ಮುಸ್ರೇ(ಉತ್ತರ ಕನ್ನಡ ಜಿಲ್ಲೆಯ ಭಾಷೆ )/ಕೊಳೆ(ಧಕ್ಷಿಣ ಕನ್ನಡ ಜಿಲ್ಲೆಯ ಭಾಷೆ); ಅಂದರೆ ಅನ್ನವನ್ನು ಮುಟ್ಟಿ ಬೇರೆ ಯಾವುದೇ ಪದಾರ್ಥ ಅಂದರೆ ಬೇರೆ ಅಡಿಗೆಗಳನ್ನೂ (ಉದಾಹರಣೆಗೆ ಪಲ್ಯ, ಸಾಂಬಾರು, ಕೋಸಂಬರಿ, ಚಟ್ನಿ ಇತ್ಯಾದಿ.) ಮುಟ್ಟುವ/ ಬಡಿಸುವ ಮುನ್ನ ಕೈ ತೊಳೆದು ಮುಟ್ಟಬೇಕು/ ಬಡಿಸಬೇಕು (FYI:ಪ್ರತೀಸಲವೂ). ಹಾಗು ಅಕ್ಕಿ ಇಂದ ತಯಾರಿಸಿದ ಎಲ್ಲಾ ವಸ್ತುವಿಗಿ ಇದು ಅನ್ವಹಿಸುತ್ತದೆ. ಅಂದರೆ, ಅಕ್ಕಿ ಹಪ್ಪಲ್ಲ, ಅಕ್ಕಿ ರೊಟ್ಟಿ, ಅಕ್ಕಿ ಪಾಯಸ etc. ಅಲ್ಲದೆ ಇದರನ್ನು ತಯಾರಿಸಲು ಬಳಸಿದೆ ಎಣ್ಣೆ(ಆ ಉಳಿದ ಎಣ್ಣೆಯನ್ನು ಬೇರೇ ಯಾವುದೇ ಆಹಾರಕ್ಕೆ ಮತ್ತೆ ಬಳಸುವಂತಿಲ್ಲ, ಕೇವಲ ಮುಂದೆ ನೀವು ಮಾಡುವ ಅಕ್ಕಿ ಪದಾರ್ಥಕ್ಕೆ ಮಾತ್ರ ಬಳಸಬೇಕು), ಪಾತ್ರೆ, ಪಗಡ, ಎಲ್ಲವೂ ಮುಸ್ರೆಯೇ. ಅಕಸ್ಮಾತ್ ಈ ನಿಯಮ ಮರೆತು ನೀವು ಪಾಲಿಸದಿದ್ದಲ್ಲಿ, ನೀವು ಅನ್ನವನ್ನು/ಅಕ್ಕಿಯ ಅಡಿಗೆಗಳನ್ನು ಮುಟ್ಟಿ ಬೇರೆ ಯಾವ ತಿನ್ನುವ/ ಅಥವಾ ಪಾತ್ರೆ ಇತ್ಯಾದಿ ಮುಟ್ಟಿದರೆ ಅದೂ ಕೂಡ ಮುಸ್ರೆ ಆಗುತ್ತದೆ. (ಯಾರು ಸತ್ತರು ಚಿಂತೆಯಿಲ್ಲ)
ಎಂಜಲು; ನೀವು ಊಟವನ್ನು ಬಲಗೈಯಲ್ಲೇ ಮಾಡು ತಿರಬಹುದು, ಆದರೂ ನಿಮ್ಮ ಎಡಗೈ ಎಂಜಲು(ನಿಮ್ಮ ಎಂಜಲು ತಟ್ಟೆಯನ್ನು ಮುಟ್ಟದ್ದಿದರು). ಹಾಗಾಗಿ ನಿಮಗೆ ಪ್ರತಿಸಲವೂ ಊಟವನ್ನು ಬೇರೆಯವರು, ಅಂದರೆ ಮಡದಿ, ತಾಯಿ, ಅಥವಾ ಇನ್ನೂಯಾರಾದರು ಬಡಿಸಬೇಕು. ಇಲ್ಲವಾದಲ್ಲಿ ನೀವು ನಿಮ್ಮ ಬಾಳೆ/ಊಟದ ತಟ್ಟೆ ಪಕ್ಕ ಒಂದು ಸ್ವಲ್ಪ ನೀರನ್ನು ಚೆಲ್ಲಿಕೊಂಡು, ಅದರಲ್ಲಿ ನಿಮ್ಮ ಎಡಗೈಯನ್ನು ಮುಟ್ಟಿ ನಂತರ ಅಡಿಗೆಯನ್ನು ಬಾಡಿಸಿಕೊಳ್ಳಬೇಕು. ಇದು ಪ್ರತಿಸಲವೂ ಅನ್ವಯವಾಗುತ್ತದೆ. ಅಂದರೆ, ಮೊದಲಿಗೆ ನೀವು ಅಣ್ಣ ಹಾಕಿಕೊಂಡು, ಕೈ ತೊಳೆದು ಸಾಂಭಾರ್ ಹಾಕಿಕೊಂಡು ಊಟ ಮಾಡುತ್ತಿರುವಾಗ ಉಪ್ಪು ಬೇಕೆನಿಸಿದರೆ ಮತ್ತೆ ನೀವು ಕೈ ತೊಳೆದು ಕೊಂಡು/ಅಥವಾ ನಿಮ್ಮ ತಟ್ಟೆಯ ಪಕ್ಕದಲ್ಲಿ ನಿರ್ಮಿಸಿರು ನೀರಿನ ಕೊಳ (ಪಕ್ಕದಲ್ಲಿ ಚೆಲ್ಲಿಕೊಂಡಿರು ನೀರು) ದಲ್ಲಿ ಕೈ ಅದ್ದಿ/ಮುಟ್ಟಿ ನಂತರೆವೆ ಹಾಕಿಕೊಳ್ಳಬೇಕು. ಈ ನಿಯಮ ಮರೆತಲ್ಲಿ, ನೀವು ಮುಟ್ಟಿದ ಎಲ್ಲ ಆಹರವು ನಿಮ್ಮದೇ, ಅದನ್ನು ನೀವೇ ತಿಂದು ಕಾಲಿ ಮಾಡಬೇಕು ಅಥವಾ ನಿಮ್ಮ ಎಂಜಲು ತಿಂದರೆ ತೊಂದರೆ ಇಲ್ಲದ ವ್ಯಕ್ತಿ ಅಂದರೆ ಗಂಡ ತನ್ನ ಹೆಂಡತಿ, ಮಗು ತನ್ನ ತಾಯಿಗೆ ಕೊಡಬಹುದು. ಬೇರೆಇನ್ಯಾರು ತಿನ್ನುವಂತಿಲ್ಲ. ಇಲ್ಲಿ ಒಂದು ಇನ್ನು ಒಂದು ವಿಷಯವಿದೇ, ಗಂಡ ತನ್ನ ಹಿಂಡತಿಗೆ ಕೊಡಬಹುದೇ ವಿನಃ ಹೆಂಡತಿ ಗಂಡನಿಗೆ ಕೊಡುವ ಹಾಗಿಲ್ಲ. ಉಳಿದರೆ ಬಿಸಾಕಬೇಕು. (ಎಷ್ಟೇ ಸಮಯ ವ್ಯಾಯ್ವದರು ತೊಂದರೆ ಇಲ್ಲ)
ಶುದ್ಧ/ ಮಡಿ; ಇದರ ಕಥೆ ಎಷ್ಟು ದೊಡ್ಡದೆಂದರೆ, ನಾನು ಅರ್ಥಮಾಡಿಕೊಳ್ಳಲ್ಲು ಧೈರ್ಯವೇ ಮಾಡಿಲ್ಲ. ನಾನು ಅರ್ಥ ಮಾಡಿಕೊಂಡಿರುವುದೇ ಇಷ್ಟು, ಮಡಿಬಟ್ಟೆಯನ್ನು ಕೆಲಸದವರ ಬಳಿ ತೊಳಿಸುವುದಿಲ್ಲ, ನಾವೇ ತೊಳೆದು ತಂದು ಮಡಿ ಮೆತ್ತಿ/ಮಡಿ ಕೋಣೆ ಯಲ್ಲಿ ವನಾಗಕಬೇಕು. ಅದನ್ನು ನಂತರ ಯಾರುಸಹ ಯಾವುದೇ ಕಾರಣಕ್ಕೂ ಮುಟ್ಟಬಾರದು. ಕೇವಲ ಮಡಿಯಲ್ಲಿ ಇರುವವರು ಮಾತ್ರ ಅದರನ್ನು ತೆಗೆದುಕೊಂಡು