Tuesday, 31 October 2017

Winter is coming.

೩೧-೧೦-೨೦೧೭

ಹಾಳು ಖಾಯಿಲೆ.
ಚಳಿಗಾಲವಿನ್ನು ಶುರುವಾಗುವುದುವೆನ್ನುವಷ್ಟರಲ್ಲಿ ಶೀತ ಶುರುವಾಗಿದೆ.
ನನಗೆ ಶೀತವಿದ್ದರು ಇಷ್ಟು ತಲೆ ಕೆಡುವುದಿಲ್ಲ.
ನನ್ನ ಮಗುವಿಗೇಕೆ ಶೀತ?, ಎಂದು ಅಮ್ಮನ ಗೊಣಗಾಟ.
ಚಳಿಗಾಲವೆಂದರೆ, ಮಳೆಬರುವ ಮುನ್ನ ಗರಿಬಿಚ್ಚಿ ಕುಣಿವ ನವಿಲಿನಂತೆ ಖುಷಿಯಿಂದ ಅರಳುವ ಅಮ್ಮನ ಮೊಗವಿಂದು ಬಾಡಿದೆ. ಶೀತಕ್ಕೆ ಒಂದಷ್ಟು ಇಡಿ ಶಾಪವಕುತ್ತ ತಲೆಕೆಡಿಸಿಕೊಂಡು ಕುಳಿತಿದ್ದಾಳೆ.
ಅಮ್ಮನ ಈ ಗೊಣಗಾಟ ಕಂಡು ನಗಬೇಕೋ? ಶೀತದ ತಲೆನೋವಿಗೆ ಅಳಬೇಕೊ? ಎಷ್ಟು ಮಾಡಿದರು ಮುಗಿಯದ ಕೆಲಸಕ್ಕೆ ರಜೆಯಾಕಿ ಬೆಚ್ಚನೆ ಹೊದೆದು ಮಲಗಬೇಕೋ?



Monday, 30 October 2017

Never judge!

There is always a reason behind every acts,
Don't be blind for unseen!
Don't be very confident about seen!

ಆಸೆ

ಅವನ ಮನಗೆದ್ದ ಪ್ರೇಯಸಿ ನಾನಲ್ಲ, 
--ಅವನೊಂದು ವಸ್ತುವಲ್ಲ. 
ಅವನ ಹೃದಯದರಸಿ ನಾನಲ್ಲ,
--ಅವನ ಆಳುವ ಮನಸ್ಸು ನನಗಿಲ್ಲ. 
ಅವನು ಆರಾಧಿಸುವ ದೇವಿ ನಾನಲ್ಲ,
--ಅವನ ಸೇವೆ, ಭಕ್ತಿ, ಗುಲಾಮಗಿರಿ ನನಗೆ ಬೇಕಿಲ್ಲ. 

ನನಗೆ, ಅವನಾಗುವಾಸೆ, ಅವನಲ್ಲಿ ಲೀನವಾಗುವಾಸೆ.
ರಾಧೆಯಾಗಿಯೇ ಉಳಿಯುವಾಸೆ. 


