Saturday, 30 June 2018

What was that?

ಅದೇನು? ಏನಾಯಿತಂದು?
ನಿಜವೇ? ಕನಸೇ? ಕಲ್ಪನೆಯೇ? 
ತಿಳಿಯುತ್ತಿಲ್ಲ. ತಿಳಿವಾಸಕ್ತಿ ನನಗಿಲ್ಲ.
ಅದು ನಿಜವಾಗಿದ್ದಲ್ಲಿ, ತ್ರುಪ್ತಿ.
ಕನಸಾಗಿದಲ್ಲಿ, ಸಂತೋಷ.
ಕಲ್ಪನೆಯಾಗಿದ್ದಲ್ಲಿ, ಸಣ್ಣದೊಂದು ನಗು.

Tuesday, 26 June 2018

ಉಸಿರೇ; ಎಲ್ಲವು ನಿನಗಾಗಿ

ಜೀವನದ ಒಂದೇ ಸತ್ಯ. ಅದು ನಿನ್ನ ಉಸಿರು. ನೀನು ಆಮ್ಲಜನಕ. ನೀನು ಹೃದಯದ ಬಡಿತ, ನೀನು ಮೆದುಳಿನ ಯೋಚನೆ, ನಿನಗಾಗಿ ನೀನು ಮಾಡುವ ಯೋಜನೆ. ಅದುವೆ ಜೀವನ.
" ಅಹಂ ಬ್ರಹ್ಮಾಸ್ಮಿ "
ನಿನಗೆ ನೀನೆ ಎಲ್ಲಾ, ನಿನಗೆ ನಿಂನ್ನಿದಲೆ ಎಲ್ಲಾ. ನೀನಿದ್ದರೆ ನಿನಗೆಲ್ಲ.
ಸಾಯುವವರೆಗೂ ಬದುಕಬೇಕುಯೆಂದು ನನ್ನಪ್ಪ ಯಾವಾಗಲು ಹೇಳುತ್ತಾರೆ.
ನನಗನಿಸಿದ ಹಾಗೆ, ನಮ್ಮ ಜೀವದಲ್ಲಿ ಎಲ್ಲದಕ್ಕೂ ಆಯ್ಕೆಗಳಿರುತ್ತದೆ. ನನ್ನಪ್ಪ ಹೇಳಿದ ಹಾಗೆ ನೋಡಿದರೆ, ನೀನು ಎಂಬುದು ಒಂದೇ ಸತ್ಯ! ನೀನು ಉಸಿರಾಡುತ್ತಿರುವೆ ಎಂಬುದೊಂದೇ ಸತ್ಯ. ನಿನಗೆ ಬದುಕಲು ಏನೇನು ಬೇಕು, ನೀನು ಹೀಗೇಗಿರಬೇಕು, ನೀನು ಏನೇನು ಮಾಡಬೇಕು ಎಲ್ಲವನ್ನು ನೀನು ಬಣ್ಣಿಸುತ್ತಾ ಹೋಗುತ್ತೀಯ. ಎಲ್ಲವೂ ನಿನ್ನಆಯ್ಕೆಗಳು. ಆ ಆಯ್ಕೆಗಳೆಲ್ಲ ಕೇವಲ ನೀನು ಸಾಯುವವರೆಗೂ ಬದುಕಲ್ಲಿಕೋಸ್ಕರ. ಅದು ಏನೇ ಇರಬಹುದು.
ಸಂಭಂದಗಳು, ಭಾವನೆಗಳು, ಜೀವನ ಶೈಲಿ, ಓದುವುದು, ಬರೆಯುವುದು, ಊರೂರು ಸುತ್ತುವುದು, ದೇಹ ಸೌಂಧರ್ಯಭಿವೃದಿ ಮಾಡಿಕೊಳ್ಳುವುದು, ಆರೋಗ್ಯ ಕಾಯ್ದುಕೊಳ್ಳುವುದು, ಹಣ ಗಳಿಸುವುದು, ಹೆಸರುಗಳಿಸುವುದು, ಮದುವೆ, ಸಂಸಾರ, ಇನ್ನು ಏನೇ ಇರಬಹುದು ಎಲ್ಲವೂ ನೀನು ಸಾಯುವವರೆಗೂ ಬದುಕಲು ಮಾಡಿಕೊಳ್ಳುವು ನಿನ್ನ ಆಯ್ಕೆಗಳು. ಕುವೆಂಪುರವರು ಹೇಳಿದ ಹಾಗೆ, ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ. ಎಲ್ಲಾ ನಮ್ಮಲ್ಲಿಯೇ ಇದೆ. ಸ್ವಲ್ಪ ಯೋಚಿಸಬೇಕಷ್ಟೆ.
ಸಮಾಜದ ಮುಂದೆ ಹೀಗಿರಬೇಕು, ಹಾಗಿರಬೇಕು ಎಂಬ ನಮ್ಮ ಕಲ್ಪನೆಗಳನ್ನೇ ಜೀವನವೆಂದು ಬದುಕುತ್ತೇವೆ, ನಮಗಾಗಿ ನಾವು ಆಯ್ಕೆಗಳನ್ನು ಮಾಡುವುದಕ್ಕಿಂತ ಬೇರೆಯವರ ಮುಂದೆ ಪ್ರದರ್ಶಿಸಲು ಆಯ್ಕೆಯನ್ನು ಮಾಡುತ್ತೇವೆ, ಅದು ಕೂಡ ತಪ್ಪೇನಲ್ಲ, ಅದು ನಿನ್ನ ಆಯ್ಕೆ, ನಿನ್ನ ಜೀವನ, ನಿನ್ನ ಇಷ್ಟ. ಆದರೆ ನಾ ಹೇಳಭಯಸುವುದು ಇಷ್ಟೇ , ನಿನ್ನ ಜೀವನ ನಿನ್ನದು, ಅವರ ಜೀವನ ಅವರದ್ದು. ಜೀವಿಸು, ಜೀವಿಸಲು ಬಿಡು. 