ಹೋಗಿ ಈಗಷ್ಟೇ ಸ್ನಾನಮಾಡಿ ಬಚ್ಚಲಿನಿಂದ ಬಂದವರಿಗೆ ಕೊಡಬಹುದು, ಅಥವಾ ಸ್ನಾನ ಮಾಡಿಕೊಂಡು ಆ ವ್ಯಕ್ತಿಯೇ ಮಡಿ ಮೆತ್ತಿ/ಮಡಿ ಕೋಣೆಗೆ ಹೋಗಿ ಬಟ್ಟೆ ಧರಿಸಬೇಕು. ಈ ನಡುವೆ ಅವನು ಸಂಪೂರ್ಣ ಮಡಿಯಲ್ಲಿ ಏರಬೇಕು. ಅಂದರೆ ಬಚ್ಚಲಿನಿಂದ ಮಾಡಿ ಕೋಣೆಗೆ ಬರುವವರೆಗೂ ಯಾರನ್ನು, ಏನನ್ನನು ಮುಟ್ಟದೆ ಬಂದು ಮಡಿ ಧರಿಸ ಬೇಕು. (ನಿಮ್ಮನ್ನು ಯಾರು ನಿರ್ವಸ್ತ್ರದಲ್ಲಿ ನೋಡಿದರು ಚಿಂತೆ ಇಲ್ಲ)
ಮುಟ್ಟು/ ಹೆರಗೆ; ತಿಂಗಳ ಮೂರು ದಿನ (ಋತುಚಕ್ರ ಪ್ರತಿಕ್ರಿಯೆಯ ದಿನ), ಅಡಿಗೆ ಮನೆಯ ಕೆಲಸಮಾಡಬಾರದು; ಅಡಿಗೆ. ಯಾವುದೇ ಪತ್ರೆ ಪಗಡ ಮುತ್ತ ಬಾರದು. ನಿಮಗೆ ದೂರದಿಂದಲೇ ನಿಮ್ಮ ಊಟದ ತಟ್ಟೆ/ಬಾಳೆಯೆಲೆ ಅವರಿಗೆ(ಊಟಬಡಿಸುವವರಿಗೆ) ಸ್ವಲ್ಪವೂ ತಗುಲದಂತೆ ಊಟ ಬಡಿಸುತ್ತಾರೆ. ಊಟ ಮಾಡಿದ ನಂತರ ನಿಮ್ಮ ಬಾಳೆಯನ್ನು ಅವಳೆಗೆ ಬಿಸುಡಬೇಕು (ಕಾರಣ ಅದನ್ನು ಎಲ್ಲರೂ ಬಳಸುವ ಕಸದ ಬುಟ್ಟಿಗೆ ಹಾಕುವಂತಿಲ್ಲ/ ಹಸುಗಳಿಗೆ ತಿನ್ನಲು ಕೊಡುವಂತಿಲ್ಲ, ಗಿಡಗಳ ಬುಡಕ್ಕೆ ಹಾಕುವಂತಿಲ್ಲ); ಊಟದ ತಟ್ಟೆಯಾದರೆ ನೀವು ಅದನ್ನು ತೊಳೆದು ಯಾರಿಗೂ ತೊಂದರೆ ಆಗದಂತೆ ದೂರ ಮನೆ ಇಂದ ಹೊರಗೋ ಅಥವಾ ಮನೆಯ ಯಾವುದೊ ಮೂಲೆಯೊ ಅಥವಾ ಬಚ್ಚಲುಮನೆಯಲ್ಲಿ ಇಡಬೇಕು. ತದನಂತರ ನೀವು ಊಟಕ್ಕೆ ಕುಳಿತ ಜಾಗವನ್ನು ಒಮ್ಮೆ ನಿಮ್ಮ ಕೈಗಳ್ಳಲ್ಲಿ ವರಸಿ, ನಂತರ ಸಗಣಿ ಹಾಕಿ ಒರಸಿ, ನಂತರ ಬಟ್ಟೆಯಲ್ಲಿ ಒರಸ ಬೇಕು. ಆ ಬಟ್ಟೆಯನ್ನು ತೊಳೆದು ಯಾರು ಮುಟ್ಟದ ಜಾಗದಲ್ಲಿ ಇಡಬೇಕು. (ಜಾಗರೂಕರಾಗಿ ಮಾಡಿ, ಸಣ್ಣದೊಂದು ಹನಿ ನೀರು ಕೂಡ ಉಳಿಯಬಾರದು; ದೂರ ಅದೆಲ್ಲೋ ಕೂತಿರುವ ಅಜ್ಜಿ ಕಣ್ಣಿಗೆ ಅದು ಕಂಡು, ಮಗ ಅಲ್ಲಿ ಒಂದು ಹನಿ ಹಾಗೆ ಇದೆ ವರೆಸು ಇನ್ನೊಮ್ಮೆ ಅಂದಾರು). ಇಲ್ಲಿಗೆ ಕಥೆ ಮುಗಿಯಲಿಲ್ಲ. ನೀವು ದೇವರ ಕೋಣೆಯಿಂದ ಹೇಗೂ ಬಹಿಷ್ಕಾರವೇ ಬಿಡಿ, ಆದರೆ ಮನೆಯ ಬೇರೆ ಯಾವುದೇ ಕೋಣೆಗೂ ಹೋಗುವಂತಿಲ್ಲ. ಹಾಸಿಗೆ ಯಲ್ಲಿ ಮಲಗುವು ಹಾಗಿಲ್ಲ, ಚಾಪೆಯಲ್ಲಿ ಮಲಗಬೇಕು. ಯಾವುದೇ ವಸ್ತ್ರಗಳನ್ನು ಮುಟ್ಟುವಹಾಗಿಲ್ಲ. ಗಂಡನನ್ನು ಮಗುವನ್ನು ಮುಟ್ಟುವಹಾಗಿಲ್ಲ, ಯಾವದೇ ಬೇರೆ ವ್ಯಕ್ತಿಯನ್ನು ಮುಟ್ಟುವಹಾಗಿಲ್ಲ. ಕಾಲುವರೆಸುವ mat ಮುಟ್ಟುವಂತಿಲ್ಲ. ''ಬೆಕ್ಕಿನ ಬಿಡಾರ ಬೇರೆ"ಅಂತ ಎಲ್ಲರಿಂದ ಎಲ್ಲಾವುದರಿಂದ ದೂರವಿರಬೇಕು. ಮನೆಗೆ ಹೋದವರು ಬಂದವರು ಅಕ್ಕ ಪಕ್ಕದವರು ಕೇರಿಯವಿರಿಗೆಲ್ಲ ನಿಮಗೆ ಮುಟ್ಟಾದರೆ ವಿಷಯ ತಿಳಿಯುತ್ತದೆ. ಬಂದವರೆಲ್ಲ ನಿನಗೆ ಮುಟ್ಟ ಅನ್ನುವುದೊಂದು ಬಾಕಿ. ಮಜವೆಂದರೆ ನಿಮ್ಮ ಕೆಲಸದವರು ನಿಮ್ಮ ಯಾವ ಕೆಲಸವನ್ನು ಮಾಡುವಂತಿಲ್ಲ. ಮೂರ ದಿನದ ಈ ಸುಂದರ ದಿನದ ನಂತರ ಬರುತ್ತದೆ ಮೀಯುವ ದಿನ. ಬೆಳಗ್ಗೆ ಬೇಗ ಎದ್ದು, ಮನೆಯ ಹಿರಿಯ ಹೆಂಗಸಿನ ಬಳಿ, ತೆಂಗಿನ ಎಣ್ಣೆ ತೆಗೆದುಕೊಂಡು, ತಲೆಗೂದಲಿಗೆ ಸವರಿ, ಅರಿಸಿನ ಪುಡಿ ಮುಖಕ್ಕೆ ಹಚ್ಚಿ, ಸ್ವಲ್ಪ ಅರಿಸಿನ ಮೀಯುವ ನೀರಿಗೂ ಹಾಕಿ ಸ್ನಾನ ಮಾಡಬೇಕು; ಅದಕ್ಕೂ ಮುಂಚೆ ನೀವು ಬಳಸಿದೆ ಚಾಪೆ, ವಸ್ತ್ರ, ತಟ್ಟೆ, ಬಟ್ಟಲ್ಲೂ ಏನೇನಿವೆ ಅವೆಲ್ಲವನ್ನು ತೊಳೆಯಬೇಕು. ಇಷ್ಟದಾ ನಂತರ tada, welcome to boring normal day.
