Friday, 10 August 2018

ಹೋಗಿರದ ಹೊಸ ದಾರಿಯಲ್ಲೊಂದು ಸಂಜೆಯ ಪಯಣ

ಪದಗಲ್ಲಿ ಇಳಿಸುವುದಾದರೂ ಹೇಗೆ?
ಆ ನನ್ನ ಭಾವನೆಗಳ.
ನನ್ನೊಳು ಬಚ್ಚಿಡುವುದಾದರೂ ಹೇಗೆ?
ಉದಯಿಸುವ ಆ ಆಸೆಯ.
ಹಿಂಬಾಲಿಸಿದಷ್ಟು ದೂರವಾಗುವ ಆಕಾಶ.
ಸಾಗಿದಷ್ಟು ಮುಗಿಯದ ಹಾದಿ.
ಮುಸ್ಸಂಜೆಯ ಅರೆ ಕತ್ತಲಾ ಹಾದಿಯ ಚೀರಿಕೊಂಡು ಮುನ್ನುಗುವ ಬಂಡಿ.
ಗಾಳಿಯ ರಭಸಕ್ಕೆ ಕುಣಿಯುವ ಮರಗಿಡ.
ಅರೆ!, ಗಾಳಿ ಹಾಡುತಿಹ ಪದಗಳು ನನ್ನೊಬಳಿಗೆ ಮಾತ್ರ ಕೇಳಿಸುತ್ತಿರುವುದಲ್ಲ!
ಮರಗಿಡಕ್ಕೂ ಕೇಳಿಹುದೆ? ಅದೆಕ್ಕೆ ಇರಬಹುದೇ ಆ ಕುಣಿತ?
ಮುಳುಗುತಿಹ ಸೂರ್ಯನ ಮರೆಮಾಚುತ್ತಾ,ಮೋಡವೊಂದು ಆವರಿಸುತ್ತಿದೆ.
ಮಳೆಯೇನಾದರೂ ಬರಬಹುದೇ?
ಗೂಡು ಸೇರೆತಿಹ ಬೆಳ್ಳಕ್ಕಿಯ ಸಾಲೊಂದು ಕಣ್ಣಮುಂದೆ ಹಾದು ಹೋಯಿತು.
ಮಿಶ್ರ ಭಾವನೆಗಳ ಗೂಡಾದ ನನ್ನ ತಲೆ,
ತನ್ನೆಲ್ಲಾ ಭಾವನೆಗಳ ಗಾಳಿಯಲ್ಲಿ ತೇಲಿಬಿಟ್ಟು ಬಹಳ ಹಗುರಾಗಿ ನಲಿದಿತ್ತು.





Hope

ಮನದ ಯಾವುದೋ ಮೂಲೆಯಲ್ಲೊಂದು ಹಣತೆ ಸಣ್ಣದೊಂದು ಚುಕ್ಕಿಯಂತೆ ಬೆಳಗುತ್ತಲ್ಲೇ ಇದೆ.
ದೂರದಲ್ಲೆಲ್ಲೋ ಕತ್ತಲ್ಲಲ್ಲಿ ಕುಳಿತಿರುವನನಗೆ ಗೋಚರಿಸುತ್ತಲೇ ಇದೆ. 

Rhythm of life

I was traveling! 
The melancholic silence surrounded me!
What was that?
Why was that?
All I understood was, I don't understand me completely.
I don't understand what lies deep inside me.
Every time something new emerges. 
Which makes me wonder, wonder about myself.