Saturday, 26 December 2020

ಕಳೆದು ಹೋದ ಸಮಯ - ೧

  ಅದೊಂದು ಕಾಲವಿತ್ತು. ನಾನು ಅಮ್ಮನ  ಬೀಲ(ಬಾಲ)ವಾಗಿದ್ದೆ. ಎಲ್ಲಿಹೋದರು ಅವರಹಿಂದೆ. ಏನೇ ಮಾಡುವುದಿದ್ದುರು  ಅವರ ಜೊತೆಗೆ. ಆಟ, ಪಾಠ, ತಿಂಡಿ, ಆಸರು, ಎಲ್ಲಾದಕ್ಕೂ ಅವಳೇ. ಮಾಡುತ್ತಿದ್ದ ಕೆಲಸ ಬಹಳ ಅಚ್ಚುಕಟ್ಟು. ಮಾತನಾಡುತ್ತಿದ್ದೆ ಮಾತು ಅತಿ ಮಧುರ. ಸಹನಾ ಮೂರ್ತಿ. ಬಿಡುವಿಲ್ಲದಷ್ಟು ಕೆಲಸ ಜೊತೆಯಲ್ಲಿ ನಾನು. ಮಾಡದ ಕೆಲಸಗಳಿಲ್ಲ. ಅಪ್ಪನಿಗೆ ಅಮ್ಮನನ್ನು ಹೊರಗೆ ಕೆಲಸಕ್ಕೆ  ಕಳಿಸಲು ಮನಸ್ಸಿರಲಿಲ್ಲ.  ಸರಿ. ಹಾಗಾಗಿ ಅಮ್ಮ ಕಸೂತಿ ಕಲಿತರು. ಬುಟ್ಟಿ ಹಾಕುವುದು. ಬಟ್ಟೆ ಹೊಲಿಯುವುದು. ಡೆಕೋರೇಟಿವ್ ವಸ್ತುಗಳ್ಳನ್ನು ತಯಾರಿಸುವುದು. ಹೀಗೆ ನಾನಾ ನಮುನೆಯ ಕಸೂತಿ. ಇಷ್ಟೆಲ್ಲಾ ಮಾಡಲು ಅವಳಿಗೆ ಸಮಯವಾದರೂ ಹೇಗೆ ಸಿಗುತ್ತಿತ್ತೋ ಎಂದು ಕೂತು ಆಲೋಚಿಸಿದರೆ  ನನಗೀಗ ಹಾಗನಿಸುತ್ತದೆ. ಬಾಡಿಗೆ ಮನೆ, ಮುನಿಸಿಪಲ್ ನೀರು. ದೂರ ಅದೆಲ್ಲಿಂದಲೋ ಅವರು ನೀರು ಬಿಡುತ್ತಿದ್ದ ಸಮಯದಲ್ಲಿ ಹೋಗಿ ಹಿಡಿದು ತರಬೇಕಿತ್ತು. ವಾರಕೊಮ್ಮೆ ಪ್ರತಿ ಶನಿವಾರ ಸಂತೆ. ಮನೆಯಿಂದ ೨ ರಿಂದ ೩ ಕಿಲೋಮೀಟರ್ ದೂರ. ಅಲ್ಲಿಗೆ ಹೋಗಿ ವಾರಕ್ಕೆ ಬೇಕಾದಷ್ಟು ತರಕಾರಿ, ಹಣ್ಣು, ತಿಂಡಿತಿನುಸು, ದಿನಸಿ ತರುತ್ತಿದ್ದಳು.  ಹೋಗುವಾಗ ಕಾಲಿ ಚೀಲ. ಬರುವಾಗ ಎರೆಡು ತುಂಬಿದ ಚೀಲ. ಆಟೋದಲ್ಲಿ ಹೋದರೆ ಹಣ ವ್ಯಯ ವೆಂದು ನಡೆದು ಕೊಂಡೆ ಕೇಜಿಗಟ್ಟಲೆ ಸಾಮಾನುಗಳನ್ನು ಹೊತ್ತು ತರುತ್ತಿದ್ದಳು. ಜೊತೆಯಲ್ಲಿ ನಾನು. ಮನೆಯಲ್ಲಿ ಯಾರು ಕೆಲಸದವರಿರಲಿಲ್ಲ. ಎಲ್ಲವನ್ನು ತಾನೇ ಕುದ್ ನಿಭಾಯಿಸುತ್ತಿದಳು. ಮನೆ ಸುತ್ತಲೂ ಹೂವಿನ ಗಿಡಗಳು. ತರಕಾರಿ ಗಿಡಗಳು. ನುಗ್ಗೆ,  ದಾಳಿಂಬೆ,ಪೇರಳೆ, ಅಂಬಟೆ ಮರಗಳು. ಹೌಷಧ ಸಸ್ಯಗಳು. ದಿನಕ್ಕೆ ಒಂದು ಗಂಟೆ ಕಾಲ ಬೇಕಾಗುತ್ತಿತ್ತು ಅದಕ್ಕೆ ನೀರು ಹಾಕಲು. ನೀರನು ಕೊಡಪಾನದಲ್ಲಿ ತೆಗೆದುಕೊಂಡು ಹೋಗಿ ಹಾಕಬೇಕಿತ್ತು. ಬೆಳಗೆಲ್ಲಾ ಕಷ್ಟ ಪಟ್ಟು ತುಂಬಿದ ಟ್ಯಾಂಕ್ ನೀರು ಅರ್ಧದಷ್ಟು ಅಲ್ಲೇ ಖರ್ಚು.  ಆಮೇಲೆ ಕಾಲ ಕ್ರಮೇಣ ನೀರಿನ ಕನೆಕ್ಷನ್ ಬಂತು. ನೀರು ಹೊತ್ತುತರುವು ಹೇಗೋ ಕಮ್ಮಿಯಾಯಿತು. ನಮ್ಮಮ್ಮ ಯಾವಾಗಲು ಹೇಳುತ್ತಿದ್ದರು, ಅಡಿಗೆ ಮನೆಯಲ್ಲಿ ಯಾವ ಸಾಮಾನು ಕಾಲಿ ಅಂತ ಮಾಡಿಕೊಳ್ಳಬಾರದು. ಇನ್ನೇನು ಕಾಲಿ  ಆಗುತ್ತದೆ ಎಂದು ತಿಳಿದಾಗಲೇ ತರಬೇಕೆಂದು. ನನಗೆ ನೆನಪಿರುವ ಹಾಗೆ, ನಮ್ಮ ಮನೆಯಲ್ಲಿ ಯಾವತ್ತೂ ಯಾವುದಕ್ಕೂ ಏನಕ್ಕೂ ಕೊರತೆ ಆಗಿಯೇ ಇಲ್ಲ. ಏನು ಕೇಳಿದರು ರೆಡಿ ಸಿಗುತ್ತಿತ್ತು. ನನಗೆ ಈಗಲೂ ನೆನಪಿದೆ, ಪಕ್ಕದಮನೆಯ ಲತಾ ಆಂಟಿ ಮನೆಗೆ ಯಾರೋ ಬಂದಿದಾರೆ ಒಂದು ಲೋಟ ಹಾಲಿದ್ದರೆ ಕೊಡಿ ಸೀತಮ್ಮಂಟಿ ಅಂತ ಒಮ್ಮೆ, ಸಕ್ಕರೆ, ಚಹಾ ಪುಡಿಯೊಮ್ಮೆ, ಹೆಪ್ಪಕಲು ಮಜ್ಜಿಗೆ, ಹೀಗೆ ಅದು ಇದು ಅಂತ ವಾರದಲ್ಲಿ ೨ ಬರಿ ಆದರೂ ಕೇಳುತ್ತಿದ್ದರು. ಆದರೆ ನನ್ನಮ್ಮ ಯಾವತ್ತೂ ಒಮ್ಮೆಯೂ ಹೀಗೆ ಕೇಳಲೇ ಇಲ್ಲ. ಎಲ್ಲವೂ ಮುಂಚಿತವಾಗಿಯೇ ರೆಡಿ. 

