ಸುಮ್ಮನೆ ಹೀಗೊಂದು ಕಥೆ.
ಅಂದು ಅದೆಲ್ಲೋ ಓದಿದ್ದ ಒಂದು ಸಣ್ಣ ಲೇಖನ ಇಂದೀಗ ಯಾಕೋ ಬಹಳಾನೇ ನೆನಪಾಗುತ್ತಿದೆ. ಆ ಲೇಖನದ ಸಾರಾಂಶ ಹೀಗಿದೆ, "ಒಂದು ಹೆಣ್ಣು ಮಗಳು ಏನನ್ನೋ ತನ್ನಿನಿಯನ ಬಳಿ ಹೇಳಬೇಕೆಂದು ಆತುರಾತುರದಲ್ಲಿ ಖುಷಿಯಿಂದ ಅವನ ಬಳಿಗೆ ಹೋಗುತ್ತಲ್ಲೇ. ಏನ ಹೇಳ ಬಯಸಿಹಳು ಇವಳುಯೆಂದು ಸ್ವಲ್ಪವೂ ಲೆಕ್ಕಿಸದ ಅವನು ಒಂದು ಅರೆಗಳಿಗೆಯೂ ಅವಳಿಗಾಗಿನೀಡುವುದಿಲ್ಲ. ಆಗ ಅಲ್ಲಿ ನಡೆದದ್ದು ಅವಳ ಭಾವನೆಗಳ ಕಗ್ಗೊಲೆ."
ಇಲ್ಲಿ ತಪ್ಪು ಯಾರದ್ದು ಯೆಂದು ಹೇಳಲಾಗುವುದಿಲ್ಲ. ಯಾವುದೋ ಚಿಂತೆಯಲ್ಲಿದ ಅವನಿಗೆ ಅವಳ ಭಾವನೆಗಳು ಅರ್ಥವಾಗದೇ ಉಳಿದವು. ಅವನು ಸ್ವಲ್ಪೇಸ್ವಲ್ಪ ತಾಳ್ಮೆ ಕಾದಿರಿಸಿದ್ದರೆ, ಸ್ವಲ್ಪೇಸ್ವಲ್ಪ ಅವಳಿಗಾಗಿ ಸಮಯ ಕೊಟ್ಟಿದಾರೆ ಆಕೆ ಎಷ್ಟೊಂದು ಸಂತೋಷದಿಂದಿರುತ್ತಿದ್ದಳು.
ಈ ರೀತಿಯ ಎಷ್ಟೋ ಘಟನೆಗಳನ್ನು ನಾನು ನನ್ನ ಆತ್ಮೀಯರ ನಡುವೆ ನಡಿಯುತ್ತಿರುವುದನ್ನು ಗಮನಿಸಿದ್ದೇನೆ. ಉದಾಹರಣೆಗೆ ನನ್ನ ಪ್ರಾಣ ಸ್ನೇಹಿತೆ ಯಾವಾಗಲು ಅವಳ ಹುಡುಗನೊಂದಿಗೆ ಮುನಿಸಿಕೊಳ್ಳಲ್ಲು ಕಾರಣವೇ ಸಣ್ಣ ಸಣ್ಣ ವಿಷಯಗಳಾಗಿರುತ್ತವೆ. ಅವಳು ಖುಷಿಯಿಂದ ಅಥವಾ ದುಃಖ್ಖದಿಂದ ಏನ್ನನ್ನೋ ಹೇಳ ಹೋದಾಗಲೇ ಅದನ್ನು ಕೇಳಲು ಸಮಯವಾಗಲಿ, ಸಂಯಮವಾಗಲಿ ಅವನಿಗಿರುವುದಿಲ್ಲ. ಕೆಲಸದ ಜಂಜಾಟದಲ್ಲಿ ಸಿಲುಕಿ ಸುಸ್ತಾಗಿ ಅವನು ಮನೆಗೆ ಬಂದಿರಬಹುದು. ಅವನಿಗಿರುವ ಎಲ್ಲಾ ಕಷ್ಟ, ತಲೆ ಬಿಸಿಗಳ ಪರಿಚಯ ಅವಳಿಗೂ ಇರಬಹುದು. ಆದರೆ ದಿನಪೂರ್ತಿ ಅವನಿಗಾಗಿ ಎದುರುನೋಡುವ ಅವಳ ಕಷ್ಟದ ಅನುಭವ ಅವನಿಗೆ ಆಗಲೇ ಇಲ್ಲ. ಅವನಿಗಾಗಿ ಸಾವಿರ ಸಲ ಖುಷಿಯಿಂದ ಸೋಲುವ ಅವಳಿಗಾಗಿ ಆಗೊಮ್ಮೆ ಈಗೊಮ್ಮೆಯಾದರು ಒಮ್ಮೆ ಅವನು ಸೋಲಬಾರದೇ? ಆ ಸೋಲು ಯೆಂದಿಗೂ ಸೋಲಲ್ಲ. ಅದು ಅವರ ಸಂಬಂಧದ ಗೆಲುವು. ಇದು ಕೇವಲ ಹುಡಿಗೀಯರ ಸಮಸ್ಯೆ ಅಲ್ಲ. ಕೆಲವೊಮ್ಮೆ ಇಂತ ತಪ್ಪು ಸೂಕ್ಷ್ಮ ಜೀವಿಗಳಾದ ಹೆಣ್ಣು ಮಕ್ಕಳ ಕಡೆಯಿಂದಲೂ ನಡೆದು ಹೋಗುತ್ತದೆ. ಆದರ್ಶ ದಂಪತಿಗಳಂತಿರು ನನ್ನ ಅಪ್ಪ ಅಮ್ಮ ಕೆಲವೊಮ್ಮೆ ತಮಗೆ ತಾವೇ ನೋವು ಕೊಟ್ಟು ಕೊಳ್ಳುವುದುಂಟು. ಅಪ್ಪ ಯಾವುದೇ ಭಾವನೆಗಳನ್ನು ಅಷ್ಟು ಸುಲಭವಾಗಿ ಬಾಯಿ ಬಿಟ್ಟು ಹೇಳುವುದಿಲ್ಲ. ಅವರ ಪ್ರತಿಯೊಂದು ನಡುವಳಿಕೆಯಲ್ಲಿ ಯಾವುದಾದರು ಒಂದು ಒಳ್ಳೆಯ ಉದ್ದೇಶವೇ ಇರುತ್ತದೆ. ನನ್ನ ಅಮ್ಮನು ಹಾಗೆಯೇ. ಆದರೆ ಕೆಲವೊಮ್ಮೆ ಅವರಿಬ್ಬ ಮೌನ ಒಬ್ಬರಿಗೊಬ್ಬರಿಗೆ ಸರಿಯಾಗಿ ಅರ್ಥವೇ ಆಗಿರುವುದಿಲ್ಲ. ಇಲ್ಲಿ ತಪ್ಪು ಯಾರದ್ದು?????
