Thursday, 21 December 2017

ಬಹುದಿನಗಳ ನಂತರ

ನನ್ನಅಪ್ಪ ಅದೊಂದು ದಿನ ಹೇಳಿದ್ರು,
ಯೋಚಿಸಿ ಬರೆಯುವುದು ಕವಿತೆಯಲ್ಲ, ಕಥೆಯಲ್ಲ, ಕೇವಲ ಪ್ರಶ್ನೆಗೆ ಉತ್ತರವ, ಯೆಂದು. 
ಎಷ್ಟು ಸತ್ಯದ ಮಾತು. ಪದಗಳೆಲ್ಲ ಎಲ್ಲೊ ಅವಿತು ಕುಳಿತಿರುತ್ತವೆ, ಅಕ್ಷರಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಅರ್ಥಹೀನವಾಗಿ ಬಿದ್ದು ಒದ್ದಾಡುತಿರುತ್ತವೆ. ಅದನ್ನೆಲ್ಲಾ ಕೂತು ಒಂದಾಗಿ, ಒಂದೊಂದಾಗಿ ಜೋಡಿಸಿ, ಅವಿತಪದಗಳ ಹುಡಿಕಿ ತರಲು ನೀನು ಜೊತೆಯಲಿ ಬೇಕು. ನಿನ್ನ ನಗುವೆಂಬ ಬೆಳಕಿನ ಆಸರೆ ಬೇಕು.ನಿನ್ನ ತುಂಟಾಟ ಬೇಕು, ನೀನು ಕೊಡುವ ನೋವು, ನಲಿವು ಬೇಕು, ದುಃಖ ಬೇಕು, ಖುಷಿ ಬೇಕು, ಏನಾದರೊಂದು ಭಾವನೆ ಬೇಕು. ಕಡೇಪಕ್ಷ ನಿನ್ನ ನೆನಪುಗಳಾದರು ನಗುವಿನ ಜೊತೆಯಲಿ ಬಹಳವಾಗಿ ಬೇನೆ ನೀಡಬೇಕು. ನೀನಿಲ್ಲದೆ ಬರಿಯ ಉಸಿರಾಡುವ ಬೊಂಬೆ ನಾನು. ನೋವಿಲ್ಲದ, ನಲಿವಿಲ್ಲದ, ನಗುವಿಲ್ಲದ ಬರಿಯ ಉಸಿರಾಡುವ ಬೊಂಬೆ ನಾನು. 

ಅಕ್ಷರ

ಉಣಿಸಿದಾ ಕೈತುತ್ತು ಮರಳಿಸಿತು ಕಳೆದು ಹೋದ ಮಾತ್ತೊಂದ,
ತನ್ನೆಲ್ಲ ಭಾವುಕತೆಯಂಬ ಅಕ್ಷರವ ತುಂಬುತ.
ಮರೆತುಹೋದ ನನ್ನವಳೆಯಾದ, ನನ್ನ ನಗು,
ನನ್ನ ಸ್ನೇಹಿತೆಯಾ ನೆನಪಿಸುತ.
ಹಗುರಾಯ್ತು ಜೀವ ಬಹಳ ಕಾಲದನಂತರ.
ನನ್ನವರೆಲ್ಲ ಒಟ್ಟಾಗಿ ನಿನ್ನಲ್ಲಿ ಸಿಕ್ಕಾಗ.
ನನ್ನೊಡನೆ ನೀ ಕೂತು ನಕ್ಕಾಗ. 

Monday, 11 December 2017

Anantha (Infinity)

ಅವನನ್ನು ಪ್ರೀತಿಸಲು ಕಾರಣವಿರಲಿಲ್ಲ.
ಪ್ರೀತಿಸಲು ಕಾರಣವಿರುವುದೇ?
ಅಪ್ಪನನ್ನು ಕೇಳಿದ್ದೆ. ಅವರ ಪ್ರಕಾರ ಪ್ರೀತಿಯಂಬುದೇ ಇಲ್ಲ!!!, ಹೇಳಿ ಮುಗುಳ್ನಕ್ಕಿದರು.
ಯಾವರೀತಿಯಲ್ಲಿ ಹೇಳಿದರೆಂದು ಅರ್ಥಹಿಸಿಕೊಳ್ಳಲಾಗಳಿಲ್ಲ.
ಅವರ ಮುಗುಳ್ನಗೆ ಬಹಳ ಘಾಡವಾಗಿತ್ತು, ಅವರ ಮಾತಿನಂತೆ. 

Scream

Need help...
Need help...
Really? Do I?...
I scream...
I scream in silence...
Non can understand...
Coz, I never let them understand...
And not want them to...
It's completely fine, fine to go mad, to lose mind, to yell harder sometime...
I'm the pain...
I'm the heal...
And I'll be fine soon...
Need help...
Need help...
I scream...
I scream in silence...








Wednesday, 6 December 2017

Enlightenment

Don't take life seriously.
Know yourself.
Laugh, be happy.
Just breathe. 

ಯದ್ ಭಾವವಂ ತದ್ ಭವತಿ

ನೀ ಹೇಗೆ, ಹಾಗೆ ಎಲ್ಲರು.
ನಿನ್ನ ಪ್ರಪಂಚದಲ್ಲಿ ನಿನ್ನ ಬಿಟ್ಟು ಬೇರೆಯಾರಿಲ್ಲ.
ಮರೆಯ ಬೇಡ. 

ಯೋಚನೆ

ಮಕ್ಕಳು ರಚ್ಚೆ ಮಾಡುವರು, ಹಾಗಂತ ತಾಯಿ ಎಂದಿಗೂ ಅವರಿಂದ ದೂರಾಗಳು.
(ಚಿಂಪುವಿನ ಕಾದಾಟ)