    ನಾವು ವಾಸವಿದ್ದ ಬೀದಿಯಲ್ಲಿ, ಸಂಜೆ ಹೊತ್ತು ಚಹಾ ಆದಮೇಲೆ ಹೆಂಗಸರೆಲ್ಲರೂ ಹೊರ ಬಂದು ಹರಡುತ್ತಿದ್ದರು. ನನ್ನ ಅಮ್ಮ ಕೂಡ ಅವರೊಂದಿಗೆ ಸೇರಿ ಮಾತನಾಡುತ್ತಿದ್ದರು. ಮಾತನಾಡುವ ಸಮಯದಲ್ಲಿ ಅಕ್ಕಿ ಕ್ಲೀನ್ ಮಾಡುವುದು, ಬುತ್ತಿ ಹಾಕುವುದು, ಹೊಲಿದು ರೆಡಿ ಇರುವ ಬ್ಲೌಸ್ ಗೆ ಹುಕ್ಕು ಹಾಕುವುದು ಹೀಗೆ ಏನಾದರೊಂದು ಮಾಡುತ್ತ ಮಾತನಾಡುತಿದ್ದರು. ಸಮಯಕ್ಕೆ ಬಹಳ ಮರ್ಯಾದೆ ಕೊಡುತಿದ್ದರು ಅಮ್ಮ. ಹೆಂಗಸರೆಲ್ಲ ಹರಟೆ ಹೊಡೆಯ ಬೇಕಾದರೆ ನಾವು ಮಕ್ಕಳೆಲ್ಲ ಕುಂಟೆಬಿಲ್ಲೆ, ಗೋಲಿ, ಲಗೋರಿ, ಜೂಟಾಟ, ಕಣ್ಣಾಮುಚ್ಚಾಲ್ಲೇ, ಕರೆಂಟ್ ಷರಪ್ ಎಂದು ನಾನಾನಮುನೆಯ ಆಟವಾಡುತ್ತಿದ್ದೆವು. 