Saturday, 28 October 2017

ಮುಂದಿನಬಾರಿ

ಯಾವಾಗ ಕೇಳಿದರು ಮುಂದಿನಬಾರಿ,
ಈ ಮುಂದಿನಬಾರಿ ಯಾವಾಗ ಬರುತ್ತೋ, ತಿಳಿಯದು.
ಆಗುವುದಿಲ್ಲವೆಂದರೆ ಆಗದು ಎಂಬ ಸತ್ಯವ ಏಕೆ ಹೇಳಲಾರೆ ?
ಕಠೋರ ಸತ್ಯವೇ ನನಗೆ ಪ್ರಿಯ, ನಿನ್ನ ಸುಳ್ಳಿಗಿಂತ.
ನಿನ್ನ ಸುಳ್ಳಿಗೆ ಕಾರಣ ಸಾವಿರವಿರಬಹುದು,ನನ್ನ ಮೇಲಿನ ಪ್ರೀತಿಯು ಆಗಿರಬಹುದು. 
ಆದರೆ ನಿನ್ನ ಸತ್ಯಕೆ ಕಾರಣ ನನ್ನ ಮೇಲಿರುವ ನಂಬಿಕೆ ಮಾತ್ರ. 
ಪ್ರೀತಿ ಇಲ್ಲದೆಯೇ ಬದುಕಬಹುದು, ನಂಬಿಕೆ ಇಲ್ಲದಿದ್ದರೆ ಸಾವು ಸಹ ಘೋರ.
ಸಂಪೂರ್ಣ ನಿಷ್ಠೆಯ ಬಯಸಲಾರೆ, ಏಕೆಂದರೆ ನಾನು ಸಂಪೂರ್ಣ ನಿಷ್ಠಾವಂತಳಲ್ಲ.
ನೀ ಕೊಟ್ಟ ನೋವಿನಲ್ಲೂ ನಗುವಿನ ಮುಖವಾಡ ಧರಿಸಿರುವೆ, ನಿನಗಾಗಿ.
ನಿನಗೆಂದಿಗೂ ಅಪರಾಧೀಭಾವವ ನಾ ನೀಡಲಾರೆ.
ನಿನ್ನ ಸಾವಿರ ಸುಳ್ಳಿಗು ನನ್ನಲ್ಲಿ ಕ್ಷಮೆ ಇದೆ.
ನೀ ನೀಡುವ ಸಾವಿರ ನೋವಿಗೂ ನನ್ನಲ್ಲಿ ನಗುವಿದೆ.
ನೀನೆಂದರೆ ನಾನೆಂದು ಗ್ರೇಶಿದ ನನ್ನಲ್ಲಿ, ನಿನಗಾಗಿ ರಾಶಿ ಪ್ರೀತಿಯ ಜೊತೆಗೆ ನಂಬಿಕೆಯು ಇದೆ.
ನೀನು ಹೇಳಿದ "ಮುಂದಿನಬಾರಿ"ಯ ನಿರೀಕ್ಷೆಯಲ್ಲಿ ಸದಾ ಜೀವಿಸುವೆ, ಖುಷಿ ದುಃಖಗಳ ಗೊಂದಲದಲ್ಲಿ.
ನಿನ್ನ ಮಾತಿಗೆ ಸಮ್ಮತಿಸುತ್ತ, ನೀರವ ಮೌನದಿ. 

Friday, 27 October 2017

Detached

The more you get detached,
the more you love,
you love,
truly,
by set him free,
by letting him breathe,
no fear of darkness,
no fear of falling,
no fear of losing,
coz you love him,
being detached,
not being attached.

The more you detached,
the more you love,
you love,
truly,
by giving him more,
by expecting less, 
without jealousy,
without ego,
without insecurity,
coz you love him,
being detached,
not being attached.


Something just like that.

ಅದೊಂದು ದಿನ,
ನನ್ನನು ನನ್ನ ಸಂಪೂರ್ಣ ಹೆಸರಿನಿಂದ ಕರೆದ. 
ಹಿಂತಿರುಗಿ ನೋಡಿದೆ. 
ಕಣ್ಣಿನಲ್ಲಿಯೇ ನಕ್ಕ ನನ್ನ ಕಂಡು, ತಲೆ ಕೆರೆದು ಕೊಂಡ. 
ಏನೋ? ನಾ ಕೇಳಿದೆ. 
ಸುಮ್ಮನೆ ಕರೆದೆ ಎಂದಿದ್ದ. 
ಮರು ಪ್ರಶ್ನಿಸಲಿಲ್ಲ. 
ಉತ್ತರವ, ನಾಚಿ ನೆಲನೋಡುತ್ತಿದ್ದ ಅವನ ಕಣ್ಣು ರೆಪ್ಪೆಗಳೇ ಹೇಳಿದ್ದವು.

ಯೋಚನೆ

ದೂರ ಅದೆಲ್ಲೋ ಕುಳಿತು ಇಷ್ಟು ಸತಾಯಿಸುವ ನೀನು,
ಸಮೀಪವಿದ್ದರೆ?

