Monday, 31 December 2018

ಮೊದಲಾಸಲ

ಏಕೆ ಮೊದಲ ಬಾರಿಯ ಎಲ್ಲಾ ಕೆಲಸಗಳು ಈ ಪುಟ್ಟ ಮನಸ್ಸಲ್ಲಿ ಅಷ್ಟೊಂದು ದೊಡ್ಡ ಜಾಗ ಪಡೆದು ಕೊಳ್ಳುತ್ತದೆ?
*****************

ನನ್ನವನೆಂಬ ಹಣೆಪಟ್ಟಿ ಅವನಿಗೀಗ ಕಟ್ಟಿಯಾಗಿದೆ.
ನನ್ನಾತ್ಮದಲಿ ಬೇರೇ ಯಾರಿಗೂ ನೀಡದ ಗೌರವದ ಸ್ಥಾನ ಅವನಿಗೀಗ ಕೊಟ್ಟಾಗಿದೆ.
ಗೀಚಿದಷ್ಟು ಮುಗಿಯದೀ ಪ್ರೇಮ ಸಲ್ಲಾಪ.
ಸಾಲದಷ್ಟು ಸಾಲದಾಗಿದೆ ಅವನೊಂದಿಗಿನ ಸಮಯ.
ಪದಗಳೆಲ್ಲ ನನ್ನವನ ಮುಂದೆ ಸೋತು ಬಾಲ ಮುದುರಿಕೊಂಡು ತೆಪ್ಪಗಾಗಿದೆ.
ಪ್ರಾಸವನಂತು ನಾ ಕಾಣೆ.
ಒಂದು ಮಾತಿಗಿಂದೊಂದು ಮಾತು ಕುಡುತ್ತಲೂ ಇಲ್ಲ.
ಅಬ್ಬಾ ನಾನೀಗ ನನ್ನಲ್ಲಿಲ್ಲ.
ಒಂದು ರೀತಿಯಲ್ಲಿ ತಬ್ಬಿಬ್ಬುಗೊಂಡ ಮಗುವಂತಾಗಿದೆ ಸ್ಥಿತಿ.
***********


Friday, 21 December 2018

ಒಲವಾಗಿದೆ

ದಿನ ರಾತ್ರಿಯ ಪರಿವಿಲ್ಲದೆ ಸದಾ ಅವನದೇ ಧ್ಯಾನ.
ಮೂಡುವ ಹಲವು ಪ್ರಶೆನೆಗಳು.
ಅವನಿಗೇನು ಇಷ್ಟ? ಅವನಿಗೇನು ಕಷ್ಟ? ಅವನ ಏನೆಂದು ಕರೆಯಲಿ?
೧೦೦೦ ಹೆಸರುಗಳು ಸಾಲದಾಗಬಹುದೇನೋ ನನ್ನೊಲವಿಗೆ ನಾಮಕರಿಸಲು.
ಪ್ರೀತಿಯ ಅತಿವೃಷ್ಠಿಯಿಂದ ಮೆದುಳು ತನ್ನ ನಿಯಂತ್ರಣ ಕಳೆದುಕೊಂಡಂತಿದೆ.
ನನಗೆ ಒಲವಾಗಿದೆ.
ಮೊದಲ ಬಾರಿ ಇಷ್ಟೊಂದು ಹುಚ್ಚು ಹಿಡಿದಿದೆ. 

Wednesday, 19 December 2018

ನವಿಲು ಗರಿ

ಹಲವು ಬಣ್ಣಗಳ ಹೊತ್ತ ನವಿಲು ಗರಿ ನಾನು.
ನಿನ್ನ ಮುಡಿ ಸೇರಿಯಾನೊ ಇಲ್ಲವೋ,
ಆದರೆ ನಿನ್ನ ಮನ ಸೇರವ ಬಯೆಕೆ.
ನಿನ್ನ ಕಣ್ತುಂಬುವ ಬಯಕೆ.
ತುಟಿಯಲ್ಲಿ ಕ್ಷಣಕಾಲ ನಗುವಾಗುವ ಬಯಕೆ.
ಕೃಷ್ಣ.