    ದಿನಾ ಬೆಳಿಗ್ಗೆ ಮನೆ ಅಂಗಳ ಕಸಗುಡಿಸಿ ರಂಗೋಲಿ ಇಡುವುದು ನಾವಿದ್ದ ಜಾಗದಲ್ಲಿ ರೂಢಿಯಲ್ಲಿಡಿತು. ಹಬ್ಬ ಹರಿದಿನಗಳು ಬಂದರೆ ಸಾಕು, ಹೆಂದಿನ ರಾತ್ರಿ ಜಾಗರಣೆ. ಮೊದಲೇ ಹೇಳಿ ಮನೆ ಮನೆಗೆ ಹಾಲುಹಾಕುವ  ಹೆಂಗಸರಿಂದ ಹಸುವಿನ ಸಗಣಿ ತರಿಸಿ, ಅದನ್ನು ನೀರಿನಲ್ಲಿ ಕರಡಿ (ಕಲಸಿ) ಬೀದಿಗೆಲ್ಲ ಸರಿಸುತ್ತಿದ್ದರು. ನಾವು ಮಕ್ಕಳೆಲ್ಲ ಸೇರಿ ದೊಡ್ಡ ದೊಡ್ಡ ರಂಗೋಲಿ ಹಾಕಿ ಬಣ್ಣ ತುಂಬುತ್ತಿದೆವು. ಎಂಥಾ ಸಂಭ್ರಮ. ಹುಣ್ಣಿಮ್ಮೆಯ ಚಂದ್ರನಿದ್ದು ಕರೆಂಟ್ ಹೋದರಂತೂ ಎಲ್ಲಿಲ್ಲದು ರೋಮಾಂಚನ. ಇಷ್ಟು ಚಿಕ್ಕ ಚಿಕ್ಕ ವಿಷಯಕ್ಕೆ ಖುಷಿ ಪಾಡುವುದು ಹೇಗೆಂದು ಈಗ ಮರತೇ ಹೋಗಿದೆ. 