Wednesday, 25 October 2017

ಕೃಷ್ಣ

ಮತಿಹೀನ,
ಕುರುಡು,
ಮೂರ್ಖತನ,
ಹುಚ್ಚು,
ಭ್ರಮೆ,
ಇನ್ನುಅದೆಷ್ಟೋ ರೀತಿಯಲ್ಲಿ ಬೈದದುಂಟು ಅವನು.
ಸರ್ವಸ್ವವೇ ಅವನಾಗಿರುವಾಗ,
ಕಾಳಜಿ,
ನಂಬಿಕೆ,
ಕನಸು,
ಪ್ರೀತಿ,
ಕಲ್ಪನೆ,
ಇನ್ನುಅದೆಷ್ಟೋ, ಎಲ್ಲಾರೀತಿಯ ಭಾವನೆ ಮೂಡುವುದು ಸಹಜವಲ್ಲವೇ?



Friday, 20 October 2017

ಹುಗ್ಗಾಟ

ಕತ್ತಲ್ಲಲ್ಲದಾ ಕತ್ತಲು,
ಬೆಳಕ್ಕಲ್ಲದಾ ಬೆಳಕು,
ಮುಂಜಾವು,
ಬಾಹ್ಯಲೋಕದಿಂದ ಹುಗ್ಗುತ್ತ,
ಬೇರೆಲ್ಲೋ ತೇಲುತ,
ನಮ್ಮದೇ ಲೋಕದಲಿ ಜಾರಿ,
ಹುಗ್ಗಾಟ ನಡೆದಿತ್ತು.

ಮೃದುವಾದ ಸ್ಪರ್ಶ,
ಹಿತವಾದ ಅಪ್ಪುಗೆ,
ಉದರದಲ್ಲೇನೋ ಒಂದುತರ ಕಚಗುಳಿ,
ಕೊಂಚ ನಾಚಿಕೆ,
ಕೊಂಚ ಬೇಡದ ಗಾಂಭೀರ್ಯ,
ಕೊಂಚ ನಡುಕ.
ಒಂದಷ್ಟು ತುಂಟಾಟ,
ಒಂದಷ್ಟು ಹುಸಿ ಕೋಪ.

ನಿಗೂಢಕರ ಕಂಗಳು,..!
ಕೆಲವೊಮ್ಮೆ ಮುಗ್ದ ಮಗು, ಕೆಲವೊಮ್ಮೆ ತುಂಟ ರಾಕ್ಷಸ,
ಹುಡುಕ್ಕುತ್ತ ಹೋದಷ್ಟು ಕಳೆದೆ ಹೋಗುವಷ್ಟು ಗಾಢ.
ಬಿಡಿಸ ಹೋದಷ್ಟು ಕಗಂಟಾಗುವ ಸುಂದರ ಒಗಟು.

ಕಾಡದಾರಿಯಲ್ಲಿ ಬೆರಳುಗಳ ಪಯಣ, ನಿಲ್ಲದ ಪಯಣ.
ದಾರಿಯಲ್ಲೊಂದು ತಡೆ,
ಕೊಳದ ಸಿಹಿ ನೀರು. ನನಗೆಂದೇ ಹೇಳಿಮಾಡಿಸಿದಂತೆ.
ವಿಚಿತ್ರ! ನೀರು ಕುಡಿದಷ್ಟು ಬಾಯಾರಿಕೆ. 
ಕೊಳದ ಪೂಜೆಯ ಪ್ರಸಾದ, ತಿನ್ನಲಾಗ ಹಣ್ಣು.
ಸಂಪೂರ್ಣ ಧೈವೀಕ ನೆಮ್ಮದಿ.

ಅಪೂರ್ಣ,
ಆದರೂ ಸಂಪೂರ್ಣ.











Tuesday, 17 October 2017

ಇಂದೇಕೆ ನಾಳೆಯಲ್ಲ?

 ೧೭-೧೦-೨೦೧೭

ನಾಳೆಯ ಕಾಯುವೆಕೆಯಲ್ಲಿ ಕ್ಷಣವೊಂದು ಯುಗದಂತೆ ಕಂಡಿದೆ.
ಕಾಯುವುವಿಕೆ ಅಸಾಧ್ಯವಾಗಿದೆ.
ಇಂದೇಕೆ ನಾಳೆಯಲ್ಲ? ಯೆಂದೆನಿಸಿದೆ.