Tuesday, 18 December 2018

Such an innocent sound of laughter.

Who doesn't love children's laughter?
Who doesn't like music? 
& That's how I have fallen for you.

Permanent boyfriend.

ಅವನೀಗ ನನ್ನವನು.
ಅಬ್ಬಾ, ಇದನ್ನು ಹೇಳುವುದೇ ಒಂದು ಖುಷಿ.
ಚಿಟ್ಟೆಯೊಂದು ಹೃದಯದ್ದಲ್ಲಿ ಕಚಗುಳಿ ಇಟ್ಟಂತೆ.
ತಣ್ಣನೆಯ ಗಾಳಿಗೆ ಮೈರೋಮಗಳು ನಿಂತಂತೆ.
ಮನದಿಂದ ಯಾವುದೊ ಪಿಸುಮಾತೊಂದು ಹೊರಟಂತೆ.
ತುಟಿ ತಲುಪುವಷ್ಟರಲ್ಲಿ ನಾಚಿ ಮರೆತಂತೆ.
ಪದಗಲ್ಲಿ ಹೇಳಲಸಾಧ್ಯ ಭಾವನೆ.
ಅವನೀಗ ನನ್ನವನು.
ನನ್ನ ಸ್ವಾರ್ಥವವನು. 

ವಾಸ್ತವತೆಯ ಕನಸು

ಬಟ್ಟೆಗೆ ಇಸ್ತ್ರಿ ಮಾಡುವಾಗ ಸುಟ್ಟಿತು, ಆ ಇಸ್ತ್ರಿ ಪೆಟ್ಟಿಗೆ.
ಸ್ನಾನ ಮಾಡುವಾಗ ಸುಟ್ಟಿತು, ಆ ಬಿಸಿ ನೀರು.
ನಡೆಯುವಾಗ ತಾಕೀತು, ಆ ಕುರ್ಚಿಯ ಕಾಲು.
ಜಾರಿ ಗುಂಡಿಗೆ ಬಿದ್ದಿತು ಕೈಯಲ್ಲಿದ್ದ ಕೀ ಚೈನು.
ಅರೇ ರಾಮ.
ಏನಾಗಿದೆ ನನಗೆ?
ಏನಾಗಿದೆ ನನಗೆ?
ನೀನಾಗಿರುವೆ ನನಗೆ.




Friday, 14 December 2018

ನಿದಾನಿಸು. ನಿದಾನಿಸು?

ಸ್ವಲ್ಪ ನಿದಾನಿಸಲೇ? ಬೇಡವೇ?
ಮನಸ್ಸಿಗ್ಗೆ ತಾಳ್ಮೆಯೇ ಇಲ್ಲ.
ನಿದಾನ ನಿದಾನ ಎಂದು ಬುದ್ಧಿ ಎಷ್ಟೇ ಹೇಳಿದರು ದುಡು ದುಡುಯೆಂದು ಓಡುತ ಅವಸವಸರವಾಗಿ ಕನಸ ಕಟ್ಟುತ್ತಾ ಕುಣಿದಾಡಿದೆ.

ಅವಸರವೆ ಅಪಾಯಕ್ಕೆ ಕಾರಣವೆಂದು ಸಣ್ಣವಳಿದ್ದಾಗಲೇ ಕನ್ನಡ ಮೇಸ್ಟ್ರು ಹೇಳಿದಳ ನೆನಪು.
ಸಮಯ ಇದ್ದ ಹಾಗೆಯೇ ಇರದೆಂದು ಅಪ್ಪ ಹೇಳಿದ ನೆನಪು.

ಈಗ ಏನು ಅನಿಸುತ್ತಿದೆಯೋ ಅದು ಅನಿಸಲಿ ಬಿಡುಯೆಂದು ಮೊಂಡು ಮನಸ್ಸು ನಿಲ್ಲದೆ ದುಡು ದುಡುಯೆಂದು ಓಡುತ ಅವಸವಸರವಾಗಿ ಕನಸ ಕಟ್ಟುತ್ತಾ ಕುಣಿದಾಡಿದೆ.