    ನಮ್ಮ ಮನೆಯಲ್ಲಿ ದೊಡ್ಡ ದೊಡ್ಡ ಬಕೆಟ್ ಗಟ್ಟಲೆ ಪೇರಳೆ ಹಣ್ಣನು ಬಿಡುತ್ತಿತ್ತು. (ವರಮಹಾಲಕ್ಷಿಮಿ ಪೂಜೆ ತಿಂಗಳಲ್ಲಿ). ಅಪ್ಪ ಮರಹತ್ತಿ ಪೇರಳೆ ಕಿತ್ತು ಪಂಚೆಯಲ್ಲಿ ಹಾಕಿಕೊಳ್ಳುತ್ತಾ ಇರಲು, ನಾನು ಅಪ್ಪ ರೈಟ್ ಸೈಡ್ನಲ್ಲಿ ಒಂದು, ನಿಮ್ಮ ಮುಂದೆಯೇ ಎರೆಡು, ಲೆಫ್ಟ್ ಅಲ್ಲಿ ೪ ಇದೆ ಹಾಗೆ ಹೀಗೆ ಎಂದು ಇನ್ಸ್ಟ್ರಕ್ಷನ್ ಕೊಡುತಿದ್ದೆ. ಕಿತ್ತ ಹಣ್ಣನ್ನು ಇಡೀ ಬೀದಿಯಲ್ಲಿದ್ದ ಮನೆಗಳಿಗೆ ಹಂಚುತ್ತಿದ್ದೆವು. ನಾನು ನನ್ನ ಶಾಲೆಯ ಸಹಪಾಠಿಗಳಿಗೆಲ್ಲ ಕೊಡುತಿದ್ದೆ. ನಮ್ಮ ಮನೆಯಲ್ಲಿ ದುಂಡು ಮಲ್ಲಿಗೆ ಬಳ್ಳಿ ಎಷ್ಟು ದೊಡ್ಡದಾಗಿ ಹಬ್ಬಿತೆಂದರೆ, ವಠಾರದ ಅಷ್ಟು ಮನೆಯ ಹೆಂಗಸರು, ಹೆಣ್ಣು ಮಕ್ಕಳು ಮೊಗ್ಗಿನ ಜೆಡೆ ಹಾಕಿಕೊಂಡು, ಚೆಂದದ ರೇಷ್ಮೆ ಸೀರೆ/ಲಂಗ ಹಾಕಿಕೊಂಡು, ಸ್ಟುಡಿಯೋಗೆ ಹೋಗಿ ಫೋಟೋ ತೆಂಗೆಸಿಂಡಿದ್ದಾರೆ. ಈಗಲು ನೋಡಿದರು ಎಲ್ಲರ ಫೋಟೋ ಆಲ್ಬಮ್ ನಲ್ಲಿ ಆ ಫೋಟೋ ಸಿಗಬಹುದೇನೋ.? ಹೇಳಿದಷ್ಟು ಮುಗಿಯದು ಈ ಕತೆ. ಹಾಗಾಗಿ ೩ ೪ಕು ಅಧ್ಯಾಯದಲ್ಲಿ ಹೇಳುವೆ. ಈಸ್ಟ್೦ತು ಸತ್ಯ ಅಪ್ಪ ನಿಜವಾಗಿಯೂ ಅದೃಷ್ಟ ವಂತರು. ಅವರ ಕೆಲಸದ ಜೀವನ ಎಷ್ಟೇ ಕಷ್ಟಕರವಾಗಿದರು ಮನೆಯಲ್ಲಿ ಸದಾ ನೆಮ್ಮದಿಯ ಶಾಂತಿ ಪ್ರೀತಿ ನೆಲೆಯೂರಿತ್ತು. ಅಮ್ಮ ಅಪ್ಪನಿಗೆ ಅಪ್ಪ ಅಮ್ಮನಿಗೆ ವೆಲ್ ಬ್ಯಾಲೆನ್ಸಿಂಗ್ ಆಗಿತ್ತು.  

ಅಯ್ಯನ ಮಂಡೆ

Imperfection is beauty. I agree.

It doesn't mean perfection is not beautiful. 

ಯಾವುದೇ ಕೆಲಸ ಮಾಡಬೇಕಾದರೆಯೇ ತಿಳಿದಷ್ಟು ಮಟ್ಟಿಗೆ ಸರಿಯಾಗಿಯೇ ಮಾಡಿಬಿಡು. 

ಸದ್ಯಕದು ಹೇಗೂ ನಡೆಯುತ್ತದೆ ಯೆಂದು ಬಿಟ್ಟರೆ ಮುಂದೊಂದುದಿನ ಅಪಘಾತವಾದೀತು. ಎಚ್ಚರ. 

ನಾನು ಸೋತರೆ ಸೋಲಲು ಬಿಡು.