Until then

ನೆನ್ನೆ ಕಳೆದು ಇಂದಾಗುವವರೆಗೂ ನನಗಿದು ತಿಳಿದಿರಲ್ಲಿಲ್ಲ.
ನೆನ್ನೆ ಕಳೆದು ಇಂದಾಗುವವರೆಗೂ ನನಗಿದು ತಿಳಿದಿರಲ್ಲಿಲ್ಲ.
ಅದೊಂದು ಸುಂದರ ಕ್ಷಣವಾಗಿತ್ತೆಂದು.
ನಾನಿಂದು ನೆನೆಯಲಿರುವೆ ಆ ಕ್ಷಣವನ್ನೆಂದು.  

He made it better.

It was one beautiful countryside summer night!
green grass spread out to the horizon
producing cool countryside summer's musical breeze,
white painted crescent summer moon, glittering stars
glistening water.
It was one simple beautiful countryside summer night.
Until I turned my face and saw his eyes!!

Sunday, 24 June 2018

ಕೆಲವೊಮ್ಮೆ

ಕೆಲವೊಮ್ಮೆ ಪ್ರಶ್ನೆ ಸುಲಭವಾಗಿರುತ್ತದೆ.
ಉತ್ತರವೂ ಸುಲಭವೇ.
ಪ್ರಶ್ನೆಯನ್ನು ಸುಲಭವಾಗಿ ಸ್ವೀಕರಿಸುವ ಕ್ಷಮತೆ ಬೇಕಷ್ಟೆ. 

ಅಸ್ತಿತ್ವ

ಯಾವುದರ ಅಸ್ತಿತ್ವ ಯಾವುದು?
ಇಲ್ಲಿ ಯಾವುದಕ್ಕೂ, ಯಾರಿಗೂ, ಏನಕ್ಕೂ ಅಸ್ತಿತ್ವದ ಅರಿವಿಲ್ಲ.
ಎಲ್ಲವೂ ಕೇವಲ ನಂಬಿಕೆ.
ಆದರೆ ಈ ನಂಬಿಕೆ ಕೇವಲವಲ್ಲ. 

A virgin thought!