ಬೋನಸ್ ೧: ನಿಮ್ಮ ಸ್ಯಾನಿಟರಿ ಪ್ಯಾಡ್ ವ್ಯವಹಾರ/ ವಿಲೇವಾರಿ ಹೇಗೆ ಮಾಡುತ್ತಿರೋ ನೋಡಿ. ನನಗಂತೂ ಅದರ ಬಗ್ಗೆ ಬರೆಯಲು ಸಹ ಮನ್ನಸ್ಸಾಗುತ್ತಿಲ್ಲ. ನೆನಪಿನಲ್ಲಿಡಿ ಯಾರು ಮುಟ್ಟದ, ಹಾವುಗಳು ಓಡಾಡದ (ಸರ್ಪ ದೋಷ/ ನಿಮ್ಮ ಮುಂದಿನ ಪೀಳಿಗೆಗೆ ಕಣ್ಣಿನ ದೃಷ್ಟಿ ದೋಷ ಬರುವುದು), ಮುನಿಸಿಪಲ್ ವಾನ್ಗೆ ಕೊಡದ ಹಾಗೆ, ಹರಿವ ನೀರು ಕಲುಷಿತವಾಗಿ, ಅದನ್ನು ನಾವು ಕುಡಿದು ಸತ್ತರು ಚಿಂತೆಯೆಲ್ಲದ ಹಾಗೆ dispose ಮಾಡಬೇಕು. FYI: ಇದು ನಿಮ್ಮ ಕೇವಲ ಮೂರೂ ದಿನದ ಪ್ಯಾಡ್ಗೆ ಮಾತ್ರ ಅನ್ವಯ. ಅದರ ನಂತರದ ದಿನಗಲ್ಲಿ ಬಳಸುವ ಪ್ಯಾಡ್ ಪಂಚಾಂಬ್ರುತಕ್ಕೆ ಸಮ. ಅದನ್ನು dustbin ಹಾಕುವ ಅವಕಾಶವಿದೆ. ಅದು ತನ್ನ ಸ್ಥಾನವನ್ನು ಗಿಟ್ಟಿಸಿಕೊಡು ಬಾಹುಮನಾ ವಿಜೇತಳಾಗಿದ್ದಲ್ಲೇ. yay,, ಚಪ್ಪಾಳೆ.
ಬೋನಸ್ ೨: ಮರೆಯದಿರಿ ನೀವು ಈ ಮೂರುದಿನ ಬಹಳಾನೇ ಶಕ್ತಿಯುತ ಮಹಿಳೆ. ನೀವು ಯಾವುದೇ ಹಸುಗೂಸು/ ಸಣ್ಣ ಮಕ್ಕಳನ್ನು ಮುಟ್ಟಿದರೆ/ ಹತ್ತಿರ ಸುಳಿದರೋ (ಅವರ ತಂದೆ ತಾಯಿಗೆ ನೀವು ಮುಟ್ಟು ಎಂಬ ವಿಷಯದ ಅರಿವಿಲ್ಲದೆಯೋ/ ಅಥವಾ ಪೇಟೆಯ ದಾರಿಯಲ್ಲಿ ಅಪರಿಚಿತರಾಗಿಯೋ), ಆ ಮಗುವಿಗೆ ಮುಟ್ಟು ದೋಷ ಕಾಣಿಸಬಹುದು. ಇದರಿಂದ ಮುಕ್ತ ಗೊಳ್ಳಲ್ಲು ಪಾಪ ಪಾಪು ಮೆಹೆಂದಿ ಕಷಾಯ ಕುಡಿಯ ಬೇಕಾದೀತು.
Welcome aboard. you are now qualified enough.