Monday, 9 July 2018

Again

ಮತ್ತದೇ ಸಂಜೆ,
ಮತ್ತದೇ ಬಿಸಿ ಚಹಾದ ಲೋಟ ಕೈಯ್ಯಲ್ಲಿ,
ಮತ್ತದೇ ಮಳೆಯ ಮೋಡ,
ಮಬ್ಬು ಬೆಳಕು,
ಎಲ್ಲವೂ ನೆನ್ನೆ ಇದಂತೆಯೇ ಇದೆ.
ಗೋಡೆಯಲ್ಲಿ ತಗುಲು ಹಾಕಿದ್ದ ಕ್ಯಾಲೆಂಡರ್ ಬದಲಾಗಿದೆಯಷ್ಟೇ.
ಸಮಯವೂ ಸರಿಸುಮಾರು ೬ ಗಂಟೆ.
ಏನೋ ನೆನಪುಗಳು.
ಮತ್ತದೇ ಹಳೆಯ ಯೋಚನೆಗಳು.
ಹಳೆಯವಾದರೂ ನವನವೀನ.

Sunday, 8 July 2018

Hormones

A confusion,
How to retain the innocence of love? 
getting too much into it is suffocating and 
not involved in it is ignorance and arrogance. 
Balancing the emotions is the most difficult task. 
Hormone sucks. 

Shadow ; the grief.

Don't let her soul cast a shadow. 

Taste her soul

Her spirit is more alcoholic than her body,
make love to her thoughts,
touch her mind,
hold her veins,
taste her soul.  

Monday, 2 July 2018

ಹೌದು

ಅವನನ್ನು ಪ್ರೀತಿಸುವುದೆಂದರೆ ಕೇವಲ ಅವನನ್ನಲ್ಲ,
ಅವನ ಪ್ರಪಂಚವನ್ನು, ಆ ಪ್ರಪಂಚದಲ್ಲಿರುವ ಎಲ್ಲವನ್ನು ಪ್ರೀತಿಸುವುದು. 

He; my madness. (ಅವನೆಂಬ ಹುಚ್ಚು)

ಅವನಿಗೆ ಜನ್ಮವಿತ್ತ ಆ ತಾಯಿ, ಕಾರಣಕರ್ತ ತಂದೆ,
ಅವನ ಕಾಡಿಸಿ ಸತಾಯಿಸುವ ಪುಟ್ಟ ತಂಗಿ,
ಅವನು ವಾಸಿಸಿದ ಆ ಮನೆ, ಅವನ ಕೋಣೆ , ಅವನು ಅವಿತು ಕುಳಿತಿದ್ದ ಮಂಚದಾ ಸಂದಿ,
ಅವನ ಪುಸ್ತಕ, ಅವನ ಲೇಖನಿ, ಅವನ ಸ್ನೇಹಿತರು, ಅವನಾಟಪಾಠದ ಸಹಪಾಠಿಗಳು, ವಸ್ತುಗಳು,
ಅವನ ಕೊಂಡೊಯ್ಯುವ ಬಂಡಿ, ಅವನೊಡಾಡಿದ ಸ್ಥಳ, ಅವನು ಹೆಚ್ಚು ಸಮಯಕಳೆವ ಆಫೀಸ್ನ ಆ ಮೂಲೆ ಟೇಬಲ್,
ಅವನ ನಿತ್ಯವೂ ಸ್ಪರ್ಶಿಸುವ ಅವ ತೊಟ್ಟ ಅಂಗಿ, ತಿಂದ ಊಟ, ಕುಡಿದ ನೀರು, ಅವನ ಎಲ್ಲ ಭಾವನೆಗಳು, ಖುಷಿ, ದುಃಖ್ಖ, ನೋವು, ನಲಿವು, ಉದಾಸೀನ, ಬೇಜಾರು, ಮೌನ, ಮಾತು, ಅವನಿಗಿಷ್ಟವಾದ ಹಾಡು, ಉಪದ್ರವನಿಸುವ ವಿಷಯ, ಒಟ್ಟಿನಲ್ಲಿ ಅವನುಸಿರು ತಾಕಿದ ಎಲ್ಲವಕ್ಕೂ ಚೇತನ ತುಂಬುವ ಅವನೆಂಬ ನನ್ನ ಹುಚ್ಚು. ಹುಚ್ಚು ಪ್ರೀತಿ. ಹುಚ್ಚು ಕಲ್ಪನೆ. ಹುಚ್ಚಯೆಂಬ ಖುಷಿ. 

Rhapsody

ನೊರೆ ನೊರೆಯ ಬಿಳಿ ಅಲೆಯ ಪದಗಳು ಅವನ ಕಣ್ಣಿನಿಂದ ಧಾಳಿಯಾಮಾಡಿರಲು,
ಬಿಸಿಯುಸಿರ ಏರಿಳಿತದ ಸಹಿಸಲಾಗದ ಹಾವಳಿಗೆ ನಾ ಸಿಲುಕಿ ನಾಗಲುಗಿರಲು, 
ಅವನ ಲಯಬದ್ದ ಹೃದಯದಾ ಬಡಿತಕ್ಕೆ ತಾಳಸೇರಿಸಿ, ಸ್ವರತಂತಿಯಾಗಿ ಮಿಡಿದು
ನಮ್ಮದೇಯಾದ ಲೋಕಾದಿ ನಮ್ಮದೇ ಸಂಗೀತವ ಹಾಡಿದ್ದೆವು. ಹಾಡಿ ನಲಿದ್ದಿದ್ದೆವು.