Tuesday, 25 June 2019

ಅನುಬಂಧ

ಎಲ್ಲಿಂದ ಗಂಟು ಬಿದ್ದನಪ್ಪ ಈ ಭೂಪ.
ಕೆಲವೊಮ್ಮೆ ಹೇಳಿದ ಮಾತು ಕೇಳದೆ ಕೋಪಬರಿಸುವ,
ಮತ್ತೊಮ್ಮೆ ಹೇಳಿದ್ದನ್ನೆಲ್ಲಾ ಮಾಡಿ ಮನ ಒಲಿಸುವ,
ಗಂಡನಂತೆ ದಬ್ಬಾಳಿಸಿ ಅಳಿಸುವ,
ಅಪ್ಪನಂತೆ ಸಂತೈಸಿ ಓಲೈಸುವ,
ಅಣ್ಣನಂತೆ ಕಾಡಿಸಿ ಕಾಟ ಕೊಡುವ,
ಅಮ್ಮನಂತೆ ಪ್ರೀತಿ ತೋರುವ,
ಕೆಲವೊಮ್ಮೆ ಉದಾಸೀನ ಮಾಡಿ ಬಿಟ್ಟು ಹೋಗುವ,
ಮಗುವಿನಂತೆ ಮೊಂಡಾಟ ಮಾಡಿ ತಲೆ ಕೆಡಿಸುವ,
ಗೆಳೆಯನಂತೆ ತರಲೆ ಮಾಡಿ ನಕ್ಕು ನಗಿಸುವ,
ಮುದ್ದು ಮುದ್ದಾಗಿ ಮಾತನಾಡುವುದನ ಅದೆಲ್ಲಿಂದ ಕಲಿತನೋ?
ಮುದ್ದು ಮುದ್ದು ಮುಖ ಮಾಡುತ ಮನಒಲಿಸುವ ಕಲೆ ಅವನಿಗೆ ಹೇಗೆ ಬಂದಿತೋ?
ಮಾಟಗಾರ, ಮಾಯಗಾರ, ಮೋಜುಗರ,
ಕೃಷ್ಣನಿಗೆ ಇದೆಲ್ಲ ರಕ್ತಾಗತ.
ಅವನಲ್ಲಿ ನನ್ನ ಹೇಗೆ ಬಂಧಿಸಿರುವನೆಂದರೆ,
ನನಗೆ ಈ ಬಂಧನದಿಂದ ಹೊರಬರುವ ಮನ್ನೆಸ್ಸೆ ಇಲ್ಲ.
ಬಂಧನವಲ್ಲದ ಬಂಧನ,
ಬಂಧಮುಕ್ತ ಬಂಧನ.



Sunday, 16 June 2019

ಅಳಿಸಿ ಹೋಯಿತೇ?

ನನಗೀಗ ಮದುವೆಯಾಗಿದೆ...
ಜೀವನದಲ್ಲಿ ಏನಾಗುತಿದೆಯೆಂದು ಇನ್ನು ಅರಿವಿಗೆ ಬರುತ್ತಿಲ್ಲ.
ಮೊನ್ನೆ ಮೊನ್ನೆವರೆಗೂ ಎಲ್ಲವೂ ಹೊಸತೆಂದು ಅನ್ನಿಸಿದ್ದು ಇಂದೀಗ ಹಳೆಯದಾಗಿದೆ.
ಏನನ್ನೋ ಎಲ್ಲಿಯೋ ಮರೆತಂತೆ ಭಾಸವಾಗುತ್ತಿದೆ.
ಎಷ್ಟೋ ಆಸೆಗಳು, ಕನಸುಗಲ್ಲೆಲ್ಲ ಮೆದುಳಿನಿಂದ ಅಳಿಸಿಹೋದಂತಿದೆ.
ಹೊಸ ಕನಸುಗಳು ಯಾವುದು ಮೂಡುತ್ತಿಲ್ಲ.
ತಟಸ್ಥ ಭಾವ.
ಶಾಂತವಾಗಿರು ಸಮುದ್ರದ ಅಲೆಗಳು.
ಹಿಂದೆಂದೋ ಮೂಡಿಸಿದ ಹೆಜ್ಜೆಗುರುತಗಳು ಕಾಣದಾಗಿವೆ ಈಗ.
ಮುಂದೆ ಎಲ್ಲಿಯೂ ಸಾಗದೆ ನಿಂತಲ್ಲಿಯೇ ನಿಂತು ಏನನ್ನು ದಿಟ್ಟಿಸಿ ನೋಡುತ್ತಿರುವೆ.
ಅದು ಏನು, ಏಕೆ, ಹೇಗೆ ಒಂದು ತಿಳುತಿಲ್ಲ.
ಸಂಪೂರ್ಣ ಶಾಂತಿಯೇ ಇದು? ಅಥವಾ ಅಲ್ಪವಿರಾಮ?
ಅಥವಾ ನನ್ನವನಿಂದ ಮೂಡಿರುವ ಭರವಸೆಯೇ?

ಹಳೆಯದ್ದೆಲ್ಲವೂ ಅಳಿಸಿ ಹೋಗುತಿದೆ.
ಎಲ್ಲವೂ.
ಎಲ್ಲವೂ.

ಈಗ ಇವನೊಬ್ಬನೇ ಎಲ್ಲವೂ.!!!!!!!