ನನ್ನಅಪ್ಪ ಅದೊಂದು ದಿನ ಹೇಳಿದ್ರು,
ಯೋಚಿಸಿ ಬರೆಯುವುದು ಕವಿತೆಯಲ್ಲ, ಕಥೆಯಲ್ಲ, ಕೇವಲ ಪ್ರಶ್ನೆಗೆ ಉತ್ತರವ, ಯೆಂದು.
ಎಷ್ಟು ಸತ್ಯದ ಮಾತು. ಪದಗಳೆಲ್ಲ ಎಲ್ಲೊ ಅವಿತು ಕುಳಿತಿರುತ್ತವೆ, ಅಕ್ಷರಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಅರ್ಥಹೀನವಾಗಿ ಬಿದ್ದು ಒದ್ದಾಡುತಿರುತ್ತವೆ. ಅದನ್ನೆಲ್ಲಾ ಕೂತು ಒಂದಾಗಿ, ಒಂದೊಂದಾಗಿ ಜೋಡಿಸಿ, ಅವಿತಪದಗಳ ಹುಡಿಕಿ ತರಲು ನೀನು ಜೊತೆಯಲಿ ಬೇಕು. ನಿನ್ನ ನಗುವೆಂಬ ಬೆಳಕಿನ ಆಸರೆ ಬೇಕು.ನಿನ್ನ ತುಂಟಾಟ ಬೇಕು, ನೀನು ಕೊಡುವ ನೋವು, ನಲಿವು ಬೇಕು, ದುಃಖ ಬೇಕು, ಖುಷಿ ಬೇಕು, ಏನಾದರೊಂದು ಭಾವನೆ ಬೇಕು. ಕಡೇಪಕ್ಷ ನಿನ್ನ ನೆನಪುಗಳಾದರು ನಗುವಿನ ಜೊತೆಯಲಿ ಬಹಳವಾಗಿ ಬೇನೆ ನೀಡಬೇಕು. ನೀನಿಲ್ಲದೆ ಬರಿಯ ಉಸಿರಾಡುವ ಬೊಂಬೆ ನಾನು. ನೋವಿಲ್ಲದ, ನಲಿವಿಲ್ಲದ, ನಗುವಿಲ್ಲದ ಬರಿಯ ಉಸಿರಾಡುವ ಬೊಂಬೆ ನಾನು.