 ನೀನು ಅನುಭವಿಯೇ ಇರಬಹುದು. 

ಸೋತು ಗೊತ್ತಿರಬಹುದು.

ಗೆಲ್ಲುವು ಹಾದಿತಿಳಿದಿರಬಹುದು. 

ಗೆದ್ದಿರಲೂ ಬಹುದು. 

ಹಾಗಂತ ನನ್ನನು ತಪ್ಪುಮಾಡುವುದರಿಂದ ರಕ್ಷಿಸಬರಬೇಡ. 

ನಾನು ಸೋತರೆ ಸೋತೆನು. 

ನನಗೆ ನನ್ನ ತಪ್ಪು ಖುಷಿಕೊಡುತ್ತದೆ. 

ಇಬ್ಬರು ಕೂತು ಮಾತಾಡೋಣವಾಗ.  

Tuesday, 15 December 2020

ನಾಲ್ಕು ದಿನದ ಬದುಕು

ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ ಎಂದು ಜಿ. ಎಸ್. ಶಿವರುದ್ರಪ್ಪ ಹೇಳಿದ ಪದಗಳು ಎಷ್ಟು ಸತ್ಯ, ಅಲ್ಲವೇ!? ಇಂದು ಹುಟ್ಟಿದೆ, ನಾಳೆ ಬೆಳೆದು ದೊಡ್ಡವಳಾದೆ, ನಾಡಿದ್ದು ದುಡಿದೆ ಜೀವನ ಜೀವಿಸಿದೆ, ಮುನ್ನಾಡಿದ್ದು ಸತ್ತೆ! ಅಷ್ಟೇ  ಬದುಕು. ಅದೇನೋ ನನಗಂತೂ ಅರ್ಥವಾಗದು ಯಾಕೀಜನರು ತಮ್ಮ ಪಾಡಿಗೆ ತಾವೀರರು/ ಇರಲು ಬಿಡರು. ನಿಸ್ವಾರ್ಥ ಎಂದರೇನು ಅಂತ ನಾನಂತ್ತು ಕಂಡೂಇಲ್ಲಾ ಅನುಭವಿಸಲೂ ಇಲ್ಲಾ!! ಕರೋನ ಎಲ್ಲಾರ ಮುಖವಾಡ ಕಳಚುವಲ್ಲಿ ಕೊಂಚಮಟ್ಟಿಗೆ ಯಶಸ್ವಿಯಾಗಿದೆ ! ಎಷ್ಟರಮಟ್ಟಿಗೆ ಜಿಗುಪ್ಸೆಯೆಂದರೆ ಏನು ಬರೆಯಲು ಮನಸಿಲ್ಲ! ಹಾಗಂತ ಬರೆಯದೆ ಇರಲು ಸಾಧ್ಯವೇ ಇಲ್ಲ. ಒಂತರಾ ಹೆಸರಿಲ್ಲದಿರೋ ವಿಚಿತ್ರ ಭಾವನೆ. ಮನುಷ್ಯನ ಹುಟ್ಟೇ ಅಷ್ಟು. ಅಷ್ಪಷ್ಟ. ಎಲ್ಲವೂ. ಎಲ್ಲಾರು. ಜೀವನದಲ್ಲಿ ಎಷ್ಟರಮಟ್ಟಿಗೆ ಪ್ರೆಶ್ನೆಗಳ ಅಲೆಗಳೆದ್ದಿದವೆಂದರೆ ಒಂದರಹಿಂದೊಂದು ಸಾಲುಸಾಲಾಗಿ, ಕೆಲವೊಮ್ಮೆ ಜೊತೆ ಜೊತೆಯಲಿ ಬಂದವು. ಭಯಂಕರದ ಏರಿಳಿತಗಳು! ಹೇಳಿದಷ್ಟು ಸುಲಭವಲ್ಲ ಜೀವನ! ಸಹವಾಸವಲ್ಲ ಜನರದ್ದು!! ಪ್ರೀತಿ ನೀಡಿದರು ಸ್ವೀಕರಿಸಲು ತಯಾರಿಲ್ಲ. ಪಾಠ ಹೇಳಿಕೊಟ್ಟರು ಕೇಳುವ ವ್ಯವಧಾನವಿಲ್ಲ. ಸರಿ ಏನು ಬೇಡ ಜೊತೆಯಲ್ಲಿ ಕೂತು ಮಾತನಾಡುವ ಯೆಂದರೆ ಯಾರಿಗೂ ಸಮಯವಿಲ್ಲ!! ಮೊಬೈಲ್ ಫೋನ್ ಒಂದು ಕೈಯಲ್ಲಿ ಇದ್ದಾರೆ ಸಾಕು. ಏನೋ!! ಯಾವುದು ಪ್ರಯೋಜನವಿಲ್ಲ. ಎಲ್ಲಾ ವ್ಯರ್ಥಪ್ರಯತ್ನ! ನಾನೇ ಸಿಟ್ಟಿನ ಮೂರ್ತಿಯಾಗಿಬಿಟ್ಟಿರುವೆ! I'm becoming someone whom I hate! I'm ashamed of myself now and I want to be a old version of myself! 