Friday, 13 October 2017

Astonished

ಐದಾರು ದಿನಗಳಿಂದ ಏನನ್ನೋ ಬರೆಯಲೆಂದು ಲ್ಯಾಪ್ಟಾಪ್ ತೆರೆಯುವೆ, ಆದರೆ ಬರೆಯಲಾಗುತ್ತಿಲ್ಲ!
ಏನಿರಬಹುದದು?

Thursday, 5 October 2017

ಐ ಹೇಟ್ ಯು.

ನೆನ್ನೆಯಷ್ಟೇ, ಜಗಳವಾಡಿ, ಮುನಿಸಿಕೊಂಡು ಹೋಗಿದ್ದೆ.
ಇಂದು ನಿನ್ನ ಕಂಡೆ. ನಿನ್ನನಗೆಯ ಕಂಡೆ.
ಮತ್ತದೇ ತಪ್ಪು ನಡೆದು ಹೊಗಿತ್ತು,
ಹೃದಯ ತನ್ನೊಂದು ಬಡಿತವ ಮಾರೆತಂತಿತ್ತು. ದುಸುಕ್ ಎಂದು.

ಎವ್ರಿಥಿಂಗ್ ಜಸ್ಟ್ ಬ್ಯಾಕ್ ಟು ಸೊ ನಾರ್ಮಲ್!! ಎಗೈನ್.





ಲೈಫ್ ಇಸ್ ಬ್ಯೂಟಿಫುಲ್

ಜೀವನದಲ್ಲಿ ಎಷ್ಟೋಬಾರಿ  ಮುಗ್ಗರಿಸಿದ್ದರು,
ಜೀವನದ ಮೇಲೆ ಎಷ್ಟೇ ಕೋಪಮಾಡಿಕೊಂಡು ಶಪಿಸಿದ್ದರು,
ಸಾಕಪ್ಪ ಜೀವನದ ಜಂಜಾಟ ಅನ್ನಿಸ್ಸಿದ್ದರು,
ಸುಸ್ತಾಗಿ, ಬ್ಯಾಗ್ ಹೊತ್ತು ಮನೆ ತಲುಪಿದಾಗ ನಮ್ಮವರ ಕಂಡಾಗ,
ನೆಮ್ಮದಿಯ ಒಂದು ಉಸಿರು ತೆಗೆದು ಕೊಂಡೆ,
ಅಂದುಕೊಂಡೆ, ಲೈಫ್ ಇಸ್ ಬ್ಯೂಟಿಫುಲ್ .

ಲೈಫ್ ಇಸ್ ಲೈಕ್ ಆ ಲಿಮಿಟ್ಲೆಸ್ಸ್ ಸರ್ಕಲ್.
ಮುಂದೆಯೂ ಸಾವಿರ ಬಾರಿ ಜೀವನವನ್ನು ಬಯ್ಯಲಿದ್ದೇನೆ.
ಕೋಪ ಮಾಡಿಕೊಳ್ಳಲಿದ್ದೇನೆ,
ಆದರೂ ಮತ್ತೆ ನಾಗಲಿದ್ದೇನೆ. ಖುಷಿಯಿಂದ, ಮನಸಾರೆ.


 


Wednesday, 4 October 2017

Yes.

He looked like an art!
a black hole.
a deep ocean.
a dense forest.
a sky full of stars.
always fascinating!
Yes, always.





Something never lost.

I always wanted to tell something to him.
He never let me talk!
I wonder how he understands that I am going to tell something!
I wonder what was the reason for not letting me talk?
Maybe he fears or maybe not interested!
between, What was that something?
I have forgotten it now.! almost.

Chalo, few things remain beautiful; unsaid, ununderstood!

Monday, 2 October 2017

Enough.!?

What was it?
n Why?
Whatever it was,
it was enough.

Silence!
n that gaze.
though it was blank,
it was quite a lot.
has stamped d mark,
d mark,
never be erased.!

Completed,
by d incompleteness!
d incompleteness which
we'll have always.
n it's enough.!?!..