ನನ್ನವ್ವನಿವನೆಂಬ ಗರ್ವ ದಿನೇ ದಿನೇ ಹೆಚ್ಚುತ್ತಲೇ ಇದೆ.    

Void

ಅನಿಸಿದ್ದನ್ನೆಲ್ಲಾ ಒಮ್ಮೆ ಗೀಚಿ ಹಗುರಾಗಬೇಕೆನಿಸಿತು.
ಅನಿಸಿದ್ದನ್ನೆಲ್ಲಾ ಚೀರಿ ಬಂದ ಮುಕ್ತಳಾಗಬೇಕೆನಿಸಿತು.
ಆದರೆ ನನಗೆ ಅನಿಸುತ್ತಿರುವುದಾದರೂ ಏನು?

ದೊಡ್ಡದೊಂದು ಕಂದಕ.
ಎಂದಿಗೂ ತುಂಬಲಾರದ ದೊಡ್ಡದೊಂದು ಕಂದಕ.

ಭಾವನೆಯೇ ಇಲ್ಲದ ಭಾವನೆಯ
ಗೀಚುವುದಾದರೂ ಹೇಗೆ ?
ಚೀರುವುದಾದರೂ ಹೇಗೆ ?