Friday, 15 May 2020

ಮೌನ ಬಂಗಾರ

You don't want to tell/share few thing with others, coz you know how will they react and what will be the answer from them!!!! 

Judge

You will always be judged by your financial stability.

ಗೊಂದಲದು ಗೂಡು

ನೀವೆಷ್ಟು ಸುಳ್ಳು ಹೇಳಿರುವಿರಿ ನಿಮ್ಮವರನ್ನು ಒಳ್ಳೆಯವರನ್ನಾಗಿ ಬಿಂಭಿಸಲು?
ಈ ಸುಳ್ಳು ನಿಮಗಾಗಿಯೇ ಅಥವಾ ನಿಮ್ಮವರಿಗಾಗಿಯೇ?
ಈ ಸುಳ್ಳೆoಬ ಸತ್ಯದ ನಡುವೆ ನಾನೆಂಬ ಗೊಂದಲದ ಗೂಡು. 

ಕೊಲೆಗಾರ

ಅವನು ಕೊಲೆಗಾರನಿರಬಹುದು.
ನೀವು ಕೊಲೆಗಾರಗಬೇಡಿ.
ನಿಮ್ಮೊಲುಮೆಯನ್ನು ಕೊಲ್ಲಬೇಡಿ. 

A better way

ಎಲ್ಲಾ ವಿಷಯಕ್ಕೂ ಒಂದೊಳ್ಳೆ ಮಾರ್ಗವಿದೆ.
ನಾವದನ್ನು ಕಂಡುಕೊಳ್ಳಬೇಕಷ್ಟೆ. 

ಅಸಹಾಯಕ

ಯಾರಿಗೂ ಹೇಳಲಾಗದ ನೋವೊಂದು ನಿಮ್ಮಲ್ಲೂ ಇದೆಯೇ?
ನೀವೂ ನನ್ನಷ್ಟೇ ಅಸಹಾಯಕರೇ?
ನಿಮಗೂ ಉಸಿರು ಕಟ್ಟಕಟ್ಟುವುದೇ, ಬಿಗಿಹಿಡಿಯುವುದೇ ಗಂಟಲು?
ನಿಮ್ಮೊಳಗಿನ ಯುದ್ದದಲಿ ಗೆದ್ದು ಸೋಲುತಿರುಹಿರೇ? ಸತ್ತು ಬದುಕುತ್ತಿರುವಿರೇ?
ನಿಮ್ಮಲ್ಲು ಒಬ್ಬ ನಿರಪರಾದಿ ಅಪರಾದಿ ಮನೊಭಾವದಲ್ಲಿ ಸಿಳುಕಿ ನಲುಗಿ ಹೋಗಿಹನೆ?
ಧೀರ್ಘವಾಗಿ ಉಸಿರಾಡಿ ಒಮ್ಮೆ, ನಿಮ್ಮನು ನೀವು ಕ್ಷಮಿಸಿಬಿಡಿ ಒಮ್ಮೆ.
ಇರುವುದೆಲ್ಲವ ಇದಂತೆ ಇರಲು ಬಿಟ್ಟುಬಿಡಿ. ಮರೆತುಬಿಡಿ.
ಅಥವಾ ಅಪ್ಪಿ ಮುದ್ದಾಡಿಬಿಡಿ. ನಿರಾಳರಾಗಿ.