ದುಃಖ್ಖವೆಂದರೇನು?
ಸುಖವೆಂದರೇನು?
ಈ ಜೀವನದ ಉದ್ದೇಶ?
....
ಜನಸಾಮಾನ್ಯರಿಗೆ ಕಾಡುವ ಪ್ರೆಶ್ನೆಯಲ್ಲವೇ,
ನಾನು ಒಬ್ಬಳು ಸಾಮಾನ್ಯ ಜನವೇ ಅಲ್ಲವೇ.
***********************************************
ಇದ್ದಕ್ಕಿದಂತ್ತೆ ಮಧ್ಯರಾತ್ರಿಯಲ್ಲಿ ಇಲ್ಲದ ಸಲ್ಲದ ಪ್ರಶ್ನೆಗಳು ಕಾಡತೊಡಗಿದವು.
ನಾನು ಮಾಡುತ್ತಿರುವುದು ತಪ್ಪೆನಿಸಿತ್ತು. ಮರುಕ್ಷಣವೇ ಇಲ್ಲಾ ಇದು ತಪ್ಪಲ್ಲ ಅನಿಸಿತ್ತು. ಹಾಗಂತ ಸರಿ ಮಾಡುತಿದ್ದೇನೆಂದಲ್ಲ.
ಈ ಸರಿ ತಪ್ಪುಗಳು ಯೆಂದರೇನು? ಅದನ್ನು ಬಣ್ಣಿಸುವುದು ಹೇಗೆ?
***********************************************
ನನ್ನಪ್ಪ ಯೇನಾದರೂ ನನಗೆ ಬುದ್ಧಿಮಾತು ಹೇಳುವಾಗ;
"ಹೋಗಪ್ಪ ಯಾಕೆ ಸುಮ್ಮನೆ ಬೈಯುತ್ತೀರಿ" - ನಾನು
"ನೀನು ಖುಷಿಯಾಗಿರಲಿ ಅನ್ನೋದೊಂದೇ ನನ್ನ ಉದ್ದೇಶ, ನಾನು ಕೇವಲ ನಿನಗೆ ಹಾಗೆ ಮಾಡು ಹೀಗೆ ಮಾಡು ಯೆಂದು ಹೇಳಿಕೊಡೋಬಹುದೇ ವಿನಃ, ಹಾಗೆ ಮಾಡುವುದು ಬಿಡುವುದು ನಿನಗೆ ಬಿಟ್ಟಿದ್ದು. ನನಗೊಳ್ಳೇದು ಅನಿಸಿದ ದಾರಿ ತೋರಿಸುವುದಷ್ಟೇ ನನ್ನ ಕೆಲಸ, ದಾರಿಯಲ್ಲಿ ಸಾಗಬೇಕಾಗಿರುವು ನೀನೆ, ಯಾವದಾರಿಯಲ್ಲಿ ಹೋಗಬೇಕೆಂದು ನಿರ್ದರಿಸಬೇಕಾಗಿರುವುದು ನೀನೆ. ನಿನ್ನ ದಾರಿಯನ್ನು ನೀನೆ ಕಂಡುಕೊಳ್ಳಬೇಕು." - ಅಪ್ಪ
"ಹಾಗಾದರೆ ನಾನು ನನ್ನ ದಾರಿ ಕಂಡುಕೊಳ್ಳುತ್ತೆನೆಂದು ತಪ್ಪುದಾರಿಯನ್ನು ಆಯ್ದುಕೊಂಡರೆ ನಿಮಗೆ ಬೇಜಾರಾಗುವುದಿಲ್ಲವೇ? ನನ್ನನ್ನು ತಪ್ಪು ಮಾಡಲು ಬಿಟ್ಟುಬಿಡುತ್ತಿರೆ? ಇಷ್ಟು ಕಷ್ಟದ ಜವಾಬ್ದಾರಿಯನ್ನು ನನ್ನ ಮೇಲೆಯೇ ಏರಿಬಿಡುತ್ತೀರಾ?" - ನಾನು
ಹೌದು ಬೇಜಾರಾಗುತ್ತೆ ನಿಜ, ಹಾಗಂತ ನಾನು ಸುಮ್ಮನೆ ಕೂರಲಾರೆ, ಕೈಲದಷ್ಟು ತಿಳಿಹೇಳ ಪ್ರಯತ್ನಿಸುತ್ತೇನೆ, ನಂತರವೂ ತಿಳಿಯದಿದ್ದರೆ, ಅದು ನಿನ್ನ ಅನಿವಾರ್ಯ ಕರ್ಮಾವೆಂದು ಸುಮ್ಮನಾಗುತ್ತೇನೆ. ಜೀವನದ ಕಾಟು ಸತ್ಯ ಇದುವೇ ಮಗಳೇ. ಅವರವರ ಬಾಯಿಗೆ, ಅವರವರ ಕೈ. ಯಾರಿಗೆ ಯಾರು ಇಲ್ಲ. ಎಲ್ಲರೂ ತಮ್ಮ ನೆಲಗಟ್ಟಿ ಮಾಡಲು ಮೊದಲು ಪ್ರಯತ್ನಿಸುತ್ತಾರೆ." - ಅಪ್ಪ.
*******************************************************
3 A.M.
ರಾತ್ರಿ ನೆಲದ ಮೇಲೆ ಕುಳಿತುಕೊಂಡಿರುವಾಗ , ಈ ಹಿಂದೆ ನನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳೊಂದಷ್ಟು, ಸಿಹಿ ಘಟನಗಲೊಂದಷ್ಟು ನೆನಪಿನ ಬುತ್ತಿಯಿಂದ ಹೊರಬಂದು ಹಾಗೇ ಕಣ್ಣ ಮುಂದೆ ಹರಿದಾಡಿದವು.
ಆಶ್ಚರ್ಯವೆಂದರೆ ಕಣ್ಣಂಚಲಿ ಸ್ವಲ್ಪವು ಪಸೆಯಿರಲಿಲ್ಲ, ತುಟಿಯಂಚಲಿ ನಗು!!
ಭಾವನೆಗಳೆಲ್ಲ ಬರದಡವೇ ಎಂದನಿಸ ತೊಡಗಿತು.
ಆಗ ಮನಸ್ಸಿನಾಳದಿಂದ ಮಾತ್ತೊಂದು ಕೇಳಿಸಿತು,
ಅಯ್ಯೋ ಮರುಳೆ, ಸಮಯ ೩ ಆಯ್ತು. ಅದಕ್ಕೆ ನಿನಗೆ ಅರಳು ಮರಳು ಶುರುವಾಯ್ತು.
ಸುಮ್ಮನೆ ಹಾಸಿಗೆಯಲ್ಲಿ ಬಿದ್ದುಕೋ. ನಾಳೆ ಬೆಳಗ್ಗೆ ಎದ್ದಾಗ ಎಲ್ಲವೂ ಮತ್ತೆ ಬರುತ್ತದೆ (ಐ ಮೀನ್ ಭಾವನೆಗಳು).
*********************************************
ಪ್ರತೀದಿನವು ಒಂದು ಹೊಸ ದಿನಾ.
ಪ್ರತಿ ಅಂತ್ಯಕ್ಕಿಲ್ಲಿ ಒಂದು ಆದಿ.
ಪ್ರತಿ ನೋವಿಗೊಂದು ನಲಿವು,
ಪ್ರತಿ ಕಾಯಿಲೆಗೊಂದು ಔಷದ.
ಚಿಂತಿಸಿ ಫಲವಿಲ್ಲಾ ನಶ್ವರದ ಬಾಳಲ್ಲಿ.
**********************************************