ಎಲ್ಲವೂ ಇಲ್ಲಿ ಒಂದಕೊಂದು ಮಿಳಿತಗೊಂಡಿವೆ.
ಯಾವುದರ ಹುಟ್ಟು ಎಲ್ಲಿ?
ಯಾವುದರ ಸಾವು ಹೇಗೆ?
ಯಾವುದು ನನ್ನದು?
ನನ್ನದು ಎಂಬುದೇ ಇಲ್ಲವೇ?
ಎಲ್ಲವು ಇಲ್ಲಿ ಒಂದರಿಂದೊಂದು ಪ್ರಭಾವಿತಗೊಂಡವುಗಳೇ.
ಹೊಸತೇನಿದೆ? ಹಳತ್ತುಯಾವುದು?
ಎಲ್ಲಾರ ಹುಂ ಗೆ ನನ್ನ ಹುಂ.
ಹುಂ ಗೆ ಹುಂ ಸಾಂಗತ್ಯ.
ಪ್ರಕೃತಿಯ ನಿಯಮವೇ ಹಾಗೆ; ಕ್ರಮಬದ್ಧತ್ತೆ, ಏಕರೂಪತೆ.
ಎಲ್ಲವೂ ಇಲ್ಲಿ ಒಂದೇ, ಆದರೂ ಯಾವುದು ಒಂದರಂತೆಯೇ ಇಲ್ಲ.
ಒಮ್ಮೊಮ್ಮೆ ಬಲವಾದ ನಂಬಿಕೆ ನೀಡುವ ಗಟ್ಟಿ ನೆಲವೇ ಕೆಲವೊಮ್ಮೆ
ಕಿತ್ತು ಹಗುರಾಗಿ ಗಾಳಿಯಲ್ಲಿ ತೇಲಿಯೋಗಿ ನಮ್ಮನು ಪಾತಾಳಕ್ಕೆ ಬೀಳಿಸುವುದುಂಟು.
ಏನಿದು?
ಇದೊಂದು ಜಾಲ.
ಬಿಡಿಸುತ್ತ ಹೋದಷ್ಟು ಜಟಿಲಗೊಳ್ಳುವ ಜಾಲ.
ಎಲ್ಲವೂ ಕಲುಷಿತ.
ಸ್ವಂತತೆಎಂಬುದೇ ಕಲುಷಿತ.
ಆದಿ ಅರಿಯಲು ಬಿಡದ ಎಲ್ಲಾ ಯೋಚನೆಗಳು ವ್ಯರ್ಥ.
ಕೆಲವೊಮ್ಮೆ ಅನಿಸುತ್ತದ್ದೆ ನಮ್ಮ ಯೋಚನೆಗಳಿಗೆ ಆದಿ ಅಂತ್ಯಗಳಿಲ್ಲ.
ಶುದ್ಧವಾಗಿ ಒಮ್ಮೆ ಹರಿದಿರಬಹುದೇನೊ ಗಂಗೆ.
ಈಗಲೂ ಅವಳು ಶುದ್ಧಳೆಂದು ನಂಬಿಸಿಹರು ಎಲ್ಲರೂ ಇಲ್ಲಿ.
ನಾವು ನಂಬಿದ್ದೇವೆ.
ಮುಂದೆ ಇನ್ನೊಬರನ್ನು ನಂಬಿಸುತ್ತೇವೆ.
ಇದು ನಿರಂತರ.
ಕೆಲವೊಮ್ಮೆ ಹರಿವ ನೀರು ಪತ ಬದಲಿಸಿ ನಾನು ಶುದ್ಧಳೆಂದು ಹೇಳಬಹುದು.
ನಾನು ಪವಿತ್ರಳೆನ್ನಬಹುದು. ನಾವು ನಂಬಲು ಬಹುದು, ಅದು ಸತ್ಯವು ಆಗಿರಬಹುದು, ಹಾಗೆ ಸುಳ್ಳು ಕೂಡ.
ಎಲ್ಲವೂ ಇಲ್ಲಿ ಒಂದಕೊಂದು ಮಿಳಿತಗೊಂಡಿವೆ.