ಮೊದಲ ಬಾರಿ ನಾನಿಂದು ನನ್ನವರಿಗೆ ನೋವು ನೀಡಿದೆ. ಬೇಕಂತಲೇ ನೀಡಿದೆ ಅಂದೆನಿಸುತ್ತಿದೆ . ಗೊತ್ತಿದ್ದೂ ಗೊತ್ತಿದ್ದೂ. ಕೆಲವೊಮ್ಮೆ ಬಹಳಾನೇ ಮೊಂಡು ನಾನು. ಸೂಕ್ಷ್ಮಗಳು ಅರ್ಥವಾದರೂ, ಅರ್ಥಮಾಡಿಕ್ಕೊಳ್ಳಲು ಅದನ್ನು ಒಪ್ಪಿಕೊಳ್ಳಲ್ಲು ತಯಾರಿರುವುದಿಲ್ಲ. ಬೇಕಂತಲೇ ಹಠ ಮಾಡಿಬಿಡುತ್ತೇನೆ. (ಇದು ಎಷ್ಟರಮಟ್ಟಿ ಸರಿ ಎಂಬುದರ ಬಗ್ಗೆ ನನಗೆ ಚಿಂತೆಯಿಲ್ಲ. ಏಕೆಂದರೆ ಸರಿ ತಪ್ಪುಗಳೆಂದು ಯಾವುದು ಇರುವುದಿಲ್ಲ. ಅದು ನಮ್ಮ ನಮ್ಮ ಯೋಚನೆಗಳಲ್ಲಿರುತ್ತದೆಯೆಂದು ಅಪ್ಪ ಯಾವಾಗಲು ಹೇಳುವುದುಂಟು. ಅದನ್ನು ನಾನು ಒಪ್ಪಿದ್ದು ಉಂಟು. ) ಈರೀತಿ ಈ ಮೊದಲು ಎಷ್ಟೋ ಸರಿ ಅಮ್ಮನೊಂದಿಗೆ, ಶ್ರುತಿಯೊಂದಿಗೆ, ಹರ್ಷಾಳೊಂದಿಗೆ ನಡೆದು ಕೊಂಡಿದ್ದೇನೆ. ಬೇಕಂತಲೇ ಅವರಿಗೆ ನೋವು ಮಾಡಿದ್ದೇನೆ. ಇದಕ್ಕೆ ಕಾರಣ ಅವರ ಮೇಲಿರುವ ಅಪಾರವಾದ ಪ್ರೀತಿ. ಹೇಳಲಸಾಧ್ಯವಾದ ನಂಬಿಕೆ, ಮಮತೆ. ಅರಿಯದ ಭಾವನೆಗಳು.
ನನ್ನವನು ಕೇವಲ ನನ್ನವನಲ್ಲ. ಅವನೇ ನಾನಗಿರುವೆ. ಇಂತಹದರಲ್ಲಿ ಅವರಿಗೆ ನಾಕೊಟ್ಟ ಕಾಟ ಅವರಿಗಿಂತ ಹೆಚ್ಚು ಬೇನೆ ನನಗೆ ನೀಡಿದೆ. ಆದರೂ ನನಗೆ ಮೊಂಡುತನವಿನ್ನೂ ಕಮ್ಮಿಯಾಗುತ್ತಿಲ್ಲ. ಅವರೇ ಬಂದು ಮಾತನಾಡಲಿಯೆಂಬ ಹುಚ್ಚು ಹಟ ಮೂಡುತಿದೆ. ಹೃದಯವು ಎಷ್ಟರಮಟ್ಟಿಗೆ ನೋವನನುಭವಿಸುತಿದ್ದೆಯೆಂದರೆ ಚೀರಿ ಚೀರಿ ಜೋರಾಗಿಯೊಮ್ಮೆ ಅತ್ತುಬಿಡಬೇಕೆನಿಸುತ್ತಿದ್ದೆ.