Thursday, 13 December 2018

ತಣ್ಣನೆಯ ತಳಮಳ

ತೊರೆದು ಹೋದಲ್ಲಿಗೆ ಮತ್ತೆ ಬಂದು ನಿಂತಿದ್ದೇನೆ.
ದೃಷ್ಟಿ ತೆಗೆಯದೆ ಅವನ ದಿಟ್ಟಿಸಿದ್ದೇನೆ.
ಏನು ಅರಿವಿಗೆ ಸಿಗುತ್ತಿಲ್ಲ.
ನನ್ನೋಳಗಿನ ದೊಡ್ಡದೊಂದು ಯುದ್ಧವ ಸ್ವಲ್ಪ ಸಮಯ ನಿಲ್ಲಿಸುವಾಸೆ, ಒಂದು ವಿರಾಮ ತೆಗೆದುಕೊಳ್ಳುವಾಸೆ.
ಅವನ ಕಣ್ಣೊಳಗೆ ಮುಳಿಗಿ, ಲೀನವಾಗುವಾಸೆ.
ಎಲ್ಲವ ತೊರೆದು ನನ್ನ ನಾ ಮರೆತು ಅವನಾಗುವಾಸೆ.
ಅಯ್ಯೋ ರಾಮಕೃಷ್ಣ ನನಗೆ ನೀನಾಗುವಾಸೆ.

ಈ ಕಾಲಿತನ ಹಗುರಯೇಕಿಲ್ಲ?

ದಿನ ಕಳೆದಂತೆ ಕಾಲಿತನ ನನ್ನನ್ನು ಹೆಚ್ಚೇ ಆವರಿಸುತ್ತಿದೆ......  ಎಂದೆನಿಸುತ್ತಿದೆ.
ನನ್ನ ಒಂದೊಂದು ಭಾವನೆಯು ನಂನಿನ್ನದ ಕಳಚಿ ಹೋಗುತ್ತಿದೆ.....  ಎಂದೆನಿಸುತ್ತಿದೆ.
ಖುಷಿ ಇಲ್ಲ, ದುಃಖ್ಖವೂ ಇಲ್ಲ. ನಗುವಿಲ್ಲ, ಅಳುವಿಲ್ಲ. ಯಾರು ಬೇಕಿಂದೆನಿಸುವುದಿಲ್ಲ. ಎಲ್ಲವೂ ಕಾಲಿ ಕಾಲಿ.....  ಎಂದೆನಿಸುತ್ತಿದೆ.
ದೂರ ಅದೆಲ್ಲೋ ತಿಳಿಯದ ದಾರಿಯಲ್ಲಿ ಸಾಗಿನೋಡಿದೆ,
ತಣ್ಣನೆಯ ಗಾಳಿಯಲ್ಲಿ ತಲೆ ಕೂದಲ ತೊಳೆದುನೋಡಿದೆ,
ಮಧ್ಯ ರಸ್ತೆಯಲ್ಲಿ ಮಧ್ಯ ರಾತ್ರಿಯಲ್ಲಿ ಆ ನಕ್ಷತ್ರ ಚುಕ್ಕಿಗಳ ಎಣಿಸಿನೋಡಿದೆ,
ಖುಷಿ ನೀಡುತ್ತಿದ್ದ ತಿಂಡಿತಿನಿಸು ತಿಂದುನೋಡಿದೆ,
ಹೀಗೆ ಹತ್ತುಹಲವು ಪ್ರಯೋಗಗಳು!
ತೀರದ ಮೌನ, ತೀರದ ಕಾಲಿತನ.. ಎಷ್ಟೇ ತುಂಬಿಸಲು ಪ್ರಯತ್ನಿಸಿದರೂ ವಿಫಲ.
ಆದರೆ ಎಷ್ಟೇ ಕಾಲಿಯಾದರು ಮನಸ್ಸಿನ್ನು ಹಗುರವಾಗಲೇ ಇಲ್ಲ.
ಈ ಕಾಲಿತನ ಹಗುರಯೇಕಿಲ್ಲ?